ಕಾರು ಅಪಘಾತ; ಆಸ್ಪತ್ರೆಗೆ ದಾಖಲಾಗಿದ್ದ ನಟಿ ಮಲೈಕಾ ಡಿಸ್ಚಾರ್ಜ್

Published : Apr 03, 2022, 05:55 PM IST
ಕಾರು ಅಪಘಾತ; ಆಸ್ಪತ್ರೆಗೆ ದಾಖಲಾಗಿದ್ದ ನಟಿ ಮಲೈಕಾ ಡಿಸ್ಚಾರ್ಜ್

ಸಾರಾಂಶ

ಬಾಲಿವುಡ್ ನಟಿ ಮಲೈಕಾ ಅರೋರಾ ಏಪ್ರಿಲ್ 2ರಂದು ಪುಣೆಯಲ್ಲಿ ಫ್ಯಾಷನ್ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಮಲೈಕಾ ತಲೆಗೆ ಪೆಟ್ಟುಬಿದ್ದಿದ್ದು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. 

ಬಾಲಿವುಡ್ ನಟಿ ಮಲೈಕಾ ಅರೋರಾ ಏಪ್ರಿಲ್ 2ರಂದು ಪುಣೆಯಲ್ಲಿ ಫ್ಯಾಷನ್ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ ಆಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಮಲೈಕಾ ತಲೆಗೆ ಪೆಟ್ಟು ಬಿದ್ದಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ತಕ್ಷಣ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಒಂದು ದಿನದ ಬಳಿಕ ಮಲೈಕಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಮಲೈಕಾ ಆರೋರಾ ಸಹೋದರಿ ಅಮೃತಾ ಅರೋರಾ ಆಂಗ್ಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಸದ್ಯ ಮಲೈಕಾ ಆರೋಗ್ಯ ಚೇತರಿಸಿದ್ದು, ಉತ್ತಮವಾಗಿದ್ದಾರೆ ಎಂದು ಹೇಳಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮಲೈಕಾಗೆ ಚಿಕಿತ್ಸೆ ನೀಡಲಾಗಿದೆ. ಇದೀಗ ಮನೆಗೆ ಮರಳಿರುವ ಮಲೈಕಾ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಮಲೈಕಾ ಕಾರು ಮುಂಬೈ-ಪುಣೆ ಹೆದ್ದಾರಿಯಲ್ಲಿ ಬುತ್ತಿರುವಾಗ ಮಲೈಕಾ ಕಾರಿನ ಜೊತೆ ಮತ್ತೊಂದು ಕಾರು ಹಾಗೂ ಬಸ್ ನಡುವೆ ಡಿಕ್ಕಿಯಾಗತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದೇವೆ ಬಳಿಕ ಎಫ್ ಐ ಆರ್ ದಾಖಲಿಸುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಮಲೈಕಾ ಅರೋರಾ ಆಪ್ತರು ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಲೈಕಾ ಈ ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ. ಆದರೆ ಈಗ ಚೇತರಿಸಿಕೊಂಡಿದ್ದಾರೆ. ಗಾಯಗಳಾದ ಸ್ಥಳಕ್ಕೆ ಕೆಲವು ಹೊಲಿಗೆ ಹಾಕಲಾಗಿದೆ. ಅವಳ ತಲೆಗೆ ಯಾವುದೇ ದೊಡ್ಡ ಗಾಯವಾಗಿಲ್ಲ ಎಂದಿದ್ದಾರೆ. ಸದ್ಯ ಮನೆಗೆ ಮರಳಿರುವ ಮಲೈಕಾ ನೋಡಲು ಸ್ನೇಹಿತರು, ಕುಟುಂಬದವರು ತೆರಲುತ್ತಿದ್ದಾರೆ. ಮಲೈಕಾ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಕೂಡ ಗೆಳತಿ ಆರೋಗ್ಯ ವಿಚಾರಿಸಲು ಮನೆಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಕಾರು ಅಪಘಾತ: ನಟಿ ಮಲೈಕಾ ಆರೋರಾ ಆಸ್ಪತ್ರೆಗೆ ದಾಖಲು

ಅಂದಹಾಗೆ ಮಲೈಕಾ ಬಾಲಿವುಡ್ ನಲ್ಲಿ ಸದಾ ಸದ್ದು ಮಾಡುತ್ತಿರುವ ನಟಿ. ಫ್ಯಾಷನ್ ಮತ್ತು ವೈಯಕ್ತಿಕ ವಿಚಾರವಾಗಿ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಸದ್ಯ ಮಲೈಕಾ ಹಿಂದಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ವಿಶ್ರಾಂತಿಯಲ್ಲಿರುವ ಮಲೈಕಾ ಸಿನಿಮಾ ಕೆಲಸಗಳಿಂದ ಸ್ವಲ್ಪ ದಿನಗಳು ದೂರ ಇರುವ ಸಾಧ್ಯತೆ ಇದೆ.

ಶನಿವಾರ ಮಧ್ಯಾಹ್ನ ಮಲೈಕಾ ಫ್ಯಾಶನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಫೋಟೋಗಳು ಮತ್ತು ವೀಡಿಯೊಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದರು. ಮಲೈಕಾ ಬಾಲಿವುಡ್‌ನ ಜನಪ್ರಿಯ ಮುಖವಾಗಿದ್ದು, ಚೈಯಾ ಚೈಯಾ, ಮಾಹಿ ವೆ, ಮುನ್ನಿ ಬದ್ನಾಮ್ ಮತ್ತು ಇನ್ನೂ ಹಲವು ವಿಶೇಷ  ಐಟಂ ಡಾನ್ಸ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್, ಇಂಡಿಯಾಸ್ ಗಾಟ್ ಟ್ಯಾಲೆಂಟ್, ಜಲಕ್ ದಿಖ್ಲಾ ಜಾ ಮುಂತಾದ ಹಲವು ರಿಯಾಲಿಟಿ ಶೋಗಳನ್ನು ಇವರು ಹೋಸ್ಟ್ ಮಾಡಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ನಟಿ ಮಲೈಕಾ ಅರೋರಾರ ಮಸ್ತ್ ಫೋಟೋಗಳು

ನಟ ಅರ್ಬಾಜ್ ಖಾನ್ (Arbaaz Khan) ಅವರನ್ನು ಮದುವೆಯಾಗಿದ್ದ ಮಲೈಕಾ ಅವರಿಗೆ ಅರ್ಹಾನ್ (Arhaan) ಎಂಬ ಮಗನಿದ್ದಾನೆ. ಈ ದಂಪತಿ 2017 ರಲ್ಲಿ ವಿಚ್ಛೇದನ (divorced) ಪಡೆದರು. ಮಲೈಕಾ ಈಗ ಅರ್ಜುನ್ ಕಪೂರ್ (Arjun Kapoor)ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಪುತ್ರ ಅರ್ಹಾನ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆಯ ಹೊತ್ತಲ್ಲಿ 'ನಾನು ಇಲ್ಲಿ ಬದುಕಿದ್ದೇ ನಿಮ್ಮಿಂದ' ಎಂದ ರಶ್ಮಿಕಾ ಮಂದಣ್ಣ.. ಫ್ಯಾನ್ಸ್ ಕಾಮೆಂಟ್ ಏನೇನು ಬರ್ತಿದೆ?
ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!