DHOOM: ಬಿಕಿನಿ ಧರಿಸಲು ಅಮ್ಮನ ಪರ್ಮಿಷನ್​ ಕೇಳಿದ್ದ ಇಶಾ- ಹೇಮಾಮಾಲಿನಿ ಹೇಳಿದ್ದೇನು?

By Suvarna News  |  First Published May 5, 2023, 12:34 PM IST

ಧೂಮ್​ ಚಿತ್ರದ ಮೂಲಕ ಹೆಸರು ಮಾಡಿರುವ ನಟಿ ಇಶಾ ಡಿಯೋಲ್​ ಈ ಚಿತ್ರದಲ್ಲಿ ಬಿಕಿನಿ ಧರಿಸಲು ಅಮ್ಮ ಹೇಮಾ  ಮಾಲಿನಿ ಅನುಮತಿ ಕೇಳಿದಾಗ ಅವರು ರಿಯಾಕ್ಷನ್​ ಹೇಗಿತ್ತು? 
 


ಬಾಲಿವುಡ್​ನಲ್ಲಿ ಡ್ರೀಮ್​ ಗರ್ಲ್​ ಎಂದೇ ಖ್ಯಾತಿ ಪಡೆದಿರುವ ನಟಿ ಹೇಮಾಮಾಲಿನಿ (Hema Malini) ಮತ್ತು ಬಾಲಿವುಡ್​ ನಟ ಧರ್ಮೇಂದ್ರ ಅವರ ಪುತ್ರಿ ಇಶಾ. ತಾಯಿಯಂತೆ ಸೌಂದರ್ಯವತಿ ಅಲ್ಲದಿದ್ದರೂ ಸ್ಟಾರ್​ ಕಿಡ್​ ಆಗಿರುವ ಕಾರಣ ಬಾಲಿವುಡ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೆಲವು ಹಿಟ್​ ಚಿತ್ರಗಳನ್ನೂ ನೀಡಿದ್ದಾರೆ.  ಶಾಲಾ ದಿನಗಳಲ್ಲಿ  ಫುಟ್‌ಬಾಲ್‌ ಆಟಗಾರ್ತಿಯಾಗಿ  ತಂಡದ ನಾಯಕಿಯಾಗಿದ್ದ ಇಶಾ,  ರಾಜ್ಯ ಮಟ್ಟದಲ್ಲಿ ಹ್ಯಾಂಡ್‌ಬಾಲ್‌ನಲ್ಲಿ  ಕಾಲೇಜನ್ನು ಪ್ರತಿನಿಧಿಸಿದವರು. ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ್ತಿಯಾಗಿ ಆಟವಾಡಿದವರು.  2001 ರಲ್ಲಿ ಪಂಜಾಬ್‌ನಲ್ಲಿ ನಡೆದ ಹಿರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರದ ಪರವಾಗಿ ಆಡಲು ಆಯ್ಕೆಯಾದರು. ಹೀಗೆ ಫುಟ್​ಬಾಲ್​ ತಾರೆಯಾದ ನಟಿ ಇಶಾ ಈಗ ಬೆಳ್ಳಿ ಪರದೆಯ ತಾರೆಯಾಗಿ ಮಿಂಚುತ್ತಿದ್ದಾರೆ. 2002ರಲ್ಲಿ ಬಿಡುಗಡೆಯಾದ ವಿನಯ್ ಶುಕ್ಲಾ ಅವರ ಕೋಯಿ ಮೇರೆ ದಿಲ್ ಸೇ ಪೂಛೆ  ಚಿತ್ರದಲ್ಲಿ ಅಫ್ತಾಬ್ ಶಿವದಾಸನಿಯೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ವೃತ್ತಿಜೀವನ ಪ್ರಾರಂಭಿಸಿದರು.  ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು.  ಇದರ ಹೊರತಾಗಿಯೂ ಇಶಾ, 48 ನೇ ಫಿಲ್ಮ್‌ಫೇರ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ತನ್ನ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದರು.  

ನಂತರ,  ಅರ್ಜುನ್ ಸಬ್ಲೋಕ್ (Arjun Sublock) ಅವರ ತ್ರಿಕೋನ ಪ್ರೇಮಕಥೆ ನಾ ತುಮ್ ಜಾನೋ ನಾ ಹಮ್​ನಲ್ಲಿ ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್ ಎದುರು ನಟಿಸಿ ಸೈ ಎನಿಸಿಕೊಂಡರು. ನಂತರ ಸಂಜಯ್ ಚೆಲ್ 'ತುಷಾರ್ ಕಪೂರ್ ಎದುರು ಕ್ಯಾ ದಿಲ್ ನೆ ಕಹಾದಲ್ಲಿ ನಟಿಸಿದರೂ ಅದೂ ಫ್ಲಾಪ್​ ಆಯಿತು. ಹೀಗೆ  ಹಲವು ಫ್ಲಾಪ್​, ಕೆಲವು ಹಿಟ್​ ಚಿತ್ರಗಳನ್ನು ನೀಡಿರುವ ನಟಿ ಇಶಾ ಅವರಿಗೆ ಬಹಳ ಹೆಸರು ತಂದುಕೊಟ್ಟ ಚಿತ್ರವೆಂದರೆ 2004ರಲ್ಲಿ ತೆರೆಕಂಡ ಧೂಮ್​. ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ , ಉದಯ್ ಚೋಪ್ರಾ ಮತ್ತು ರಿಮಿ ಸೇನ್ ಎದುರು ಯಶ್ ರಾಜ್ ಫಿಲ್ಮ್ಸ್ ಅವರ ಸಾಹಸ ಚಿತ್ರ ಧೂಮ್‌ನೊಂದಿಗೆ ಇಶಾ ಅಂತಿಮವಾಗಿ  ಪ್ರಗತಿ ಪಡೆದರು. ಇದರಲ್ಲಿ ಈಕೆ ತಮ್ಮ ಮೊದಲ ಸಾಹಸ ಪಾತ್ರವನ್ನು ಮೆರೆದರು.  ಗಲ್ಲಾಪೆಟ್ಟಿಗೆಯಲ್ಲಿ ಇದು ಹಿಟ್ ಆಯಿತು.

Tap to resize

Latest Videos

ನರೇಶ್​, ಪವಿತ್ರಾ ಲೋಕೇಶ್​ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​- ಕಿಸ್ಸಿಂಗ್​ ಟೀಸರ್​ ಬಿಡುಗಡೆ

ಈ ಚಿತ್ರದಲ್ಲಿ ಇಶಾ (Isha Deol) ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯಲ್ಲಿ ಇದೇ ಮೊದಲ ಬಾರಿಗೆ ಮಿಂಚಿದ್ದರು. ಆದರೆ ಏನೇ ಆದರೂ ಆರಂಭದಲ್ಲಿ ಪರದೆಯ ಮೇಲೆ ಬಿಕಿನಿ ಹಾಕಿ ಅಂಗಾಂಗ ಪ್ರದರ್ಶನ ಮಾಡಲು ಕೆಲವು ನಟಿಯರು ಹೆದರಿದ್ದು ಉಂಟು. ಈಗ ದೇಹ ಪ್ರದರ್ಶನ ಮಿತಿಮೀರುತ್ತಿದ್ದರೂ, 10 ವರ್ಷಗಳ ಹಿಂದೆ ಕೆಲ ನಟಿಯರು ಸಭ್ಯತೆಯ ಬಗ್ಗೆ ಗಮನ ಹರಿಸಿದ್ದು ಉಂಟು. ಅವರಲ್ಲಿ ಒಬ್ಬರು ಇಶಾ ಡಿಯೋಲ್​. ತಾವು ಮೊದಲ ಬಾರಿಗೆ ಧೂಮ್​ನಲ್ಲಿ ಬಿಕಿನಿ ತೊಡಬೇಕು ಎಂದು ತಿಳಿದಾಗ ತಮಗಾಗಿದ್ದ ಅನುಭವ ಹಾಗೂ ತಮ್ಮ ತಾಯಿ ಹೇಮಾ ಮಾಲಿನಿಯವರ ಬಳಿ ಪರ್ಮಿಷನ್​ ಕೇಳಲು ಪಟ್ಟ ಆತಂಕದ ಕುರಿತು ಈಗ ಮಾತನಾಡಿದ್ದಾರೆ.

 'ಆದಿತ್ಯ ಚೋಪ್ರಾ ಅವರು ನನ್ನನ್ನು ಧೂಮ್​ಗೆ ಆಯ್ಕೆಮಾಡಿದ್ದರು. ಆ ಸಂದರ್ಭದಲ್ಲಿ ಚಿತ್ರದಲ್ಲಿ ಬಿಕಿನಿ ಹಾಕಬೇಕು, ಅದು ಕೂಡ ನಿರ್ದಿಷ್ಟಿ ರೀತಿಯಲ್ಲಿ ಕಾಣಬೇಕು. ಇದು ಚಿತ್ರಕ್ಕೆ ಅನಿವಾರ್ಯ, ಇದಕ್ಕೆ ಒಪ್ಪಿಗೆ ಇದೆಯಾ ಎಂದು ಪ್ರಶ್ನಿಸಿದ್ದರು. ಅದುವರೆಗೆ ನಾನು ಪರದೆಯ ಮೇಲೆ ಬಿಕಿನಿ ದೃಶ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ.  ಆದರೆ ಸ್ನೇಹಿತರ ಜೊತೆ ಔಟಿಂಗ್​ಗೆ ಹೋಗುವಾಗ, ಈಜು ಮಾಡುವಾಗ ಇದನ್ನು ಧರಿಸಿದ್ದೆ. ಸಾರ್ವಜನಿಕವಾಗಿ ಎಲ್ಲರ ಎದುರು ಕಾಣಿಸಿಕೊಳ್ಳುವುದು ಹೇಗೆ ಎಂಬ ಮುಜುಗರವಾಗಿತ್ತು. ಆದರೆ ಚಿತ್ರಕ್ಕೆ ಅನಿವಾರ್ಯ ಎಂದಾಗ ನನಗೆ ಅದನ್ನು ಒಪ್ಪಿಕೊಂಡೆ.  ಆದರೆ ನನ್ನಮ್ಮ ಹೇಮಾ  ಮಾಲಿನಿಯವರು ಇದಕ್ಕೆ ಏನು ಹೇಳುತ್ತಾರೋ ಎನ್ನುವ ಭಯ ಕಾಡಿತ್ತು' ಎಂದು ಇಶಾ ಹೇಳಿದ್ದಾರೆ.

Bahubali ನಟ ರಾಣಾ ದುಗ್ಗುಬಾಟಿ ಜೊತೆ ನಟಿ ತ್ರಿಶಾ ಬೆಡ್​ರೂಂ ಫೋಟೋ ಲೀಕ್​
'ಬಿಕಿನಿ ದೃಶ್ಯದ ಬಗ್ಗೆ ತನ್ನ ತಾಯಿಯೊಂದಿಗೆ ಮಾತನಾಡಲು ನಾನು ಹೆದರಿದ್ದೆ.  ಆದಿತ್ಯ ಚೋಪ್ರಾ (Aditya Chopra) ಅವರಲ್ಲಿ ಒಂದು ದಿನದ ಕಾಲಾವಕಾಶವನ್ನು ಕೋರಿದೆ. ಧೈರ್ಯ ಮಾಡಿ ಅಮ್ಮನ ಬಳಿ ಈ ವಿಷಯ ಪ್ರಸ್ತಾಪಿಸಿದೆ. ಅದಕ್ಕೆ ಅವರ ರಿಯಾಕ್ಷನ್​ ನೋಡಿ ನನಗೆ ಅಚ್ಚರಿಯಾಯಿತು' ಎಂದಿರುವ ಇಶಾ, ಅದರೆಲ್ಲೀನಿದೆ? ಈಜುವಾಗ ಬೇರೆ ಡ್ರೆಸ್​ ಹಾಕಲು ಸಾಧ್ಯವೆ? ಅಷ್ಟೇ ಅಲ್ಲದೇ, ಹೊರಗಡೆ ಹೋಗುವಾಗ ಇಂಥ ಡ್ರೆಸ್​ ಹಾಕುತ್ತಿಯಲ್ಲ, ಸಿನಿಮಾದಲ್ಲಿ ಮಾಡಲು ಹಿಂಜರಿಕೆ  ಏಕೆ ಎಂದುಬಿಟ್ಟರು. ನನಗೆ ಅವರು ಇಷ್ಟು ಸುಲಭದಲ್ಲಿ ಒಪ್ಪಿಕೊಂಡು ನನಗೆ ಸಮಾಧಾನ ಹೇಳಿದ್ದು ಕೇಳಿ ಅಚ್ಚರಿ ಆಗೋಯ್ತು. ನಂತರ ಅಮ್ಮ, 'ಚಿತ್ರೀಕರಣ ಮುಗಿದ ಮೇಲೆ  ಒಮ್ಮೆ ಅದು ಸರಿಯಾಗಿ ಚಿತ್ರೀಕರಿಸಲಾಗಿದೆ ಎಂದು ಖಚಿತಪಡಿಸಿಕೊ' ಎಂದು ಹೇಳಿದರು. ಎಲ್ಲವೂ ನಾನಂದುಕೊಂಡಂತೆ ಆಯಿತು. ಚಿತ್ರ ಸೂಪರ್​ಹಿಟ್​ ಆಯಿತು ಎಂದರು.
 

click me!