ಸಾಲ ಪಡೆದು ಮಗನನ್ನು ವಿದೇಶಕ್ಕೆ ಕಳುಹಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡ ನಟಿ ನೀನಾ ಗುಪ್ತಾ; ಇದು ವಧ ಕತೆ

By Vaishnavi ChandrashekarFirst Published Dec 13, 2022, 10:23 AM IST
Highlights

ಜನರು ಸಿನಿಮಾ ನೋಡ್ಬೇಕು ನಿರ್ಮಾಪಕು ಹಣ ಮಾಡ್ಬೇಕು ಆಗ ಮಾತ್ರ ಅದು ಒಳ್ಳೆಯ ಸಿನಿಮಾ. ವಧ ಬಗ್ಗೆ ನೀನಾ ಗುಪ್ತಾ ಮಾತು....

ಕಾಮಿಡಿ ಇರಲಿ ಸೀರಿಯಸ್‌ ಇರಲಿ ನಟನೆಯಲ್ಲಿ ನೀನಾ ಗುಪ್ತಾ ಫಸ್ಟ್‌ ಕ್ಲಾಸ್. ಕಳೆದ ಶುಕ್ರವಾರ ನೀನಾ ಮತ್ತು ಸೂರಜ್ ಬರ್ಜತಿಯಾ ನಟನೆಯ ವಧ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ವಧ ಸಿನಿಮಾ ಹೇಗಿದೆ? ಬಾಕ್ಸ್‌ ಆಫೀಸ್‌ ಕೆಲಕ್ಷನ್ ಮುಟ್ಟಿದ್ಯಾ? ವಿಮರ್ಶೆಗಳಿಂದ ಎಷ್ಟು ಲಾಭವಿದೆ ಎಂದು ನೀನಾ ರಿವೀಲ್ ಮಾಡಿದ್ದಾರೆ.

ಮಿಡಲ್ ಕ್ಲಾಸ್ ಕುಟುಂಬ ದಂಪತಿ, ನೀನಾ ಮತ್ತು ಸೂರಜ್‌ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡು ಹೇಗೆ ಜೀವನ ನಡೆಸುತ್ತಾರೆ ಅನ್ನೋದು ಓನ್ ಲೈನ್ ಸ್ಟೋರಿ. ಪುತ್ರ ವಿದೇಶದಲ್ಲಿ ಓದ ಬೇಕು ಅಲ್ಲಿ ಓದಿದರೆ ಮಾತ್ರ ಸಮಾಜದಲ್ಲಿ ಒಳ್ಳೆ ಹೆಸರು ಎಂದು ಭಾವಿಸುವ ಪೋಷಕರು ಲೋನ್‌ ತೀರಿಸಲು ಮರ್ಡರ್‌ ಮಾಡಲು ಮುಂದಾಗುತ್ತಾರೆ. ಸಿನಿಮಾ ಬಗ್ಗೆ ಮಾತನಾಡಿದ ನೀನಾ 'ಸಿನಿ ರಸಿಕರು ನೀಡುತ್ತಿರುವ ಪ್ರತಿಕ್ರಿಯೆ ಚೆನ್ನಾಗಿದೆ. ವಿಮರ್ಶೆಗಳು ಚೆನ್ನಾಗಿ ಮೂಡಿ ಬಂದಿದೆ. ನನಗಿರುವುದು ಒಂದೇ ಯೋಚನೆ ಜನರು ಚಿತ್ರಮಂದಿರಗಳಿಗೆ ಭೇಟಿ ನೀಡಬೇಕು. ನನ್ನ ವೃತ್ತಿ ಜೀವನದಲ್ಲಿ ನನಗೆ ಈ ವರೆಗೂ ಬಾಕ್ಸ್‌ ಆಫೀಸ್‌ ನಂಬರ್ ಸಿಕ್ಕಿಲ್ಲ. ಈಗ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ ಮಾಡಿದ್ದೀನಿ' ಎಂದು ಹಿಂದುಸ್ತಾನ್ ಟೈಮ್ಸ್‌ ಸಂದರ್ಶನದಲ್ಲಿ ಹೇಳಿದ್ದಾರೆ.

ಸಿನಿ ಜೀವನದಲ್ಲಿ ಯಾವುದು ಬಹಳ ಮುಖ್ಯವಾಗುತ್ತದೆ? ಕ್ರಿಟಿಕಲ್ ವಿಮರ್ಶೆ ನಾ ಅಥವಾ ಹೌಸ್‌ಫುಲ್ ಪ್ರದರ್ಶನವೇ ಎಂದು ಪ್ರಶ್ನೆ ಮಾಡಲಾಗಿತ್ತು. 'ಕಲಾವಿದರಿಗೆ ಲಾಭ ಸಿಗುವುದು ಸಿನಿ ರಸಿಕರು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾಗ ಮಾತ್ರ. ಇದರಿಂದ ನಿರ್ಮಾಪಕರು ಕೂಡ ಹಣ ಮಾಡಿಕೊಳ್ಳಬಹುದು. ಇದೆಲ್ಲಾ ಗೆದ್ದರೆ ಮಾತ್ರ ನಮ್ಮ ಕೈಗೆ ಹೆಚ್ಚಿನ ಸಿನಿಮಾ ಒಳ್ಳೆ ಆಫರ್‌ಗಳು ಸಿಗುತ್ತದೆ. ಕೇವಲ ಕ್ರಿಟಿಕಲ್ ವಿಮರ್ಶೆಗಳಿಂದ ನಮಗೆ ಹಣ ಸಿಗುವುದಿಲ್ಲ. ಒಳ್ಳೆ ವಿಮರ್ಶೆಗಳಿಂದ ಸಿನಿಮಾಗಳಿಗೆ ಶಕ್ತಿ ಸಿಗುತ್ತದೆ ಜನರು ಬರಲು ಮನಸ್ಸು ಮಾಡುತ್ತಾರೆ' ಎಂದು ನೀನಾ ಮಾತನಾಡಿದ್ದಾರೆ.

ನೀನಾ ಗುಪ್ತಾ ಮತ್ತು ಸಂಜಯ್ ಮಿಶ್ರ ಕೆಮಿಸ್ಟ್ರಿ ಮಿಡಲ್‌ ಕ್ಲಾಸ್‌ ಕುಟುಂಬಗಳಿಗೆ ತುಂಬಾನೇ ಕನೆಕ್ಟ್‌ ಆಗುತ್ತದೆ. 'ಸಂಜಯ್ ಜೀ ತುಂಬಾ ಒಳ್ಳೆಯ ವ್ಯಕ್ತಿ ಅವರ ಜೊತೆ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ. ಸೀನ್‌ ಶಾಟ್‌ನ ಮತ್ತೊಮ್ಮೆ ಚೆಕ್ ಮಾಡುವ ಅಗತ್ಯವೇ ಇಲ್ಲ ಅಷ್ಟು ಚೆನ್ನಾಗಿರುತ್ತದೆ. ನಿಮ್ಮ ಕೋ-ಸ್ಟಾರ್ ಅದ್ಭುತವಾಗಿದ್ದರೆ ನೀವು ಕೂಡ ಸುಲಭವಾಗಿ ನಟಿಸಬಹುದು. ಅಲ್ಲದೆ ಸಂಜಯ್‌ಗೆ ಒಳ್ಳೆ ಸೆನ್ಸ್‌  ಆಪ್‌ ಕಾಮಿಡಿ ಇದೆ' ಎಂದಿದ್ದಾರೆ ನೀನಾ.

ಸಿನಿಮಾದಲ್ಲಿರುವ ಕೆಲವೊಂದು ಸಾಲುಗಳು ತುಂಬಾ ಅರ್ಥಗಳನ್ನು ನೀಡುತ್ತದೆ. 'ಆಕೆ ಯೋಚನೆ ಮಾಡುತ್ತಿದ್ದಾಳೆ ಒಳ್ಳೆ ಉದ್ದೇಶವಿದ್ದು ತಪ್ಪು ಕೆಲಸ ಮಾಡಿದ್ದರೆ ಅದು ತಪ್ಪಲ್ಲ ಎಂದು. ಸಂದರ್ಶನದಲ್ಲಿ ಅಥವಾ ಸಿನಿಮಾ ನೋಡುವಾಗ ನಾನು ಕುಳಿತುಕೊಂಡು ಕಾಮೆಂಟ್ ಮಾಡುವಷ್ಟು ಸುಲಭವಿರುವುದಿಲ್ಲ ಸಮಯ. ಏನು ಇವ್ರು ಹೀಗೆ ಮಾಡುತ್ತಿದ್ದಾರೆ ನೇವರಾಗಿ ಪೊಲೀಸ್ ಬಳಿ ಹೋಗಬಹುದು ಅಲ್ವಾ ಆಂತ. ಆದರೆ ಮತ್ತೊಂದು ಅನಿಸುತ್ತದೆ ನೋವಿನಲ್ಲಿರುವವರ ಬಗ್ಗೆ ಜಡ್ಜ್‌ ಮಾಡಬಾರದು ಯಾವ ಕಷ್ಟದಲ್ಲಿ ಇರುತ್ತಾರೋ ಏನೋ ನಿರ್ಧಾರಗಳಲ್ಲಿ ಕೈಗೆ ತೆಗೆದುಕೊಳ್ಳುತ್ತಾರೆಂದು' ಎಂದು ಸಿನಿಮಾ ಪಾತ್ರವನ್ನು ಪರ್ಸನಲ್‌ ಲೈಫ್‌ಗೆ ಕನೆಕ್ಟ್‌ ಮಾಡಿಕೊಂಡು ನೀನಾ ಹೇಳಿದ್ದಾರೆ.

Father's day 2022: ಮದುವೆಗೂ ಮುನ್ನ ತಾಯಿಯಾದ Neena Guptaಗೆ ಬೆಂಬಲವಾಗಿದ್ದರು ತಂದೆ

'ಸಿನಿಮಾದಲ್ಲಿ ನಾವು ಹೇಳಿರುವ ರೀತಿ ನನ್ನ ಆಪ್ತರಲ್ಲಿ ಒಬ್ಬರಿಗೆ ಆಗಿತ್ತು. ನೀವು ಸತ್ತ ನಂತರ ಆಸ್ತಿ ಮಕ್ಕಳಿಗೆ ಸೇರುವ ಹಾಗೆ ಮಾಡಬೇಕು ಅದಕ್ಕೂ ಮೊದಲೇ ಮಾಡಿದರೆ ನೀವು ಕಷ್ಟದಲ್ಲಿ ಸಿಲುಕಿಕೊಳ್ಳುತ್ತೀರಿ ಎಂದು. ಆದರೆ ಅವರು ನನ್ನ ಮಾತು ಕೇಳಲಿಲ್ಲ ಹಾಗೆ ಮಾಡಿದ್ದರು. ಸಮಯ ಕೈ ಮೀರಿದಾಗ ಅವರು ಆ ಮನೆಯಿಂದ ಹೊರ ಬರಬೇಕಿತ್ತು. ಜನರು ಎಮೋಷನಲ್ ಆಗಿ ನಮ್ಮ ಮತ್ತೊಬ್ಬರ ಸಲಹೆ ಕೇಳಿಸಿಕೊಳ್ಳುವುದಿಲ್ಲ. ನಾವು ಮಕ್ಕಳಿಗೆ ಮಾಡಿದ ರೀತಿನೇ ಅವರು ನಮ್ಮನ್ನು ನೋಡಿಕೊಳ್ಳುತ್ತಾರೆಂದು ಕಲ್ಪಿಸಿಕೊಳ್ಳಬಾರದು'ಎಂದು ನೀನಾ ಮಾತನಾಡಿದ್ದಾರೆ.

click me!