ಹಾಟ್ ಅವತಾರದ ಮೂಲಕ ಸದಾ ಸಂಚಲನ ಸೃಷ್ಟಿಸುವ ಪೂನಂ ಪಾಂಡೆ ಇದೀಗ ಕಾಫಿ ಡೇಟ್ ಆಫರ್ ನೀಡಿದ್ದಾರೆ. ಆಫರ್ ಇರೋದು ಫಿಲ್ಟರ್ ಕಾಫಿನಾ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಮುಂಬೈ(ಜೂ.30) ಬಾಲಿವುಡ್ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ತಮ್ಮ ಹಾಟ್ ಅಂಡ್ ಬೋಲ್ಡ್ ಲುಕ್ ಮೂಲಕ ಈಗಾಗಲೇ ಭಾರಿ ಸದ್ದು ಮಾಡಿದ್ದಾರೆ. ಪೂನಂ ಪಾಂಡೆ ಹೊಸ ಅವತಾರಗಳಿಗೆ ಪರ ವಿರೋಧಗಳಿವೆ. ಆದರೆ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಪೂನಂ ಅಪ್‌ಡೇಟ್‌ಗಾಗಿ ಕಾಯುತ್ತಿರುತ್ತಾರೆ. ಹೀಗೆ ಕಾಯುತ್ತಿರುವ ಅಭಿಮಾನಿಗಳಿಗೆ ಪೂನಂ ಪಾಂಡೆ ಇದೀಗ ಭರ್ಜರಿ ಆಫರ್ ನೀಡಿದ್ದಾರೆ. ಪೂನಂ ಪಾಂಡೆ ಜೊತೆ ಕಾಫಿ ಡೇಟ್‌ಗೆ ಆಫರ್ ನೀಡಿದ್ದಾರೆ. ಕಾಫಿ ಹೀರುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಪೂನಂ, ಕಾಫಿ ಡೇಟ್? ಎಂದು ಪ್ರಶ್ನಿಸಿದ್ದಾರೆ.
ಟಿ20 ವಿಶ್ವಕಪ್ 2024 ಫೈನಲ್ ಪಂದ್ಯಕ್ಕೂ ಮುನ್ನ ಪೂನಂ ಪಾಂಡೆ ಈ ಆಫರ್ ನೀಡಿದ್ದರು. ಭಾರತ ಹಾಗೂ ದಕ್ಷಿಣಾ ಆಫ್ರಿಕಾ ಪಂದ್ಯ ಆರಂಭಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೂನಂ ಸಂಚಲನ ಸೃಷ್ಟಿಸಿದ್ದರು. ಕಾರಣ ವಿಶ್ವಕಪ್ ಫೈನಲ್ ಪಂದ್ಯ, ಐಸಿಸಿ ಫೈನಲ್ ಪಂದ್ಯಗಳಿಗೂ ಮೊದಲು ಪೂನಂ ಪಾಂಡೆ ಹಲವು ಬಾರಿ ಬೆತ್ತಲಾಗುವ ಆಫರ್ ನೀಡಿದ್ದರು. ಹೀಗಾಗಿ ಪೂನಂ ಪಾಂಡೆ ಈ ರೀತಿಯ ಆಫರ್ ನೀಡುತ್ತಾರೋ ಅನ್ನೋ ಕುತೂಹಲ ಮನೆ ಮಾಡಿತ್ತು. ಆದರೆ ಈ ಬಾರಿ ಫೈನಲ್ ಪಂದ್ಯಕ್ಕೂ ಮುನ್ನ ಪೂನಂ, ಕಾಫಿ ಡೇಟ್ ಆಫರ್ ನೀಡಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದರು.
ಕೇಕ್ ವಿಥ್ ಐಸ್‌ಕ್ರೀಮ್, ಕುಕಿಂಗ್ ಟಿಪ್ಸ್ ನೀಡಿದ ಪೂನಂ ಪಾಂಡೆ ಏಪ್ರನ್ ಮೇಲೆ ಎಲ್ಲ ಕಣ್ಣು!
ಪೂನಂ ಪಾಂಡೆ ಕಾಫಿ ಡೇಟ್ ಆಫರ್ ಪೋಸ್ಟ್ ಹಾಕಿದ ಬೆನ್ನಲ್ಲೇ ಹಲವರು ಪ್ರತಿಕ್ರಿಯಿಸಿದ್ದಾರೆ. ಯಾವ ಫಿಲ್ಟರ್ ಕಾಫಿ, ಪಿಲ್ಟರ್ ಲೆಸ್ ಆದರೆ ನಾವು ರೆಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಟ್ ಕಾಫಿ ನನಗಿಷ್ಟ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಪೂನಂ ಪಾಂಡೆ ಈ ಪೋಸ್ಟ್ 197.3K ವೀಕ್ಷಣೆ ಪಡೆದಿದೆ. ಜೊತೆಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.
Coffee date? pic.twitter.com/koLlOiJurd
— Poonam Pandey (@iPoonampandey)
ಪೂನಂ ಪಾಂಡೆ ಭಾರತ ಸೌತ್ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಈ ಪೋಸ್ಟ್ ಹಾಕಿದ್ದ ಪೂನಂ ಪಾಂಡೆ ಬಳಿಕ ಪಂದ್ಯ ವೀಕ್ಷಿಸಿದ್ದಾರೆ. ಇಷ್ಟೇ ಅಲ್ಲ ಫೈನಲ್ ಪಂದ್ಯದ ಕ್ಷಣಕ್ಷಣದ ಅಪ್‌ಡೇಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಪಂದ್ಯ ಗೆಲುವಿನ ಬಳಿಕ 2011ರ ವಿಶ್ವಕಪ್ ಫೈನಲ್ ನೆನಪಿಸಿತ್ತು ಎಂದು ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಪೂನಂ ಪಾಂಡೆ ತಮ್ಮ ಬೋಲ್ಡ್ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೆ ಭಾರಿ ಸಂಚಲನ ಸೃಷ್ಟಿಸುತ್ತಾರೆ. ಇತ್ತೀಚೆಗೆ ಪೂನಂ ಫುಡ್ ರೆಸಿಪಿ ಕುರಿತು ಕೆಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಮಾವಿನ ಹಣ್ಣಿನ ರೆಸಿಪಿ, ಐಸ್ ಕ್ರೀಮ್ ಕೇಕ್ ಸೇರಿದಂತೆ ಕೆಲ ಕುಕಿಂಗ್ ಟಿಪ್ಸ್ ನೀಡಿದ್ದರು.
ಮತ್ತೆ ಬೆತ್ತಲಾದ ಪೂನಂ ಪಾಂಡೆ, ಝಲಕ್ ಹರಿಬಿಟ್ಟು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ನಟಿ!