ಪ್ರೆಗ್ನೆಂಟೇ ಆಗ್ಲಿಲ್ಲ, ಮದ್ವೆ ಯಾಕೆ ಅಂದಿದ್ದ ಡಂಕಿ ಬೆಡಗಿ ತಾಪ್ಸಿ ಮದ್ವೆ ನಿಜನಾ? ನಟಿ ಹೇಳಿದ್ದೇನು?

Published : Mar 01, 2024, 09:03 PM ISTUpdated : Mar 01, 2024, 09:04 PM IST
ಪ್ರೆಗ್ನೆಂಟೇ ಆಗ್ಲಿಲ್ಲ, ಮದ್ವೆ ಯಾಕೆ ಅಂದಿದ್ದ ಡಂಕಿ ಬೆಡಗಿ ತಾಪ್ಸಿ ಮದ್ವೆ ನಿಜನಾ? ನಟಿ ಹೇಳಿದ್ದೇನು?

ಸಾರಾಂಶ

ಪ್ರೆಗ್ನೆಂಟೇ ಆಗ್ಲಿಲ್ಲ, ಮದ್ವೆ ಯಾಕೆ ಅಂದಿದ್ದ ಡಂಕಿ ಬೆಡಗಿ ತಾಪ್ಸಿ ಪನ್ನು ಮದ್ವೆ ನಿಜನಾ? ನಟಿ ಹೇಳಿದ್ದೇನು?   

ಸೌತ್‌ನ ಬ್ಯುಸಿ ನಟಿ ತಾಪ್ಸಿ ಪನ್ನು ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ವಿವಾದಗಳು ಮತ್ತು ಕಮೆಂಟ್‌ಗಳಿಂದಲೇ ಸದಾ ಸುದ್ದಿಯಲ್ಲಿ ಇರುತ್ತಾರೆ. ತಾಪ್ಸಿ (Taapsee Pannu) ಇದೀಗ ನಟನೆಯಿಂದ ಕೊಂಚ ಬ್ರೇಕ್ ಪಡೆದು ಹಾಲಿಡೇ ಎಂಜಾಯ್ ಮಾಡೋ ಮೂಡ್‌ನಲ್ಲಿರೋ ನಟಿ ಕೈತುಂಬಾ ಸಿನಿಮಾಗಳಿವೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡುತ್ತಿರುವ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಈ ಚಿತ್ರ ಸೂಪರ್‌ ಹಿಟ್‌ ಆಗಿದೆ.  ಇದಲ್ಲದೇ, ‘ಏಲಿಯನ್​’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್​ ಆಯಿ ಹಸೀನ್​ ದಿಲ್​ರುಬಾ’ ಮುಂತಾದ ಸಿನಿಮಾಗಳಲ್ಲಿ ತಾಪ್ಸಿ ಪನ್ನುಗೆ ಅವಕಾಶ ಸಿಕ್ಕಿದೆ.  ಇದಾಗಲೇ ನಟಿ, ಸಾಕಷ್ಟು ಹಿಟ್ ಚಿತ್ರಗಳನ್ನ ನೀಡಿದ್ದಾರೆ. . 2021-2022ರಲ್ಲಿ ಸಾಲು ಸಾಲಾಗಿ ಆರು ಸಿನಿಮಾಗಳನ್ನ ಹಿಟ್ ನೀಡಿದ್ದರು. ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ನಟಿ, ತಾಪ್ಸಿ ಪನ್ನು ಈಗ ಕೆಲ ಕಾಲ ದೇಶ-ವಿದೇಶಗಳ ಟೂ‌ರ್‌ ಮೂಡಿನಲ್ಲಿದ್ದಾರೆ. ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ  ಆಕ್ಟೀವ್ ಆಗಿದ್ದಾರೆ.

ಸದ್ಯ ನಟಿ 10 ವರ್ಷಗಳ ಡೇಟಿಂಗ್‌ ಬಳಿಕ, ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ (Mathias Boe) ಅವರ ಜೊತೆ ಮಾರ್ಚ್‌‌ನಲ್ಲಿ ಮದುವೆಯಾಗುತ್ತಿದ್ದಾರೆ ಎಂದು ಎರಡು ದಿನಗಳಿಂದ ಸುದ್ದಿ ಓಡಾಡುತ್ತಿದೆ. ಈ ಸಂದರ್ಭದಲ್ಲಿ ಅವರು ಈ ಹಿಂದೆ ಹೇಳಿದ್ದ ಮಾತೊಂದು ಇದೀಗ ವೈರಲ್‌ ಆಗುತ್ತಿದೆ.  ಸಾಮಾಜಿಕ ಜಾಲತಾಣದಲ್ಲಿ (Social Media) ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ತಾಪ್ಸಿ ಪನ್ನು, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಆಗಾಗ್ಗೆ ಉತ್ತರ ಕೊಡುವುದು ಉಂಟು. ಕೆಲವೊಮ್ಮೆ ಸೀರಿಯಸ್‌ ಆಗಿ, ಕೆಲವೊಮ್ಮೆ ಫನ್ನಿ ಆಗಿ ಉತ್ತರಿಸುತ್ತಾರೆ.  ಅಭಿಮಾನಿಯೊಬ್ಬರು  ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದರು.  ಮಥಾಯಿಸ್ ಬೋ ಜೊತೆ ಸಕತ್‌ ಟೂರ್‌ ಮಾಡುತ್ತ ಲೈಫ್‌ ಎಂಜಾಯ್‌ ಮಾಡುತ್ತಿರುವುದನ್ನು ನೋಡಿದ್ದ ಅಭಿಮಾನಿ, ಮದ್ವೆಯಾವಾಗ ಕೇಳಿದ್ದರು.

ಸಪ್ತಸಾಗರದಾಚೆ ಎಲ್ಲೋ ಚಿತ್ರದ ಎ ಮತ್ತು ಬಿ ಸೈಡ್‌ ಒಂದೇ ನಿಮಿಷದಲ್ಲಿ ನೋಡಿ! ಇಲ್ಲಿದೆ ನೋಡಿ ವಿಕ್ಕಿಪಿಡಿಯಾ ವಿಡಿಯೋ

ಏಕೆಂದ್ರೆ,  ತಾವಿಬ್ಬರೂ ಟ್ರಿಪ್‌ ಮೂಡ್‌ನಲ್ಲಿರೋ ಹಲವು ಫೋಟೋಗಳನ್ನು ತಾಪ್ಸಿ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.  ಫಾರಿನ್ ಟ್ರಿಪ್ ಮಾಡುತ್ತಾರೆ. ಆ ಫೋಟೋಗಳನ್ನು ಕೂಡ ಅವರು ಹಂಚಿಕೊಳ್ಳುತ್ತಾರೆ. ಅದಕ್ಕೆ ಮದ್ವೆ ಪ್ರಶ್ನೆ ಕೇಳಿದ್ದಾಗ ನಟಿ,  ನನ್ನ ಮದುವೆ ಬಗ್ಗೆ ಸದಾ ವಿಚಾರಿಸುತ್ತಿರುತ್ತೀರಿ. ಇಲ್ಲಿ ಕೇಳಿ.  ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕೆ ಆಗುವುದೂ ಇಲ್ಲ. ಇನ್ಯಾಕೆ ಮದ್ವೆ,  ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ ಎಂದಿದ್ದರು.  

ಇದೀಗ ಅವರ ಮದ್ವೆ ಸುದ್ದಿ ವೈರಲ್‌ ಆಗುತ್ತಿದ್ದರೂ ಮದುವೆಯ ಬಗ್ಗೆ ಇನ್ನೂ ನಟಿ ಸ್ಪಷ್ಟವಾಗಿ ಬಾಯಿ ಬಿಟ್ಟಿಲ್ಲ. ಆದರೆ ನಟಿ ಯಾವುದೇ ಬಾಲಿವುಡ್‌ ತಾರೆಯರನ್ನು ಮದುವೆಗೆ ಕರೆಯುತ್ತಿಲ್ಲ ಎನ್ನಲಾಗಿದೆ. ತಮ್ಮ ಮದುವೆ ನಡೆಯುತ್ತಿರುವುದು ಹೌದೋ, ಅಲ್ಲವೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟ ಉತ್ತರ ನಟಿಯಿಂದ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇವರ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ.

ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್​ ಆಗ್ತಿದ್ದಂತೆಯೇ ಮಗುವಿನ ಬಿಗ್​ ಅಪ್​ಡೇಟ್​ ನೀಡಿದ ರಣವೀರ್​ ಸಿಂಗ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌