ಎಷ್ಟು ಮಂದಿ ಜೊತೆ ಬೇಕಿದ್ರೂ ಡೇಟಿಂಗ್​ ಮಾಡಿ, ಆದ್ರೆ... ಮಕ್ಕಳಿಗೆ ಗೌರಿ ಖಾನ್​ ಸಲಹೆ ಏನು? ಫ್ಯಾನ್ಸ್​ ಶಾಕ್​!

Published : Mar 23, 2025, 05:54 PM ISTUpdated : Mar 23, 2025, 06:57 PM IST
ಎಷ್ಟು ಮಂದಿ ಜೊತೆ ಬೇಕಿದ್ರೂ ಡೇಟಿಂಗ್​ ಮಾಡಿ, ಆದ್ರೆ... ಮಕ್ಕಳಿಗೆ ಗೌರಿ ಖಾನ್​ ಸಲಹೆ ಏನು? ಫ್ಯಾನ್ಸ್​  ಶಾಕ್​!

ಸಾರಾಂಶ

ಬಾಲಿವುಡ್ ನಟಿ ಗೌರಿ ಖಾನ್, ಮಕ್ಕಳಾದ ಆರ್ಯನ್ ಮತ್ತು ಸುಹಾನಾಗೆ ಡೇಟಿಂಗ್ ಸಲಹೆ ನೀಡಿದ್ದಾರೆ. ಆರ್ಯನ್‍ಗೆ ಮದುವೆ ಫಿಕ್ಸ್ ಆಗುವವರೆಗೆ ಹುಡುಗಿಯರ ಜೊತೆ ಡೇಟಿಂಗ್ ಮಾಡು, ಸುಹಾನಾ ಒಂದೇ ಬಾರಿಗೆ ಇಬ್ಬರ ಜೊತೆ ಡೇಟಿಂಗ್ ಮಾಡಬೇಡ ಎಂದು ಹೇಳಿದ್ದಾರೆ. ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಈ ವಿಷಯ ಬಹಿರಂಗವಾಗಿದೆ. ಶಾರುಖ್ ಖಾನ್ ಮನೆಯಲ್ಲಿ ಕಡಿಮೆ ಸಮಯ ಕಳೆಯುತ್ತಾರೆಂದು ಗೌರಿ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಂಬಂಧಗಳಲ್ಲಿ ಅರ್ಥವೇ ಇಲ್ಲ ಎನ್ನುವ ಮಾತು ಬಹಳ ವರ್ಷಗಳಿಂದಲೂ ಕೇಳಿಬರುತ್ತಲೇ ಇದೆ. ಅದರಲ್ಲಿಯೂ ಚಿತ್ರನಟರ ಬಾಳಲ್ಲಿ ಸಂಬಂಧ ಎನ್ನುವುದು ಯೂಸ್​ ಆ್ಯಂಡ್​ ಥ್ರೋ ಅನ್ನುವಂತೆಯೇ ಇದೆ. ಡೇಟಿಂಗ್​, ಸಂಬಂಧ, ದೈಹಿಕ ಸಂಪರ್ಕ, ವಿವಾಹೇತರ ಸಂಬಂಧ, ಡಿವೋರ್ಸ್​ ಇವೆಲ್ಲವೂ ಕಾಮನ್​ ಆಗಿಬಿಟ್ಟಿದೆ. ಇದನ್ನೇ ಫಾಲೋ ಮಾಡುವ ಹಲವಾರು ಮಂದಿ ಇದ್ದಾರೆ. ಅದರಲ್ಲಿಯೂ ಶ್ರೀಮಂತರು ಎನ್ನಿಸಿಕೊಳ್ಳುವ ಕುಟುಂಬಗಳಲ್ಲಿಯೂ ಇದು ಮಾಮೂಲಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಸಂಬಂಧದ ಬೆಲೆ ಮಸೂರ ಹಿಡಿದು ಹುಡುಕುವಂತಾಗಿದೆ. ಈ ನಡುವೆಯೇ, ಶಾರುಖ್​ ಖಾನ್​ ಪತ್ನಿ ಗೌರಿ ಖಾನ್​ ಅವರು ತಮ್ಮ ಮಕ್ಕಳಾದ ಆರ್ಯನ್​ ಖಾನ್​ ಮತ್ತು ಸುಹಾನಾ ಖಾನ್​ ಅವರಿಗೆ ಡೇಟಿಂಗ್​ ಟಿಪ್ಸ್​  ಕೊಟ್ಟಿದ್ದಾರೆ. ಇದನ್ನು ಕೇಳಿ ಒಂದು ವರ್ಗದ ಫ್ಯಾನ್ಸ್​ ಶಾಕ್​ಗೆ ಒಳಗಾಗಿದ್ದಾರೆ.


ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನಲ್ಲಿ ಈ ಟಿಪ್ಸ್​ ಅನ್ನು ಗೌರಿ ಖಾನ್​ ನೀಡಿದ್ದರು. ಈ ಹಳೆಯ ವಿಡಿಯೋ ಪುನಃ ವೈರಲ್​ ಆಗುತ್ತಿದೆ. ಈ ಎಪಿಸೋಡ್​ನಲ್ಲಿ ಗೌರಿ ಖಾನ್​ ಜೊತೆ, ಬಾಲಿವುಡ್​ ನಟ ಸಂಜಯ್ ಕಪೂರ್ ಹೆಂಡತಿ ಮಹೀಪ್ ಕಪೂರ್ ಹಾಗೂ ಚಂಕಿ ಪಾಂಡೆ ಹೆಂಡತಿ ಭಾವನಾ ಪಾಂಡೆ ಕೂಡ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಕುಟುಂಬಗಳ ಬಗ್ಗೆ ಅವರು ಮಾತನಾಡಿದ್ದಾರೆ. ಈ ವೇಳೆ ತಮ್ಮ ಮಕ್ಕಳಿಗೆ ಕೊಟ್ಟಿರುವ ಡೇಟಿಂಗ್​ ಟಿಪ್ಸ್​ ಬಗ್ಗೆ ಗೌರಿ ಖಾನ್​ ಹೇಳಿರುವುದು ಕೇಳಿ ಅಭಿಮಾನಿಗಳಿಗೆ ಅಚ್ಚರಿ ಉಂಟಾಗಿದೆ.

ಶಾರುಖ್​, ಆಮೀರ್​ ಖಾನ್​ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?
 
ಕರಣ್ ಜೋಹರ್ ಅವರು,  ಗೌರಿ ಖಾನ್‌ ಬಳಿ ನಿಮ್ಮ ಮಕ್ಕಳಿ ನೀಡುವ ಡೇಟಿಂಗ್ ಸಲಹೆ ಏನು ಎಂದು ಪ್ರಶ್ನಿಸಿದಾಗ,  ಗೌರಿ ಖಾನ್, ಅವರು ನನ್ನ ಮಗ ಆರ್ಯನ್​ಗೆ ನೀನು ಎಷ್ಟು ಹುಡುಗಿಯರ ಜೊತೆಯಾದರೂ ಡೇಟಿಂಗ್ ಮಾಡು. ಆದರೆ ಮದುವೆ ಫಿಕ್ಸ್ ಆಗುವವರೆಗೂ ಮಾತ್ರ. ಮದುವೆ ಫಿಕ್ಸ್​ ಆಗುತ್ತಿದ್ದಂತೆಯೇ ಹುಡುಗಿಯರ ಜೊತೆ ಡೇಟಿಂಗ್​ ಮಾಡುವುದನ್ನು ನಿಲ್ಲಿಸು' ಎಂದಿದ್ದೇನೆ ಎಂದರು! ಮಗಳಿಗೆ ನೀಡಿರುವ ಡೇಟಿಂಗ್​ ಟಿಪ್ಸ್​ ಬಗ್ಗೆ ಕೇಳಿದಾಗ, ಅವಳು ಬೇಕಾದರು ಎಷ್ಟು ಮಂದಿ ಜೊತೆಗಾದರೂ ಡೇಟಿಂಗ್​ ಮಾಡಲಿ, ಆದರೆ, ಒಟ್ಟಿಗೇ ಇಬ್ಬರ ಜೊತೆ ಡೇಟಿಂಗ್​  ಮಾಡಬೇಡ ಎಂದು ಹೇಳಿದ್ದೇನೆ ಎಂದರು! ಇದರ ವಿಡಿಯೋ ಪುನಃ ವೈರಲ್​ ಆಗುತ್ತಿದ್ದು, ಅಬ್ಬಾ ಎನ್ನುತ್ತಿದ್ದಾರೆ ನೆಟ್ಟಿಗರು. ಇಂದು ಡೇಟಿಂಗ್ ಎಂದರೆ ಕೇವಲ ಎಲ್ಲೋ ಸುತ್ತಾಡಿ ಬರುವುದು ಅಲ್ಲ, ಬದಲಿಗೆ ಅದನ್ನು ಮೀರಿಯೂ ಎಲ್ಲವೂ ನಡೆಯುತ್ತಿದೆ. ಎಷ್ಟು ಸುಲಭದಲ್ಲಿ ಅಮ್ಮನಾದವಳು ಇಂಥ ಟಿಪ್ಸ್​ ಕೊಡಬಲ್ಲಳು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 

ಇದೇ ಷೋನಲ್ಲಿ ಶಾರುಖ್​ ಅವರ ಬಗ್ಗೆಯೂ ಗೌರಿ  ಮಾತನಾಡಿದ್ದಾರೆ. ಶಾರುಖ್ ಖಾನ್ ಅವರು ಯಾವ ವಿಚಾರಕ್ಕೆ ಹೆಚ್ಚು ಕಿರಿಕಿರಿ ಮಾಡುತ್ತಾರೆ ಎಂದು ಕರಣ್​ ಜೋಹರ್​ ಪ್ರಶ್ನಿಸಿದಾಗ, ಅವರು ಮನೆಗಿಂತಲೂ ಹೆಚ್ಚು ಸಮಯ ಹೊರಗೆ ಕಳೆಯುತ್ತಾರೆ. ಇದು ನನಗೆ ಕಿರಿಕಿರಿ ಎನ್ನಿಸುತ್ತದೆ. ಅದರಲ್ಲೂ ಪಾರ್ಟಿ ಸಮಯದಲ್ಲಿ ಹೊರಗೆ ಇರುವುದು ಜಾಸ್ತಿ. ಈ ಸಮಯದಲ್ಲಿ ಅವರ ಅಭಿಮಾನಿಗಳು  ಅವರನ್ನು ಹುಡುಕಲು ಪ್ರಾರಂಭಿಸುತ್ತಾರೆ. ನಾವು ಮನೆಯೊಳಗೆ ಪಾರ್ಟಿ ಮಾಡುವುದಕ್ಕಿಂತ ಹೊರಗೆ ಪಾರ್ಟಿ ಮಾಡುವುದು ಹೆಚ್ಚಾಗಿದೆ ಎಂದಿದ್ದಾರೆ.

ಅಲ್ಹಾನ ದಯೆಯಿಂದ 4ನೇ ಮದ್ವೆನೂ ಆಗಬಲ್ಲೆ ಎಂದು ಪತ್ನಿ ಎದುರೇ ಹೇಳಿ ಪೇಚಿಗೆ ಸಿಲುಕಿದ ಖ್ಯಾತ ನಟ ಡ್ಯಾನಿಷ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?