
ಶ್ರೀವಲ್ಲಿ ರಶ್ಮಿಕಾ ಮಂದಣ್ಣ ಹಾಗು ಕಿಸ್ಸರ್ ಬಾಯ್ ವಿಜಯ್ ದೇವರಕೊಂಡ ಕಲ್ಯಾಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ರಶ್ಮಿಕಾ ಹಾಗು ವಿಜಯ್ ರದ್ದು ಅರೇಂಜ್ ಮ್ಯಾರೇಜ್ ಅಲ್ಲ. ಲವ್ ಕಮ್ ಅರೇಂಜ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿದ್ದು ಹೇಗೆ ಅಂತ ನಿಮ್ಗೆ ಕುತೂಹಲ ಇದೆಯಾ? ಹಾಗಾದ್ರೆ ಈ ತಾರಾ ಜೋಡಿಯ ಲವ್ ಸ್ಟೋರಿ ಮದುವೆ ವರೆಗೂ ಬಂದಿದ್ದು ಹೇಗೆ ಅಂತ ನೋಡೋಣ ಬನ್ನಿ.
ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ. ಇವರಿಬ್ಬರು ಈ ಯುಗದ ರೋಮಿಯೋ ಜೂಲಿಯೆಟ್ ರೀತಿ ಕಾಣಿಸುತ್ತಿದ್ದಾರೆ. ಆದ್ರೆ ರೋಮಿಯೋ ಜ್ಯೂಲಿಯೆಟ್ ತರ ರಶ್ಮಿಕಾ ಮಂದಣ್ಣ ವಿಜಯ್ರದ್ದು ಟ್ರಾಜಿಡಿ ಇಲ್ಲದ ಲವ್ ಸ್ಟೋರಿ. ಸಕ್ಸಸ್ಫುಲ್ ಫ್ರೇಮಕಥೆ. ಯಾಕಂದ್ರೆ ಇಷ್ಟು ದಿನ ಪ್ರೀತಿಯ ಬಲೆಯಲ್ಲಿ ಬಿದ್ದು , ಮನೆ, ಊರು, ಕೇರಿ, ದೇಶ, ವಿದೇಶ ಸುತ್ತಿದ್ದ ಈ ಜೋಡಿ ಈಗ ಸತಿ ಪತಿ ಆಗೋಕೆ ಸಿದ್ಧರಾಗಿದ್ದಾರೆ.
ಈಗ ದೇಶಾದ್ಯಂತ ಲವ್ ಬರ್ಡ್ಸ್ ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮದುವೆಯದ್ದೇ ವಿಚಾರ. ಯಾಕಂದ್ರೆ ಇವರಿಬ್ಬರ ಲವ್ ಸ್ಟೋರಿಯೇ ಅಷ್ಟು ಇಂಟ್ರೆಸ್ಟಿಂಗ್ ಆಗಿದೆ. ಇಷ್ಟು ವರ್ಷಗಳಿಂದ ಇಬ್ಬರ ಮೇಲೆ ಅಭಿಮಾನಿಗಳು ಎಲ್ಲಾದ್ರು ಇವರ ಲವ್ ಸುಳಿವು ಸಿಗುತ್ತಾ ಅಂತ ಕಣ್ಣಿಟ್ಟುಕೊಂಡೇ ಬಂದಿದ್ದಾರೆ. ಆಗಾಗ ತಮ್ಮಿಬ್ಬರ ಪ್ರೀತಿಯ ಸುಳಿವನ್ನ ಬಿಟ್ಟುಕೊಡುತ್ತಾ ಮತ್ತೆ ಮುಚ್ಚಿಡುತ್ತಾ ಬಂದವರು ರಶ್ಮಿಕಾ ಹಾಗು ವಿಜಯ್.
ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ನಡುವಿನ ಪ್ರೀತಿ ಇಬ್ಬರಿಗೂ ಅಮೂಲ್ಯವಾದ ಒಂದು ಅನುಭವ. ಜೀವನದ ಏರಿಳಿತಗಳಲ್ಲಿ ಜೊತೆಯಾಗಿ ನಿಂತ ಶಕ್ತಿ ಇವರ ಪ್ರೀತಿ. ಹಾಗಾದ್ರೆ ಇವರಿಬ್ಬರ ಮಧ್ಯೆ ಲವ್ ಮೊಳಕೆ ಒಡೆದಿದ್ದು ಯಾವಾಗ ಅಂತ ಕೇಳಿದ್ರೆ ಅದಕ್ಕೆ ಉತ್ತರ 9 ವರ್ಷದ ಹಿಂದಿನ ಕಥೆ ತೆರೆದುಕೊಳ್ಳುತ್ತೆ.
ಹೌದು, ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಬರೋಬ್ಬರಿ ಒಂಬತ್ತು ವರ್ಷಗಳ ಚರಿತ್ರೆ ಇದೆ. ಯಾಕಂದ್ರೆ ಇವರಿಬ್ಬರ ಹೃದಯ ಬೆಸೆದಿದ್ದೇ 2017ರಲ್ಲಿ.. ಅದು ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ. ರಶ್ಮಿಕಾ - ವಿಜಯ್ ದೇವರಕೊಂಡ ಮೊದಲ ಬಾರಿಗೆ ಬೇಟಿ ಆಗಿದ್ದು, ಗೀತಾ ಗೋವಿಂದಂ ಸಿನಿಮಾ ಮಹೂರ್ಥದಲ್ಲಿ. ಆಗ ಇಬ್ಬರಿಗೂ ನಾವು ಯಾರು? ನಮ್ಮ ಹಿನ್ನೆಲೆ ಏನು? ಇದ್ಯಾವುದರ ಬಗ್ಗೆ ಗೊತ್ತಿರಲಿಲ್ಲ. ಆದ್ರೆ ಯಾವಾಗ ಗೀತಾ ಗೋವಿಂದಂ ಸಿನಿಮಾ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ರೋ ಅಲ್ಲೊಂದು ಪ್ರೇಮಲೋಕವೇ ಸೃಷ್ಟಿಯಾಗಿತ್ತು..
ಯೆಸ್, ರಶ್ಮಿಕಾ ಮಂದಣ್ಣ ಹಾಗು ವಿಜಯ್ ದೇವರಕೊಂಡ ಮಧ್ಯೆ ಪ್ರೀತಿ ಜನ್ಮ ತಾಳಿದ್ದು ಗೀತಾ ಗೋವಿಂದಂ ಸಿನಿಮಾದ ಚಿತ್ರೀಕರಣದಲ್ಲಿ. ಹಾಗಂತ ಇಬ್ಬರು ನೋಡಿದ ಒಬ್ಬರನ್ನೊಬ್ಬರು ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳಲಿಲ್ಲ. ಯಾಕಂದ್ರೆ ಅಷ್ಟರೊಳಗೇ ರಶ್ಮಿಕಾ ಮಂದಣ್ಣ ತನ್ನ ಮೊದಲ ಸಿನಿಮಾ ಕಿರಿಕ್ ಪಾರ್ಟಿಯ ಹೀರೋ ರಕ್ಷಿತ್ ಶೆಟ್ಟಿ ಪ್ರೇಮಾಯಣದಲ್ಲಿ ಮುಳುಗಿದ್ರು. ನಾವಿಬ್ಬರು ಸತಿ ಪತಿ ಆಗುತ್ತೇವೆ ಅಂತ ಎಂಗೇಜ್ಮೆಂಟ್ ಮಾಡಿಕೊಂಡಿದ್ರು..
ರಶ್ಮಿಕಾ ಮಂದಣ್ಣ ಒಂದ್ ಕಡೆ ಎಂಗೇಜ್ ಆಗಿರೋ ಹುಡುಗಿ. ಆಗಿನ್ನೂ ರಶ್ಮಿಕಾಗೆ 21ರ ಹರೆಯ. ಚಂಚಲ ಮನಸ್ಸು. ಆದ್ರೆ ರಕ್ಷಿತ್ ಶೆಟ್ಟಿಯದ್ದು ಮೆಚೂರ್ಡ್ ವಯಸ್ಸು. ರಶ್ಮಿಕಾಳ ಈ ಚಂಚಲ ಮನಸ್ಸಿಗೆ ಕಂಕಣ ಕಟ್ಟೋ ಮೊದಲೇ ವಿಜಯ್ ದೇವರಕೊಂಡ ಎಂಟ್ರಿ ಕೊಟ್ಟಿದ್ದ. ರಶ್ಮಿಕಾ ಮನದಾಸೆಯನ್ನ ಅರ್ಥ ಮಾಡಿಕೊಂಡಿದ್ದ ವಿಜಯ್ ತನ್ನ ಮನದೊಳಗೆ ಸೇರಿಸಿಬಿಟ್ಟಿದ್ದ. ಅದು ಹೇಗೆ ಅಂತ ಕೇಳಿದ್ರೆ, ಅಲ್ಲೊಂದು ಇಂಟ್ರೆಸ್ಟಿಂಗ್ ಕಹಾನಿ ಇದೆ.
ರಶ್ಮಿಕಾ ಸಿನಿ ಇಂಡಸ್ಟ್ರಿಗೆ ಬಂದಿದ್ದು ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಇನ್ನೂ ಕಾಲೇಜ್ನಲ್ಲಿ ಓದ್ತಾ ಇದ್ದ ರಶ್ಮಿಕಾನ ಕರೆತಂದು ರಿಷಬ್ & ರಕ್ಷಿತ್ ಪಾತ್ರ ಮಾಡಿಸಿದ್ರು. ಸಿನಿಮಾ ಸೂಪರ್ ಹಿಟ್ ಆಯ್ತು. ರಶ್ ಕರ್ನಾಟಕದ ಕ್ರಶ್ ಅಂತಾನೇ ಫೇಮಸ್ ಆದ್ರು. ಕಿರಿಕ್ ಪಾರ್ಟಿ ಸಕ್ಸಸ್ ಬಳಿಕ ರಶ್ಮಿಕಾಗೆ ಪುನೀತ್ ರಾಜ್ ಕುಮಾರ್ ಜೊತೆಗೆ ಅಂಜನಿ ಪುತ್ರ, ಗಣೇಶ್ ಜೊತೆಗೆ ಚಮಕ್ ಚಿತ್ರಗಳಲ್ಲಿ ನಟಿಸೋ ಅವಕಾಶ ಸಿಕ್ತು. ಈ ನಡುವೆ ಟಾಲಿವುಡ್ನಿಂದಲೂ ಬುಲಾವ್ ಬಂತು. ಚಲೋ ರಶ್ಮಿಕಾ ನಟಿಸಿದ ಮೊದಲ ತೆಲುಗು ಸಿನಿಮಾ. ಇದರ ಬಳಿಕ ಎಂಟ್ರಿಯಾಗಿದ್ದು ಗೀತಾ ಗೋವಿಂದಂ ಸೆಟ್‌ಗೆ.
ರಶ್ಮಿಕಾಗೆ ತೆಲುಗು ಸಿನಿರಂಗ ಹೊಸದು. ಜಾಗವೂ ಹೊಸದು. ಯಾರ ಜೊತೆಗೂ ಹೆಚ್ಚು ಮಾತನಾಡದ ಈ ಕರ್ನಾಟಕ ಕ್ರಶ್ ರಕ್ಷಿತ್ ಶೆಟ್ಟಿಯ ಗುಂಗಿನಲ್ಲೇ ಇರ್ತಾ ಇದ್ರು. ಗೀತಾ ಗೋವಿಂದಂ ಸೆಟ್‌ನಲ್ಲಿ ರಶ್ಮಿಕಾ ಶಾಟ್ ಕಂಪ್ಲೀಟ್ ಆಗ್ತಾ ಇದ್ದ ಹಾಗೇನೇ ತನ್ನ ಕ್ಯಾರಾವಾನ್‌ಗೆ ಹೋಗಿ ಕುಳಿತು ಬಿಡ್ತಾ ಇದ್ರಂತೆ. ಅತ್ತ ವಿಜಯ್ ದೇವರಕೊಂಡ ಕೂಡ ಅಷ್ಟೇ ಡೈರೆಕ್ಟರ್ ಕಟ್ ಅಂತಾ ಇದ್ದ ಹಾಗೇ ತಮ್ಮ ಕ್ಯಾರಾವ್ಯಾನ್ ಕಡೆಗೆ ಹೋಗ್ತಾ ಇದ್ದಂರಂತೆ. ಯಾಕಂದ್ರೆ ರಶ್ಮಿಕಾ ಬಗ್ಗೆಯೂ ವಿಜಯ್‌ಗೆ ಅಷ್ಟೇನು ಗೊತ್ತಿರಲಿಲ್ಲ.
ಗೀತಾ ಗೋವಿಂದಂ ಇದು ಹೇಳಿ ಕೇಳಿ ರೊಮ್ಯಾಂಟಿಕ್ ಲವ್ ಸ್ಟೋರಿ ಇರೋ ಸಿನಿಮಾ. ಸಿನಿಮಾದಲ್ಲಿ ನಾಯಕ ನಾಯಕಿಯ ಕೆಮೆಸ್ಟ್ರಿ ಚೆನ್ನಾಗಿ ಬರಬೇಕು ಅಂದ್ರೆ ಇಬ್ಬರ ನಡುವೆ ಆತ್ಮಿಯತೆ ಇರಬೇಕು. ಒಂದು ಕಂಫರ್ಟ್ ಇರಬೇಕು. ಆದ್ರೆ ಚಿತ್ರೀಕರಣ ಶಾಟ್ ಆಗ್ತಿದ್ದಂತೆ ತಮ್ಮ ತಮ್ಮ ಕ್ಯಾರಾವಾನ್‌ಗೆ ಹೋಗಿ ಕೂರುತ್ತಿದ್ದ ವಿಜಯ್ ರಶ್ಮಿಕಾ ಮಧ್ಯೆ ಕೆಮಿಸ್ಟ್ರಿ ಸರಿಯಾಗಿ ವರ್ಕ್ ಆಗುತ್ತಿರಲಿಲ್ಲವಂತೆ. ಅದಕ್ಕೆ ರಶ್ಮಿಕಾ-ವಿಜಯ್ ಕ್ಲೋಸ್ ಆಗಬೇಕು ಅಂತ ನಿರ್ದೇಶಕ ಪರಶುರಾಮ್ ಒಂದು ಐಡಿಯಾ ಮಾಡಿದ್ರಂತೆ.
ಹೌದು ಗೀತಾ ಗೋವಿಂದಂ ಡೈರೆಕ್ಟರ್ ಪರಶುರಾಮ್ ಒಂದಿಷ್ಟು ಪ್ರೇಮ ಸಂಭಾಷಣೆಗಳನ್ನ ಬರೆಸಿ ಅದನ್ನ ರಶ್ಮಿಕಾ ಹಾಗು ವಿಜಯ್ ಕೈಗೆ ಕೊಟ್ಟು ಇಬ್ಬರೂ ಒಟ್ಟಿಗೆ ಪ್ರ್ಯಾಕ್ಟೀಸ್ ಮಾಡಬೇಕು ಅಂತ ಹೇಳಿದ್ರಂತೆ. ಆಗಿನಿಂದ ಇಬ್ಬರೂ ಬೇರೆ ಬೇರೆ ಕ್ಯಾರಾವ್ಯಾನ್ ಗೆ ಹೋಗೋ ಬದಲು ಒಂದೇ ಕ್ಯಾರಾವ್ಯಾನ್ನಲ್ಲಿ ಕುಳಿತು ಪ್ರ್ಯಾಕ್ಟೀಸ್ ಮಾಡೋದಕ್ಕೆ ಶುರುಮಾಡಿದ್ರು.
ಪ್ರೇಮ ಸಂಭಾಷಣೆ ಪ್ರಾಕ್ಟೀಸ್, ಪ್ರೀತಿಯಲ್ಲಿ ಬಿದ್ದ ಜೋಡಿ!
ಸಿನಿಮಾ ಚನ್ನಾಗಿ ಬರಲಿ ಅಂತ ಗೀತ ಗೋವಿಂದಂ ನಿರ್ದೇಶಕ ಪರಶುರಾಮ್ ಹೇಳಿದ್ದು ಪ್ರೇಮಿಗಳಂತೆ ಕಾಣಿಸಿಕೊಳ್ಳಿ ಅಂತ. ಆದ್ರೆ ಪ್ರೇಮ ಸಂಭಾಷಣೆ ಪ್ರ್ಯಾಕ್ಟೀಸ್ ಮಾಡ್ತಾ ಮಾಡ್ತಾ ರಶ್ಮಿಕಾ ವಿಜಯ್ ತಾವೇ ರಿಯಲ್ ಆಗಿ ಪ್ರೀತಿಯಲ್ಲಿ ಬಿದ್ದುಬಿಟ್ರು. ಇದರಿಂದ ಸಿನಿಮಾದಲ್ಲಿ ಇಬ್ಬರ ಕೆಮೆಸ್ಟ್ರಿ ಸೊಗಸಾಗಿ ಮೂಡಿಬಂತು. ಜನರೂ ಈ ಜೋಡಿಯನ್ನ ಇಷ್ಟಪಟ್ರು. ಗೀತ ಗೋವಿಂದಂ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.