ನಟಿಯರ ಜೊತೆ ಲಿಪ್‌ಲಾಕ್ ಮಾಡಿದಾಗ ಮನೆಯಲ್ಲಿ ನಡೆಯೋ ಹಂಗಾಮಾದ ಕುರಿತು ವಿವರಿಸಿದ್ದಾರೆ ಖ್ಯಾತ ಟಾಲಿವುಡ್ ನಟ ನಾನಿ. ಅವರು ಹೇಳಿದ್ದೇನು?
ಈಗಂತೂ ಚಲನಚಿತ್ರಗಳಲ್ಲಿ ರೊಮ್ಯಾನ್ಸ್, ಲಿಪ್‌ಲಾಕ್ ಎಲ್ಲವೂ ಮಾಮೂಲಾಗಿದೆ. ಕೆಲವು ನಾಯಕ ನಟರು 50-60 ವಯಸ್ಸಾದರೂ ನಾಯಕರಾಗಿಯೇ ಮುಂದುವರೆಯುತ್ತಿದ್ದಾರೆ. ಈಗ ತಾನೇ ಸಿನಿಮಾಕ್ಕೆ ಎಂಟ್ರಿ ಕೊಡುವ 20-25 ವಯಸ್ಸಿನ ಯುವತಿಯರು ನಾಯಕಿಯಾಗುತ್ತಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ, ಮಗಳ ವಯಸ್ಸಿನವಳು ಆ ನಾಯಕನಿಗೆ ನಾಯಕಿಯಾಗಿರುತ್ತಾಳೆ. ಹೊಸ ನಟಿಯರು ಕೂಡ ಸಿನಿರಂಗದಲ್ಲಿ ನೆಲೆಯೂರಲು ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದರೆ, ಇನ್ನು ನಟರು ಸುಮ್ಮನೇ ಬಿಡುತ್ತಾರೆಯೆ? ಇದೇ ಕಾರಣಕ್ಕೆ ಮಗಳ ವಯಸ್ಸಿನ ನಟಿಯರ ಜೊತೆ ಲಿಪ್‌ಲಾಕ್, ಇಂಟಿಮೇಟ್ ಸೀನ್, ಚುಂಬನ ದೃಶ್ಯ, ರೊಮ್ಯಾನ್ಸ್ ಎಲ್ಲವೂ ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಮೊನ್ನೆಯಷ್ಟೇ ಇದರ ಬಗ್ಗೆ ಹಿರಿಯ ಬಾಲಿವುಡ್ ನಟಿ ರತ್ನಾ ಪಾಠಕ್ ಷಾ ಬೇಸರ ವ್ಯಕ್ತಪಡಿಸಿದ್ದರು. ಈಗಿನ ಲಿಪ್‌ಲಾಕ್ ಬಗ್ಗೆ ಏನು ಮಾತನಾಡಬೇಕು ಎನ್ನುವುದು ಗೊತ್ತಿಲ್ಲ. ತಮ್ಮ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯರ ಜೊತೆ ನಟಿಸೋಕೆ ಅವರಿಗೆ ನಾಚಿಕೆ ಆಗುತ್ತಿಲ್ಲ. ಹಾಗಿರುವಾಗ ನಾನೇನು ಮಾತನಾಡಲಿ? ನಾನು ಹೇಳುವುದಕ್ಕೆ ಏನಿಲ್ಲ. ಅಂದರೆ ಈ ಬಗ್ಗೆ ಮಾತನಾಡಲು ನನಗೆ ನಾಚಿಕೆ ಎನಿಸುತ್ತದೆ ಎಂದಿದ್ದರು.
ಇದೇನೇ ಇದ್ದರೂ ಲಿಪ್‌ಲಾಕ್ ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯಲ್ಲಿ ಹಿರಿಯ ನಟರಾದ ಧರ್ಮೇಂದ್ರ ಹಾಗೂ ಶಬನಾ ಅಜ್ಮಿ ಲಿಪ್‌ಲಾಕ್ ಮಾಡಿ ಹಲ್ಚಲ್ ಸೃಷ್ಟಿಸಿದ್ದರೆ, ಇದೇ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಸಿಂಗ್ ಇದೇ ರೀತಿ ಇಂಟಿಮೇಟ್ ಸೀನ್ ಮಾಡಿದ್ದರು. ನಿನ್ನೆಯಷ್ಟೇ ಆಲಿಯಾ ಪತಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಇದೇ ರೀತಿಯ ದೃಶ್ಯ ವೈರಲ್ ಆಗಿತ್ತು. ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ಅವರ ಪಾತ್ರಗಳು ತುಂಬ ಬೋಲ್ಡ್ ಆಗಿ ಕಂಡುಬಂದಿವೆ. ಸಿನಿಮಾಕ್ಕೆ ಅಗತ್ಯಬಿದ್ದರೆ ಎಲ್ಲವೂ ಕಾಮನ್ ಎನ್ನುವಂತಾಗಿದೆ.
ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್ ಕಪೂರ್ ಈ ಪರಿ ರೊಮ್ಯಾನ್ಸ್! ಉಫ್ ಎಂದ ಫ್ಯಾನ್ಸ್...
ಇದೀಗ ಇದರ ಬಗ್ಗೆ ಮಾತನಾಡಿದ್ದಾರೆ ತೆಲುಗು ಚಿತ್ರ ನಟ ನಾನಿ. ಇತ್ತೀಚಿನ ಅವರ ಚಿತ್ರ ‘ಹಾಯ್ ನಾನಾ’ ದಲ್ಲೂ ನಾಯಕಿಯ ಜೊತೆ ಲಿಪ್ ಲಾಕ್ ದೃಶ್ಯಗಳಿವೆ. ಇದೇ ವಿಷಯದ ಬಗ್ಗೆ ಟೀಸರ್ ಬಿಡುಗಡೆ ಸಮಾರಂಭದಲ್ಲಿ ‘ನಿಮ್ಮ ಪ್ರತಿ ಸಿನಿಮಾದಲ್ಲೂ ಲಿಪ್ ಲಾಕ್ ದೃಶ್ಯಗಳು ಕಾಣಸಿಗುತ್ತವೆ. ನಿರ್ದೇಶಕರು ಆ ದೃಶ್ಯಗಳನ್ನು ಸೇರಿಸುತ್ತಿದ್ದಾರೆಯೇ ಅಥವಾ ಅಂತಹ ದೃಶ್ಯವನ್ನು ಹಾಕಲು ನೀವೇ ಹೇಳುತ್ತಿರುವಿರಾ ಎಂದು ಪ್ರಶ್ನಿಸಿದರು. ಅದಕ್ಕೆ ನಟ ನಾನಿ, ನನ್ನ ಎಲ್ಲಾ ಚಿತ್ರಗಳಲ್ಲಿ ಲಿಪ್‌ಲಾಕ್ ದೃಶ್ಯಗಳು ಇವೆ ಎನ್ನುವುದು ಸರಿಯಲ್ಲ. ಈಚೆಗೆ ಬಿಡುಗಡೆಯಾದ ದಸರಾ ಸಿನಿಮಾ ಹಾಗೂ ಸುಂದರಿಯಲ್ಲಿ ಇಂಥ ದೃಶ್ಯಗಳು ಇಲ್ಲ. ಕೆಲವು ಸಿನಿಮಾಗಳಲ್ಲಿ ಈ ದೃಶ್ಯಗಳು ಅಗತ್ಯವಾಗುತ್ತವೆ. ಆದ್ದರಿಂದ ಎಲ್ಲಾ ಸಿನಿಮಾಗಳಲ್ಲಿಯೂ ಹೀಗೆ ಎನ್ನುವುದು ತಪ್ಪು ಎಂದರು. ಈ ರೀತಿ ದೃಶ್ಯ ಮಾಡಿದಾಗ ಮನೆಯಲ್ಲಿ ಏನೂ ಹೇಳುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ನಟ, ಅಂತಹ ದೃಶ್ಯಗಳಲ್ಲಿ ನಟಿಸಿದಾಗ ಮನೆಯಲ್ಲಿ ಹೊಡೆದಾಟಗಳು ನಡೆಯುವುದು ಉಂಟು. ಇಂಥ ಸಿನಿಮಾ ಬಿಡುಗಡೆ ಬಳಿಕ ನಮ್ಮ ಮನೆಯಲ್ಲಿ ಜಗಳವಾಗುತ್ತದೆ. ಈಗಲೂ ಹಾಗೆಯೇ ಆಗಬಹುದು. ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ ಎಂದಿದ್ದಾರೆ.
ಆದರೆ ಲಿಪ್‌ಲಾಕ್ ದೃಶ್ಯಗಳನ್ನು ಸಮರ್ಥನೆ ಮಾಡಿಕೊಂಡ ನಟ, ನಾನೊಬ್ಬ ನಟ. ಕಥೆಗೆ ಬೇಕಾದ ದೃಶ್ಯಗಳಲ್ಲಿ ನಟಿಸುತ್ತೇನೆ. ನನ್ನ ಹಿಂದಿನ ಚಿತ್ರಗಳನ್ನು ನೋಡಿದರೆ ಅದು ನಿಮಗೆ ಅರ್ಥವಾಗುತ್ತದೆ. ಚಿತ್ರಕ್ಕೆ ಆ ದೃಶ್ಯ ಅಗತ್ಯ ಎನಿಸಿದರೆ ಮಾತ್ರ ನಟಿಸುತ್ತೇನೆ. ನಾನು ಪ್ರಚಾರಕ್ಕಾಗಿ ಅಥವಾ ಮಸಾಲೆ ಸೇರಿಸಲು ನಟಿಸುವುದಿಲ್ಲ ಎಂದರು. ‘ಹಾಯ್ ನನ್ನ’ ಬಗ್ಗೆ ಹೇಳುವುದಾದರೆ… ಇದೊಂದು ಫೀಲ್‌ಗುಡ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಆಗಿದ್ದು, ಇದರಲ್ಲಿ ನಾನಿ ತಂದೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮೃಣಾಲು ಠಾಕೂರ್ ನಾಯಕಿ. ಬೇಬಿ ಕಿಯಾರಾ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಡಿಸೆಂಬರ್ 7 ರಂದು ಬಿಡುಗಡೆಯಾಗಲಿದೆ.
ಮಗಳ ವಯಸ್ಸಿನವಳ ಜೊತೆ ಲಿಪ್‌ಲಾಕ್, ರೊಮ್ಯಾನ್ಸ್ ಮಾಡಲು ನಾಚಿಕೆ ಆಗಲ್ವಾ? ನಟಿ ರತ್ನಾ ಕ್ಲಾಸ್