ಪ್ರಿಯಾಂಕಾ 'ಮಿಸ್ ವರ್ಲ್ಡ್' ಗೆದ್ದಾಗ ನಿಕ್ ಜೋನಸ್ ಏನ್ಮಾಡ್ತಿದ್ರು? 22 ವರ್ಷದ ಹಿಂದಿನ ಘಟನೆ ಬಿಚ್ಚಿಟ್ಟ ನಟಿ

By Shruthi KrishnaFirst Published May 14, 2023, 6:01 PM IST
Highlights

ಪ್ರಿಯಾಂಕಾ ಚೋಪ್ರಾ 'ಮಿಸ್ ವರ್ಲ್ಡ್' ಗೆದ್ದಾಗ ನಿಕ್ ಜೋನಸ್ ಏನ್ಮಾಡ್ತಿದ್ರು? 22 ವರ್ಷದ ಹಿಂದಿನ ಘಟನೆ ಬಗ್ಗೆ ಚೋಪ್ರಾ ಮಾತನಾಡಿದ್ದಾರೆ.  

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪ್ರಿಯಾಂಕಾ ಅಮೆರಿಕಾದ ಗಾಯಕ ನಿಕ್ ಜೋನಸ್ ಮದುವೆಯಾದ ಬಳಿಕ ಅಲ್ಲೇ ನೆಲೆಸಿದ್ದಾರೆ. ಸದ್ಯ ಬಾಲಿವುಡ್‌ನಿಂದನೂ ದೂರ ಆಗಿರುವ ನಟಿ ಪ್ರಿಯಾಂಕಾ ಹಾಲಿವುಡ್ ಸಿನಿಮಾ ಮತ್ತು ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಮತ್ತು ನಿಕ್ ಜೋನಸ್ ಮದುವೆಯಾಗಿ 4 ವರ್ಷಗಳಾಗಿದೆ. 2018 ಡಿಸೆಂಬರ್ ತಿಂಗಳಲ್ಲಿ ಪ್ರಿಯಾಂಕಾ ಮತ್ತು ನಿಕ್ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಪ್ರಿಯಾಂಕಾ ತನಗಿಂತ 10 ವರ್ಷ ವಯಸ್ಸಿನ ಚಿಕ್ಕವರಾಗಿದ್ದ ನಿಕ್ ಜೋಸನ್ ಜೊತೆ  ಮದುವೆಯಾದರು. ಪ್ರಿಯಾಂಕಾ ನಿರ್ಧಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು, ಅಲ್ಲದೇ ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದರು. ಇದೀಗ ಪ್ರಿಯಾಂಕಾ ಪತಿ ನಿಕ್ ಬಗ್ಗೆ ಮಾತನಾಡಿದ್ದಾರೆ. ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಾಗ ನಿಕ್ ಏನ್ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

ಇತ್ತೀಚೆಗಷ್ಟೆ ಪ್ರಿಯಾಂಕಾ ಟಿವಿ ಶೋ ಒಂದರಲ್ಲಿ ಮಾತನಾಡಿದ ಪ್ರಿಯಾಂಕಾ 2000ರಲ್ಲಿ ವಿಶ್ವ ಸುಂದರಿ ಸ್ಪರ್ಧೆ ಗೆದ್ದು ಬೀಗಿದಾಗ ನಿಕ್ ಜೋನಸ್ 7 ವರ್ಷದವರಾಗಿದ್ದರು ಎಂದು ಹೇಳಿದ್ದಾರೆ. ಮಿಸ್ ವರ್ಲ್ಟ್ ಕಿರೀಟ ಗೆಲ್ಲುವುದನ್ನು ನಿಕ್ ವೀಕ್ಷಿಸಿದರು ಎಂದು ಹೇಳಿದ್ದಾರೆ. ಸ್ಪರ್ಧೆ ಲಂಡನ್‌ನಲ್ಲಿ ನಡೆದಿತ್ತು.  ನೆವಂಬರ್ ನಲ್ಲಿ ಸ್ಪರ್ಧೆ ನೆಡಿದಿದ್ದು ನನಗೆ ಆಗ 17 ವರ್ಷವಾಗಿತ್ತು. ನಾನು ಆಗಿನ್ನು ಚಿಕ್ಕವಳು, ಆಗ ಜಗತ್ತಿನ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ನಾನು ಹೆಚ್ಚು ಅಭ್ಯಾಸ ಕೂಡ ಮಾಡಿರಲಿಲ್ಲ' ಎಂದು ಮಿಸ್ ವರ್ಲ್ಡ್ ಸಮಯವನ್ನು ನೆನಪಿಸಿಕೊಂಡಿದ್ದಾರೆ. 

Latest Videos

ಬಳಿಕ 'ನನ್ನ ಅತ್ತೆ ನೀನು ಗೆದ್ದಾಗ ನಿನ್ನನ್ನು ನೋಡಿದ್ದು ನನಗೆ ನೆನಪಿದೆ ಎಂದು ಹೇಳಿದರು. ಅಷ್ಟೆಯಲ್ಲದೇ ನಿಕ್ ಜೋನಸ್ ಕೂಡ ವೀಕ್ಷಿಸಿದ್ದಾನೆ ಎಂದು ಅತ್ತೆ ಹೇಳಿದರು ಎನ್ನುವ ಮಾತನ್ನು ಪ್ರಿಯಾಂಕಾ ಬಹಿರಂಗ ಪಡಿಸಿದರು. 'ಅದು 22 ವರ್ಷಗಳ ಹಿಂದೆ ನಡೆದಿದ್ದು. ನಿಕ್‌ಗೆ ಆಗ ಏಳು, ನನಗೆ 17 ವರ್ಷ ಎಂದು ಪ್ರಿಯಾಂಕಾ ಹೇಳಿದರು. 

ಫಸ್ಟ್ ಡೇಟ್‌ನಲ್ಲೇ ಸೆಕ್ಸ್ ಓಕೆ; ಲೈಂಗಿಕಾಸಕ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರಿಯಾಂಕಾ ಚೋಪ್ರಾ

  ನಿಕ್ ಜೊತೆ ಡೇಟಿಂಗ್ ಮಾಡುವ ಮೊದಲು ಪ್ರಿಯಾಂಕಾ ದೀರ್ಘವಾದ ಸಂಬಂಧ ಕಡಿದುಕೊಂಡು ಸಿಂಗಲ್ ಆಗಿದ್ದರು. ಬಳಿಕ ನಿಕ್ ಜೊತೆ ಪ್ರೀತಿಯಲ್ಲಿ ಬಿದ್ದ ಪ್ರಿಯಾಂಕಾ ಕೆಲ ಕಾಲ ಡೇಟಿಂಗ್ ಮಾಡಿ ಬಳಿಕ ಮದುವೆಯಾದರು. 2018ರಲ್ಲಿ ಪ್ರಿಯಾಂಕಾ ಮತ್ತು ನಿಕ್ ಇಬ್ಬರೂ ಜೋಧಪುರದಲ್ಲಿ ಅದ್ದೂರಿಯಾಗಿ ಮದುವೆಯಾದರು. ಪ್ರಿಯಾಂಕಾ ಮತ್ತು ನಿಕ್ ಮದುವೆಗೆ ಬಾಲಿವುಡ್‌ನ ಅನೇಕ ಗಣ್ಯರು ಹಾಗೂ ಆಪ್ತರು ಭಾಗಿಯಾಗಿ ಶುಭಹಾರೈಸಿದರು. ನಾಲ್ಕು ವರ್ಷಗಳ ಸಂತೋಷದ ಜೀವನ ನಡೆಸುತ್ತಿರುವ ಪ್ರಿಯಾಂಕಾ ಮತ್ತು ನಿಕ್ ಬಾಡಿಗೆ ತಾಯಿ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಮಗಳಿಗೆ ಮಾಲ್ತಿ ಮೇರಿ ಎಂದು ಹೆಸರಿಟ್ಟಿದ್ದಾರೆ.  

 

click me!