OTTಗೆ ಬರ್ತಿದೆ ಫಹಾದ್ ಫಾಸಿಲ್ 'ಧೂಮಂ': ಯಾವಾಗ, ಎಲ್ಲಿ? ಇಲ್ಲಿದೆ ವಿವರ

Published : Jul 01, 2023, 05:19 PM IST
OTTಗೆ ಬರ್ತಿದೆ ಫಹಾದ್ ಫಾಸಿಲ್ 'ಧೂಮಂ': ಯಾವಾಗ, ಎಲ್ಲಿ? ಇಲ್ಲಿದೆ ವಿವರ

ಸಾರಾಂಶ

ಫಹಾದ್ ಫಾಸಿಲ್ ನಟನೆಯ ಪವನ್ ಕುಮಾರ್ ನಿರ್ದೇಶನದ ಧೂಮಂ ಸಿನಿಮಾ ಒಟಿಟಿ ರಿಲೀಸ್ ಡೇಟ್ ವೈರಲ್ ಆಗಿದೆ. ಸಿನಿಮಾ ರಿಲೀಸ್ ಆಗಿ ತಿಂಗಳೊಳಗೆ ಒಟಿಟಿಗೆ ಬರಲು ಸಜ್ಜಾಗಿದೆ. 

ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ನಟನೆಯ ಧೂಮಂ ಸಿನಿಮಾ ರಿಲೀಸ್ ಆಗಿ ಕೆಲವೇ ದಿನಗಳಾಗಿದೆ.  ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಲೂಸಿಯಾ ಪವನ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬಂದಿರುವ ಧೂಮಂ ಸಿನಿಮಾ ಅಭಿಮಾನಿಗಳ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ನೆಲಕಚ್ಚಿದ ಧೂಮಂ ಈಗ ಒಟಿಟಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ ಎನ್ನಲಾಗಿದೆ. ಜೂನ್ 23ರಂದು ರಿಲೀಸ್ ಆದ ಧೂಮಂ ಸಿನಿಮಾದ ಬಗ್ಗೆ ಆಗಲೇ ಒಟಿಟಿ ರಿಲೀಸ್ ಸುದ್ದಿ ವೈರಲ್ ಆಗಿದೆ. 

ಫಹಾದ್ ಫಾಸಿಲ್ ಮತ್ತು ಅಪರ್ಣ ಬಾಲಮುರಳಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಧೂಮಂ ಮೂಲತಃ ಮಲಯಾಳಂನಲ್ಲಿ ತಯಾರಾದ ಸಿನಿಮಾ. ಬಳಿಕ ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಹೊಂಬಾಳೆ ಫಿಲ್ಮ್ಸ್ ಮತ್ತು ಪವನ್ ಕುಮಾರ್ ಕನ್ನಡದಲ್ಲಿ ಸಿನಿಮಾ ಮಾಡದೇ ಮಲಾಯಳಂನಲ್ಲಿ ಮಾತ್ರ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಆಕ್ರೋಶ ಕೂಡ ಕೇಳಿಬಂದಿತ್ತು. ಬಳಿಕ ಚಿತ್ರತಂಡ ಕನ್ನಡದಲ್ಲೂ ಸಿನಿಮಾ ರಿಲೀಸ್ ಮಾಡಿದರು. ಆದರೆ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಈ ಸಿನಿಮಾ ವಿಫಲವಾಗಿದೆ. 

ಹೊಂಬಾಳೆ ಫಿಲ್ಮ್ಸ್ ಜೊತೆ ಫಹಾದ್ ಸಿನಿಮಾ; ಪುನೀತ್ ಮಾಡಬೇಕಿದ್ದ ದ್ವಿತ್ವಗೆ ಹೀರೋ ಆಗ್ತಾರಾ ಮಲಯಾಳಂ ಸ್ಟಾರ್?

ಚಿತ್ರಮಂದಿರಗಳಲ್ಲಿ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿರುವ ಧೂಮಂ ಒಟಿಟಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಅಂದಹಾಗೆ ಧೂಮಂ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಈಗಾಗಲೇ ಅಮೆಜಾನ್ ಧೂಮಂ ಸಿನಿಮಾವನ್ನು ಖರೀದಿ ಮಾಡಿದ್ದು ಬಿಡುಗಡೆ ದಿನಾಂಕ ಕೂಡ ನಿಗಧಿ ಮಾಡಿಕೊಂಡಿದೆ ಎನ್ನಲಾಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಧೂಮಂ ಜುಲೈ 21ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸಿನಿಮಾ ತಂಡದ ಕಡೆಯಿಂದ ಅಥವಾ ಅಮೆಜಾನ್ ಕಡೆಯಿಂದ ಯಾವುದೆ ಅಧಿಕೃತ ಮಾಹಿತಿ ರಿವೀಲ್ ಆಗಿಲ್ಲ. ಸಿನಿಮಾ ರಿಲೀಸ್ ಆಗಿ 30 ದಿನಗಳೊಳಗೆ ಒಟಿಟಿಗೆ ಬರುತ್ತಿದೆ ಧೂಮಂ. ಈ ಬಗ್ಗೆ ಸದ್ಯದಲ್ಲೇ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ. '

ನಿಲ್ಲಲೇ ಬೇಕು ಎಲ್ಲ ದಿಮಾಕು' ಎಂದು ಫಹಾದ್ 'ಧೂಮಂ' ಬಗ್ಗೆ ಹೊಂಬಾಳೆ ಟ್ವೀಟ್: ಅನುಮಾಕ್ಕೆ ಬಿತ್ತು ತೆರೆ

ಧೂಮಂ ಸಿನಿಮಾ ಅತೀ ವೇಗವಾಗಿ ಶೂಟಿಂಗ್ ಮುಗಿಸಿ ಚಿತ್ರಮಂದಿರಕ್ಕೆ ಎಂಟ್ರಿ  ಕೊಟ್ಟಿದೆ. ಮೊದಲ ಬಾರಿಗೆ ಫಹಾದ್ ಫಾಸಿಲ್ ಕನ್ನಡ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಮತ್ತು ಕನ್ನಡಿಗರ ಮುಂದೆ ಬಂದಿದ್ದಾರೆ.  ಕೆಜಿಎಫ್ ಮತ್ತು ಕಾಂತಾರ ಸಕ್ಸಸ್‌ನಲ್ಲಿದ್ದ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾದ ಸಕ್ಸಸ್ ಎದುರು ನೋಡುತ್ತಿತ್ತು. ಆದರೆ ಧೂಮಂ ಎಲ್ಲಾ ನಿರೀಕ್ಷೆ ಹುಸಿ ಮಾಡಿದೆ. ಒಟಿಟಿ ಪ್ರೇಕ್ಷಕರಿಗಾದರೂ ಇಷ್ಟವಾಗುತ್ತಾ ಕಾದುನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!