ಲಿಪ್ ಕಿಸ್ ಫೋಟೋ ಶೇರ್ ಮಾಡಿ ಪತ್ನಿಗೆ ನಟ ಫರ್ಹಾನ್ ಅಖ್ತರ್ ರೊಮ್ಯಾಂಟಿಕ್ ವಿಶ್

By Shruthi Krishna  |  First Published Feb 19, 2023, 5:40 PM IST

ಬಾಲಿವುಡ್ ಖ್ಯಾತ ನಟ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಂಡೇಕರ್ ದಂಪತಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮ.


ಬಾಲಿವುಡ್ ಖ್ಯಾತ ನಟ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಂಡೇಕರ್ ದಂಪತಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ಜೋಡಿಗಳಲ್ಲಿ ಫರ್ಹಾನ್ ಮತ್ತು ಶಿಬಾನಿ ಜೋಡಿ ಕೂಡ ಒಂದಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಫರ್ಹಾನ್ ಪ್ರೇಯಸಿ ಶಿಬಾನಿ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಇಬ್ಬರ ಮದುವೆ ಸಂಭ್ರಮದಲ್ಲಿ ಬಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗಿದ್ದರು. ಕುಟುಂಬದವರು ಮತ್ತು  ನಟಿ ರಿಯಾ ಚಕ್ರವರ್ತಿ, ಫರ್ಹಾನ್ ಸಹೋದರಿ ಜೋಯಾ ಅಖ್ತರ್, ಹೃತಿಕ್ ರೋಷನ್ ಸೇರಿದಂತೆ ಅನೇಕರು ಹಾಜರಾಗಿ ಶುಭಕೋರಿದ್ದರು.

ಇದೀಗ ದಂಪತಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಫರ್ಹಾನ್ ತನ್ನ ಪತ್ನಿ ಶಿಬಾನಿಗೆ ಲಿಪ್ ಕಿಸ್ ಮಾಡಿರುವ ಫೋಟೋ ಶೇರ್ ಮಾಡಿ  ರೊಮ್ಯಾಂಟಿಕ್ ಸಾಲನ್ನು ಬರೆದಿದ್ದಾರೆ. ಇದು ಇಬ್ಬರ ಮದುವೆಯ ಸುಂದರ ಫೋಟೋಗಳಾಗಿವೆ. ಶಿಬಾನಿ ಕೆಂಪು ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದಾರೆ. ಫರ್ಹಾನ್ ಸೂಟ್ ನಲ್ಲಿ ಮಿಂಚಿದ್ದಾರೆ. ಫೋಟೋ ಶೇರ್ ಮಾಡಿ 365 ಸಂತೋಷದ ದಿನಗಳು ಎಂದು ಹೇಳಿದ್ದಾರೆ.

Tap to resize

Latest Videos

'ಹ್ಯಾಪಿ 365 ಶಿಬಾನಿಯಾಖ್ತರ್.. ಇಲ್ಲಿದೆ (ಇನ್ಫಿನಿಟಿ ಎಮೋಜಿ)' ಹಾಕಿದ್ದಾರೆ. ಈ ಪೋಸ್ಟ್ ಗೆ ಶಿಬಾನಿ ಕಾಮೆಂಟ್ ಮಾಡಿ ಹೃದದ ಎಮೋಜಿ ಹಾಕಿದ್ದಾರೆ. ಇಬ್ಬರ ಪೋಸ್ಟ್ ಗೆ ಅಭಿಮಾನಿಗಳು ಮತ್ತು ಗಣ್ಯರು ಶುಭಕೋರಿ ಕಾಮಂಟ್ ಮಾಡುತ್ತಿದ್ದಾರೆ. ಸುಂದರ ದಂಪತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸುತ್ತಿದ್ದಾರೆ.

ಬಾಲಿವುಡ್‌ ನಟ ಫರ್ಹಾನ್‌ ಆಖ್ತರ್‌ ಅವರಿಗೆ ಪ್ರಪೋಸ್‌ ಮಾಡಿದ್ದರು ಕರ್ನಾಟಕದ ಈ ನಟಿ

ಫರ್ಹಾನ್ ಅಖ್ತರ್‌ಗೆ 2ನೇ ಮದುವೆ

ಫರ್ಹಾನ್​ ಅಖ್ತರ್​ ಅವರಿಗೆ ಇದು ಎರಡನೇ ಮದುವೆ. ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಬಳಿಕ ಶಿಬಾನಿ ಅವರನ್ನು ಪ್ರೀತಿಸಲು ಆರಂಭಿಸಿದರು. ಇಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಪಡೆದು ದಾಂಪತ್ಯಕ್ಕೆ ಕಾಲಿಟ್ಟರು. ಫರ್ಹಾನ್​ ಅಖ್ತರ್​ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು.  ಶಿಬಾನಿ ದಂಡೇಕರ್ ಹಿಂದು ಧರ್ಮದವರು. ಇಬ್ಬರ ಮದುವೆ​ ಪರಸ್ಪರರಿಗೆ ಬರೆದುಕೊಂಡ ಪ್ರತಿಜ್ಞೆಗಳನ್ನು ಎಲ್ಲರ ಎದುರು ಓದುವ ಮೂಲಕ ನೆರವೇರಿತ್ತು. 

ಅದಿತ್ಯ ರಾಯ್‌ ಕಪೂರ್‌ನಿಂದ ಫರ್ಹಾನ್‌ ಆಖ್ತರ್‌: ಶ್ರದ್ಧಾ ಕಪೂರ್ ಡೇಟಿಂಗ್‌ ಲೈಫ್‌

ಫರ್ಹಾನ್ ಅಖ್ತರ್ ಕೊನೆಯದಾಗಿ ತೂಫಾನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.  ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಸಿನಿಮಾ 2021ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಬಳಿಕ ಮತ್ತೆ ತೆರೆಮೇಲೆ ಬಂದಿಲ್ಲ. ಇದೀಗ ನಿರ್ದೇಶನದಲ್ಲಿ ಫರ್ಹಾನ್ ಬ್ಯುಸಿಯಾಗಿದ್ದಾರೆ. ಮತ್ತೆ ಯಾವಾಗ ತೆರೆಮೇಲೆ ಬರ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

click me!