
ವಿಶ್ವದ್ಯಾಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಮಾಹಾಮಾರಿ ಕೊರೋನಾ ವೈರಸ್ ಈಗ ಹಾಲಿವುಡ್ ಚಿತ್ರರಂಗದ ಖ್ಯಾತ ನಟ ಮಾರ್ಕ್ ಬ್ಲಮ್‌ನನ್ನೇ ಬಲಿ ತೆಗೆದುಕೊಂಡಿದೆ. ನ್ಯೂಯಾರ್ಕ್‌ನಲ್ಲಿದ್ದ ಮಾರ್ಕ್ ಬ್ಲಮ್‌ಗೆ ಕೊರೋನಾ ವೈರಸ್ ಸೋಂಕು ತಗುಲಿತು. ಕೊರೋನಾ ಸ್ಕ್ರೀನಿಂಗ್ ನಂತರ ಪಾಸಿಟಿವ್ ಎಂದು ತಿಳಿದಾಕ್ಷಣ ಮಾರ್ಕ್ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ, ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
69 ವರ್ಷ ಮಾರ್ಕ್ ಬ್ಲಮ್ ಇನ್ನಿಲ್ಲ (ಮಾರ್ಚ್ 25) ಎಂದು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅಮೆರಿಕನ್ ಫೆಡರೇಷನ್ ಆಫ್ ಟೆಲಿವಿಷನ್ ಆ್ಯಂಡ್ ರೇಡಿಯೋ (SAG-AFTRA)ಉಪಾಧ್ಯಕ್ಷ ರೆಬೆಕಾ ಡಮೋನ್ ಬಹಿರಂಗಪಡಿಸಿದ್ದಾರೆ.
'ತುಂಬಾ ನೋವಿನಿಂದ ಈ ವಿಚಾರವನ್ನು ಹಂಚಿಕೊಳ್ಳುತ್ತಿರುವೆ. ನಮ್ಮೆಲ್ಲರ ಗೆಳೆಯ ಹಾಗೂ SAG-AFTRA ತಂಡದ ಕಾರ್ಯದರ್ಶಿ ಮಾರ್ಕ್ ಬ್ಲಮ್ ಅವರಿಗೆ ಕೊರೋನಾ ವೈರಸ್ ಕಾಂಪ್ಲಿಕೇಟ್ ಆದ ಕಾರಣ ಕೊನೆ ಉಸಿರೆಳೆದಿದ್ದಾರೆ. ಈ ಮಂಡಳಿಯ ಸದಸ್ಯರಾಗಿದ್ದ ಮಾರ್ಕ್‌ಗೆ 2007-2013 ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು,' ಎಂದು ಟ್ಟೀಟ್ ಮಾಡಿದ್ದಾರೆ.
ನಟ ಹಾಗೂ ಚರ್ಮರೋಗ ತಜ್ಞ ಸೇತುರಾಮನ್ ಇನ್ನಿಲ್ಲ!
70-80ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮಾರ್ಕ್ ಸುಮಾರು 26ಕ್ಕೂ ಚಿತ್ರಗಳಲ್ಲಿ ಅಭಿನಯಿಸಿ 48ಕ್ಕೂ ಹೆಚ್ಚಾ ಟಿವಿ ಕಾರ್ಯಕ್ರಮಗಳಲ್ಲಿ ಮಿಂಚಿದ್ದಾರೆ.
ಒಟ್ಟಿನಲ್ಲಿ ಈ ರೋಗ ಎಂಥವರನ್ನೂ ಬಿಡುತ್ತಿಲ್ಲ ಈಗಾಗಲೇ ಬ್ರಿಟನ್ ರಾಜ, ಪ್ರಧಾನಿ ಹಾಗೂ ಆರೋಗ್ಯ ಮಂತ್ರಿಯನ್ನೂ ಬಿಡದೇ ಕಾಡಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗೆ ಬಿಗಡಾಯಿಸುವುದೋ ಗೊತ್ತಿಲ್ಲ. ಒಟ್ಟಿನಲ್ಲಿ ದೇವರೇ ಎಲ್ಲರನ್ನೂ ಕಾಪಾಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.