ಪುಣೆಯ ರಾಷ್ಟ್ರೀಯ ನಾಟಕ ಅಕಾಡೆಮಿ ಮುಖ್ಯಸ್ಥರಾಗಿ ಪರೇಶ್‌ ರಾವಲ್‌ ನೇಮಕ!

By Suvarna News  |  First Published Sep 11, 2020, 3:33 PM IST

ಅಭಿನಯದಲ್ಲಿ ಅನೇಕ ಅತ್ಯದ್ಭುತ ಕಲಾವಿದರನ್ನು ಸೃಷ್ಟಿಸಿದ ರಾಷ್ಟ್ರೀಯ ನಾಟಕ ಶಾಲೆಗೆ ಹೊಸ ಸಾರಥಿ. ಎನ್‌ಎಸ್‌ಡಿಗೆ ಇನ್ನು ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟ ಪರೇಶ್ ರಾವಲ್‌ ಸಾರಥ್ಯ.


ಭಾರತದ ಅತ್ಯುನ್ನತ ರಂಗ ತರಬೇತಿ ಸಂಸ್ಥೆಯಾಗಿರುವ ಪುಣೆಯಲ್ಲಿನ ರಾಷ್ಟ್ರೀಯ ನಾಟಕ ವಿದ್ಯಾಲಯ (ಎನ್‌ಎಸ್‌ಡಿ)ದ ಮುಖ್ಯಸ್ಥರನ್ನಾಗಿ ಹಿರಿಯ ನಟ, ಬಿಜೆಪಿ ಸಂಸದ ಪರೇಶ್‌ ರಾವಲ್‌  ನೇಮಕಗೊಂಡಿದ್ದಾರೆ. 

ರಾಷ್ಟ್ರೀಯ ನಾಟಕ ವಿದ್ಯಾಲಯ ಕೇಂದ್ರ ಸಂಸ್ಕೃತಿ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಸ್ವತಂತ್ರ ಸಂಸ್ಥೆಯಾಗಿದ್ದು, ಚಿತ್ರರಂಗ ಪ್ರವೇಶಕ್ಕೆ ಇದೊಂದು ಉತ್ತಮ ವೇದಿಕೆ ಆಗಿದೆ. ಪರೇಶ್‌ ರಾವಲ್‌ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ಮುಖ್ಯಸ್ಥರನ್ನಾಗಿ ನೇಮಿಸಿ ರಾಷ್ಟ್ರಪತಿ ಭವನ ಆದೇಶ ಹೊರಡಿಸಿದೆ.

Tap to resize

Latest Videos

ಹೇರಾ ಪೇರಿ, ಅತಿಥಿ ತಮ್‌ ಕಬ್‌ ಜಾವೋಗೆ, ಒ ಮೈ ಗಾಡ್‌ ಮುಂತಾದ ಚಿತ್ರಗಳಲ್ಲಿ ತಮ್ಮ ಹಾಸ್ಯ ನಟನೆಯ ಮೂಲಕ ರಾವಲ್‌ ಜನಪ್ರಿಯರಾಗಿದ್ದಾರೆ. 2017ರಿಂದ ಈ ಹುದ್ದೆ ಖಾಲಿ ಉಳಿದಿತ್ತು. ಮೂರು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಅಭಿನಯಿಸಿ ಸೇವೆ ಸಲ್ಲಿಸುತ್ತಿರುವ ರವಾಲ್‌ ಈ ಸ್ಥಾನ ಪಡೆದುಕೊಂಡಿದ್ದಾರೆ. 2014ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ. 

undefined

'ಹೆಸರಾಂತ ನಟ ಪರೇಶ್ ರಾವಲ್ ಅವರು ರಾಷ್ಟ್ರೀಯ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕ ಆಗಿದ್ದಾರೆ. ವಿದ್ಯಾರ್ಥಿಗಳು ಹಾಗೂ ಅಲ್ಲಿನ ಕಲಾವಿದರು ಅವರ ಪ್ರತಿಭೆಯ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ' ಎಂದು ಕೇಂದ್ರ ಸಾಂಸ್ಕೃತಿಕ ಸಚಿವ ಪ್ರಹ್ಲಾದ್ ಪಟೇಲ್ ಟ್ಟೀಟ್‌ ಮಾಡಿದ್ದಾರೆ.

ಎಂಪಿ ಪರೇಶ್ ರಾವಲ್‌ಗೆ ನರೇಂದ್ರ ಮೋದಿಯಿಂದ ಬರ್ತಡೆ ಗಿಫ್ಟ್ 

'ಇದು ನನಗೆ ದೊಡ್ಡ ಚಾಲೆಂಜ್ ಆದರೆ ತುಂಬಾ ಸಂತೋಷದಿಂದ ಮಾಡುತ್ತೇನೆ. ನನಗೆ ಈ ಕ್ಷೇತ್ರದ ಬಗ್ಗೆ ಗೊತ್ತಿರುವ ಕಾರಣ ನನ್ನ ಶ್ರಮಕ್ಕೆ ಮೀರಿದ ಕೆಲಸ ಮಾಡುತ್ತೇನೆ,' ಎಂದು ರಾವಲ್ ಹೇಳಿದ್ದಾರೆ.

click me!