ಅತಿ ಹೆಚ್ಚು ಫಾಲೋವರ್ಸ್​ ಹೊಂದಿರೋ ದಕ್ಷಿಣದ ಟಾಪ್​ 6 ನಟಿಯರು

Published : May 31, 2023, 02:59 PM IST
ಅತಿ ಹೆಚ್ಚು ಫಾಲೋವರ್ಸ್​ ಹೊಂದಿರೋ ದಕ್ಷಿಣದ ಟಾಪ್​ 6 ನಟಿಯರು

ಸಾರಾಂಶ

ಇನ್​ಸ್ಟಾಗ್ರಾಮ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ದಕ್ಷಿಣದ ಸೂಪರ್​ಸ್ಟಾರ್​ಗಳು ಯಾರು ಗೊತ್ತಾ?   

ಚಿತ್ರ ತಾರೆಯರಿಗೆ ಸಾಮಾನ್ಯವಾಗಿ ಲಕ್ಷ, ಕೋಟಿಗಟ್ಟಲೆ ಫ್ಯಾನ್ಸ್​ (Fans) ಇರುತ್ತಾರೆ. ಹೇಳಿಕೇಳಿ ಇದು ಸಾಮಾಜಿಕ ಜಾಲತಾಣದ ಯುಗ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೆಚ್ಚಿನ ನಟ ನಟಿಯರನ್ನು ಫಾಲೋ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತದೆ. ಟ್ವಿಟರ್​, ಇನ್​ಸ್ಟಾಗ್ರಾಮ್​, ಫೇಸ್​ಬುಕ್​ ಪೇಜ್​ ಸೇರಿದಂತೆ ವಿವಿಧ ಜಾಲತಾಣದಲ್ಲಿ ತಮ್ಮ ನೆಚ್ಚಿನ ನಟ ನಟಿಯರನ್ನು ಹಲವರು ಫಾಲೋ ಮಾಡುತ್ತಾರೆ. ಅವರು ದಿನವೂ ಸಾಮಾಜಿಕ ಜಾಲತಾಣದಲ್ಲಿ ಏನು ಶೇರ್​ ಮಾಡುತ್ತಾರೆ ಎಂಬ ಕುತೂಹಲ ಫ್ಯಾನ್ಸ್​ಗಳದ್ದು. ನಟ ನಟಿಯರ ಜೀವನದ ಬಗ್ಗೆ ತಿಳಿದುಕೊಳ್ಳುವ ಅತ್ಯುತ್ಸಾಹ ಅವರದ್ದು. ತಮ್ಮ ಫ್ಯಾನ್ಸ್​ಗಳಿಗೆ ನಿರಾಶೆ ಮಾಡದ ನಟ ನಟಿಯರು ದಿನವೂ ವಿವಿಧ ರೀತಿಯ ವಿಷಯಗಳನ್ನು ಹಂಚಿಕೊಳ್ಳುವುದು ಇದೆ. ಫೋಟೋಶೂಟ್​ನಿಂದ (Photoshoot) ಹಿಡಿದು ತಮ್ಮ ಜೀವನದ ಹಲವು ಘಟನೆಗಳನ್ನು ಚಿತ್ರತಾರೆಯರು ಶೇರ್​ ಮಾಡಿಕೊಳ್ಳುತ್ತಾರೆ. ಇದು ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತದೆ.

ಅಂದ ಮಾತ್ರಕ್ಕೆ ಚಿತ್ರ ತಾರೆಯರು ಮಾತ್ರವಲ್ಲದೇ ಕ್ರಿಕೆಟಿಗರು ತಮ್ಮ ಅಭಿಮಾನಿಗಳನ್ನು ಖುಷಿ ಪಡಿಸುವುದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ ಎಂದರೆ ಅದು ಸಂಪೂರ್ಣ ಸತ್ಯವಲ್ಲ. ಏಕೆಂದರೆ, ಈ ಸೆಲೆಬ್ರಿಟಿಗಳು ಹಾಕುವ ಒಂದೊಂದು ಪೋಸ್ಟ್​ಗೆ ಅವರಿಗೆ ಲಕ್ಷ ಲಕ್ಷಗಟ್ಟಲೆ ಹಣ ಬರುವುದು ಇದೆ. ಹೌದು! ಇದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.  ಸಾಮಾಜಿಕ ಜಾಲತಾಣದಲ್ಲಿ (social media) ಇವರು ಹಾಕುವ ಒಂದೊಂದು ಪೋಸ್ಟ್​ಗೂ ಹಣ ಸಂದಾಯವಾಗುತ್ತದೆ.

ಇನ್ನೊಂದು ಸಿನಿಮಾ ಸೋತರೆ ಈ ಖ್ಯಾತ ಬಾಲಿವುಡ್​ ನಟ-ನಟಿಯರ ಕರೀಯರ್ ಟುಸ್​!

ಅದೇನೆ ಇದ್ದರೂ ಸೆಲೆಬ್ರಿಟಿಗಳಿಗೆ ಫ್ಯಾನ್ಸ್​ ಜಾಸ್ತಿ. ಅದರಲ್ಲಿ ದಕ್ಷಿಣದ ಟಾಪ್ ನಟಿಯರೂ ಹಿಂದೆ ಬಿದ್ದಿಲ್ಲ.  ಈ ನಟಿಯರು ತಮ್ಮ ನಟನೆ ಮತ್ತು ಸೌಂದರ್ಯದಿಂದ ಪ್ರೇಕ್ಷಕರ ಹೃದಯವನ್ನು ಆಳುತ್ತಿರುವಂತೆ   ಸಾಮಾಜಿಕ ಜಾಲತಾಣದಲ್ಲಿಯೂ ಸಾಕಷ್ಟು  ಫ್ಯಾನ್ಸ್​ ಹೊಂದಿದ್ದಾರೆ. ದಕ್ಷಿಣ ಜಗತ್ತಿನಲ್ಲಿ ಅನೇಕ ನಟಿಯರು  ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಹಿಂದೆಲ್ಲಾ ತಾವು ಆರಾಧಿಸುತ್ತಿದ್ದ ನಟಿಯರನ್ನು ಮರೆತು ಹೊಸ ಹೊಸ ನಟಿಯರಿಗೆ  ಈಗಿನ ನೆಟ್ಟಿಗರು ಫಿದಾ ಆಗುತ್ತಿದ್ದಾರೆ. ಕುತೂಹಲದ ವಿಷಯ ಏನೆಂದರೆ ಕೆಲವೊಂದು ಸೂಪರ್​ಸ್ಟಾರ್ಸ್​ ಎನಿಸಿಕೊಂಡವರಿಗೆ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚಿನ ಫಾಲೋವರ್ಸ್​ ಇಲ್ಲ ಎನ್ನುವುದು.  ನಟಿಯರಾದ ಅನುಷ್ಕಾ ಶೆಟ್ಟಿ, ನಯನತಾರಾ, ಕೀರ್ತಿ ಸುರೇಶ್, ಸಾಯಿ ಪಲ್ಲಲಿ ಮುಂತಾದವರು ಫಾಲೋವರ್ಸ್ (Followers) ವಿಷಯದಲ್ಲಿ ಇನ್ನೂ ಹಿಂದುಳಿದಿದ್ದಾರೆ.

ಇಲ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಟಾಪ್​ 6 ನಟಿಯರು ಯಾರು ಎಂದು ನೋಡೋಣ. ಟಾಪ್​ 6ರಿಂದ ಶುರು ಮಾಡಿ ಟಾಪ್​ 1ವರೆಗೆ ಲಿಸ್ಟ್​ ಇಲ್ಲಿ ನೀಡಲಾಗಿದೆ. 

ಟಾಪ್​ 6ನೇ ಸ್ಥಾನದಲ್ಲಿ ಇರುವವರು  ನಟಿ ತಮನ್ನಾ ಭಾಟಿಯಾ (Tamanna Bhatia). ಇವರು 20.9 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈ ದಿನಗಳಲ್ಲಿ ತಮನ್ನಾ ವಿಜಯ್ ವರ್ಮಾ ಜೊತೆಗಿನ ಸ್ನೇಹದ ಬಗ್ಗೆ ಚರ್ಚೆಯಲ್ಲಿದ್ದಾರೆ.
ಸೌತ್ ಇಂಡಸ್ಟ್ರಿಯಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಶ್ರುತಿ ಹಾಸನ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಶ್ರುತಿ 23.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಶ್ರುತಿ ಪ್ರಸ್ತುತ ದಕ್ಷಿಣದ ಅನೇಕ ದೊಡ್ಡ ಯೋಜನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.
ಬಾಲಿವುಡ್​ನಲ್ಲಿ ವಿಫಲ ಚಿತ್ರಗಳನ್ನು ನೀಡಿರುವ ಪೂಜಾ ಹೆಗಡೆ (Pooja Hegde) ಸೌತ್ ಇಂಡಸ್ಟ್ರಿಯಲ್ಲಿ ವಿಶೇಷ ಹೆಸರು ಪಡೆದಿದ್ದಾರೆ. ಅನುಯಾಯಿಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 23.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.
ಕಾಜಲ್ ಅಗರ್ವಾಲ್
ಸೌತ್ ಸಿನಿಮಾ ಜಗತ್ತಿನಲ್ಲಿ ದೊಡ್ಡ ಹೆಸರು. ಅವರ ಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಮತ್ತು ಅವರ ಅಭಿಮಾನಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. 25.5 ಮಿಲಿಯನ್ ಅನುಯಾಯಿಗಳೊಂದಿಗೆ, ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ತನ್ನ ಪ್ರತಿಯೊಂದು ಸ್ಟೈಲ್​ನಿಂದ  ಜನರನ್ನು ಹುಚ್ಚೆಬ್ಬಿಸುವ ಸಮಂತಾ ರೂತ್ ಪ್ರಭು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ತನ್ನ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುವ ಸಮಂತಾ 27.4 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಇನ್ನು ಟಾಪ್​- 1 ನಟಿಯರ ಬಗ್ಗೆ ಹೇಳುವುದಾದರೆ ಅವರು  ಅಲ್ಲು ಅರ್ಜುನ್ ಅವರ ಶ್ರೀವಲ್ಲಿ ಅಂದರೆ ರಶ್ಮಿಕಾ ಮಂದಣ್ಣ. ಇವರು ಅಗ್ರಸ್ಥಾನದಲ್ಲಿದ್ದಾರೆ. ರಶ್ಮಿಕಾ (Rasmika Mandanna) ತಮ್ಮ ಪ್ರತಿಯೊಂದು ಸ್ಟೈಲ್ ನಿಂದ ಅಭಿಮಾನಿಗಳ ಮನ ಕದಿಯುತ್ತಾರೆ. 'ಸಾಮಿ ಹುಡುಗಿ'ಗೆ 38.4 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ಹಿಜಾಬ್​ ಧರಿಸಿಯೇ ಊಟ ಸೇವಿಸಿದ ಬಾಲಿವುಡ್​ ನಟಿ ಝೈರಾ ವಾಸಿಮ್ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?