'ಕ್ಲೀನಾಗಿ ಮುಖ ತೊಳ್ಕೊಂಡು ಬನ್ನಿ' ಅಂದಿದ್ರಂತೆ ಕಮಲ್ ಹಾಸನ್; ರಾಣಿ ಮುಖರ್ಜಿ ಮಾಡಿದ್ದೇನು?

Published : Jan 30, 2025, 07:31 PM ISTUpdated : Jan 30, 2025, 07:55 PM IST
'ಕ್ಲೀನಾಗಿ ಮುಖ ತೊಳ್ಕೊಂಡು ಬನ್ನಿ' ಅಂದಿದ್ರಂತೆ ಕಮಲ್ ಹಾಸನ್; ರಾಣಿ ಮುಖರ್ಜಿ ಮಾಡಿದ್ದೇನು?

ಸಾರಾಂಶ

'ಹೇ ರಾಮ್' ಚಿತ್ರೀಕರಣದಲ್ಲಿ ರಾಣಿ ಮುಖರ್ಜಿ ಮೇಕಪ್‌ನೊಂದಿಗೆ ಬಂದಾಗ, ಕಮಲ್ ಹಾಸನ್ "ಮುಖ ತೊಳೆದು ಬನ್ನಿ" ಎಂದರಂತೆ. ರಾಣಿ ಮೇಲ್ಮೇಲಾಗಿ ತೊಳೆದರೂ, ಕಮಲ್ ತೃಪ್ತರಾಗದೆ ಸೋಪು ಹಾಕಿ ತೊಳೆಯುವಂತೆ ತಿಳಿಸಿದರು. ಕ್ಲೀನ್ ಮುಖದಿಂದ ಬಂದ ರಾಣಿಯನ್ನು ನೋಡಿ, "ಇದೇ ನನ್ನ ಅಪರ್ಣ" ಎಂದ ಕಮಲ್, ಚಿತ್ರದಲ್ಲಿ ಮೇಕಪ್ ಇಲ್ಲ ಎಂದು ತಿಳಿಸಿದರು.

ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರು ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರವೊಂದಕ್ಕೆ ಸೆಟ್‌ಗೆ ಹೋದಾಗ ಸಹಜವಾಗಿಯೇ ಹೆಚ್ಚಾಗಿ ನಟಿಯರು ಸ್ವಲ್ಪವಾದ್ರೂ ಮೇಕಪ್ ಇಟ್ಕೊಂಡೇ ಹೋಗ್ತಾರೆ. ಅದೇ ರೀತಿ ರಾಣಿ ಮುಖರ್ಜಿ ಸಹಾ ಸೆಟ್‌ಗೆ ಹೋಗಿದ್ದರು. ಆದರೆ, ಆ ಚಿತ್ರದ ನಿರ್ದೇಶಕರು ನಟಿ ರಾಣಿ ಮುಖರ್ಜಿ ನೋಡಿದ ತಕ್ಷಣ, 'ಹೋಗಿ ಮುಖ ತೊಳೆದುಕೊಂಡು ಬನ್ನಿ' ಎಂದರಂತೆ. ಆದರೆ, ಮೇಕಪ್‌ ರೂಂಗೆ ಬಂದ ರಾಣಿ, ಅಲ್ಲಿ ಇಲ್ಲಿ ಸ್ವಲ್ಪ ಒರೆಸಿಕೊಂಡಂತೆ ಮಾಡಿ ಮತ್ತೆ ಹೋಗಿ ಡೈರೆಕ್ಟರ್‌ ಮುಂದೆ ನಿಂತಿದ್ದಾರೆ. 

ಆದರೆ, ಅದಕ್ಕೊಪ್ಪದ ನಿರ್ದೇಶಕರು 'ಇಲ್ಲ ಹೀಗಲ್ಲ, ಮುಖವನ್ನು ಫುಲ್ ಕ್ಲೀನ್‌ ಆಗಿ ತೊಳೆದುಕೊಂಡು ಬನ್ನಿ' ಎಂದಿದ್ದಾರೆ. ಆಗ ನಟಿ ರಾಣಿ ಮುಖರ್ಜಿ ಸೋಪ್‌ ಹಾಕಿ ಕ್ಲೀನ್‌ ಆಗಿ ಮುಖ ತೊಳೆದುಕೊಂಡು ಬಂದು ಆ ನಿರ್ದೇಶಕರ ಮುಂದೆ ನಿಂತಿದ್ದಾರೆ. ಆಗ ಅವರು 'ಯೆಸ್, ಈಗ ನೀವು ನನ್ನ ಸಿನಿಮಾದ ಅಪರ್ಣಾ..' ಎಂದರಂತೆ. ಆಗಲೇ ರಾಣಿ ಮುಖರ್ಜಿಗೆ ಹೇಳಿದರಂತೆ, ಆ ಸಿನಿಮಾದಲ್ಲಿ ಮೇಕಪ್ ಇರಲ್ಲ, ಬದಲಿಗೆ ಲೈಟ್‌ ಅರೇಂಜ್‌ಮೆಂಟ್ ಮಾಡಿ ಶೂಟ್ ಮಾಡ್ತಾರೆ' ಅಂತ!

ವಿಷ್ಣುವರ್ಧನ್ ನೋಡಿ ಅಣ್ಣಾವ್ರು-ವರದಪ್ಪ ಇಬ್ರೂ ಗೋಳೋ ಅಂತ ಅಳ್ತಾ ಇದ್ರು; ನಿರ್ಮಾಪಕ ರೆಹಮಾನ್!

ಇಷ್ಟು ಹೇಳಿದಾಗ ನಿಮಗೇ ಗೊತ್ತಾಗಿರಬಹುದು, ಅದು 'ಸಕಲ ಕಲಾವಲ್ಲಭ' ಖ್ಯಾತಿಯ ನಟ ಕಮಲ್ ಹಾಸನ್‌ ನಿರ್ದೇಶನ ಹಾಗೂ ನಾಯಕತ್ವದ 'ಹೇ ರಾಮ್' ಸಿನಿಮಾ. ಈ ಚಿತ್ರದಲ್ಲಿನ 'ಅಪರ್ಣಾ' ಪಾತ್ರವನ್ನು ನಟಿ ರಾಣಿ ಮುಖರ್ಜಿ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಹೇ ರಾಮ್ ಚಿತ್ರವು ನಿರೀಕ್ಷೆಯಂತೆ ಸೂಪರ್ ಹಿಟ್ ಆಗದಿದ್ದರೂ ಚಿತ್ರವು ಕೆಲವರಿಗೆ ತುಂಬಾ ಇಷ್ಟವಾಗಿದೆ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಹೇ ರಾಮ್ ಅಂತಹ ಕಮಾಯಿ ಮಾಡಲಿಲ್ಲ. 

ಹೇ ರಾಮ್ ಚಿತ್ರವು 18 ಫೆಬ್ರವರಿ 2000ದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ನಟ ಕಮಲ್ ಹಾಸನ್ ಸ್ವತಃ ನಿರ್ದೇಶನ ಮಾಡಿದ್ದು, ಸ್ಟಾರ್‌ ಕಾಸ್ಟ್‌ ಎಲ್ಲವನ್ನೂ ಅವರೇ ಆಯ್ಕೆ ಮಾಡಿದ್ದಾರೆ. ನಟಿ ವಸುಂಧರಾ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ತಾಂತ್ರಿಕವಾಗಿ ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿತ್ತು, ಹೈ ಬಜೆಟ್‌ ಕೂಡ ಹೊಂದಿತ್ತು. ಇದೀಗ ಈ ಚಿತ್ರದ ಶೂಟಿಂಗ್ ವೇಳೆ ಸೆಟ್‌ನಲ್ಲಿ ನಡೆದ ಘಟನೆಯನ್ನು ನಟಿ ರಾಣಿ ಮುಖರ್ಜಿ ಶೇರ್ ಮಾಡಿಕೊಂಡಿದ್ದು, ಅದೀಗ ಭಾರೀ ವೈರಲ್ ಆಗಿದೆ. 

ಅವ್ರಪ್ಪ ಬಂದ್ರೂ ಸಂವಿಧಾನ ಬದಲಿಸೋಕಾಗಲ್ಲ, ಗಂಗೆಯಲ್ಲಿ ಮಿಂದ್ರೆ ಪಾಪ ಹೋಗಲ್ಲ: ನಟ ಕಿಶೋರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌
ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!