ಇಡಿಯಿಂದ ಜುಹುವಿನಲ್ಲಿರುವ ಶಿಲ್ಪಾ ಶೆಟ್ಟಿ ಫ್ಲಾಟ್, ರಾಜ್‌ ಕುಂದ್ರಾಗೆ ಸೇರಿದ 97 ಕೋಟಿ ಆಸ್ತಿ ಜಪ್ತಿ

By Anusha Kb  |  First Published Apr 18, 2024, 12:34 PM IST

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಮೇಲೆ ಇಡಿ ಕಣ್ಣಿಟ್ಟಿದ್ದು, ಈಗ ಈ ದಂಪತಿಗೆ ಸೇರಿದ 97ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ವರದಿ ಆಗಿದೆ. 


ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿ ಮೇಲೆ ಇಡಿ ಕಣ್ಣಿಟ್ಟಿದ್ದು, ಈಗ ಈ ದಂಪತಿಗೆ ಸೇರಿದ 97ಕೋಟಿ ರೂಪಾಯಿ ಮೊತ್ತದ ಆಸ್ತಿಯ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ ಎಂದು ವರದಿ ಆಗಿದೆ. ಈ 97 ಕೋಟಿ ಆಸ್ತಿಯಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿರುವ ಮುಂಬೈನ ಜುಹುವಿನಲ್ಲಿರುವ ಅಪಾರ್ಟ್‌ಮೆಂಟ್  ಕೂಡ ಸೇರಿದೆ ಎಂದು ವರದಿಯಾಗಿದೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಮುಂಬೈನ ಜಾರಿ ನಿರ್ದೇಶನಾಲಯವೂ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ 97.97 ಕೋಟಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದ್ದು, 2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಪ್ರಕರಣ ದಾಖಲಿಸಲಾಗಿದೆ. ಇಡೀ ಜಪ್ತಿ ಮಾಡಿರುವ ಆಸ್ತಿಯಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿಯ ಹೆಸರಿನಲ್ಲಿರುವ ಮುಂಬೈನ ಜುಹುವಿನಲ್ಲಿರು ರೆಸಿಡೆನ್ಸಿಯಲ್ ಫ್ಲಾಟ್, ಪುಣೆಯಲ್ಲಿರುವ ಬಂಗ್ಲೆ, ರಾಜ್ ಕುಂದ್ರಾ ಹೆಸರಿನಲ್ಲಿರುವ ಇಕ್ವಿಟಿ ಶೇರ್‌ಗಳು ಸೇರಿವೆ.

ತನಿಖಾ ಏಜೆನ್ಸಿಯ ಪ್ರಕಾರ ಈ ಆಸ್ತಿಯನ್ನು ಇಡಿ ಈಗಾಗಲೇ ತನಿಖೆ ನಡೆಸಿದ ಕ್ರಿಪ್ಟೋಕರೆನ್ಸಿ ಯಡಿ ರಾಜ್ ಕುಂದ್ರಾ ಖರೀದಿಸಿದ್ದಾರೆ ಎಂದು ಇಡಿ ಹೇಳಿದೆ. 

Latest Videos

undefined

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ದೆಹಲಿ ಹಾಗೂ ಮುಂಬೈ ಪೊಲೀಸರು ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಸಂಸ್ತೆಯ ಮೂಲಕ ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದರ್ ಭಾರದ್ವಾಜ್ ಮತ್ತು  ಹಲವಾರು ಏಜೆಂಟ್‌ಗಳು  ಬಿಟ್ ಕಾಯಿನ್ ರೂಪದಲ್ಲಿ ಜನರಿಂದ ಹಣವನ್ನು ಸಂಗ್ರಹಿಸಿದ್ದರು. ತಿಂಗಳಿಗೆ ಶೇಕಡಾ 10 ರಷ್ಟು ಬಡ್ಡಿ ನೀಡುವುದಾಗಿ  ಅವರಿಗೆ ಆಮಿಷವೊಡ್ಡಿದ್ದರು. 2017ರಲ್ಲಿ ಹೀಗೆ ಸಂಗ್ರಹಿಸಿದ ಮೊತ್ತ ಸುಮಾರು 6,600 ಕೋಟಿ ಮೌಲ್ಯ ಎಂದು ತನಿಖಾ ಸಂಸ್ಥೆ ಅಂದಾಜಿಸಿದೆ. 

'ರಾಜ್‌ಗಿಂತ ಶ್ರೀಮಂತರು ನನ್ನ ಹಿಂದೆ..' ಹಣಕ್ಕಾಗಿ ರಾಜ್ ಕುಂದ್ರಾ ಮದುವೆಯಾದ್ರು ಅನ್ನೋರಿಗೆ ತಿರುಗೇಟು ಕೊಟ್ಟ ಶಿಲ್ಪಾ ಶೆಟ್ಟಿ

ಆದರೆ ಪ್ರಮೋಟರ್‌ಗಳು ನಂತರದಲ್ಲಿ ಹೂಡಿಕೆದಾರರನ್ನು ವಂಚಿಸಿದೆ ಹಾಗೂ ಅಕ್ರಮವಾಗಿ ಪಡೆದ ಬಿಟ್‌ಕಾಯಿನ್‌ಗಳನ್ನು ಮರೆಮಾಚಿದೆ ಎಂದು ತನಿಖಾ ಸಂಸ್ಥೆ ಹೇಳಿದೆ. ಈ ಪ್ರಕರಣದಲ್ಲಿ ಶಿಲ್ಪಾ ಪತಿ ರಾಜ್‌ ಕುಂದ್ರಾ ಅವರು ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಮೈನಿಂಗ್ ಫಾರ್ಮ್ ಅನ್ನು ಸ್ಥಾಪಿಸುವುದಕ್ಕಾಗಿ, ಗೈನ್‌ ಬಿಟ್ ಕಾಯಿನ್ ಪೊಂಜಿಯ ಪ್ರವರ್ತಕ ಹಾಗೂ ಮಾಸ್ಟರ್ ಮೈಂಡ್ ಅಮಿತ್ ಭಾರದ್ವಾಜ್ ಅವರಿಂದ 285 ಬಿಟ್ ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ. ಕುಂದ್ರಾ ಅವರು ಈಗಲೂ 285 ಬಿಟ್‌ಕಾಯಿನ್‌ಗಳನ್ನು ಹೊಂದಿದ್ದಾರೆ, ಅವುಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ  150 ಕೋಟಿಗಿಂತಲೂ ಹೆಚ್ಚು ಎಂದು ಇಡಿ ತಿಳಿಸಿದೆ.

ಅಶ್ಲೀಲ ಸಿನಿಮಾ ಮಾಡಿ ಸಿಕ್ಕಿಬಿದ್ದ ಪತಿ: ಮಗನಿಗೆ ಗೂಗಲ್ ಮಾಡದಂತೆ ಹೇಳಿದ್ದ ಶಿಲ್ಪಾ ಶೆಟ್ಟಿ

click me!