ಸಮಂತಾ ಸ್ಟೈಲಿಶ್ ಪ್ರೀತಂ ಸಲಿಂಗ ಕಾಮಿಯಂತೆ! ನಟಿ ಶ್ರೀರೆಡ್ಡಿ ಮತ್ತೆ ವಿವಾದಿತ ಹೇಳಿಕೆ

Suvarna News   | Asianet News
Published : Oct 18, 2021, 05:00 PM IST
ಸಮಂತಾ ಸ್ಟೈಲಿಶ್ ಪ್ರೀತಂ ಸಲಿಂಗ ಕಾಮಿಯಂತೆ! ನಟಿ ಶ್ರೀರೆಡ್ಡಿ ಮತ್ತೆ ವಿವಾದಿತ ಹೇಳಿಕೆ

ಸಾರಾಂಶ

ಹಿಂದೆ ಸಮಂತಾ (Samantha) ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಶ್ರೀರೆಡ್ಡಿ ಇದೀಗ ಸಮಂತಾ ಸ್ಟೈಲಿಸ್ಟ್ ಪ್ರೀತಂ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ. ಪ್ರೀತಮ್ ಸಲಿಂಗ ಕಾಮಿ ಅಂದಿದ್ದಾರೆ. ಶ್ರೀರೆಡ್ಡಿ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಜೋರು ಜೋರು ಚರ್ಚೆ ನಡೆಯುತ್ತಿದೆ.  

ತೆಲುಗು ನಟಿ ಶ್ರೀ ರೆಡ್ಡಿ ಅಂದರೆ ಟಾಲಿವುಡ್ (Tollywood) ಇಂಡಸ್ಟ್ರಿಯ ಮಂದಿ ಮುಖ ತಿರುಗಿಸುತ್ತಾರೆ. ಕಾರಣ ಈಕೆಯ ಫಿಲ್ಟರ್ ಇಲ್ಲದ ಮಾತು. ಹೊರ ನೋಟಕ್ಕೆ ಶ್ರೀರೆಡ್ಡಿ ಮಾತು ಕೆಲವರಿಗೆ ಮಜಾ ಕೊಡುತ್ತೆ. ಆರಂಭದಲ್ಲಿ ಇವರು ಕಾಸ್ಟಿಂಗ್ ಕೌಚ್ (casting couch) ಬಗ್ಗೆ ಮಾತಾಡಿ ಸುದ್ದಿಯಾಗಿದ್ದರು. ಆಮೇಲೆ ತನಗಾದ ಅನ್ಯಾಯದ ವಿರುದ್ಧ ಬೆತ್ತಲೆಯಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದರು. ಅಲ್ಲೀವರೆಗೆ ಅಷ್ಟಾಗಿ ಸುದ್ದಿಯಲ್ಲಿಲ್ಲದ ನಟಿ ಈ ಕಾರಣಕ್ಕೆ ಸಿಕ್ಕಾಪಟ್ಟೆ ಸುದ್ದಿಯಾದರು. ಬಹುಶಃ ವಿವಾದಾತ್ಮಕವಾಗಿ ಮಾತನಾಡಿದರೆ ಬಹಳ ಬೇಗ ಪ್ರಚಾರ ಪಡೆಯಬಹುದು ಅನ್ನೋದು ಈಕೆಯ ತಲೆಗೆ ಬಂದಿರಬೇಕು, ಈ ಘಟನೆಯಾಗಿ ಕೆಲವು ಸಮಯದ ಬಳಿಕ ಸಮಂತಾ ಅವರ ಅಂಗಾಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಮಂತಾ (samantha) ಅಭಿಮಾನಿಗಳ ಕೆಂಗಣ್ಣಿಗೆ ತುತ್ತಾಗಿದ್ದರು. ಸಮಂತಾ ಹಾಗೂ ತ್ರಿಶಾ ಅವರ ಅಂಗಗಳನ್ನು ಬೇರೆ ಬೇರೆ ಹಣ್ಣುಗಳಿಗೆ ಹೋಲಿಕೆ ಮಾಡಿ ಈಕೆ ಮಾತನಾಡಿದ್ದಕ್ಕೆ ನೆಟಿಜನ್ಸ್ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಥರ ಮಾತಾಡಿದ್ರೆ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಭಟಿಸಿ ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಕ್ಕೆ ಏನರ್ಥ, ನೀನು ಬರೀ ಫೇಕ್ ಅನ್ನುವ ಮಾತುಗಳು ಕೇಳಿಬಂದವು. ಆದರೆ ಶ್ರೀರೆಡ್ಡಿ ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಂಡವರಲ್ಲ. ಕೋವಿಡ್ ಟೈಮಲ್ಲಿ ಸೆಕ್ಸ್ ಮಾಡಿದ್ರೆ ಕೋವಿಡ್ ಬರಲ್ಲ ಎಂಬ ಹೇಳಿಕೆ ಕೊಟ್ಟು ನಗೆಪಾಟಲಿಗೆ ಗುರಿಯಾಗಿದ್ರು. ಇದು ನಿಮ್ಮ ಅನುಭವದ ಮಾತೇ ಇರಬೇಕು ಅನ್ನೋ ಟಾಂಗ್‌ಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. 

ದೀಪಿಕಾರ ಜೊತೆ ಮನೆ ಮಕ್ಕಳ ಆಸೆಯ ಕನಸು ಹಂಚಿಕೊಂಡ ರಣವೀರ್‌!

ಆಮೇಲೆ ಸಮಂತಾ ಲೈಫು ವಿಚ್ಛೇದನದತ್ತ ಬಂದು ನಿಂತಾಗ ಕಂಪ್ಲೀಟ್ ಪ್ಲೇಟ್ ಚೇಂಜ್ ಮಾಡಿ ಸಮಂತಾ ಹಾಗೂ ನಾಗಚೈತನ್ಯ ಅವರಿಗೆ ದಾಂಪತ್ಯದ ಪಾಠ ಹೇಳಿದ್ರು. ಆದ್ರೆ ಸಮಂತಾ, ನಾಗ ಚೈತನ್ಯ ದಾಂಪತ್ಯ ಮುಂದುವರಿಯಲಿಲ್ಲ. ಈ ಜೋಡಿ ತಮ್ಮ ಸಪರೇಶನ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿಕೊಂಡಿತು. 

ಯೋಗ ಮಾಡೋ ಗಂಡ ಬೇಕು, ಜಿಮ್ ಮಾಡೋನು ಬೇಡ ಎಂದ ಕ್ವೀನ್

 ಹೀಗೆ ಸಮಂತಾ-ನಾಗ ಚೈತನ್ಯ (nagachaitanya) ಡಿವೋರ್ಸ್ ಘೋಷಿಸಿದ್ದೇ ನೆಟಿಜನ್ಸ್ ಇವರ ದಾಂಪತ್ಯ ಹದಗೆಡಲು ಕಾರಣಗಳನ್ನು ಹುಡುಕತೊಡಗಿತು. ನಾಗ ಚೈತನ್ಯಗೆ ಬೇರೆ ಅಫೇರ್ ಇದೆ, ಸಮಂತಾ ಫ್ಯಾಮಿಲಿ ಮ್ಯಾನ್ ನಲ್ಲಿ ನಟಿಸಿದ್ದೇ ಈ ಜೋಡಿ ಬೇರಾಗಲು ಕಾರಣ ಎಂಬ ಮಾತುಗಳ ಜೊತೆಗೇ ಸಮಂತಾ ತನ್ನ ಸ್ಟೈಲಿಶ್ ಪ್ರೀತಮ್ ಜೊತೆಗೆ ಅಫೇರ್ ಇದೆ, ಅದಕ್ಕಾಗಿ ಈಕೆಗೂ ನಾಗ ಚೈತನ್ಯಗೂ ಸಿಕ್ಕಾಪಟ್ಟೆ ಜಗಳ ಆಗಿದೆ, ಹೀಗಾಗಿ ಅವರಿಬ್ಬರು ಡಿವೋರ್ಸ್ ಗೆ ಮುಂದಾಗಿದ್ದಾರೆ ಎಂಬ ಮಾತು ಸಾಕಷ್ಟು ವೈರಲ್ ಆಯ್ತು. ಪ್ರೀತಮ್ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಅವರನ್ನು ಸಮರ್ಥಿಸಿ ನಾಗಚೈತನ್ಯ ಬಗ್ಗೆ ವ್ಯಂಗ್ಯ ಮಾಡಿದ್ದೂ ಇದಕ್ಕೆ ಕಾರಣ. ಆಗ ನೆಟಿಜನ್ಸ್ ಪ್ರೀತಮ್ ಮೇಲೆ ಮುಗಿಬಿದ್ದರು. ಪ್ರೀತಮ್‌ಗೂ ಸಮಂತಾಗೂ ಸಂಬಂಧ ಇದೆ ಎಂದು ಗಾಳಿ ಮಾತು ಹಬ್ಬಿಸಿದರು. ಬಹುಶಃ ಇದು ಶ್ರೀರೆಡ್ಡಿ ಅವರನ್ನು ಕೆರಳಿಸಿರಬೇಕು, ಏಕೆಂದರೆ ಸಮಂತಾ ಅಂಗಾಗಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೂ ಸಮಂತಾ-ನಾಗಚೈತನ್ಯ ದಾಂಪತ್ಯ ಸರಿಹೋಗಬೇಕು ಎಂಬ ಆಸೆ ಶ್ರೀರೆಡ್ಡಿಗೆ ಇತ್ತು. ಹೀಗಾಗಿ ಅವರ ದಾಂಪತ್ಯಕ್ಕೆ ಹೇರ್ ಸ್ಟೈಲಿಶ್ ಮುಳುವಾಗಿದ್ದಾರೆ ಅನ್ನೋದು ಈಕೆಗೆ ಸರಿಬಂದಿಲ್ಲ. ಅದಕ್ಕಾಗಿ ಮತ್ತೆ ಸಮಂತಾ ನಾಗಚೈತನ್ಯ ಅವರಿಗೆ ಸಪೋರ್ಟ್ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. 


ಶ್ರೀರೆಡ್ಡಿ ಹೇಳಿದ ಮಾತು ಪ್ರೀತಮ್ ಸಲಿಂಗ ಕಾಮಿ(homosexual),  ಇಂಥಾ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವ ಮಟ್ಟಿಗೆ ಸಮಂತಾ ಹೋಗಿರಲಾರರು ಎಂದು. ಎಲ್ಲೋ ಒಂದು ಕಡೆ ಸಮಂತಾಗೆ ಸಪೋರ್ಟ್ ಮಾಡಲು ಹೋಗಿ ಶ್ರೀರೆಡ್ಡಿ ಮತ್ತೆ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಶ್ರೀರೆಡ್ಡಿ ಮಾತು ಈಗ ಸಖತ್ ಟ್ರೋಲ್ ಆಗ್ತಿದೆ. 

ಆರ್ಯನ್ ಶಾರುಖ್ ಧರ್ಮವನ್ನು ಅನುಸರಿಸುತ್ತಾನೆ ಎಂದಿದ್ದ ಗೌರಿ. ಕಾರಣ ಇಲ್ಲಿದೆ

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?
ಶಾರುಖ್-ದೀಪಿಕಾ ನಟನೆಯ 'ಕಿಂಗ್' ಚಿತ್ರದ ರೊಮ್ಯಾಂಟಿಕ್ ಹಾಡು ಲೀಕ್ ಆಯ್ತಾ? ವಿಡಿಯೋ ವೈರಲ್!