
ಬಾಲಿವುಡ್ ನಟಿ ತಾನಿಯಾ ಶ್ರಾಫ್ ಕಳೆದ ವರ್ಷ ಸಕತ್ ಸದ್ದು ಮಾಡಿದ್ದರು. ಇದಕ್ಕೆ ಕಾರಣ, ಅವರು ಬಾಲಿವುಡ್ ನಟ, ನಿರ್ದೇಶಕ ಸುನೀಲ್ ಶೆಟ್ಟಿ ಅವರ ಪುತ್ರ, ನಟ ಅಹಾನ್ ಶೆಟ್ಟಿ ಅವರ ಜೊತೆಗಿನ ಸುದೀರ್ಘ ಸಂಬಂಧವನ್ನು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಕಾರಣಕ್ಕೆ. ಆದರೆ ಇಬ್ಬರೂ ಇದುವರೆಗೆ ಈ ಬಗ್ಗೆ ತುಟಿಕ್ ಪಿಟಿಕ್ ಅನ್ನದಿದ್ದರೂ, ಇವರಿಬ್ಬರ ಸಂಬಂಧ ಹಳಸಿದೆ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕು ತಾನಿಯಾ ಓರ್ವ ರೂಪದರ್ಶಿ, ಡಿಸೈನರ್ ಮತ್ತು ಕೈಗಾರಿಕೋದ್ಯಮಿ ಜೈದೇವ್ ಮತ್ತು ರೊಮಿಲಾ ಶ್ರಾಫ್ ಅವರ ಪುತ್ರಿ. ಅವರು ಅಹಾನ್ ಶೆಟ್ಟಿ ಜೊತೆ 10 ವರ್ಷಗಳಿಂದ ಒಟ್ಟಿಗೇ ಇದ್ದರು. ಈ ಸಂಬಂಧ ಬಿ-ಟೌನ್ನಲ್ಲಿ ಬಹಳ ಚರ್ಚಿತವೂ ಆಗಿತ್ತು.
ಆದರೆ ಇದೀಗ ನಟಿ ತಾನಿಯಾ ಸದ್ದು ಮಾಡುತ್ತಿರುವುದು ಫ್ಯಾಷನ್ ಷೋ ಒಂದರಲ್ಲಿ ಅವರು ತೊಟ್ಟ ಉಡುಗೆಯಿಂದಾಗಿ. ಅಷ್ಟಕ್ಕೂ, ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್ಗಳಿಗೆ ಹೋಗುವಾಗ ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ.
ಕೆಲವೊಮ್ಮೆ ಹೀಗೆ ಆದರೆ ಟ್ರೋಲ್ ಆಗಿ ಸಕತ್ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು. ಇದೀಗ ತಾನಿಯಾ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಈಕೆ ಇನ್ನರ್ವೇರ್ ಕಾಣುವ ರೀತಿಯಲ್ಲಿ ಸಂಪೂರ್ಣ ಸ್ಲಿಟೆಡ್ ಡ್ರೆಸ್ ತೊಟ್ಟಿದ್ದಾರೆ. ಹಿಂಭಾಗದಲ್ಲಿ ಮಾತ್ರ ಈ ಡ್ರೆಸ್ ನೆಲವನ್ನು ಗುಡಿಸುತ್ತಿದೆ. ಎಲ್ಲಿ ಕಾಣಬಾರದೋ ಅಲ್ಲಿ ಕಾಣುತ್ತಿದ್ದು, ಎಲ್ಲಿ ಚಿಕ್ಕದಾದ ಬಟ್ಟೆ ಇರಬೇಕೋ ಅಲ್ಲಿ ಉದ್ದದ ಬಟ್ಟೆ ಇದೆ. ಈಕೆ ಕ್ಯಾಟ್ವಾಕ್ ಮಾಡುವ ವಿಡಿಯೋ ವೈರಲ್ ಆಗುತ್ತಲೇ ಟ್ರೋಲಿಗರು, ವೇದಿಕೆ ಮೇಲೆ ಬರುವಾಗ ನಟಿಯ ಪ್ಯಾಂಟ್ ಬಿಚ್ಚಿ ಹೋಯ್ತಾ? ಕೆಳಗೆ ಬಿತ್ತಾ ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ. ನಟಿಯ ಡ್ರೆಸ್ನಿಂದಾಗಿ ಇನ್ನಿಲ್ಲದಂತೆ ಟ್ರೋಲ್ ಮಾಡಲಾಗುತ್ತಿದೆ.
ಅಂದಹಾಗೆ, ಅಹಾನ್ ಮತ್ತು ತಾನಿಯಾ ಶ್ರಾಫ್ ಬಾಲ್ಯದ ಸ್ನೇಹಿತರು ಹಾಗೂ ಪ್ರೇಮಿಗಳೂ ಹೌದು. ಅವರು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಹನ್ನೊಂದು ವರ್ಷಗಳ ಸಂಬಂಧವನ್ನು ಕೊನೆಗೆ ಅಂತ್ಯಗೊಳಿಸಿದರು ಎನ್ನಲಾಗಿದೆ. ಇದಕ್ಕೆ ಕಾರಣ, ಅಹಾನ್ ಮತ್ತು ತಾನಿಯಾ ಸೋಷಿಯಲ್ ಮಿಡಿಯಾದಲ್ಲಿ ಇಬ್ಬರೂ ಫೋಟೋಸ್ ಶೇರ್ ಮಾಡುತ್ತಿದ್ದರು. ಆದರೆ ಕೆಲವು ಸಮಯದಿಂದ ಸೋಷಿಯಲ್ ಮೀಡಿಯಾದಲ್ಲಿ ಏನೂ ಹಾಕಿರಲಿಲ್ಲ. ಅವರ ಬ್ರೇಕಪ್ಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ. ಇನ್ನು, ಅಹಾನ್ ಅವರು ನಟ ಸುನೀಲ್ ಶೆಟ್ಟಿ ಮತ್ತು ಮನ ಶೆಟ್ಟಿ ಪುತ್ರ. ಇವರ ಫೋಟೋಗಳು ಸಕತ್ ಸದ್ದು ಮಾಡಿದ್ದು, ಅಥಿಯಾ-ರಾಹುಲ್ ಮದುವೆ ಸಮಯದಲ್ಲಿ.
ನಟ ಬಾಲಚಂದ್ರ ಗುಂಪು ರತಿಕ್ರೀಡೆ ನಡೆಸ್ತಿದ್ರು, ಆ ಕೋಣೆಯಲ್ಲಿ ನನ್ನನ್ನು... ಮೀನು ಭಯಂಕರ ಆರೋಪ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.