ಹುಟ್ಟೂರಿನಲ್ಲಿ ಕನಸಿನ ಮನೆ ಕಟ್ಟಿಸಿದ್ರು ವಾಸಮಾಡೋ ಭಾಗ್ಯ ರಾಜ್ ಕುಮಾರ್ ಗೆ ಸಿಕ್ಕಿಲ್ಲ ಏಕೆ?

Published : Apr 24, 2022, 07:24 PM IST
ಹುಟ್ಟೂರಿನಲ್ಲಿ ಕನಸಿನ ಮನೆ ಕಟ್ಟಿಸಿದ್ರು ವಾಸಮಾಡೋ ಭಾಗ್ಯ ರಾಜ್ ಕುಮಾರ್ ಗೆ ಸಿಕ್ಕಿಲ್ಲ ಏಕೆ?

ಸಾರಾಂಶ

ಡಾ. ರಾಜ್ ತಮ್ಮ ಕಡೆಯ ದಿನಗಳನ್ನು ಹುಟ್ಟೂರು ಗಾಜನೂರಿನಲ್ಲಿ ಕಳೆಯಬೇಕೆಂಬ ಮಹಾದಾಸೆ ಹೊಂದಿದ್ದರು. ಅವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೂಡ ಚಾಮರಾಜನಗರದ ಗಡಿ ತಾಳವಾಡಿಯ ಗಾಜನೂರಿನಲ್ಲಿ ಒಂದು ಮನೆ ಕೂಡ ನಿರ್ಮಾಣ ಮಾಡಲಾಯ್ತು. ಆದ್ರೆ ಅವರು ಆ ಮನೆಯಲ್ಲಿ ವಾಸ ಮಾಡುವ ಕನಸು ಅವರ ಆಗಲಿಕೆಯಿಂದ ಕಮರಿ ಹೋಯ್ತು.

ವರದಿ- ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್ 

ಕರುನಾಡ ಕಣ್ಮಣಿ, ಕನ್ನಡದ ಮುತ್ತುರಾಜ, ದಾದಾ ಸಾಹೇಬ್ ಫಾಲ್ಕೆ ವಿಜೇತ, ಕನ್ನಡದ ಮೇರುನಟ ಬಿರುದಾಂಕಿತ ಡಾ.ರಾಜ್(Dr Rajkumar) ಕಟ್ಟಿಸಿದ ಮನೆ. ಚಿತ್ರರಂಗದಿಂದ ನಿವೃತಿಯಾದ ಬಳಿಕ ಆ ಮನೆಯಲ್ಲಿ ವಾಸಿಸಬೇಕೆಂಬ ಮಹಾದಾಸೆ ಹೊಂದಿದ್ರು. ಆದ್ರೆ ಅವರ ಆಸೆ ಈಡೇರಲಿಲ್ಲ, ಮನೆಯೇನು ನಿರ್ಮಾಣವಾಯ್ತು ಅಲ್ಲಿ ವಾಸ ಮಾಡೋ ಭಾಗ್ಯ ಮಾತ್ರ ಆ ಮೇರುನಟನಿಗೆ ಸಿಗಲೇ ಇಲ್ಲ. ಆ ಮನೆಗೆ ಭೇಟಿ ಕೊಡುವ ವೇಳೆಗೂ ಮುನ್ನ ಕಾಡುಗಳ್ಳ ವೀರಪ್ಪನ್ ರಾಜ್ ಅವರನ್ನು ಕಿಡ್ನಾಪ್ ಮಾಡಿದರು. ನಂತರ ಗಾಜನೂರಿಗೆ ಅವರು ಬಂದು ವಾಸ ಮಾಡಲೂ ಸಾಧ್ಯವಾಗಿಲ್ಲ.

ಹೌದು ಇಂದು ಕನ್ನಡದ ಮೇರುನಟ, ವರನಟ ಖ್ಯಾತಿಯ ಡಾ ರಾಜ್ ಕುಮಾರ್ ಅವರ 93 ನೇ ಹುಟ್ಟುಹಬ್ಬ(Dr Rajkumar Birthday). ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅನನ್ಯ. ಡಾ.ರಾಜ್ ಕುಮಾರ್ ಹೊರತು ಪಡಿಸಿ ಸ್ಯಾಂಡಲ್ ವುಡ್ ಕಲ್ಪನೆಯೂ ಅಸಾಧ್ಯ. ಇಂತಾ ಮೇರು ನಟ ಗಡಿ ಜಿಲ್ಲೆ ಚಾಮರಾಜನಗರದ ಸುಪುತ್ರ ರಣಧೀರ ಕಂಠೀರವ, ಅಭಿಮಾನಿಗಳ ಆರಾಧ್ಯ ದೈವ ಡಾ ರಾಜ್ ತಮ್ಮ ಕಡೆಯ ದಿನಗಳನ್ನು ಹುಟ್ಟೂರು ಗಾಜನೂರಿನಲ್ಲಿ ಕಳೆಯಬೇಕೆಂಬ ಮಹಾದಾಸೆ ಹೊಂದಿದ್ದರು(Dr Rajkumar drem house). ಈ ವಿಚಾರವನ್ನು ಕುಟುಂಬಸ್ಥರ ಬಳಿ ಹಲವು ಬಾರಿ ಕೂಡ ಹೇಳಿಕೊಂಡಿದರು. ಅವರ ಆಸೆ ಈಡೇರಿಸುವ ನಿಟ್ಟಿನಲ್ಲಿ ಕೂಡ ಚಾಮರಾಜನಗರದ ಗಡಿ ತಾಳವಾಡಿಯ ಗಾಜನೂರಿನಲ್ಲಿ ಒಂದು ಮನೆ ಕೂಡ ನಿರ್ಮಾಣ ಮಾಡಲಾಯ್ತು. ಆದ್ರೆ ಅವರು ಆ ಮನೆಯಲ್ಲಿ ವಾಸ ಮಾಡುವ ಕನಸು ಅವರ ಆಗಲಿಕೆಯಿಂದ ಕಮರಿ ಹೋಯ್ತು. ಇದೀಗ ಆ ಮನೆಯಲ್ಲಿ ಡಾ ರಾಜ್ ಸಹೋದರಿ ನಾಗಮ್ಮ ಹಾಗೂ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಅಲ್ಲದೇ ಕಾಡುಗಳ್ಳ ವೀರಪ್ಪನ್ ಅಭಿಮಾನಿಗಳ ಆರಾಧ್ಯ ದೈವರನ್ನು ಅಪಹರಿಸಿದ್ದು ಗಾಜನೂರಿನಲ್ಲಿ ಆ ಹಿನ್ನೆಲೆ ಮತ್ತೇ ಗಾಜನೂರಿನಲ್ಲಿ ಬಂದು ವಾಸಿಸಲು ಸಾಧ್ಯವಾಗಲೇ ಇಲ್ಲ.

ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್‌ ಜೀವನಯಾತ್ರೆಯಲ್ಲೇ ಅದ್ಭುತ ಸಂದೇಶಗಳಿವೆ

ಇನ್ನೂ ಪ್ರೀತಿಯ ತಂಗಿ ನಾಗಮ್ಮ ಅಂದ್ರೆ ಕೂಡ ರಾಜ್ ಕುಮಾರ್ ಅವರಿಗೆ ಎಲ್ಲಿಲ್ಲದ ಪ್ರೀತಿ. ಸದಾ ಶೂಟಿಂಗ್ ನಲ್ಲಿ ಬಿಸಿಯಿರುತ್ತಿದ್ದ ರಾಜ್ ಕುಮಾರ್ ಹಾಗೂ ಅವರ ಮಡದಿ ಪಾರ್ವತಮ್ಮ ರಾಜ್‍ಕುಮಾರ್. ಈ ವೇಳೆ ರಾಜ್ ಅವರ ಕುಟುಂಬದ ಮುದ್ದು ಮಕ್ಕಳಾದ ಶಿವಣ್ಣ, ರಾಘಣ್ಣ, ಪುನೀತ್ ಅವರನ್ನು ಲಾಲನೆ, ಪೋಷಣೆ ಮಾಡಿದ್ದೆ ನಾಗಮ್ಮ. ಇದೀಗ ನಾಗಮ್ಮ ಕೂಡ ಅಣ್ಣನಿಗೆ ಬರ್ತ್ ಡೇ ವಿಶ್ ಮಾಡಿದ್ದು, ಪ್ರೀತಿಯ ಅಣ್ಣನನ್ನು ನೆನೆದು ಕಣ್ಣೀರಾಕಿದ್ದಾರೆ. ಅಲ್ಲದೆ ಅಣ್ಣನ ಆಸೆಯ ಮನೆಯಲ್ಲಿ ತಾವು ವಾಸಿಸುತ್ತಿರುವ ಬಗ್ಗೆ ಕುಟುಂಬದವರು ನೆನೆದುಕೊಳ್ತಿದ್ದಾರೆ.

ಇನ್ನೂ ಹೊಸ ಮನೆಯಷ್ಟೇ ಹಳೆಯ ಮನೆಯಲ್ಲೂ ಕೂಡ ಅಣ್ಣಾವ್ರ ಬಾಲ್ಯದ ನೆನಪು ಬಹಳಷ್ಟಿದೆ. ಅವರು ಹುಟ್ಟಿ ಬೆಳೆದಿದ್ದು ಹಳೆಯ ಮನೆಯಲ್ಲಿ ನಾಟಕಗಳಿಗೆ ಹೋದ ನಂತರ ಇಲ್ಲಿಗೆ ಬರೋದು ಕಡಿಮೆಯಾಯ್ತು.ಇನ್ನೂ ಸಿನಿಮಾ ನಟನೆಗೆ ಹೋದ ಮೇಲೆ ಚೆನೈನಲ್ಲಿ ವಾಸ ಮಾಡ್ತಿದ್ರು, ಹಳೆಯ ಮನೆಯನ್ನು ದೇವರ ಮನೆ ಅನ್ನೋ ರೀತಿ ಟ್ರೀಟ್ ಮಾಡಿದ್ರು. ಈ ಹಿನ್ನೆಲೆ ಹಳೆಯ ಮನೆಯನ್ನು ಕೂಡ ಉಳಿಸಿಕೊಂಡಿದ್ದೇವೆ.

Dr Rajkumar ಚಿತ್ರಗಳಿಗೆ ಕುಂಚ ಸ್ಪರ್ಶ: ಅಣ್ಣಾವ್ರ ಹುಟ್ಟುಹಬ್ಬಕ್ಕೆ ಅಭಿಮಾನಿಯ ಉಡುಗೊರೆ

ವರನಟ ಡಾ ರಾಜ್ ಭೌತಿಕವಾಗಿ ಇಹಾ ಲೋಕ ತ್ಯಜಿಸಿದರೂ ಕೂಡ ಅಭಿಮಾನಿಗಳ ನೆಚ್ಚಿನ ಅಣ್ಣಾವ್ರು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.ಸಾಕಷ್ಟು ಆಸೆ,ನಿರೀಕ್ಷೆ ಇಟ್ಟು ಕಟ್ಟಿಸಿದ ಮನೆಯಲ್ಲಿ ಡಾ ರಾಜ್ ವಾಸ ಮಾಡಲಿಲ್ಲ ಅನ್ನೋ ಕೊರಗು ಮಾತ್ರ ಅಭಿಮಾನಿಗಳು ಹಾಗೂ ಕುಟುಂಬಸ್ಥರಲ್ಲಿ ಮನೆ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್