'ಬೆಡ್‌ ಸಿಕ್ತಿಲ್ಲ': ನೆರವಿಗಾಗಿ ಸೋನು ಸೂದ್‌ನತ್ತ ನೋಡ್ತಿದ್ದಾರೆ ಜನ..!

By Suvarna NewsFirst Published Aug 7, 2020, 3:43 PM IST
Highlights

ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ನೆರವಿನಿಂದ ರಿಯಲ್ ಸೂಪರ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಸೋನು ಲಾಕ್‌ಡೌನ್ ಮುಗಿದರೂ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ.

ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ನೆರವಿನಿಂದ ರಿಯಲ್ ಸೂಪರ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಸೋನು ಲಾಕ್‌ಡೌನ್ ಮುಗಿದರೂ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ.

ಲಕ್ಷಾಂತರ ಮಂದಿ ಮನೆ ಸೇರಲು ರಸ್ತೆಯಲ್ಲಿ ನಡೆಯುತ್ತಿದ್ದಾಗ ಸೋನು ಸೂದ್ ಅವರಿಗೆ ಆಹಾರ, ಸಾರಿಗೆ, ಆಶ್ರಯ ನೀಡಿ ನೆರವಾಗಿದ್ದರು. ಸಿನಿಮಾ ಸೆಲೆಬ್ರಿಟಿಗಳು ಪ್ರವಾಹ, ಭೂಕಂಪ, ಇತರ ಸಮಸ್ಯೆಗಳಾದ ಜನರ ನೆರವಿಗೆ ಧಾವಿಸುತ್ತಾರೆ. ಆದರೆ ಸೋನು ಸೂದ್‌ಗೆ ಬೇರೆ ಯಾರೂ ಸಾಟಿ ಇಲ್ಲ. ಹೀಗಾಗಿಯೇ ಸದ್ಯ ಸೋನು ದೇಶದ ರಿಯಲ್ ಹೀರೋ ಆಗಿದ್ದಾರೆ.

'ಅವರಿನ್ನು ಅನಾಥರಲ್ಲ': ಹೆತ್ತವರ ಕಳೆದುಕೊಂಡು 3 ಮಕ್ಕಳ ದತ್ತು ಪಡೆದ ಸೋನು ಸೂದ್!

ಸಾವಿರಾರು ಜನ ರಸ್ತೆಯಲ್ಲಿ ನಡೆದು ಮನೆ ಸೇರಲು ಕಷ್ಟಪಡುತ್ತಿರುವುದನ್ನು ನೋಡಿದಾದ ಇದು ಮನೆಯೊಳಗೆ ಕುಳಿತು ದೂರುಗಳನ್ನು ಹೇಳುವ ಸಮಯವಲ್ಲ ಎಂದು ನನಗೆ ಅನಿಸಿತು ಎಂದಿದ್ದಾರೆ.

 ನಾನು ಸುಮಾರು 40ರಿಂದ 45 ಸಾವಿರ ಜನರಿಗೆ ಆಹಾರ ಒದಗಿಸಲು ವ್ಯವಸ್ಥೆ ಮಾಡುತ್ತಿದೆ. ಆ ಸಂದರ್ಭ ಕರ್ನಾಟಕದತ್ತ ಪ್ರಯಾಣಿಸುತ್ತಿದ್ದ ಜನರನ್ನು ಅವರ ಊರಿಗೆ ತಲುಪಿಸಲು ಅನುಮತಿ ಕೇಳಿದೆ. ಅದು ಮೊದಲ ಬಾರಿಗೆ 50 ಜನರನ್ನು ಕರ್ನಾಟಕಕ್ಕೆ ಕಳುಹಿಸಿದ್ದೆ. ಜನರನ್ನು ಅವರ ಊರಿಗೆ ಸೇರಿಸುವ ಕೆಲಸ ನಾನು ಮಾಡಬಹುದು ಎಂದು ಅರಿವಾದಾಗ ಜಮ್ಮು ಕಾಶ್ನೀರದಿಂದ ತೊಡಗಿ ಕನ್ಯಾಕುಮಾರಿ ತನಕ ಜನರನ್ನು ಸಂಪರ್ಕಿಸಿದ ಎಂದಿದ್ದಾರೆ.

ಕೇವಲ 5500 ರೂಗಳೊಂದಿಗೆ ಮುಂಬೈಗೆ ಬಂದಿದ್ದ ಲಾಕ್‌ಡೌನ್‌ ಹೀರೋ ಸೋನುಸೂದ್‌

ಜನರು ಈಗ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆ ಈಡೇರಿಸುವುದು ನನ್ನ ಬಹಳ ದೊಡ್ಡ ಜವಾಬ್ದಾರಿ. ಈಗಲೂ ಬಹಳಷ್ಟು ಜನ ಬೆಡ್‌ ಸಿಗುತ್ತಿಲ್ಲ, ಆಸ್ಪತ್ರೆ ಇಲ್ಲ ಎಂದು ನನ್ನನ್ನು ಟ್ಯಾಗ್ ಮಾಡಿ ನೆರವು ಕೇಳುತ್ತಿದ್ದಾರೆ.ಅಂತಹ ಸಂದರ್ಭ ರಾತ್ರೋ ರಾತ್ರಿ ಅಲ್ಲಿನ ಆಸ್ಪತ್ರೆ ಸಿಬ್ಬಂದಿ, ಎಂಡಿಗಳಿಗೆ ಕರೆ ಮಾಡಿ ಅವರನ್ನು ದಾಖಲಿಸಿಕೊಳ್ಳುವಂತೆ ಹೇಳಬೇಕಾಗಿದೆ ಎಂದಿದ್ದಾರೆ.

ಜನ ಅವರ ಕಷ್ಟದ ಸಂದರ್ಭದಲ್ಲಿ ನಾವು ನೆರವಾಗುತ್ತೇವೆ ಎಂದು ನಂಬುವುದೇ ದೊಡ್ಡ ವಿಚಾರ. ನಾನು ನನ್ನಿಂದಾಗುವಷ್ಟು ಮಟ್ಟಿಗೆ ನನಗಾಗುವ ತನಕ ಜನರಿಗೆ ನೆರವಾಗುತ್ತೇನೆ ಎಂದಿದ್ದಾರೆ.

click me!