Maldives; ರಶ್ಮಿಕಾ-ದೇವರಕೊಂಡ ತಂಗಿದ್ದ ರೆಸಾರ್ಟ್‌ನ ದಿನದ ಚಾರ್ಜ್ ಕೇಳಿದ್ರೆ ಹೌಹಾರ್ತೀರಾ

By Suvarna News  |  First Published Oct 12, 2022, 1:19 PM IST

ಮಾಲ್ಡೀವ್ಸ್ ನಲ್ಲಿ ರಶ್ಮಿಕಾ  ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಂಗಿದ್ದ ರೆಸಾರ್ಟ್ ಬಲು ದುಬಾರಿ. ಇಬ್ಬರೂ ಮಾಲ್ಡೀವ್ಸ್​ನಲ್ಲಿ ಉಳಿದುಕೊಂಡ ರೆಸಾರ್ಟ್ ಓಝೆನ್ ರಿಸರ್ವ್ ಬೊಲಿಫುಶಿ.


ಮಾಲ್ಡೀವ್ಸ್, ನಟಿಮಣಿಯರ ಸ್ವರ್ಗ. ಪ್ರವಾಸ ಎಂದಾಕ್ಷಣ ಮೊದಲು ನೆನಪಾಗೋದೆ ಮಾಲ್ಡೀವ್ಸ್. ಅಲ್ಲಿನ ರೆಸಾರ್ಟ್, ನೀಲಿ ಸಮುದ್ರ, ಪ್ರಕೃತಿ ಸೌಂದರ್ಯದ ಮೇಲೆ ನಟಿಯರಿಗೆ ಅದೇನೋ ಮೋಹ. ಅದರಲ್ಲೂ ಲವ್ ಬರ್ಡ್ಸ್ ‌ಗಳಿಗೆ ಪ್ರೇಮಾಲಯವಾಗಿದೆ. ಯಾವಾಗಲು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗುತ್ತಿರುತ್ತಾರೆ. ಸಿನಿಮಾದಿಂದ ಕೊಂಚ ಬ್ರೇಕ್ ಸಿಗುತ್ತಿದ್ದಂತೆ ಮಾಲ್ಡೀವ್ಸ್ ಫ್ಲೈಟ್ ಹತ್ತುತ್ತಾರೆ. ಇತ್ತೀಚಿಗಷ್ಟೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಾಸ್ ಆಗಿದ್ದಾರೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ. ಈ ಸೆನ್ಸೇಷನ್ ಜೋಡಿ ಒಟ್ಟಿಗೆ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿಲ್ಲ. ಹಾಗಂತ ಇಬ್ಬರೂ ಒಟ್ಟಿಗೆ ಬೀಚ್ ದೇಶಕ್ಕೆ ಹಾರಿದ್ದು ಗುಟ್ಟಾಗಿ ಉಳಿದಿಲ್ಲ. 

ಸೆಲೆಬ್ರಿಟಿಗಳು ಹೆಚ್ಚಾಗಿ ಮಾಲ್ಡೀವ್ಸ್‌ಗೆ ಹೋಗುತ್ತಿರುತ್ತಾರೆ ಅಂದರೆ ಖರ್ಚು, ವೆಚ್ಚವೆಲ್ಲ ತುಂಬಾ ಕಡಿಮ ಇರುತ್ತೆ ಅಂತ ಅಂದ್ಕೊಂಡ್ರೆ ಸುಳ್ಳು. ಯಾಕೆಂದ್ರೆ ಮಾಲ್ಡೀವ್ಸ್ ತುಂಬಾ ದುಬಾರಿ. ಅಲ್ಲಿನ ರೆಸಾರ್ಟ್ ‌ನಲ್ಲಿ ತಂಗಲು ದಿನಕ್ಕೆ ಲಕ್ಷಗಟ್ಟಲೆ ಸುರಿಬೇಕು. ಹಾಗಂತ ಸೆಲೆಬ್ರಿಟಿಗಳಿಗೆ ಅದೇನು ಹೆಚ್ಚಲ್ಲ. ರಶ್ಮಿಕಾ ಮತ್ತು ವಿಜಯ್ ತಂಗಿದ್ದ ರೆಸಾರ್ಟ್ ಕೂಡ ಬಲು ದುಬಾರಿ. ರಶ್ಮಿಕಾ ಹಾಗೂ ವಿಜಯ್ ಮಾಲ್ಡೀವ್ಸ್​ನಲ್ಲಿ ಉಳಿದುಕೊಂಡ ರೆಸಾರ್ಟ್ ಓಝೆನ್ ರಿಸರ್ವ್ ಬೊಲಿಫುಶಿ. ಅತ್ಯಂತ ಸುಂದರವಾಗಿರುವ ರೆಸಾರ್ಟ್ ಗಳಲ್ಲಿ ಒಂದಾಗಿದೆ. ಸುತ್ತಲು ತೆಂಗಿನ ಮರಗಳು, ತಿಳಿ ನೀಲಿ ನೀರು, ಸ್ವಿಮ್ಮಿಂಗ್ ಪೂಲ್, ಸದಾ ಭೋರ್ಗರೆಯುವ ಸಮುದ್ರ.  

Tap to resize

Latest Videos

ಸ್ವರ್ಗವೇ ಧರೆಗಿಳಿದಂತೆ ಇರುವ ಇಂಥ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ಹಾಗಾಗಿಯೇ ಸೆಲೆಬ್ರಿಟಿಗಳು ಆಗಾಗ ಇಂಥ ಸೌಂದರ್ಯ ಸವಿಸಲು ಮಾಲ್ಡೀವ್‌ಗೆ ಹಾರುತ್ತಾರೆ. ಅಂದಹಾಗೆ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಂಗಿದ್ದ ರೆಸಾರ್ಟ್‌ನ ಒಂದು ದಿನದ ಖರ್ಚು ಹೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ. ಒಂದು ದಿನಕ್ಕೆ ಬರೋಬ್ಬರಿ ಒಂದೂವರೆ ಲಕ್ಷ ಕೊಡಬೇಕು. ಓಝೆನ್ ರಿಸರ್ವ್ ಬೊಲಿಫುಶಿ ರೆಸಾರ್ಟ್‌ನಲ್ಲಿ ಒಂದು ರಾತ್ರಿ ಕಳೆಯಲು 1.45 ಲಕ್ಷ ರೂಪಾಯಿ. ಒಂದೊಂದು ದಿನ ಒಂದೊಂದು ಚಾರ್ಜ್. 10 ಅಥವಾ 15 ಸಾವಿರ ವ್ಯತ್ಯಾಸ ವಿರುತ್ತದೆ. ಇಷ್ಟು ದುಬಾರಿಯಾಗಿ ಬದುಕುತ್ತಿದ್ದಾರೆ ಕೆಲವು ಸೆಲೆಬ್ರಿಟಿಗಳು. 

ಇದು ವಿಜಯ್ ದೇವರಕೊಂಡ ಶರ್ಟ್; ಹಾಟ್ ಫೋಟೋ ಹಂಚಿಕೊಂಡ ರಶ್ಮಿಕಾ ಕಾಲೆಳೆದ ನೆಟ್ಟಿಗರು

ರಶ್ಮಿಕಾ ಮತ್ತು ವಿಜಯ್ ಇಬ್ಬರೂ ದುಬಾರಿ ಪ್ರವಾಸ ಮುಗಿಸಿ ಸದ್ಯ ವಾಪಾಸ್ ಆಗಿದ್ದಾರೆ.  ಇಬ್ಬರೂ ಮಾಲ್ಡೀವ್ಸ್ ಹೋಗುವಾಗ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಕೆಲವೇ ಕ್ಷಣಗಳ ಅಂತರದಲ್ಲಿ ಇಬ್ಬರೂ ಏರ್ಪೋರ್ಟ್‌ಗೆ ಎಂಟ್ರಿ ಕೊಟ್ಟಿದ್ದರು. ಬರುವಾಗಲು ಸಹ ಇಬ್ಬರೂ ಕೆಲವೇ ಕ್ಷಣಗಳ ಅಂತರದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. 

ಮಾಲ್ಡೀವ್ಸ್‌ನಿಂದ ವಾಪಾಸ್ ಆದ ರಶ್ಮಿಕಾ-ವಿಜಯ್ ದೇವರಕೊಂಡ; ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಮಾಲ್ಡೀವ್ಸ್ ನಿಂದ ರಶ್ಮಿಕಾ ಒಂದಿಷ್ಟು ಪೋಟೋಗಳನ್ನು ಸಹ ಶೇರ್ ಮಾಡಿದ್ದಾರೆ. ರಶ್ಮಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಶ್ಮಿಕಾ ಫೋಟೋಗಳಿಗೆ ನೆಟ್ಟಿಗರು ವಿಜಯ್ ದೇವರಕೊಂಡ ಕ್ಲಿಕ್ಕಿಸಿದ್ದ ಕಾಮೆಂಟ್ ಮಾಡಿ ಕಾಲೆಳೆದಿದ್ದರು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕಾ ಪೋಟೋಗಳನ್ನು ಶೇರ್ ಮಾಡುತ್ತಾ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡಿ ತವರಿಗೆ ಮರಳಿದ್ದಾರೆ.   

click me!