20 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಾಜಿ ಜೋಡಿ ಅಕ್ಷಯ್- ರವೀನಾ: ಇಬ್ಬರೂ ತಬ್ಬಿ ಮಾತಾಡಿದ ವಿಡಿಯೋ ವೈರಲ್

Published : May 08, 2023, 11:12 AM ISTUpdated : May 08, 2023, 11:14 AM IST
20 ವರ್ಷದ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಮಾಜಿ ಜೋಡಿ ಅಕ್ಷಯ್- ರವೀನಾ: ಇಬ್ಬರೂ ತಬ್ಬಿ ಮಾತಾಡಿದ ವಿಡಿಯೋ ವೈರಲ್

ಸಾರಾಂಶ

ಅನೇಕ ವರ್ಷದ ಬಳಿಕ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಹಗ್ ಮಾಡಿದ ವಿಡಿಯೋ ವೈರಲ್ ಆಗಿದೆ. 

90ರ ದಶಕದ ಖ್ಯಾತ ಜೋಡಿಗಳಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್, ಅಕ್ಷಯ್ ಕುಮಾರ್ ಮತ್ತು ಶಿಲ್ಪಾ ಜೋಡಿ ಕೂಡ ಒಂದು. ಈ ಜೋಡಿ ತೆರೆಮೇಲೆ ಮಾತ್ರವಲ್ಲದೇ ತೆರೆ ಹಿಂದೆಯೂ ಕೂಡ ಅಷ್ಟೇ ಫೇಮಸ್. ಅಕ್ಷಯ್ ಕುಮಾರ್ ನಟಿ ರವೀನಾ ಟಂಡನ್ ಮತ್ತು ಶಿಲ್ಪಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಅಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಅಕ್ಷಯ್ ಕುಮಾರ್ ಟ್ವಿಂಕಲ್ ಖನ್ನಾ ಅವರನ್ನು ಮದುವೆಯಾಗುವ ಮೂಲಕ ಶಾಕ್ ನೀಡಿದರು. ಬಳಿಕ ಆ ಜೋಡಿಗಳು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೀಗ ಅನೇಕ ವರ್ಷಗಳ ಬಳಿಕ ಎಕ್ಸ್‌ಗಳ ಸಮಾಗಮವಾಗಿದೆ. ಕಾರ್ಯಕ್ರಮವೊಂದರಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  

ಇತ್ತೀಚೆಗಷ್ಟೆ ಮುಂಬೈನಲ್ಲಿ ನಡೆದ ಫ್ಯಾಷನ್ ಈವೆಂಟ್‌ನಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿ ಕೂಡ ಇದ್ದರು.  ಅಕ್ಷಯ್ ಮತ್ತು ರವೀನಾ ಇಬ್ಬರೂ ಹಗ್ ಮಾಡಿ ಒಟ್ಟಿಗೆ ಕುಳಿತು ಸಂತೋಷವಾಗಿ ಮಾತುಕತೆ ನಡೆಸಿದ್ದಾರೆ. ಈ ಫೇಮಸ್ ಜೋಡಿಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಅಭಿಮಾನಿಗಳು ಸಿಕ್ಕಾಪಟ್ಟೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷ ಎಂದರೆ ಅಕ್ಷಯ್ ಕುಮಾರ್ ಅವರಿಗೆ ಸ್ವತಃ ರವೀನಾ ಟಂಡನ್ ಪ್ರಶಸ್ತಿ ಪ್ರದಾನ ಮಾಡಿದರು. ಇಬ್ಬರೂ ವೇದಿಕೆ ಮೇಲೆ ನಗುತ್ತಾ ಮಾತನಾಡುತ್ತಿರುವ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇಬ್ಬರೂ ವೇದಿಕೆ ಮೇಲೆ ರ್ಯಾಪಿಡ್ ಫೈರ್ ಆಡಿದರು.  

ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಇದು ಅಸಾಧ್ಯ ಎಂದು ಓರ್ವ ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಅನೇಕ ವರ್ಷಗಳ ಬಳಿಕ ಇಬ್ಬರನ್ನು ಒಟ್ಟಿಗೆ ನೋಡಿದೆ ಎಂದು ಹೇಳಿದ್ದಾರೆ. 

ಪದ್ಮಶ್ರೀ ಸ್ವೀಕರಿಸಿದ ರವೀನಾ ಟಂಡನ್ ಹಿಗ್ಗಾಮುಗ್ಗಾ ಟ್ರೋಲ್; ಕೊನೆಗೂ ಮೌನ ಮುರಿದ 'ಕೆಜಿಎಫ್ 2' ನಟಿ

ನಿಶ್ಚಿತಾರ್ಥ ಮುರಿದುಕೊಂಡು ದೂರಾಗಿದ್ದ ಜೋಡಿ 

ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಇಬ್ಬರೂ ಬರೋಬ್ಬರಿ 20 ವರ್ಷಗಳ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ನಿಶ್ಚಿತಾರ್ಥ ಮುರಿದುಕೊಂಡ ಬಳಿಕ ಮತ್ತೆ  ಭೇಟಿ ಆಗಿರಲಿಲ್ಲ. ಇದೀಗ ಇಬ್ಬರನ್ನೂಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಇತ್ತೀಚೆಗಷ್ಟೆ ಪ್ರತಿಕ್ರಿಯೆ ನೀಡಿದ್ದರು.  'ನಾವು ಮೊಹ್ರಾ ಸಮಯದಲ್ಲಿ ಹಿಟ್ ಪೇರ್ ಆಗಿದ್ದೆವು. ಎಲ್ಲರೂ ಮುಂದೆ ಸಾಗಿದ್ದಾರೆ. ಕಾಲೇಜಿನಲ್ಲಿ ಹುಡುಗಿಯರು ಪ್ರತಿ ವಾರ ತಮ್ಮ ಗೆಳೆಯರನ್ನು ಬದಲಾಯಿಸುತ್ತಿರುತ್ತಾರೆ. ಆದರೆ ಮುರಿದುಹೋದ ನಿಶ್ಚಿತಾರ್ಥ ಮಾತ್ರ ಇನ್ನೂ ನನ್ನ ತಲೆಯಲ್ಲಿ ಹಾಗೆ ಸಿಲುಕಿಕೊಂಡಿತ್ತು.  ಆದರೆ ಯಾಕೆಂದು ನನಗೆ ತಿಳಿದಿಲ್ಲ. ಎಲ್ಲರೂ ಮುಂದೆ ಸಾಗಿದ್ದಾರೆ. ಅನೇಕರು ವಿಚ್ಛೇದನ ಪಡೆದಿದ್ದಾರೆ ಅವರೂ ಮೂವ್‌ಆನ್ ಆಗಿದ್ದಾರೆ. ಅದೇನು ದೊಡ್ಡ ವಿಷಯವಲ್ಲ' ಎಂದು ಹೇಳಿದ್ದರು.

ನನ್ನ ತಲೆಯಲ್ಲಿ ಇನ್ನೂ ಉಳಿದಿದೆ; ಅಕ್ಷಯ್ ಕುಮಾರ್ ಜೊತೆಗಿನ ನಿಶ್ಚಿತಾರ್ಥ ಮುರಿದ ಬಗ್ಗೆ ಮೌನ ಮುರಿದ ರವೀನಾ ಟಂಡನ್

ರವೀನಾ ಮತ್ತು ಅಕ್ಷಯ್ ಕುಮಾರ್ 1994 ರಲ್ಲಿ ಬಂದ ಸೂಪರ್ ಹಿಟ್ ಮೊಹ್ರಾದಲ್ಲಿ ಒಟ್ಟಿಗೆ ನಟಿಸಿದರು. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇಬ್ಬರೂ 1995 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಇಬ್ಬರೂ ದಿಢೀರ್ ಬೇರೆಯಾಗುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಅಕ್ಷಯ್ 2001 ರಲ್ಲಿ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾದರು. ರವೀನಾ 2004 ರಲ್ಲಿ ಅನಿಲ್ ಥಡಾನಿ ಅವರನ್ನು ವಿವಾಹವಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್