ಮದುವೆ ಇದೆ ದಯವಿಟ್ಟು 'ಪಠಾಣ್' ಸಿನಿಮಾ ಪೋಸ್ಟ್‌ಪೋನ್ ಮಾಡಿ; ಅಭಿಮಾನಿ ಮನವಿಗೆ ಶಾರುಖ್ ರಿಯಾಕ್ಷನ್ ವೈರಲ್

By Shruthi KrishnaFirst Published Dec 19, 2022, 3:59 PM IST
Highlights

ಮದುವೆ ಇದೆ ಪಠಾಣ್ ಸಿನಿಮಾ ಪೋಸ್ಟ್ ಪೋನ್ ಮಾಡಿ ಎಂದ ಅಭಿಮಾನಿಗೆ ಶಾರುಖ್ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.   

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ವಿವಾದದ ಕಿಡಿ ಹೊತ್ತಿರುವ ಬೇಷರಂ ರಂಗ್ ಹಾಡಿನದ್ದೆ ಸದ್ದು. ಬೇಷರಂ ರಂಗ್ ಹಾಡು ರಿಲೀಸ್ ಆದ ಬಳಿಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕೆಲವರು ಬೇಷರಂ ರಂಗ್ ಹಾಡನ್ನು ಇಷ್ಟ ಪಟ್ಟರೆ, ಇನ್ನೂ ಕೆಲವರು ಭಾರಿ ವಿರೋಧ ವ್ಯಕ್ತ ಪಡಿಸಿದರು. ಬೇಷರಂ ರಂಗ್ ಹಾಡನ್ನು ಕೆಟ್ಟದಾಗಿ ಚಿತ್ರೀಕರಿಸಲಾಗಿದೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದರು. ಈ ನಡುವೆ ಶಾರುಖ್ ಖಾನ್ 'ಆಸ್ಕ್ ಮಿ ಎನಿಥಿಂಗ್' ಸೆಷನ್ ಮಾಡಿದ್ದರು. ಶಾರುಖ್ ಖಾನ್‌ಗೆ ತರಹೇವಾರಿ ಪ್ರಶ್ನೆ ಕೇಳಿದ್ದರು. 

ಅಭಿಮಾನಿಯೊಬ್ಬ ವಿಚಿತ್ರ ಪ್ರಶ್ನೆ ಕೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶಾರುಖ್ ಖಾನ್‌ಗೆ ಪಠಾಣ್ ಸಿನಿಮಾ ಪೋಸ್ಟ್‌ಪೋನ್ ಮಾಡಿ ಎಂದು ಕೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಪಠಾಣ್ ಸಿನಿಮಾ ಜನವರಿ 25ಕ್ಕೆ ರಿಲೀಸ್ ಆಗುತ್ತಿದೆ. ಅಭಿಮಾನಿ,  'ಸರ್ ನಾನು ಜನವರಿಗೆ 25ಕ್ಕೆ ಮದುವೆಯಾಗುತ್ತಿದ್ದೀನಿ. ದಯವಿಟ್ಟು ಪಠಾಣ್ ಸಿನಿಮಾವನ್ನು 26ಕ್ಕೆ ರಿಲೀಸ್ ಮಾಡಿ' ಎಂದು ಕೇಳಿದ್ದಾರೆ.

Tum shaadi 26 ko karlo ( Republic Day parade ke baad ) chutti bhi hai us din…. https://t.co/XmoUdSYa29

— Shah Rukh Khan (@iamsrk)

'ಯಶ್ ಈಸ್ ವಾವ್...'; ಶಾರುಖ್ ಖಾನ್ ರಿಯಾಕ್ಷನ್‌ಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಫಿದಾ

ಅಭಿಮಾನಿ ಪ್ರಶ್ನೆಗೆ ಶಾರುಖ್ ಕೊಟ್ಟ ಪ್ರತಿಕ್ರಿಯೆ ಎಲ್ಲರ ಹೃದಯ ಗೆದ್ದಿದೆ. ಸಿನಿಮಾ ಪೋಸ್ಟ್‌ಪೋನ್ ಮಾಡಿ ಎಂದ ಅಭಿಮಾನಿಗೆ, ಜನವರಿ 26ಕ್ಕೆ ಮದುವೆಯಾಗಿ ಎಂದು ಸಲಹೆ ನೀಡಿದ್ದಾರೆ. 'ಜನವರಿ 26 ಗಣರಾಜ್ಯ ದಿನದ ಪೆರೇಡ್ ಮುಗಿದ ಬಳಿಕ ಮದುವೆಯಾಗಿ. 26 ಕೂಡ ರಜೆ ಇದೆ' ಎಂದು ಹೇಳಿದ್ದಾರೆ. ಮತ್ತೊಬ್ಬ ಅಭಿಮಾನಿ ಕೂಡ ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. 'ಸರ್ ಜನವರಿ 26ಕ್ಕೆ ನನ್ನ ಮದುವೆ ಇದೆ. ನಾನೇನು ಮಾಡಲಿ' ಎಂದು ಕೇಳಿದ್ದಾರೆ. ಅಭಿಮಾನಿ ಪ್ರಶ್ನೆಗೆ ಶಾರುಖ್,  'ಮದುವೆಯಾಗಿ ಬಳಿಕ ನಿಮ್ಮ ಹನಿಮೂನ್ ಸಮಯದಲ್ಲಿ ಸಿನಿಮಾ ನೋಡಿ' ಎಂದು ಹೇಳಿದ್ದಾರೆ. 

'ಯಶ್ ಈಸ್ ವಾವ್...'; ಶಾರುಖ್ ಖಾನ್ ರಿಯಾಕ್ಷನ್‌ಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಫಿದಾ

ಪಠಾಣ್ ಸಿನಿಮಾದ ಬಗ್ಗೆ

ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದು ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

click me!