ಶಾರುಕ್ ಕಟ್ಟಿರುವ ವಾಚ್ ಬೆಲೆಗೆ ಐಷಾರಾಮಿ ಮನೆ ಖರೀದಿಸಬಹುದು! ವಿಶ್ವದಲ್ಲಿ ಕೇವಲ 22 ಮಂದಿ ಬಳಿ ಇರುವ ಇದ್ರ ವಿಶೇಷತೆ ಏನು?

Published : Nov 14, 2026, 11:37 AM IST
Shah Rukh Khan watch

ಸಾರಾಂಶ

ಬಾಲಿವುಡ್‌ ಬಾದ್‌ ಷಾ ಶಾರುಕ್‌ ಖಾನ್ ಸ್ಟೈಲ್‌ ವಿಷ್ಯದಲ್ಲೂ ಆಗಾಗ ಸುದ್ದಿಯಲ್ಲಿರ್ತಾರೆ. ಈಗ ಅವರು ಕೈಗೆ ಕಟ್ಟಿರುವ ವಾಚ್ ಎಲ್ಲರ ಗಮನ ಸೆಳೆದಿದೆ. ಅವ್ರು ವಾಚ್‌ ಬೆಲೆ ಎಷ್ಟು, ವಿಶೇಷತೆ ಏನು ಎಂಬ ಮಾಹಿತಿ ಇಲ್ಲಿದೆ.

ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ ಸಿನಿಮಾ ಮತ್ತು ಅದ್ಭುತ ನಟನೆಯಿಂದ ಮಾತ್ರವಲ್ಲದೆ ಐಷಾರಾಮಿ ಜೀವನಶೈಲಿಯಿಂದಲೂ ಆಗಾಗ ಸುದ್ದಿಯಾಗ್ತಿರುತ್ತಾರೆ. ಇತ್ತೀಚೆಗೆ ಅವರ ಕೈಗೆ ಕಟ್ಟಿದ್ದ ವಾಚ್ವೊಂದು ಎಲ್ಲರ ಗಮನ ಸೆಳೆದಿದೆ. ಇದು ಸಾಮಾನ್ಯ ರೋಲೆಕ್ಸ್ ಅಥವಾ ಆ್ಯಪಲ್ ವಾಚ್ ಅಲ್ಲ. ಬದಲಿಗೆ ಸ್ವಿಟ್ಜರ್ಲ್ಯಾಂಡ್ನ ಪ್ರತಿಷ್ಠಿತ ಐಷಾರಾಮಿ ವಾಚ್ ಕಂಪನಿ ಗ್ರೂಬೆಲ್ ಫೋರ್ಸಿ (Greubel Forsey) ತಯಾರಿಸಿರುವ ವಿಶೇಷ 'ಬ್ಯಾಲೆನ್ಸಿಯರ್ 3' (Balancier 3) ವಾಚ್.

ಶಾರುಕ್ ಐಷಾರಾಮಿ ವಾಚ್‌ ಬೆಲೆ ಎಷ್ಟು?

ಶಾರುಕ್‌ ಖಾನ್‌ ಕಟ್ಟಿದ್ದ ಬ್ಯಾಲೆನ್ಸಿಯರ್‌ ವಾಚ್ ಬೆಲೆ ಬರೋಬ್ಬರಿ 1.8 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಇದರ ಬೇಬಿ ಬ್ಲೂ ಡಯಲ್ ಹೊಂದಿರುವ ವಿಶೇಷ ಆವೃತ್ತಿಯ ಕೇವಲ 22 ವಾಚ್ಗಳನ್ನು ಮಾತ್ರ ತಯಾರಿಸಲಾಗಿದೆ. ಅಂದ್ರೆ ವಿಶ್ವದಲ್ಲಿ ಈ ವಾಚ್‌ ಬರೀ 22 ಮಂದಿ ಬಳಿ ಮಾತ್ರ ಇದೆ.

ಶಾರುಖ್ ಖಾನ್ ಇತ್ತೀಚೆಗೆ ತಮ್ಮ 61ನೇ ಹುಟ್ಟುಹಬ್ಬದ ಸಂಭ್ರಮದ ಸಂದರ್ಭದಲ್ಲಿ ವಿಶೇಷ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಅವರ ಉಡುಗೆ, ಸ್ಟೈಲ್ ಮತ್ತು ಆ್ಯಕ್ಸೆಸರೀಸ್ಗಳ ನಡುವೆ ಎಲ್ಲರ ಗಮನ ಸೆಳೆದಿದ್ದು ಅವರ ಕೈಯಲ್ಲಿದ್ದ ವಾಚ್. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋವೊಂದರಲ್ಲಿ ಅವರು ಕೈಗೆ ಕಟ್ಟಿದ್ದ ನೀಲಿ ಬಣ್ಣದ ಡಯಲ್ ಹೊಂದಿರುವ ಸುಂದರ ವಾಚ್ ಎಲ್ಲರನ್ನು ಆಕರ್ಷಿಸಿದೆ.

ವರದಿಗಳ ಪ್ರಕಾರ ಈ ವಾಚ್ನ ಪಟ್ಟಿ ಬೆಲೆ 2,05,000 ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದರ ಬೆಲೆ ಸುಮಾರು 1.8 ಕೋಟಿ ರೂಪಾಯಿ. ಅಂದರೆ, ಶಾರುಖ್ ಖಾನ್ ಅವರ ಕೈಯಲ್ಲಿರುವ ಪುಟ್ಟ ವಾಚ್ನ ಬೆಲೆ ಹಲವು ಐಷಾರಾಮಿ ಕಾರುಗಳ ಬೆಲೆಗಿಂತಲೂ ಹೆಚ್ಚಿದೆ.

ಶಾರುಖ್ ಖಾನ್ ಧರಿಸಿರುವುದು ಗ್ರೂಬೆಲ್ ಫೋರ್ಸಿ ಕಂಪನಿಯ ಬ್ಯಾಲೆನ್ಸಿಯರ್ 3 ವಾಚ್. ಇದರ ವಿಶೇಷ ಬೇಬಿ ಬ್ಲೂ ಡಯಲ್ ಹೊಂದಿರುವ ಟೈಟಾನಿಯಂ ಆವೃತ್ತಿಯನ್ನು ಅತ್ಯಂತ ಸೀಮಿತ ಸಂಖ್ಯೆಯಲ್ಲಿ ತಯಾರಿಸಲಾಗಿದೆ. ಗ್ರೂಬೆಲ್ ಫೋರ್ಸಿ ಸ್ವಿಟ್ಜರ್ಲ್ಯಾಂಡ್ನ ಐಷಾರಾಮಿ ವಾಚ್ ತಯಾರಿಕಾ ಕಂಪನಿ. ಸಾವಿರಾರು ವಾಚ್ಗಳನ್ನು ಉತ್ಪಾದಿಸುವ ಬದಲು, ಅತ್ಯಂತ ವಿಶಿಷ್ಟವಾದ ಮತ್ತು ಸಂಕೀರ್ಣವಾದ ಮೆಕ್ಯಾನಿಕಲ್ ವಾಚ್ಗಳನ್ನು ತಯಾರಿಸುವುದು ಈ ಕಂಪನಿಯ ವಿಶೇಷತೆ. ವಾಚ್ನ ಒಳಭಾಗದಲ್ಲಿರುವ ಯಂತ್ರದ ವಿನ್ಯಾಸ, ವಿಶಿಷ್ಟ ವಿನ್ಯಾಸದ ಶೈಲಿ ಮತ್ತು ಕೈಯಿಂದ ಮಾಡುವ ನಿಖರವಾದ ಫಿನಿಶಿಂಗ್ ಈ ಕಂಪನಿಯ ವಾಚ್ಗಳ ಪ್ರಮುಖ ಆಕರ್ಷಣೆ.

ಈ ವಾಚ್ನ ಅತ್ಯಂತ ಪ್ರಮುಖ ವಿಶೇಷತೆ ಅದರ ಮೂವ್ಮೆಂಟ್. ಸರಳವಾಗಿ ಹೇಳುವುದಾದರೆ, ಮೂವ್ಮೆಂಟ್ ಎಂದರೆ ವಾಚ್ನ ಒಳಗೆ ಅಳವಡಿಸಿರುವ ಸಂಪೂರ್ಣ ಯಂತ್ರವ್ಯವಸ್ಥೆ. ಇದು ವಾಚ್ನ ಮುಳ್ಳುಗಳನ್ನು ಚಲಿಸುವಂತೆ ಮಾಡಿ ಸಮಯವನ್ನು ತೋರಿಸುತ್ತದೆ. ಗ್ರೂಬೆಲ್ ಫೋರ್ಸಿ ಬ್ಯಾಲೆನ್ಸಿಯರ್ 3 ವಾಚ್ನಲ್ಲಿ ಮ್ಯಾನುಯಲ್ ವಿಂಡಿಂಗ್ ಮೂವ್ಮೆಂಟ್ ನೀಡಲಾಗಿದೆ. ಅಂದರೆ, ವಾಚ್ ಕಾರ್ಯನಿರ್ವಹಿಸಲು ಕಾಲಕಾಲಕ್ಕೆ ಅದರ ಕ್ರೌನ್ ಅನ್ನು ಕೈಯಿಂದ ತಿರುಗಿಸಿ ಚಾವಿ ತುಂಬಬೇಕು. ಇದು ಬ್ಯಾಟರಿಯಿಂದ ಕಾರ್ಯನಿರ್ವಹಿಸುವ ವಾಚ್ ಅಲ್ಲ. ಇದರಲ್ಲಿ ಕಂಪನಿಯೇ ವಿನ್ಯಾಸಗೊಳಿಸಿರುವ ಇನ್ಹೌಸ್ ಮೆಕ್ಯಾನಿಕಲ್ ಮೂವ್ಮೆಂಟ್ ಇದೆ. ಇದರಲ್ಲಿ ಒಟ್ಟು 282 ಸಣ್ಣ ಮತ್ತು ದೊಡ್ಡ ಬಿಡಿಭಾಗಗಳು ಹಾಗೂ 43 ಜ್ಯುವೆಲ್ಸ್ಗಳನ್ನು ಬಳಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Hanuman Ansh: ಹನುಮಾನ್ ಅಂಶ್‌ಗೆ ಕರೋಲಿ ಬಾಬಾ ಕೃಪೆ; 10 ಲಕ್ಷದಿಂದ 453 ಕೋಟಿ ರೂ. ಕಲೆಕ್ಷನ್! 100 ಡೇಸ್ ಕಂಪ್ಲೀಟ್
ತಮಿಳುನಾಡಿನಲ್ಲೂ ರಾಮಾಯಣ ಹವಾ; ಸೂರ್ಯ 'ಸೀನ್' ಮೇಲೆ ಸವಾರಿ, ಕಾಲಿವುಡ್‌ನಲ್ಲಿ ಭಾರೀ ಕಾಂಚಾಣ!