
ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ನೋಡಬೇಕು ಎಂದರೆ ಹಾಲಿವುಡ್, ಬಾಲಿವುಡ್ ಸಿನಿಮಾಗಳನ್ನೇ ನೋಡಬೇಕಿತ್ತು. ದಕ್ಷಿಣ ಭಾರತದ ಸಿನಿಮಾಗಳಲ್ಲೂ ಥ್ರಿಲ್ಲರ್ ಹಾರರ್ ಸಿನಿಮಾಗಳಿದ್ದವು ಆದರೂ ಹಾಲಿವುಡ್‌ಗೆ ಹೋಲಿಸಿದರೆ ಸಪ್ಪೆ ಎನಿಸುವಂತಹವು. ಆದರೆ ಈಗ ದಕ್ಷಿಣ ಭಾರತೀಯ ಸೀನಿಮಾಗಳು ಹಾಲಿವುಡ್‌ಗೆ ಪೈಪೋಟಿ ಕೊಡುವಂತೆ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬರುತ್ತಿವೆ.
ಹೌದು ಇತ್ತೀಚಿಗೆ ಒಟಿಟಿ(OTT)ಯಲ್ಲಿ ತಮಿಳು ಕ್ರೈಮ್ ಥ್ರಿಲ್ಲರ್ ಇರುವ ಸಿನಿಮಾಗಳ ಕ್ರೇಜ್ ಹೆಚ್ಚುತ್ತಿವೆ. ಪ್ರೇಕ್ಷಕರು ಕೂಡ ಬದಲಾಗಿದ್ದಾರೆ. ಈಗಿನ ಯುವಕರು ಸಸ್ಪೆನ್ಸ್, ಟ್ವಿಸ್ಟ್, ಹಾರರ್ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಅಂಥವರಿಗಾಗಿಯೇ ಒಟಿಟಿ ಸ್ಕ್ರೀಮಿಂಗ್‌ಗೆ ಹೊಸದೊಂದು ಸಿನಿಮಾ ಬರಲು ಸಿದ್ಧವಾಗಿದೆ. ವಿಚಿತ್ರ ತಿರುವು, ಸಸ್ಪೆನ್ಸ್ ಇರುವ ಈ ಸಿನಿಮಾ ಕುತೂಹಲ ಮೂಡಿಸಿದೆ.
ಹಳ್ಳಿಯೊಂದರಲ್ಲಿ ನಡೆಯುವ ವಿಚಿತ್ರ ಸಾವುಗಳ ಸುತ್ತ ಸುತ್ತುವ ಈ ಸಿನಿಮಾ ತುಂಬಾ ಕುತೂಹಲಕಾರಿಯಾಗಿದೆ. ಈ ಸಿನಿಮಾ ಈ ಹಿಂದೆ ಸೆ.18ರಂದೇ ಥಿಯೇಟರ್‌ನಲ್ಲಿ ಬಿಡುಗಡೆಯಾಗಿತ್ತು. ಆಗಲೂ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆಯಿತು. ಇದೀಗ ಅದೇ ಸಿನಿಮಾ ಮೂರು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆಹಾ ಮತ್ತು ಸಿಂಪ್ಲಿ ಸೌತ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೋಡಬಹುದು. ಈಗ ಚಿತ್ರದ ತೆಲುಗು ಆವೃತ್ತಿಯೂ OTT ಗೆ ಬಂದಿದೆ. ಇದು ಬುಧವಾರದಿಂದ ಜನಪ್ರಿಯ OTT ಲಯನ್ಸ್‌ಗೇಟ್ ಪ್ಲೇನಲ್ಲಿ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಈ ಚಿತ್ರದಲ್ಲಿ ನಿರ್ದೇಶಕ ಸಿದ್ದು ಸಿದ್, ಋತ್ವಿಕಾ, ವೇಲಾರಾಮಮೂರ್ತಿ, ನೀಲಗಲ್ ರವಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಾಜಿ ಕಥೆ ಬರೆದು ನಿರ್ದೇಶಿಸಿದ್ದಾರೆ. ಶಕ್ತಿ ಬಾಲಾಜಿ ಸಂಗೀತ ಈ ಸಿನಿಮಾ ಹಿಂದಿನ ಶಕ್ತಿ. ಭೂಪತಿ ಕಲೈವಾಣನ್ ಈ ಚಿತ್ರವನ್ನು ಕೊಥೈ ಎಂಟರ್‌ಟೈನ್‌ಮೆಂಟ್ ಮತ್ತು ಎಂಎಸ್ ಸ್ವಿಸ್ ಫಿಲ್ಮ್ ಫ್ಯಾಕ್ಟರಿ ನಿರ್ಮಾಣ ಸಂಸ್ಥೆಗಳ ಅಡಿಯಲ್ಲಿ ನಿರ್ಮಿಸಿದ್ದಾರೆ.
1970 ರ ದಶಕದಲ್ಲಿ ಫ್ರೆಂಚ್ ಸಂಶೋಧಕರೊಬ್ಬರು ಬರೆದ ರಹಸ್ಯ ಪುಸ್ತಕವನ್ನು ಆಧರಿಸಿದ 'ದಿ ಡಾರ್ಕ್ ಹೆವೆನ್' ಕಥೆಯು ಪುರಾತನ ಶಾಪದಿಂದಾಗಿ'ಮೆಕ್ಕರೈ' ಎಂಬ ದೂರದ ಬೆಟ್ಟದ ಪಟ್ಟಣದಲ್ಲಿ ನಡೆಯುತ್ತದೆ. ದಶಕಗಳಿಂದಲೂ ಈ ಗ್ರಾಮದಲ್ಲಿ ಒಂದು ಮೂಡನಂಬಿಕೆ ನಂಬಿಕೆ ಹರಡಿರುತ್ತದೆ. ಅದೇನೆಂಬದರೆ, ಈ ಪಟ್ಟಣದಲ್ಲಿ ಪ್ರತಿ ಏಳು ವರ್ಷಗಳಿಗೊಮ್ಮೆ ಅದೂ ಜೂನ್ ತಿಂಗಳಲ್ಲಿ ಗ್ರಾಮದಲ್ಲಿನ ಪುರುಷರು ಅನುಮಾನಾಸ್ಪದವಾಗಿ ಸಾಯುತ್ತಾರೆ. ಇದು ಗ್ರಾಮಸ್ಥರನ್ನು ಚಿಂತೆಗೀಡುಮಾಡುತ್ತದೆ. ಳ್ಳಿಯ ಮೇಲೆ ಏನೋ ಶಾಪವಿದೆ ಎಂದು ಅವರು ನಂಬುತ್ತಾರೆ. ಅದರಿಂದಲೇ ಈ ವಿಚಿತ್ರ ಸಾವುಗಳು ಸಂಭವಿಸುತ್ತಿವೆ ಎಂದು ಆತಂಕಗೊಂಡಿರುತ್ತಾರೆ.
ಇದನ್ನೂ ಓದಿ: ಖ್ಯಾತ ಕೋರಿಯೋಗ್ರಾಫರ್ ಕಾರು ಭೀಕರ ಅಪಘಾತ! ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿಗೆ ಕಾರು ಅಪ್ಪಚ್ಚಿ!
ಇಂಥ ಸಮಯದಲ್ಲಿ ಹೊಸ ಎಸ್‌ಐ ಆಗಿ ಇಳಂಪಗ್ರಿ(ಸಿಧು) ಗ್ರಾಮಕ್ಕೆ ಬರ್ತಾರೆ. ಗ್ರಾಮದಲ್ಲಿ ಏನಾಗುತ್ತದೆ, ಪುರುಷರು ಏಕೆ ಸಾಯುತ್ತಾರೆ, ಈ ನಿಗೂಢ ಸಾವುಗಳ ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ಭೇದಿಸಲು ಇಳಂಪಗ್ರಿ ಮತ್ತು ಅವನ ಟೀಂ ಗ್ರಾಮಕ್ಕೆ ಬರುತ್ತಾರೆ. ಗ್ರಾಮದಲ್ಲಿನ ಸಾವುಗಳಿಗೆ ನಿಜವಾದ ಕಾರಣಗಳೇನು? ಅವರು ಯಾವುದೋ ದುಷ್ಟಶಕ್ತಿಯಿಂದ ಸಾಯುತ್ತಿದ್ದಾರೆಯೇ? ಯಾರಾದರೂ ಉದ್ದೇಶಪೂರ್ವಕವಾಗಿ ಕೊಲ್ಲುತ್ತಿದ್ದಾರೆಯೇ? ತನಿಖೆಯ ಸಮಯದಲ್ಲಿ ಬೆಳಕಿಗೆ ಬರುವ ಆಘಾತಕಾರಿ ಸಂಗತಿಗಳು ಬಯಲಿಗೆ ಬರುತ್ತವೆ. ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳ ಬಗ್ಗೆ ಆಸಕ್ತಿ ಇದ್ದರೆ ಈ ಸಿನಿಮಾಗಳನ್ನ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.