
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ನಟಿ ಜೆನಿಲಿಯಾ ದೇಶ್ ಮುಖ್ ವಿಡಿಯೋ ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಜೆನಿಲಿಯಾ ಧರಿಸಿರುವ ಕಿವಿಯೋಲೆ. ಹಳೆ ಕಾಲದಲ್ಲಿ ಒಂದು, ಎರಡು, ಐದು ಪೈಸೆಗಳು ಚಾಲ್ತಿಯಲ್ಲಿದ್ವು. ಈಗ ಅವೆಲ್ಲ ಮೂಲೆ ಸೇರಿವೆ. ಆದ್ರೆ ಅಪರೂಪದ ಈ ನಾಣ್ಯವೇ ಜೆನಿಲಿಯಾ ಕಿವಿಯೋಲೆಯಾಗಿದೆ.
ಜೆನಿಲಿಯಾ, ಐದು ಪೈಸೆ ನಾಣ್ಯವನ್ನೇ ಕಿವಿಯೋಲೆ ಮಾಡ್ಕೊಂಡಿದ್ದಾರೆ. ನಾಣ್ಯಕ್ಕೆ ಕಿವಿಯೋಲೆ ವಿನ್ಯಾಸ ನೀಡಲಾಗಿದೆ. ನಾಣ್ಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಐದರ ಅಂಕಿ ದೊಡ್ಡದಾಗಿ ಕಾಣ್ತಿದೆ. ಜೊತೆಗೆ ಪೈಸೆ ಎಂಬುದನ್ನೂ ನೀವು ಕಾಣ್ಬಹುದು. ಸಾಮಾನ್ಯ ಜುಮ್ಕಾಗಳಿಗಿಂತ ಇದು ಕೊಂಚ ವಿಭಿನ್ನವಾಗಿದ್ದು, ವಿಂಟೇಜ್ ಲುಕ್ ನೀಡುತ್ತಿದೆ. ಜೆನೆಲಿಯಾ ಅವರ ಈ ಲುಕ್ ನೋಡಿದ ನೆಟ್ಟಿಗರು ಕೂಡ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಹಳೆಯ ವಸ್ತುಗಳನ್ನು ಹೊಸ ರೀತಿಯಲ್ಲಿ ಬಳಸುವ ಫ್ಯಾಷನ್ ಟ್ರೆಂಡ್ ಹೆಚ್ಚಾಗುತ್ತಿದೆ. ಹಳೆಯ ಸೀರೆ, ಹಳೆ ಜೀನ್ಸ್, ಹಳೆಯ ಬಟನ್ ಎಲ್ಲವೂ ಹೊಸ ರೂಪ ಪಡೆಯುತ್ತಿದೆ. ಈಗ ಈ ಸಾಲಿಗೆ ಹಳೆ ನಾಣ್ಯ ಸೇರಿದ್ದು ವಿಶೇಷ.
ಹಳೆ ನಾಣ್ಯವಿದ್ರೆ ನೀವೂ ಟ್ರೈ ಮಾಡಿ
ನಿಮ್ಮ ಮನೆಯಲ್ಲೂ ಹಳೆಯ 5 ಪೈಸೆ ಅಥವಾ ಬೇರೆ ಅಪರೂಪದ ನಾಣ್ಯಗಳಿದ್ರೆ ನೀವು ಅವುಗಳನ್ನು ಬಳಸಿ ಇಂಥದ್ದೊಂದು ಕ್ರಿಯೇಟಿವ್ ಆಭರಣ ತಯಾರಿಸ್ಬಹುದು. ನಾಣ್ಯಕ್ಕೆ ಸೂಕ್ತವಾದ ಇಯರಿಂಗ್ ಹುಕ್ ಅಳವಡಿಸಿದರೆ ವಿಭಿನ್ನ ಕಿವಿಯೋಲೆ ಸಿದ್ಧ. ಸೋಶಿಯಲ್ ಮೀಡಿಯಾದಲ್ಲಿ ಜೆನಿಲಿಯಾ ವಿಡಿಯೋ ನೋಡಿದ ಬಳಕೆದಾರರು ಕೂಡ ನಾವು ಟ್ರೈ ಮಾಡ್ತೇವೆ, ಗುಡ್ ಐಡಿಯಾ ಅಂತ ಕಮೆಂಟ್ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.