ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೆಸರು ನಾಲ್ವರು ಬಾಲಿವುಡ್ ತಾರೆಯರ ಜೊತೆ ಥಳಕು ಹಾಕಿಕೊಂಡಿದೆ. ಯಾರವರು?
ಚಿತ್ರರಂಗದಲ್ಲಿ ಮದುವೆ, ವಿಚ್ಛೇದನ, ಅಕ್ರಮ ಸಂಬಂಧ, ಡೇಟಿಂಗ್, ಲಿವ್ ಇನ್ ರಿಲೇಷನ್, ಒಬ್ಬಳು ಇರುವಾಗಲೇ ಇನ್ನೊಬ್ಬಳ ಜೊತೆ ಸಂಬಂಧ ಬೆಳೆಸುವುದು ಇವೆಲ್ಲವೂ ಮಾಮೂಲು. ಹಲವಾರು ಬಾರಿ ಬಹಿರಂಗಗೊಳ್ಳುವ ಸುದ್ದಿಗಳು ನಿಜವಾಗಿದ್ದರೂ ಕೆಲವೊಮ್ಮೆ ಇವು ಸುಳ್ಳಾಗುವುದೂ ಉಂಟು. ಆದರೆ ಚಿತ್ರನಟಿಯರು ಸಂಬಂಧಗಳಿಂದಲೇ ಹೆಚ್ಚೆಚ್ಚು ಟ್ರೋಲ್ (Troll) ಆಗುತ್ತಿರುವುದಂತೂ ನಿಜ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮ ಬೃಹದಾಕಾರವಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರಗಳ ಹುಳುಕುಗಳೂ ಸಾಕ್ಷಿಸಹಿತವಾಗಿ ಹೊರ ಬೀಳುತ್ತವೆ. ಈಗಿನ ವಿಷಯಗಳು ಮಾತ್ರವಲ್ಲದೇ, ಡಿಜಿಟಲ್ ಇನ್ನೂ ಹುಟ್ಟೇ ಇರದ ದಿನಗಳ ಬಗ್ಗೆಯೂ ಇದೀಗ ಸುದ್ದಿಗಳು ಒಂದೊಂದಾಗಿ ವೈರಲ್ ಆಗುತ್ತವೆ. ಅಂಥದ್ದೇ ಒಂದು ಸುದ್ದಿ ಇದೀಗ ಬಂದಿದೆ. ಅದೇನೆಂದರೆ ಮಾಜಿ ಪ್ರಧಾನಿಯೊಬ್ಬರು ನಾಲ್ಕು ಮಂದಿ ಬಾಲಿವುಡ್ ತಾರೆಯರ ಜೊತೆ ಸಂಬಂಧ ಹೊಂದಿದ್ದು, ಅವರನ್ನು ಹೇಗೆ ಬುಟ್ಟಿಗೆ ಹಾಕಿಕೊಂಡಿದ್ದರು ಎನ್ನುವುದು.
ಹೌದು. ಈಗ ಹೇಳುತ್ತಿರುವ ಮಾಜಿ ಪ್ರಧಾನಿ ಓರ್ವ ಪ್ರಸಿದ್ಧ ಮಾಜಿ ಆಟಗಾರ ಕೂಡ. ಹೌದು ಅವರೇ ಇಮ್ರಾನ್ ಖಾನ್ (Imran Khan). ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಖ್ಯಾತ ಕ್ರಿಕೆಟ್ ತಾರೆ. ಕ್ರಿಕೆಟ್ ತಾರೆಯರು ಹಾಗೂ ಬಾಲಿವುಡ್ ನಟಿಯರ ನಡುವಿನ ಸಂಬಂಧ ಇನ್ನು- ನಿನ್ನೆಯದ್ದಲ್ಲ. ಮೊದಲಿನಿಂದಲೂ ಇವರ ನಡುವೆ ಗುಸುಗುಸು ನಡೆಯುತ್ತಲೇ ಇವೆ. ಮೊಹ್ಸಿನ್ ಖಾನ್ ಮತ್ತು ರೀನಾ ರಾಯ್ ಅವರ ಸಂಬಂಧವಾಗಲೀ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮತ್ತು ವಾಸಿಂ ಅಕ್ರಂ ಡೇಟಿಂಗ್ ಸುದ್ದಿ ಎಲ್ಲವೂ ಈಗ ಇತಿಹಾಸ. ಆದರೆ ಇಮ್ರಾನ್ ಖಾನ್ ಮಾತ್ರ ಸದಾ ಮಹಿಳೆಯರ ವಿಷಯದಲ್ಲಿ ಸುದ್ದಿಯಾಗುತ್ತಲೇ ಇರುವವರು. ಹಲವರ ಜೊತೆ ಸಂಬಂಧ ಇರುವುದಾಗಿ ಇವರ ಮೇಲೆ ಆರೋಪವಿದೆ. ಆದರೆ ಈಗ ಮುಖ್ಯವಾಗಿ ನಾಲ್ವರು ಬಾಲಿವುಡ್ ತಾರೆಯರ ಜೊತೆ ಇವರ ಹೆಸರು ಕೇಳಿಬಂದಿತ್ತು.
Anchor Anushree: ನಟಿ ಶುಭಾ ಪೂಂಜಾ ಮನೆ ನಾಯಿಗಿಟ್ಟ ಚಿಕನ್ ಅನುಶ್ರೀ ಬಾಯಲ್ಲಿ!
ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದದ್ದು (Prime Ministe) 2018ರ ಆಗಸ್ಟ್ ತಿಂಗಳಿನಲ್ಲಿ. ಇವರು ಈ ಹುದ್ದೆಯನ್ನು ಅಲಂಕರಿಸಿದ್ದು 2022ರ ಏಪ್ರಿಲ್ವರೆಗೆ. ಪ್ರಧಾನಿಯಾಗುವುದಕ್ಕೂ ಮುನ್ನ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಪ್ಲೇಬಾಯ್ ಎಂದೇ ಖ್ಯಾತರಾಗಿದ್ದ ಇಮ್ರಾನ್ ಖಾನ್, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವರ್ಚಸ್ವಿ ನಾಯಕರು ಎಂದು ಹೇಳಲಾಗುತ್ತದೆ. 1992ರಲ್ಲಿ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದಿದ್ದು ಕೂಡ ಇತಿಹಾಸ. ಇಂಥ ಕ್ರಿಕೆಟಿಗನ ಮೇಲೆ ಹಲವು ನಟಿಯರ ಕಣ್ಣು ನೆಟ್ಟಿತ್ತು. ಕೊನೆಯಾದಾಗಿ ನಾಲ್ವರು ನಟಿಯರ ಜೊತೆ ಇವರು ಗುರುತಿಸಿಕೊಂಡಿದ್ದರು. ಕೆಲವು ನಟಿಯರೊಂದಿಗಿನ ಅವರ ಸಂಬಂಧವು ಮದುವೆಗೂ ತಲುಪಿತ್ತು. ಆದರೆ ಅದು ಸಕ್ಸಸ್ ಆಗಲಿಲ್ಲವಷ್ಟೇ.
ಇಮ್ರಾನ್ ಖಾನ್ ಅವರ ಹೆಸರು ಮೊದಲಿಗೆ ಕೇಳಿಬಂದದ್ದು ಬಂಗಾಳಿ ನಟಿ ಮುನ್ಮುನ್ (Munmun) ಅವರೊಂದಿಗೆ. ಇವರ ಸಂಬಂಧ ಬಹಳ ದೂರ ಸಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಯ ಹಂತಕ್ಕೆ ತಲುಪಿದ್ದ ಇವರ ಸಂಬಂಧ ಕೊನೆಗೆ ಮುರಿದುಬಿತ್ತು. ಇದಾದ ಬಳಿಕ ಇಮ್ರಾನ್ ಹೆಸರು ಬಾಲಿವುಡ್ ನಟಿ ಶಬಾನಾ ಅಜ್ಮಿ (Shabana Azmi) ಜೊತೆ ತಳಕು ಹಾಕಿಕೊಂಡಿದ್ದರು. ಇದು ಬಾಲಿವುಡ್ ಮತ್ತು ಕ್ರಿಕೆಟಿಗರ ವಲಯದಲ್ಲಿ ಭಾರಿ ಚರ್ಚೆಯಾಗಿದ್ದರೂ ಒಮ್ಮೆಯೂ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮಾತನಾಡಿರಲಿಲ್ಲ. ಆದರೆ ಏಕಾಏಕಿ ಇವರ ನಡುವಿನ ಸಂಬಂಧ ಕಟ್ ಆಯಿತು.
Swara Bhaskar ಮದುವೆ ಅಸಿಂಧು ಎಂದ ಧರ್ಮಗುರು: ರಕ್ಷಣೆಗೆ ಬಂದ ಆರ್ಜೆ ಸಯೇಮಾ
ನಂತರ ಕುತೂಹಲ ಎಂಬಂತೆ ಇವರ ಹೆಸರು ಬಾಲಿವುಡ್ ಕ್ವೀನ್ ರೇಖಾ (Rekha) ಅವರ ಜೊತೆ ಕೇಳಿಬಂತು. ಇವರಿಬ್ಬರೂ ಬಹುತೇಕ ಮದುವೆಯಾಗಿದ್ದಾರೆ ಎಂದು ವರದಿಯಾದವು. ಮಗಳ ಜೀವನದಲ್ಲಿ ನಡೆದ ಬೆಳವಣಿಗೆಯಿಂದ ರೇಖಾ ಅವರ ತಾಯಿ ಸಾಕಷ್ಟು ಸಂತೋಷಪಟ್ಟಿದ್ದಾರೆ ಎಂದೂ ನಂಬಲಾಗಿತ್ತು. ಇವರಿಬ್ಬರೂ ಮುಂಬೈನಲ್ಲಿ ಒಂದು ತಿಂಗಳ ಕಾಲ ಒಟ್ಟಿಗೇ ಸಮಯವನ್ನು ಕಳೆದರು ಮತ್ತು ಆಗಾಗ್ಗೆ ಬೀಚ್‌ಗಳ ಬಳಿ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿತ್ತು. ಅದೇನಾಯಿತೋ ಗೊತ್ತಿಲ್ಲ. ಅಷ್ಟೇ ವೇಗದಲ್ಲಿ ಸುದ್ದಿ ಮರೆಯಾಯಿತು. ನಂತರ ಅವರ ಹೆಸರು ಕೇಳಿಬಂದದ್ದು ಇಮ್ರಾನ್ ಖಾನ್ ಮತ್ತು ಬಾಲಿವುಡ್ ನಟಿ ಜೀನತ್ ಅಮಾನ್ (Zeenath Amaan) ಜೊತೆ. ಈ ಸಂಬಂಧ ಮಾತ್ರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. 1979ರಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡ ಭಾರತ ಪ್ರವಾಸಕ್ಕೆ ಬಂದಿತ್ತು. ಆ ಸಮಯದಲ್ಲಿ ಇಮ್ರಾನ್ ಖಾನ್ ತಮ್ಮ 27ನೇ ಹುಟ್ಟುಹಬ್ಬವನ್ನು ಜೀನತ್ ಅಮಾನ್ ಅವರೊಂದಿಗೆ ಆಚರಿಸಿಕೊಂಡ ಮೇಲೆ ಇವರ ವಿಷಯ ಖುಲ್ಲಂಖುಲ್ಲಾ ಆಯಿತು.