83ನೇ ವಯಸ್ಸಲ್ಲಿ 29ರ ಗರ್ಲ್​ಫ್ರೆಂಡ್​ನಿಂದ ಅಪ್ಪ ಆಗ್ತಿರೋ ಆಸ್ಕರ್​ ಪ್ರಶಸ್ತಿ ಸೂಪರ್​ಸ್ಟಾರ್​!

By Suvarna News  |  First Published May 31, 2023, 3:01 PM IST

83ನೇ ವಯಸ್ಸಲ್ಲಿ 29 ವರ್ಷದ ಗರ್ಲ್​ಫ್ರೆಂಡ್​ನಿಂದ ಅಪ್ಪ ಆಗ್ತಿದ್ದಾರೆ ಹಾಲಿವುಡ್​ ನಟ ಅಲ್​ ಪಸಿನೊ. ಏನಿದು ವಿಷಯ?
 


ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಮದುವೆ, ಮಕ್ಕಳದ್ದೇ ಸುದ್ದಿ. ಅದರಲ್ಲಿಯೂ ವಯಸ್ಸಿನಲ್ಲಿ ಹೆಚ್ಚು ಅಂತರವುಳ್ಳವರನ್ನು ಮದುವೆಯಾಗುವುದು ಸಾಮಾನ್ಯವಾಗಿದೆ. ಈ ಹಿಂದೆ 2-3 ಮಕ್ಕಳ ತಂದೆಯನ್ನು ನಟಿಯರು ವರಿಸಿದ್ದು ಇದ್ದರೆ ಈಗ ಸುದ್ದಿಯಾಗುತ್ತಿರುವುದು ಹೆಚ್ಚು ವಯಸ್ಸಿನ ಅಂತರದ ಮದುವೆಯ ಕುರಿತು. ಇದೀಗ ಅವೆಲ್ಲವುಗಳಿಂದಲೂ ಒಂದು ಹೆಜ್ಜೆ ಮುಂದೆ ಹೋಗಿ ಕುತೂಹಲದ ಘಟನೆ ನಡೆದಿದೆ. ಅದು ಸಾಮಾನ್ಯವಾಗಿ ಯಾರೂ ಕಲ್ಪಿಸಿಕೊಳ್ಳದಂಥ ಘಟನೆಯಾಗಿದೆ. ಅದೇನೆಂದರೆ 83 ವರ್ಷದ ಸೂಪರ್​ಸ್ಟಾರ್​ ನಟನೊಬ್ಬ ಅಪ್ಪ ಆಗ್ತಿರೋ ಸುದ್ದಿ ಇದು. ಈ ವಯಸ್ಸಿನಲ್ಲಿ ಅಪ್ಪ ಆಗಿದ್ದೇ ಅಚ್ಚರಿ ಎಂದರೆ, ಇನ್ನೂ ಹೆಚ್ಚಿನ ಅಚ್ಚರಿಯಾಗಿರುವುದು ಇವರ ಅಪ್ಪ ಆಗ್ತಿರೋದು ತಮ್ಮ ಮೊಮ್ಮಗಳ ವಯಸ್ಸಿನ ಗರ್ಲ್​ಫ್ರೆಂಡ್​​ನಿಂದಾಗಿ! ಹೌದು. ಕೇಳಲು ಸ್ವಲ್ಪ ಅಸಹ್ಯ ಎನಿಸಿದರೂ ಇದು ಸತ್ಯ. ಈ ನಟನ ಗರ್ಲ್​ಫ್ರೆಂಡ್​ಗೆ ವಯಸ್ಸು 29. 29ರ ಹರೆಯದ ಸ್ನೇಹಿತೆಯಿಂದ ತಂದೆಯಾಗುತ್ತಿದ್ದಾರೆ  83 ವರ್ಷದ ನಟ. ಇವರು ಅಂತಿಂಥ ನಟನಲ್ಲ, ಬದಲಿಗೆ ಆಸ್ಕರ್​ (Oscar) ಪ್ರಶಸ್ತಿ ಪುರಸ್ಕೃತ ನಟ! 

ಇಲ್ಲಿ ಹೇಳಹೊರಟಿರುವುದು ಹಾಲಿವುಡ್​ (Hollywood) ನಟನ ಕುರಿತು. ಖ್ಯಾತ ನಟನಾಗಿರುವ ಅಲ್​ ಪಸಿನೊ   (AI Pacino) ಅವರು ತನ್ನ 29 ವರ್ಷದ ಗರ್ಲ್​ಫ್ರೆಂಡ್  ಮಗುವಿಗೆ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ಇದಾಗಲೇ ಇಬ್ಬರು ಹೆಂಡತಿಯರಿಂದ ಮೂರು ಮಕ್ಕಳ ತಂದೆಯಾಗಿರುವ ಅಲ್​ ಪಸಿನೊ  ಅವರು, ಈಗ  29 ವರ್ಷದ ನೂರ್ ಆಲ್ಫಲ್ಲಾ ​ (Noor Alfallah)ಎಂಬಾಕೆಯಿಂದ ಮಗು ಪಡೆಯುತ್ತಿದ್ದಾರೆ. 2022ರಿಂದ ಇವರು ಒಟ್ಟಿಗೇ ಇದ್ದು, ಅದರ ಫಲವಾಗಿ ನೂರ್​ ಗರ್ಭಿಣಿಯಾಗಿದ್ದಾರೆ. ಈ ಸಂತೋಷದ ವಿಷಯವನ್ನು ಖುದ್ದು ನಟ ಶೇರ್​ ಮಾಡಿಕೊಂಡಿದ್ದಾರೆ.  ನೂರ್ ಆಲ್ಫಲ್ಲಾ ಅವರ ಜೊತೆ ತಾವು ಡೇಟಿಂಗ್ ಮಾಡುತ್ತಿದ್ದು, ಅದರ ಫಲವಾಗಿ ಮಗುವಾಗುತ್ತಿದೆ ಎಂದು ಸಂತಸದಿಂದ ನಟ ಹೇಳಿಕೊಂಡಿದ್ದಾರೆ.  

Tap to resize

Latest Videos

ಹಿಜಾಬ್​ ಧರಿಸಿಯೇ ಊಟ ಸೇವಿಸಿದ ಬಾಲಿವುಡ್​ ನಟಿ ಝೈರಾ ವಾಸಿಮ್ ಹೇಳಿದ್ದೇನು?
ಟಿಎಂಝಡ್ ಈ ಸುದ್ದಿಯನ್ನು ಮೊದಲು ರಿವೀಲ್ ಮಾಡಿದೆ. ನೂರ್ ಅವರು 8 ತಿಂಗಳ ಗರ್ಭಿಣಿಯಾಗಿದ್ದು ಕೆಲವೇ ವಾರಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.  ಇದು ನೂರ್ ಜೊತೆ ಪಾಚಿನೋ ಅವರ ಮೊದಲ ಮಗುವಾಗಿದೆ. ಇದಾಗಲೇ ನಟ ಅಲ್​ ಪಸಿನೊ    ಅವರಿಗೆ ಬಿವರ್ಲಿ ಡಿ ಆಂಜೆಲೋ (Biverli De Anjelo) ಎಂಬುವವರಿಂದ ಆಂಟನ್ ಹಾಗೂ ಒಲಿವಿಯಾ ಎಂಬ ಅವಳಿ ಮಕ್ಕಳಿದ್ದಾರೆ. ಮಕ್ಕಳಿಗೆ ಈಗ 22 ವರ್ಷ ವಯಸ್ಸು. ಸರಿಯಾದ ವಯಸ್ಸಿನಲ್ಲಿ ಮಕ್ಕಳು ಹುಟ್ಟಿದ್ದರೆ  ಇಷ್ಟು ದೊಡ್ಡ ಮೊಮ್ಮಕ್ಕಳು ಇರುತ್ತಿದ್ದರು ಎನ್ನಲಾಗುತ್ತಿದೆ.  ಇನ್ನು ಎರಡನೆಯ ಪತ್ನಿ ಜೇನ್ ಟೆರೆಂಟ್ ಅವರಿಂದ  ಜೂಲಿ ಮೇರಿ ಎಂಬ ಮಗುವನ್ನು ಪಡೆದಿದ್ದಾರೆ.  

ನೂರ್ ಈ ಹಿಂದೆ ಮಿಕ್ ಜಾಗರ್ ಅವರನ್ನು ಹಾಗೂ ನಿಕೋಲಸ್ ಅವರನ್ನು ಡೇಟ್ ಮಾಡುತ್ತಿದ್ದರು. ಕಳೆದ ವರ್ಷ ನೂರ್ ಜೊತೆ ನಟ ಪಾಚಿನೋ ಡಿನ್ನರ್ ಮಾಡುವ ಫೋಟೋ ಲೀಕ್ ಆದಾಗಾ ಹಾಲಿವುಡ್​ನಲ್ಲಿ ಈ ಜೋಡಿ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿದರು. ನಂತರ ಇವರ ನಡುವೆ ಬ್ರೇಕಪ್​ ಆಯಿತು. 2015ರಲ್ಲಿ ಪಾಚಿನೋ ಗಾರ್ಡಿಯನ್ ಜೊತೆ ಮಾತನಾಡಿದ್ದರು. ಮಕ್ಕಳು ನನ್ನ ದೃಷ್ಟಿಕೋನವನ್ನೇ ಬದಲಾಯಿಸಿದ್ದಾರೆ. ನನ್ನ ಮೂವರು ಮಕ್ಕಳಾಗುವ ಮೊದಲು ನಾನು ನನ್ನ ಯೋಚಿಸುತ್ತಾ ಯಾವುದನ್ನೂ ಗಮನಿಸದೇ ಸುತ್ತುತ್ತಿದ್ದೆ. ಆದರೆ ಈಗ ಅವರಿಂದಾಗಿ ಎಲ್ಲವೂ ಬದುಕಿನ ಭಾಗವಾಗಿದೆ ಎಂದಿದ್ದರು. ಈ ಸಂಬಂಧದ ಕುರಿತು ಮಾತನಾಡಿರುವ ಮಾಜಿ ಪತ್ನಿ, ನನ್ನ  ಮತ್ತು ಅಲ್​ ಪಸಿನೊ   ಮಧ್ಯೆ ಬ್ರೇಕಪ್ ಅಪ್​ (Break Up)​ ಆಗಿದ್ದರೂ ಇಂದಿಗೂ ನಾವು ಒಳ್ಳೆಯ ಸಂಬಂಧದಲ್ಲಿ ಇದ್ದೇವೆ. ಮಕ್ಕಳಿಗಾಗಿ ಒಂದಾಗಿದ್ದೇವೆ ಎಂದಿದ್ದಾರೆ. 

Godhra ದುರಂತ ದುರುದ್ದೇಶವೋ, ಆಕಸ್ಮಿಕವೋ? ಚಿತ್ರದ ಟೀಸರ್​ ಬಿಡುಗಡೆ
 

click me!