ಇವತ್ತು ಕುಡಿದಿದ್ದೀನಿ, ಬಿಟ್ಟುಬಿಡಿ ಎಂದು ಮಾಡೆಲ್ ಉರ್ಫಿ ಜಾವೇದ್ ಮನವಿ ಇದೀಗ ವೈರಲ್ ಆಗಿದೆ. ಉರ್ಫಿ ಜಾವೇದ್ ಬ್ಯಾಕ್‌ಲೆಸ್ ಫೋಟೋ ತೆಗೆಯಲು ಮುಂದಾದ ಪಾಪರಾಜಿಗಳ ಪ್ರಶ್ನೆ ಹಾಗೂ ಉರ್ಫಿ ಉತ್ತರ ವಿಡಿಯೋ ಇಲ್ಲಿದೆ.
ಮುಂಬೈ(ಜೂ.30) ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಮನೆಯಿಂದರೆ ಹೊರಬಂದರೆ ಸಾಕು ತಮ್ಮ ಫ್ಯಾಶನ್ ಸೆನ್ಸ್ ಮೂಲಕ ಸುದ್ದಿಯಾಗುತ್ತಾರೆ. ಬೋಲ್ಡ್ ಫ್ಯಾಶನ್ ಡ್ರೆಸ್ ಮೂಲಕವೇ ಮನೆ ಮಾತಾಗಿರುವ ಉರ್ಫಿ, ವೀಕೆಂಡ್ ಪಾರ್ಟಿಗಳಲ್ಲೂ ಮುಂದಿರುತ್ತಾರೆ. ಇದೀಗ ಮುಂಬೈನ ಪಬ್‌ನಲ್ಲಿ ಪಾರ್ಟಿ ಮುಗಿಸಿ ಹೊರಬಂದ ಉರ್ಫಿಯ ಬ್ಯಾಕ್‌ಲೆಸ್ ಫೋಟೋಗಾಗಿ ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಇವತ್ತು ನಾನು ತುಂಬಾ ಕುಡಿದಿದ್ದೇನೆ. ಇಲ್ಲಿಂದ ತೆರಳಲು ಅವಕಾಶ ಕೊಡಿ ಎಂದು ಉರ್ಫಿ ಮನವಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಉರ್ಫಿ ಜಾವೇದ್ ಬ್ಲಾಕ್ ಡ್ರೆಸ್‌ನಲ್ಲಿ ಕಂಗೊಳಿಸಿದ್ದರೆ. ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಆಪ್ತರೊಂದಿಗೆ ಮುಂಬೈನ ಖ್ಯಾತ ಪಬ್‌ಗೆ ತೆರಳಿ ವೀಕೆಂಡ್ ಪಾರ್ಟಿ ಮಾಡಿದ್ದಾರೆ. ಉರ್ಫಿ ಜಾವೇದ್ ಪಾರ್ಟಿ ಮಾಡುತ್ತಿರುವ ಮಾಹಿತಿ ಪಾಪರಾಜಿಗಳಿಗೆ ಸಿಕ್ಕಿದೆ. ಒಂದೇ ಸಮನೆ ಪಾಪರಾಜಿಗಳು ಪಬ್ ಹೊರಗಡೆ ಕಾಯುತ್ತಾ ನಿಂತಿದ್ದಾರೆ. ಉರ್ಫಿ ಆಪ್ತರ ಜೊತೆ ಹೊರಬರುತ್ತಿದ್ದಂತೆ ಫೋಟೋಗೆ ಪೋಸ್ ನೀಡಲು ಸೂಚಿಸಿದ್ದಾರೆ.
ಕಣ್ಣು ಕದ್ದು ನೋಡ್ತಿದೆ-ಮನಸ್ಸು ಮುದ್ದು ಮಾಡ್ತಿದೆ,ಸೀರೆಯಲ್ಲಿ ಟೆಂಪರೇಚರ್ ಹೆಚ್ಚಿಸಿದ ಉರ್ಫಿ!
ಒಬ್ಬರನ್ನೊಬ್ಬರು ತಳ್ಳುತ್ತಾ ಉರ್ಫಿಯಾ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಬ್ಯಾಕ್‌ಲೆಸ್ ಗೌನ್ ಹಾಕಿಕೊಂಡಿದ್ದೀರಿ. ಒಂದು ಬಾರಿ ತಿರುಗಿ ಫೋಸ್ ನೀಡಿ ಎಂದು ಸೂಚಿಸಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಉರ್ಫಿ ಜಾವೇದ್, ಇವತ್ತು ಬೇಡ, ಕಾರಣ ಇಂದು ನಾನು ತುಂಬಾ ಕುಡಿದಿದ್ದೇನೆ. ಪಾರ್ಟಿ ಮಾಡಿ ಹೊರಬರುತ್ತಿದ್ದೇನೆ. ಹೀಗಾಗಿ ಇವತ್ತು ಬೇಡ, ಇಲ್ಲಿಂದ ಹೊರಡಲು ಅವಕಾಶ ಮಾಡಿಕೊಡಿ ಎಂದು ಉರ್ಫಿ ಜಾವೇದ್ ಹೇಳಿದ್ದಾರೆ.
ಉರ್ಫಿ ಜಾವೇದ್ ಈ ಮಾತು ಹೇಳುತ್ತಿದ್ದಂತೆ ಸರಿ ಹೊರಡಿ, ಹೊರಡುವಾಗ ಒಂದು ಬಾರಿ ತಿರುಗಿ ಎಂದು ಮತ್ತೆ ಸೂಚಿಸಿದ್ದಾರೆ. ಹೀಗಾಗಿ ಉರ್ಫಿ ಕೊನೆಗೆ ತಮ್ಮ ಬ್ಯಾಕ್‌ಲೆಸ್ ಡ್ರೆಸ್ ಸೌಂದರ್ಯ ತೋರಿಸಿ ಹೊರಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಬಹುತೇಕ ಸೆಲೆಬ್ರೆಟಿಗಳು ಪಬ್ ಪಾರ್ಟಿ ಬಳಿಕ ಪಾಪರಾಜಿಗಳ ಕಣ್ಣಿಗೆ ಬೀಳದಂತೆ ತೆರಳಲು ಯತ್ನಿಸುತ್ತಾರೆ. ಈ ವೇಳೆ ಅಪ್ಪಿ ತಪ್ಪಿ ಕಣ್ಣಿಗೆ ಬಿದ್ದರೂ ವೇಗವಾಗಿ ತೆರಳಿ ಕಾರು ಸೇರಿಕೊಳ್ಳುತ್ತಾರೆ. ಆದರೆ ಉರ್ಫಿ ಹಾಗಲ್ಲ, ಪಾಪರಾಜಿಗಳ ಮುಂದೆ ಬಂದು ನಾನು ಇವತ್ತು ಕುಡಿದಿದ್ದೇನೆ ಎಂದಿದ್ದಾರೆ. ಉರ್ಫಿ ಈ ನಡೆದೆ ಅಭಿಮಾನಿಗಳು ಶಹಬ್ಬಾಷ್ ಎಂದಿದ್ದಾರೆ.
ಅರ್ಧಂಬರ್ಧ ಬಿಕಿನಿ ತೊಟ್ಟು ತಿಳಿ ನೀಲ ಕನಸು ಹರಿಬಿಟ್ಟ ಉರ್ಫಿ, ಕಚಗುಳಿಯಿಟ್ಟಿತಾ ಮನಸ್ಸು?
ಉರ್ಫಿ ಜಾವೇದ್ ಪ್ರತಿ ಬಾರಿ ಚಿತ್ರ ವಿಚಿತ್ರ ಫ್ಯಾಶನ್ ಮೂಲಕ ಗಮನಸೆಳೆದಿದ್ದಾರೆ ಅಕ್ವೇರಿಯಂ ಬ್ರಾ, ಫ್ಯಾನ್ ಬ್ರಾ ಸೇರಿದಂತೆ ಒಂದಕ್ಕಿಂತ ಮತ್ತೊಂದು ಮಿಗಿಲು. ಆರಂಭಿಕ ಹಂತದಲ್ಲಿ ಉರ್ಫಿ ಫ್ಯಾಶನ್‌ಗೆ ಮೂಗು ಮುರಿದವರೇ ಹೆಚ್ಚು. ಆದರೆ ಇದೀಗ ಉರ್ಫಿ ಫ್ಯಾಶನ್ ಸೆನ್ಸ್ ಕುರಿತು ಹಲುವ ಬಾಲಿವುಡ್ ನಟ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.