ಸಿನಿಮಾ ಬಹಿಷ್ಕಾರ ಭೀತಿ ಬೆನ್ನಲ್ಲೇ ಪಹಲ್ಗಾಮ್ ದಾಳಿ ಖಂಡಿಸಿದ ಪಾಕ್ ನಟ ಫಾವದ್ ಖಾನ್

Published : Apr 24, 2025, 10:54 AM ISTUpdated : Apr 24, 2025, 11:00 AM IST
ಸಿನಿಮಾ ಬಹಿಷ್ಕಾರ ಭೀತಿ ಬೆನ್ನಲ್ಲೇ ಪಹಲ್ಗಾಮ್ ದಾಳಿ ಖಂಡಿಸಿದ ಪಾಕ್ ನಟ ಫಾವದ್ ಖಾನ್

ಸಾರಾಂಶ

ಪಾಕಿಸ್ತಾನ ನಟ ಫಾವದ್ ಖಾನ್ ಹಾಗೂ ನಟಿ ವಾಣಿ ಕಪೂರ್ ಅಭಿನಯದ ಅಬಿರ್ ಗುಲಾಲ್ ಬಾಲಿವುಡ್ ಸಿನಿಮಾಗೆ ಬಹಿಷ್ಕಾರ ಭೀತಿ ಎದುರಾಗಿದೆ. ಹೀಗಾಗಿ ನಟ ಫಾವದ್ ಖಾನ್ ಪಹಲ್ಗಾಮ್ ದಾಳಿ ಖಂಡಿಸಿದ್ದಾರೆ. ಆದರೆ ಫಿಲ್ಮ್ ಫೆಡರೇಷನ್ ಅಬಿರ್ ಗುಲಾಲ್ ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡುವುದಿಲ್ಲ ಎಂದಿದೆ.

ಮುಂಬೈ(ಏ.24)  ಬಾಲಿವುಡ್ ಕೈ ಬೀಸಿ ಕರೆದು ಅವಕಾಶ ಕೊಡುತ್ತಿರುವ ಪಾಕಿಸ್ತಾನ ನಟರ ಪೈಕಿ ಫಾವದ್ ಖಾನ್ ಮುಂಚೂಣಿಯಲ್ಲಿದ್ದಾರೆ. ಉಗ್ರರ ದಾಳಿಯಾದಾಗ ಬಾಲಿವುಡ್ ಹೆಸರಿಗೆ ಪಾಕಿಸ್ತಾನ ನಟ ನಟಿಯರ ಮೇಲೆ ನಿಷೇಧ ಹೇರುತ್ತೆ. ಬಳಿಕ ಸದ್ದಿಲ್ಲದೆ ಸಿನಿಮಾ ನಿರ್ಮಾಣ ಮಾಡುತ್ತೆ. ಇದೀಗ ಪಾಕಿಸ್ತಾನ ನಟ ಫಾವದ್ ಖಾನ್‌ಗೆ ರಾಜಾತಿಥ್ಯ ನೀಡಿ ಕರೆಸಿ ನಿರ್ಮಿಸಿದ ಬಾಲಿವುಡ್ ಸಿನಿಮಾ ಅಭಿರ್ ಗುಲಾಲ್ ಬಿಡುಗಡೆಗೆ ಸಜ್ಜಾಗಿದೆ. ಆದರೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಭಾರತದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ಪಾಕಿಸ್ತಾನ ವಿರುದ್ಧ ಹಲವು ಕ್ರಮ ಕೈಗೊಂಡಿದೆ. ಇದರ ನಡುವೆ ಫಾವದ್ ಖಾನ್ ಅಭಿನಯದ ಅಭಿರ್ ಗುಲಾಲ್ ಸಿನಿಮಾಗೆ ಬಹಿಷ್ಕಾರ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ನಟ ಫಾವದ್ ಖಾನ್, ಪಹಲ್ಗಾಮ್ ಘಟನೆಯನ್ನು ಖಂಡಿಸಿದ್ದಾರೆ.

ಭಾರತೀಯ ಫಿಲ್ಮ್ ಹಾಗೂ ಟೆಲಿವಿಶನ್ ನಿರ್ದೇಶಕರ ಸಂಘ ಪಹಲ್ಗಾಮ್ ಘಟನೆಯನ್ನು ಖಂಡಿಸಿ ಆಕ್ರೋಶ ಹೊರಹಾಕಿದೆ. ಇದೇ ವೇಳೆ ಯಾವುದೇ ಕಾರಣಕ್ಕೂ ಪಾಕಿಸ್ತಾನ ನಟ ಫಾವದ್ ಖಾನ್ ಅಭಿನಯದ ಅಭಿರ್ ಗುಲಾಲ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದೆ. 26 ಮಂದಿ ಉಗ್ರರ ದಾಳಿಗೆ ಹತರಾಗಿದ್ದಾರೆ. ಇದರ ನಡುವೆ ಪಾಕಿಸ್ತಾನದ ನಟನ  ಸಿನಿಮಾ ಬಿಡುಗೆಡೆ ಭಾರತದಲ್ಲಿ ಅವಕಾಶ ನೀಡುವುದಿಲ್ಲ ಎಂದಿದೆ. ಈ ಕುರಿತು ಮಾತನಾಡಿರುವ ಭಾರತೀಯ ಫಿಲ್ಮ್ ಹಾಗೂ ಟೆಲಿವಿಶನ್ ನಿರ್ದೇಶಕರ ಸಂಘದ ಅಧ್ಯಕ್ಷ ಅಶೋಕ್ ಪಂಡಿತ್, ಪಹಲ್ಗಾಮ್ ದಾಳಿ ಭಾರತದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಿಸಿದೆ. ಪಾಕಿಸ್ತಾನ ನಟ ನಟಿಯರನ್ನು ಬಳಸಿ ಸಿನಿಮಾ ನಿರ್ಮಾಣ ಕೈಬಿಡುವಂತೆ ಆಗ್ರಹಿಸಿದ್ದಾರೆ.

ಓರ್ವ ಮುಸ್ಲಿಂ ಆಗಿ ನಾಚಿಕೆಯಾಗುತ್ತಿದೆ, ಪಹಲ್ಗಾಮ್ ದಾಳಿ ಖಂಡಿಸಿ ಭಾವುಕರಾದ ಗಾಯಕ ಸಲೀಮ್

ಕಳೆದ 30 ವರ್ಷದಿಂದ ಈ ರೀತಿ ದಾಳಿ ನಡೆಯುತ್ತಿದೆ. ಜೊತೆಗೆ ಪಾಕಿಸ್ತಾನಿಯರಿಗೆ ಅವಕಾಶವೂ ನೀಡಲಾಗುತ್ತಿದೆ. ಇದು ಹೇಗೆ ಸಾಧ್ಯ? ಕಲಾಕಾರನ ಹೆಸರಿನ ಹೆಸರಿನಲ್ಲಿ ಭಾರತಕ್ಕೆ ಬರುತ್ತಾರೆ. ಅಂತಿವಾಗಿ ದೇಶ ಮೊದಲು. ಹೀಗಾದಾಗ ಪಾಕಿಸ್ತಾನಿ ನಟ ನಟಿಯರು ಭಾರತದ ಪರವಾಗಿ ನಿಲುವು ತಗೆದುಕೊಳ್ಳುವುದಿಲ್ಲ. ಪಾಕಿಸ್ತಾನ ಯಾವತ್ತೂ ಉಗ್ರವಾದ ನಿಲ್ಲಿಸಲ್ಲ. ಹೀಗಾಗಿ ಪಾಕ್ ಜೊತೆ ಯಾವ ವ್ಯವಹಾರವೂ ಬೇಡ ಎಂದು ಅಶೋಕ್ ಪಂಡಿತ್ ಹೇಳಿದ್ದಾರೆ.

ಇನ್ನು ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯ್ಸ್(FWICE) ಕೂಡ ಅಬಿರ್ ಗುಲಾಲ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದಿದೆ. ಈ ಸಿನಿಮಾ ನಿರ್ಮಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ. ಭಾರತದಲ್ಲಿ ಇದೀಗ ಪಾಕಿಸ್ತಾನ ನಟ ನಟಿಯರಿಗೆ ನಿಷೇಧ ಹೇರಲು ಒತ್ತಾಯ ಕೇಳಿಬರುತ್ತಿದೆ. ಮುಂದೆ ಯಾವತ್ತೂ ಈ ನಿಷೇಧ ಹಿಂಪಡೆಯಬಾರದು ಎಂದು ಆಗ್ರಹಿಸಿದ್ದಾರೆ.  

ಫಾವದ್ ಖಾನ್ ಪಹಲ್ಗಾಮ್ ಘಟನೆ ಖಂಡಿಸಿದ್ದಾರೆ. ಈ ದಾಳಿಯಿಂದ ಅಮಾಯಕರು ಮೃತಪಟ್ಟಿದ್ದಾರೆ. ತೀವ್ರ ನೋವಾಗಿದೆ ಎಂದಿದ್ದಾರೆ ಆದರೆ ಫಾವದ್ ಖಾನ್ ಇದೀಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಫಾವದ್ ಖಾನ್ ನೋವಿನಿಂದ, ಆಘಾತದಿಂದ ಈ ಘಟನೆ ಖಂಡಿಸುತ್ತಿಲ್ಲ. ಇದು ಕೇವಲ ಸಿನಿಮಾ ರಿಲೀಸ್ ಕಾರಣಕ್ಕೆ ತೋಡಿಕೊಂಡ ನೋವು ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ: ಪ್ರಿಯಾಂಕಾ ಚೋಪ್ರಾ ತೀವ್ರ ಖಂಡನೆ, ಸಂತ್ರಸ್ತರಿಗೆ ಸಂತಾಪ
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?