ಪೊಲೀಸರ ರಕ್ಷಣೆ, ಕಾನೂನು ಮೊರೆ ಹೋದರೂ ನಟಿ ಮನೆ ಮುಂದೆ ತುಂಬಿ ಕೊಳ್ಳುವ ಅಭಿಮಾನಿಗಳು. ಗಿಫ್ಟ್ ಕೊಟ್ಟು ಸಂಕಷ್ಟದಲ್ಲಿ ಸಿಲುಕಿಕೊಂಡ ಪುಂಡ....
ಇಂಗ್ಲಿಷ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್‌ಗೆ (Kim Kardashian) ವಿಶ್ವದೆಲ್ಲೆಡೆ ಅಭಿಮಾನಿಗಳಿರುವ ವಿಚಾರ ಎಲ್ಲರಿಗೂ ಗೊತ್ತುಂಟು ಬಿಡಿ. ಕಿಮ್‌ಗೆ ಮಾತ್ರವಲ್ಲದೇ ಆಕೆಯ ಇಡೀ ಕುಟುಂಬಕ್ಕೆ ಪೊಲೀಸರ (Police) ರಕ್ಷಣೆ ಇದೆ, ಮನೆ ಸುತ್ತ ಸದಾ ಬಾಡಿಗಾರ್ಡ್‌ಗಳು ಇರುತ್ತಾರೆ. ವಾರಕ್ಕೊಂದು ದಿನ ಹೊರಗೆ ಬಂದು ಅಭಿಮಾನಿಗಳಿಗೆ ಹಾಯ್ ಬಾಯ್ (Hi-Bye) ಹೇಳುತ್ತಾರೆ. ಕಿಮ್ ಅಪ್ಪಟ ಅಭಿಮಾನಿಯೊಬ್ಬ (Fan) ಮನೆಯ ಸುತ್ತ ಮುತ್ತ ಗಮನಿಸಿ ಮನೆಯೊಳಗೆ ನಗ್ಗುವ ಪ್ರಯತ್ನ ಮಾಡಿದ್ದಾನೆ. ಅಲ್ಲದೆ ನಟಿಗೆ ಶಾಕ್ ಆಗುವಂತ ಗಿಫ್ಟ್ (Gift) ನೀಡಿದ್ದಾನೆ.
ಫೋರ್ಬ್ಸ್ ಲಿಸ್ಟ್‌ನಲ್ಲಿ ಅಮೆರಿಕದ ಸುಂದರಿ..! ಈ ರೂಪದರ್ಶಿ ಬಿಲಿಯನೇರ್ಹೌದು! ಕಿಮ್ ಕರ್ದಾಶಿಯನ್‌ನ ಭೇಟಿ ಮಾಡಲೇಬೇಕು ಎಂದು ನಿವಾಸದ ಬಳಿ ಬಂದ ಅಭಿಮಾನಿಯೊಬ್ಬ ಗಿಫ್ಟ್ ಬಾಕ್ಸ್‌ನಲ್ಲಿ ಡೈಮೆಂಡ್ ಉಂಗುರ (Daimond ring) ಮತ್ತು ಗರ್ಭನಿರೋಧಕ ಮಾತ್ರೆಯನ್ನು (Contraceptiv pill) ನೀಡಿದ್ದಾನೆ. ಈ ವ್ಯಕ್ತಿ ಅಸಭ್ಯವಾಗಿ ವರ್ತಿಸುತ್ತಿದ್ದ ಕಾರಣ ತಕ್ಷಣವೇ ಪೊಲೀಸರನ್ನು ಕರೆಯಲಾಗಿತ್ತು. San Fernando Valleyನಲ್ಲಿ ವಾಸಿಸುತ್ತಿರುವ ಕಿಮ್ ಮನೆಯ ಮುಖ್ಯ ದ್ವಾರಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಈ ಘಟನೆ ಅಕ್ಟೋಬರ್ 25ರಂದು ಬೆಳಗ್ಗೆ ನಡೆದಿದೆ.
ಗಿಫ್ಟ್ ಕೊಟ್ಟ ವ್ಯಕ್ತಿಯನ್ನು Nicholas Costanza ಎಂದು ಗುರುತಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಿಮ್‌ಗೆ ಕಿರುಕುಳ (Harrasing) ನೀಡುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು. ಹೀಗಾಗಿ ಜಾಮೀನು (Bail) ಪಡೆಯಲು USD 150,000 ಹಣ ಅಂದ್ರೆ 1 ಕೋಟಿ 12 ಲಕ್ಷ 65 ಸಾವಿರದ 825 ರೂಪಾಯಿ ನೀಡಬೇಕಿದೆ.
4 ಮಕ್ಕಳಾದ್ಮೇಲೆ ಡಿವೋರ್ಸ್‌ಗೆ ಹಾಟ್ ನಟಿ ಕಿಮ್ ಕಾರ್ದಾಶಿಯಾನ್ ನಿರ್ಧಾರ?ಕಿಮ್ ಮನೆಯ ಎದುರು ಅಭಿಮಾನಿಗಳು ಹೀಗೆ ಮುತ್ತಿಕೊಳ್ಳುವುದು ಮೊದಲೇನಲ್ಲ. ಹೀಗಾಗಿ ಕಿಮ್ ಪರ್ಸನಲ್ ಲಾಯರ್‌ನ (Lawyer) ಅರೇಂಜ್ ಮಾಡಿಟ್ಟು ಕೊಂಡಿದ್ದಾರೆ. ಏನೇ ಎಡವಟ್ಟು ಆದರೂ ತಕ್ಷಣವೇ ದೂರು ನೀಡುತ್ತಾರೆ, ಕೋರ್ಟ್ (Court) ಮೊರೆ ಹೋಗುತ್ತಾರೆ. ಕೋಟಿ ಆಸ್ತಿಗಳ ಒಡತಿಯಾಗಿ ಹೀಗೆ ಮಾಡುವುದು ಸರಿ ಅಲ್ಲ, ಎಂದು ಕೆಲವೊಮ್ಮೆ ನೆಟ್ಟಿಗರು ಗೇಲಿ ಮಾಡಿದ್ದುಂಟು.
ಈ ವರ್ಷ ಫೋರ್ಬ್ಸ್ (Forbes) ಬಿಡುಗಡೆ ಮಾಡಿ ಸಿರಿವಂತರ ಪಟ್ಟಿಯಲ್ಲಿ ಬ್ಯುಸಿನೆಸ್ ಐಕಾನ್ ಕಿಮ್ ಕರ್ದಾಶಿಯನ್ ಅಧಿಕೃತವಾಗಿ ಬಿಲಿಯನೇರ್ ಆಗಿದ್ದಾರೆ. ಟವಿ ಆದಾಯ, ಆ್ಯಪ್ ಮೂಲಕ ಮತ್ತು ಜಾಹೀರಾತು ವ್ಯವಹಾರಗಳಿಂದ ಇಷ್ಟೊಂದು ಹಣ ಸಂಪಾದಿಸಿದ್ದಾರೆ ಎನ್ನಲಾಗಿದೆ.