ಅರ್ಧಂಬರ್ಧ ಬಿಕಿನಿ ತೊಟ್ಟು ತಿಳಿ ನೀಲ ಕನಸು ಹರಿಬಿಟ್ಟ ಉರ್ಫಿ, ಕಚಗುಳಿಯಿಟ್ಟಿತಾ ಮನಸ್ಸು?
ಫ್ಯಾಶನ್ ಜಗತ್ತಿನಲ್ಲಿ ಉರ್ಫಿ ಜಾವೇದ್ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಪ್ರತಿ ಭಾರಿ ಉರ್ಫಿ ಚಿತ್ರ ವಿಚಿತ್ರ ಫ್ಯಾಶನ್ ಮೂಲಕ ವೈರಲ್ ಆಗಿದ್ದಾರೆ. ಇದೀಗ ಸ್ವಿಮ್ ಸ್ಯೂಟ್ ಅಲ್ಲ, ಮೊನೊಕಿನಿಯೂ ಅಲ್ಲ, ಇತ್ತ ಬಿಕಿನಿಯೂ ಅಲ್ಲ, ಇದರ ನಡುವಿನ ಹಾಟ್ ಡ್ರೆಸ್ನಲ್ಲಿ ಉರ್ಫಿ ಕಾಣಿಸಿಕೊಂಡಿದ್ದಾರೆ.
ಹೊಸ ಹೊಸ ಫ್ಯಾಶನ್, ಊಹೆಗೂ ನಿಲಕದ ಐಡಿಯಾಗಳ ಮೂಲಕ ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಈಗಾಗಲೇ ಜನಪ್ರಿಯರಾಗಿದ್ದಾರೆ. ಇದೀಗ ಉರ್ಫಿ ಜಾವೇದ್ ಹೊಸ ಅವತಾರ ಎಲ್ಲರ ಹುಬ್ಬೇರಿಸಿದೆ.
ನೀಲಿ ಬಣ್ಣದ ಸ್ವಿಮ್ ಮೊನೊಕಿನಿ ರೀತಿಯ ಡ್ರೆಸ್ನಲ್ಲಿ ಉರ್ಫಿ ಪ್ರತ್ಯಕ್ಷರಾಗಿದ್ದಾರೆ. ಸ್ವಿಮ್ಮಿಂಗ್ ಪೂಲ್ನಲ್ಲಿ ನಿಂತು ಫೋಸ್ ಕೊಟ್ಟಿರುವ ಉರ್ಫಿಯ ಫೋಟೋಗಳು ವೈರಲ್ ಆಗಿವೆ.
ಉರ್ಫಿಯ ಹೊಸ ಅವತಾರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ನೀಲ ನೀರಿನಲ್ಲಿ ನೀಲ ಬಿಕಿನಿಯಲ್ಲಿ ಪೋಲಿ ಕನಸು ಹರಿಬಿಟ್ಟರಾ ಉರ್ಫಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಕೇವಲ ಫೋಟೋ ಮಾತ್ರವಲ್ಲ ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾರೆ. ಫ್ಯಾಶನ್ ಜಗತ್ತನ್ನು ಉರ್ಫಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿರುವ ನಟಿ ಮತ್ತೊಬ್ಬರಿಲ್ಲ ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಕಿನಿ, ಟಾಪ್ಲೆಸ್, ಬ್ಯಾಕ್ ಲೆಸ್, ಅಕ್ವೇರಿಯಂ ಬ್ರಾ ಸೇರಿದಂತೆ ವಿಚಿತ್ರ ಫ್ಯಾಶನ್ ಡ್ರೆಸ್ ಮೂಲಕ ಉರ್ಫಿ ಜಾವೇದ್ ಈಗಾಗಲೇ ಭಾರಿ ಜನಪ್ರಿಯರಾಗಿದ್ದಾರೆ. ಉರ್ಫಿಯನ್ನು ತೆಗಳಿದ್ದ ಹಲವು ನಟ ನಟಿಯರು ಇದೀಗ ಫಾಲೋ ಮಾಡಲು ಆರಂಭಿಸಿದ್ದಾರೆ.
Photo Courtesy: Instagram
ಇತ್ತೀಚೆಗೆ ಉರ್ಫಿ ಜಾವೇದ್ ಫ್ಯಾಶನ್ನಿಂದ ಸ್ಪೂರ್ತಿ ಪಡೆದಿರುವುದಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಹೇಳಿದ್ದರು. ಇದರೊಂದಿಗೆ ಉರ್ಫಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಂಚಲನ ಸೃಷ್ಟಿಸುತ್ತಿದ್ದ ಉರ್ಫಿ ಜಾವೇದ್ 2021ರಲ್ಲಿ ಸೋಪ್ ಒಪೆರಾ ಹಾಗೂ ರೋಸ್ ಸೀರಿಸ್ ಮೂಲಕ ಉರ್ಫಿ ಜನಪ್ರಿಯತೆ ಹೆಚ್ಚಿತ್ತು. ಬಿಗ್ಬಾಸ್ ಒಟಿಟಿ ಆವೃತ್ತಿಯಲ್ಲೂ ಉರ್ಫಿ ಕಾಣಿಸಿಕೊಂಡಿದ್ದರು.
2016ರಲ್ಲಿ ಬಡೇ ಬಯ್ಯಾ ಕಿ ದುಲ್ಹನಿಯಾ ಹಿಂದಿ ಸೀರಿಯಲ್ ಮೂಲಕ ಸ್ಮಾಲ್ ಸ್ಕ್ರೀನ್ಗೆ ಕಾಲಿಟ್ಟ ಉರ್ಫಿ, ನಟನೆಗಿಂತ ತಮ್ಮ ಫ್ಯಾಶನ್ ಮೂಲಕವೇ ಗಮನಸೆಳೆದಿದ್ದಾರೆ.