ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ ಅಜಯ್ ದೇವಗನ್; ಜಿಗಿದ 'ದೃಶ್ಯಂ 2' ಕಲೆಕ್ಷನ್

Published : Nov 20, 2022, 12:07 PM IST
ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ ಅಜಯ್ ದೇವಗನ್; ಜಿಗಿದ 'ದೃಶ್ಯಂ 2' ಕಲೆಕ್ಷನ್

ಸಾರಾಂಶ

ಅಜಯ್ ದೇವಗನ್ ನಟನೆಯ ದೃಶ್ಯಂ-2 ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಸೊರಗಿದ್ದ ಬಾಲಿವುಡ್‌ಗೆ ದೃಶ್ಯಂ-2 ಕಲೆಕ್ಷನ್ ಕೊಂಚ ಜೀವಬಂದಂತೆ ಆಗಿದೆ. 

ಬಾಲಿವುಡ್‌ ಸರಣಿ ಸೋಲಿನ ಸುಳಿಯಲ್ಲಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ನೆಲಕಚ್ಚುತ್ತಿವೆ. ಸ್ಟಾರ್ ನಟನ ಸಿನಿಮಾಗಳು, ಬಿಗ್ ಬಜೆಟ್ ಸಿನಿಮಾಗಳು ಸಹ ಅಭಿಮಾನಿಗಳ ಹೃದಯ ಗೆಲ್ಲಲು ವಿಫಲವಾಗಿವೆ. ಬಾಕ್ಸ್ ಆಫೀಸ್‌ನಲ್ಲೂ ಹೀನಾಯ ಸೋಲು ಕಂಡಿವೆ. ಸೌತ್ ಸಿನಿಮಾಗಳು ರಾರಾಜಿಸುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೇ ಭರ್ಜರಿ ಕಮಾಯಿ ಮಾಡುತ್ತಿವೆ. ಅಲ್ಲಿನ ಪ್ರೇಕ್ಷಕರ ಹೃದಯ ಗೆಲ್ಲುತ್ತಿವೆ. ಸೌತ್ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ಮಂದಿ ಮಂಕಾಗಿದ್ದರು. ಆದರೀಗ ಅಜಯ್ ದೇವಗನ್ ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ್ದಾರೆ. ಅಜಯ್ ದೇವಗನ್ ನಟನೆಯ  ದೃಶ್ಯಂ-2 ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇತ್ತೀಚಿಗೆ ರಿಲೀಸ್ ಆದ ಹಿಂದಿ ಸಿನಿಮಾಗಳಲ್ಲಿಯೇ ದೃಶ್ಯ-2 ಕಲೆಕ್ಷನ್ ಹೆಚ್ಚಾಗಿರುವುದು ಬಾಲಿವುಡ್ ಮಂದಿಗೆ ಕೊಂಚ ಸಮಾಧಾನ ತಂದಿದೆ. 

ಅಂದಹಾಗೆ ದೃಶ್ಯಂ-2 ಕೂಡ ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾದ ರಿಮೇಕ್. ಮಲಯಾಳಂನ ದೃಶ್ಯಂ-2 ಸಿನಿಮಾವನ್ನು ಹಿಂದಿಯಲ್ಲಿ ಅದೇ ಹೆಸರಿನಲ್ಲಿ ರಿಮೇಕ್ ಮಾಡಿ ರಿಲೀಸ್ ಮಾಡಲಾಗಿದೆ. ಮೋಹನ್ ಲಾಲ್ ನಾಯಕನಾಗಿ ಮಿಂಚಿದ್ದರು. ಮೋಹನ್ ಲಾಲ್ ಪಾತ್ರವನ್ನು ಹಿಂದಿಯಲ್ಲಿ ಅಜಯ್ ದೇವಗನ್ ಮಾಡಿದ್ದಾರೆ. 2015ರಲ್ಲಿ ಮೊದಲ ಭಾಗ ರಿಲೀಸ್ ಆಗಿತ್ತು. ಮೊದಲ ಭಾಗದಲ್ಲೂ ಅಜಯ್ ದೇವಗನ್ ಮಿಂಚಿದ್ದರು. ಇದೀಗ ಬರೋಬ್ಬರಿ 7 ವರ್ಷಗಳ ಬಳಿಕ ದೃಶ್ಯಂ-2  ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ ಅಜಯ್ ದೇವಗನ್.  

ದೃಶ್ಯಂ 2ಗೂ ಮೊದಲು ಈ ಸೌತ್‌ ಸೂಪರ್‌ ಹಿಟ್‌ ಸಿನಿಮಾ ರಿಮೇಕ್‌ಗಳಲ್ಲಿ ನಟಿಸಿದ್ದಾರೆ ಅಜ ಯ್ ದೇವಗನ್

ಅಂದಹಾಗೆ ದೃಶ್ಯಂ-2ನಲ್ಲಿ ಅಜಯ್ ದೇವಗನ್ ಜೊತೆ ನಟಿ ಶ್ರೀಯಾ ಶರಣ್, ತಬು, ಅಶಿತಾ ದತ್ತಾ, ಮೃಮಾಲ್ ಜಾದವ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದರು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಿಮೇಕ್ ಸಿನಿಮಾ ಎನ್ನುವ ನಿರಾಸೆ ಕೂಡ ಇತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ದೃಶ್ಯಂ-2 ರಿಲೀಸ್ ಆಗಿ 2ದಿನಗಳಲ್ಲಿ ಬರೋಬ್ಬರಿ 36.97 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಮ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ. ದೃಶ್ಯಂ-2 ಸಿನಿಮಾ ನವೆಂಬರ್ 18ರಂದು ರಿಲೀಸ್ ಆಗಿದೆ. ಮೊದಲ ದಿನ ಅಜಯ್ ದೇವಗನ್ ಸಿನಿಮಾ 15.38 ಕೋಟಿ ರೂಪಾಯಿ ಬಾಚಿಕೊಂಡಿತ್ತು. 2ನೇ ದಿನ ಕಲೆಕ್ಷನ್ ದುಪ್ಪಟ್ಟಾಗಿದ್ದು 21.59 ಕೋಟಿ ರೂಪಾಯಿ ಬಾಚಿಕೊಂಡಿದೆ. ವೀಕೆಂಡ್‌ಗೆ ಕಲೆಕ್ಷನ್ ದುಪ್ಪಟ್ಟಾಗಿರುವುದು ಬಾಲಿವುಡ್ ಮಂದಿಗೆ ಹಾಗು ಸಿನಿಮಾತಂಡಕ್ಕೆ ಸಂತಸ ತಂದಿದೆ. 

ಅಜಯ್ ದೇವಗನ್ ಕೆರಿಯರ್‌ನ ಡಿಸಾಸ್ಟರ್ ಚಿತ್ರಗಳು: ಯಾವಾಗ ಬಿಡುಗಡೆಯಾಯಿತು ಎಂಬ ಸುಳಿವೂ ಇಲ್ಲ

ಅಂದಹಾಗೆ ದೃಶ್ಯಂ-2 ಕಲೆಕ್ಷನ್ ಇದೇ ರೀತಿ ಮುಂದುವರೆದರೆ ಮೊದಲ ವೀಕೆಂಡ್ 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಮೂಲಕ ಈ ವರ್ಷ ಬಂದ ಸಿನಿಮಾಗಳಲ್ಲಿ ಮೊದಲ ವಾರದಲ್ಲೇ 50 ಕೋಟಿ ಕ್ಲಬ್ ಸೇರಿದ ಬೆರಳೆಣಿಕೆ ಸಿನಿಮಾಗಳಲ್ಲಿ ದೃಶ್ಯಂ-2 ಕೂಡ ಒಂದಾಗಲಿದೆ. ಇದು ಬಡವಾಗಿದ್ದ ಬಾಲಿವುಡ್‌ಗೆ ಚೈತನ್ಯ ನೀಡಿದಂತೆ ಆಗಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?