ವೇಶ್ಯೆಯರ ಜೀವನವನ್ನು ಸಮಾಜದ ಮುಂದಿಡಲು ಅವರಿಗಾಗಿ ವೇಶ್ಯಾಪಾತ್ರ ಮಾಡಿದ ನಟಿಯರು ಕೆಲವೇ ಕೆಲವರು. ಅವರ್ಯಾರು?
ವೇಶ್ಯಾ ವೃತ್ತಿಯೆಂದರೆ ಸಮಾಜದಲ್ಲಿ ಅಸಡ್ಡೆಯ ಮನೋಭಾವವಿದೆ. ಆದರೆ ಲೈಂಗಿಕ ಕಾರ್ಯಕರ್ತೆಯರ ನೋವುಗಳೇನು?ಅವರು ಈ ವೃತ್ತಿ ಆರಿಸಲು ಕಾರಣವೇನು, ಅವರಿಗೆ ಎದುರಾದ ಅನಿವಾರ್ಯತೆಯೇನು ಎಂಬ ಬಗ್ಗೆ ಯೋಚಿಸುವವರು ಬಹಳ ಕಮ್ಮಿ. ಈ ವೃತ್ತಿಯ ಬಗ್ಗೆ ಇರುವ ಹಲವು ಆಯಾಮಗಳು, ಹೆಣ್ಣುಮಕ್ಕಳ ಅಸಹಾಯಕತೆ ಇತ್ಯಾದಿಗಳನ್ನು ಚಿತ್ರದ ಮೇಲೆ ತರುವುದು ಸುಲಭದ ಮಾತಲ್ಲ. ಅದರಲ್ಲಿಯೂ ಈ ವೃತ್ತಿಯ ಪಾತ್ರ ಮಾಡುವಾಗಲೂ ಪ್ರಬುದ್ಧ ನಟನೆಯ ಅಗತ್ಯವಿದೆ. ವೇಶ್ಯೆಯರಾಗುವ ಹೆಣ್ಣುಮಕ್ಕಳ ನೋವಿನ ಕಥೆಗಳನ್ನು ಜಗತ್ತಿನ ಮುಂದೆ ಬಿಚ್ಚಿಡಲು ವೇಶ್ಯಾಪಾತ್ರ (Prostitution) ಮಾಡುವ ಮೂಲಕ ಸಕತ್ ಫೇಮಸ್ ಆಗಿದ್ದಾರೆ ಕೆಲವು ನಟಿಯರು. ಅಂಥ ಕೆಲವು ನಟಿಯರ ಪರಿಚಯ ಇಲ್ಲಿದೆ.
ಕಳೆದ ವರ್ಷ ಬಾಕ್ಸ್ ಆಫೀಸ್ (Box office) ಕೊಳ್ಳೆ ಹೊಡೆದ ಚಿತ್ರ ಆಲಿಯಾ ಭಟ್ (Alia Bhat) ಅಭಿನಯದ ಗಂಗೂಬಾಯಿ ಕಾಥಿವಾಡಿ (Gangubai Kathiawadi) ಇಡೀ ವಿಶ್ವದ ಗಮನ ಸೆಳೆದ ಈ ಚಲನಚಿತ್ರವು ಜಗತ್ತಿನಾದ್ಯಂತ ದಾಖಲೆಗಳನ್ನು ಮುರಿದು ವರ್ಷದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಬ್ಲಾಕ್‌ಬಸ್ಟರ್ ಹಿಟ್ ಚಿತ್ರ ಎಂದೂ ಹೆಸರು ಗಳಿಸಿತು. ಈ ಚಿತ್ರದಲ್ಲಿ ವೇಶ್ಯೆಯರನ್ನು ಸಮಾಜ ಕೀಳಾಗಿ ಕಾಣಬಾರದು, ಅವರು ಕೂಡ ಸಮಾಜದ ಒಂದು ಭಾಗ ಎಂಬುದು ಚಿತ್ರದ ಹೂರಣ. ಲೈಂಗಿಕ ಕಾರ್ಯಕರ್ತೆಯರ ಹೋರಾಟಗಳ ಬಗ್ಗೆಯೂ ಚಿತ್ರದಲ್ಲಿ ಮನೋಜ್ಞವಾಗಿ ತಿಳಿಸಲಾಗಿದೆ.
Sunny Leone : ಸನ್ನಿ ಲಿಯೋನ್ ತುಟಿಗೆ ಗಾಯ: ಬೆಡ್ರೂಮ್ನಿಂದ ವಿಡಿಯೋ ಮಾಡಿದ ನಟಿ
ಈ ಚಲನಚಿತ್ರವು ಗಂಗೂಬಾಯಿ ಕೊಥೆವಾಲಿ ಎಂದು ಜನಪ್ರಿಯವಾಗಿರುವ ಗಂಗಾ ಜಗಜೀವಂದಾಸ್ ಕಥಿವಾಡಿ ಅವರ ನೈಜ ಕಥೆಯನ್ನು ಆಧರಿಸಿದೆ. ಅವರ ಜೀವನವನ್ನು ಎಸ್. ಹುಸೇನ್ ಜೈದಿ ಬರೆದ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ (Queens of Mumbai) ಪುಸ್ತಕದಲ್ಲಿ ದಾಖಲಿಸಲಾಗಿದೆ. ಪುಸ್ತಕವು ಮುಂಬೈನ ಭೂಗತ ಜಗತ್ತಿನ ಭಾಗವಾಗಿದ್ದ ಮಹಿಳೆಯರ ಕಥೆಗಳ ಸಂಗ್ರಹವಾಗಿದೆ. ಮುಂಬೈನ ರೆಡ್ ಲೈಟ್ ಜಿಲ್ಲೆಯ ಕಾಮಾಟಿಪುರದ ಅತ್ಯಂತ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾದ ಗಂಗೂಬಾಯಿ ಕಥಿಯಾವಾಡಿ ಆ ಪ್ರದೇಶದಲ್ಲಿ ಅನೇಕ ವೇಶ್ಯಾಗೃಹಗಳ ಮಾಲೀಕರಾಗಿದ್ದರು.
ಚಮೇಲಿ (Chameli)
ಇನ್ನು 2004ರಲ್ಲಿ ಬಿಡುಗಡೆಯಾದ ಚಮೇಲಿ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಕರೀನಾ ಕಪೂರ್ ಮತ್ತು ರಾಹುಲ್ ಬೋಸ್ ನಟಿಸಿದ ಚಮೇಲಿ ಚಿತ್ರವು ಲೈಂಗಿಕ ಕಾರ್ಯಕರ್ತರ ಜೀವನಕ್ಕೆ ಮಾನವೀಯ ಸ್ಪರ್ಶವನ್ನು ನೀಡುವಲ್ಲಿ ಯಶಸ್ವಿಯಾಯಿತು. ಚಲನಚಿತ್ರವು ಪುರುಷರು ಹೇಗೆ ಮಹಿಳೆಯರನ್ನು ಈ ವೃತ್ತಿಗೆ ನೂಕುತ್ತಿದ್ದಾರೆ. ಇದಕ್ಕೆ ಬಲಿಯಾಗು ಸ್ತ್ರೀ ಸಮೂಹ ಲೈಂಗಿಕ ಕಾರ್ಯಕರ್ತರೆಯರನ್ನು ಹೇಗೆ "ಅಶುದ್ಧ" ಮತ್ತು "ಅಸಮಾಧಾನ"ದಿಂದ ನೋಡುತ್ತದೆ, ಅವರನ್ನು ಮನುಷ್ಯದ ಬದಲು ಸರಕುಗಳಂತೆ ಹೇಗೆ ಪರಿಗಣಿಸಲಾಗುತ್ತದೆ ಎಂಬ ಬಗ್ಗೆ ವಿಷದವಾಗಿ ತಿಳಿಸಲಾಗಿದೆ. ಇದು ಕೂಡ ಸಾಕಷ್ಟು ಜನಮನ್ನಣೆ ಗಳಿಸಿತ್ತು. ಕರೀನಾ ಕಪೂರ್ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ.
ಬೇಗಂ ಜಾನ್ (Begum Jaan)
2015 ರ ಬಂಗಾಳಿ ಚಲನಚಿತ್ರ ರಾಜಕಹಿನಿಯ ಹಿಂದಿ ರೀಮೇಕ್ ಚಿತ್ರ ಬೇಗಂ ಜಾನ್. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಿರ್ದೇಶಕ ಶ್ರೀಜಿತ್ ಮುಖರ್ಜಿ ಬರೆದು ನಿರ್ದೇಶಿಸಿದ, ಈ ಚಿತ್ರ 2017ರಲ್ಲಿ ಬಿಡುಗಡೆಗೊಂಡಿದೆ. ಬೇಗಂ ಜಾನ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರವಾಗಿ ಖ್ಯಾತಿ ಗಳಿಸಿತು. ಈ ಚಿತ್ರದಲ್ಲಿ ವಿದ್ಯಾ ಬಾಲನ್ ವೇಶ್ಯಾಗೃಹದ ಮೇಡಂ ಪಾತ್ರದಲ್ಲಿ ಅಭಿಮಾನಿಗಳ ಮನಸೂರೆಗೊಂಡರು. ಇದರಲ್ಲಿ 1948 ರ ಭಾರತೀಯ ಸ್ವಾತಂತ್ರ್ಯದ ಅಂತಿಮ ವರ್ಷಗಳಲ್ಲಿ ಲೈಂಗಿಕ ಕಾರ್ಯಕರ್ತರ ಜೀವನ ಚರಿತ್ರೆ ಹೇಗಿತ್ತು ಎಂಬ ಬಗ್ಗೆ ತಿಳಿಸಲಾಗಿದೆ.
ಭಾರತದ ಟಾಪ್ 10 ಚಿತ್ರಗಳ ಪಟ್ಟಿ ಬಿಡುಗಡೆ: ಬಾಲಿವುಡ್ಗೆ ಬಿಗ್ ಶಾಕ್!
ಚಾಂದಿನಿ ಬಾರ್ (Chandni Bar)
2001 ರಲ್ಲಿ ಬಿಡುಗಡೆಯಾದ ಚಲನಚಿತ್ರ ಚಾಂದಿನಿ ಬಾರ್. ಮುಂಬೈನ ಕಠೋರ ಭೂಗತ ಜಗತ್ತನ್ನು ಇದು ಚಿತ್ರಿಸುತ್ತದೆ. ಇದು ವೇಶ್ಯೆಯರು, ಡ್ಯಾನ್ಸ್ ಕ್ಲಬ್‌ಗಳು ಮತ್ತು ಅಪರಾಧಿಯ ಜಗತ್ತಿನ ಚಿತ್ರಣವನ್ನು ಬಿಚ್ಚಿಡುತ್ತದೆ. ಮಧುರ್ ಭಂಡಾರ್ಕರ್ ನಿರ್ದೇಶಿಸಿದ, ಬಹು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರದಲ್ಲಿ ಟಬು ಮತ್ತು ಅತುಲ್ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅನನ್ಯಾ ಖರೆ, ರಾಜ್ಪಾಲ್ ಯಾದವ್, ಮಿನಾಕ್ಷಿ ಸಹಾನಿ ಮತ್ತು ವಿಶಾಲ್ ಠಕ್ಕರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಈ ಚಿತ್ರದ ಕಥೆಯು ದೂರದ ಹಳ್ಳಿಯ ಮುಮ್ತಾಜ್ (ತಬು) ಎಂಬ ಮುಗ್ಧ ಯುವತಿಯ ಕಥೆಯನ್ನು ವಿವರಿಸುತ್ತದೆ, ಅವರ ಕುಟುಂಬವು ಗಲಭೆಗಳ ಸಮಯದಲ್ಲಿ ಕೊಲೆಯಾಗುತ್ತದೆ. ಚಾಂದಿನಿ ಬಾರ್‌ನಲ್ಲಿ (Chandani Bar) ನರ್ತಕಿಯಾಗಲು ಮನವೊಲಿಸುವ ತನ್ನ ಚಿಕ್ಕಪ್ಪನೊಂದಿಗೆ ಅವಳು ಮುಂಬೈಗೆ ತೆರಳುತ್ತಾಳೆ. ನಂತರ ಆಕೆಯ ಜೀವನದಲ್ಲಿ ಆಗುವ ಅಲ್ಲೋಲ ಕಲ್ಲೋಲದ ಕಥೆಯನ್ನು ಈ ಚಿತ್ರ ಹೊಂದಿದ್ದು, ಕಂಬನಿ ಮಿಡಿಯುವಂತಿದೆ.