ಡ್ರೀಮ್ ಗರ್ಲ್ ಜತೆ ರೊಮಾನ್ಸ್ ಮಾಡಲು ಹಿಂದೇಟು ಹಾಕಿದ ಕನ್ನಡದ ಸ್ಟಾರ್ ನಟನಿಗೆ ಧಮೇಂದ್ರ ಮಾಡಿದ್ದೇನು?

By Shriram Bhat  |  First Published Mar 31, 2024, 12:46 PM IST

ಬಾಲಿವುಡ್ ಡ್ರೀಮ್ ಗರ್ಲ್‌ ನಟಿ ಹೇಮಾ ಮಾಲಿನಿ ಬಗ್ಗೆ ಯಾರಿಗೆ ಗೊತ್ತಿಲ್ಲ? ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ನಟಿ ಹೇಮಾ ಮಾಲಿನಿ, ಅಂದಿನ ಕಾಲದ ಎಲ್ಲ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡವರು. 


ಬಾಲಿವುಡ್ ಡ್ರೀಮ್ ಗರ್ಲ್‌ ನಟಿ ಹೇಮಾ ಮಾಲಿನಿ (Hema Malini)ಬಗ್ಗೆ ಯಾರಿಗೆ ಗೊತ್ತಿಲ್ಲ? ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಆಳಿದ್ದ ನಟಿ ಹೇಮಾ ಮಾಲಿನಿ, ಅಂದಿನ ಕಾಲದ ಎಲ್ಲ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡವರು. ಹೇಮಾ ಮಾಲಿನಿ ಕಾಲ್ ಶೀಟ್ ಸಿಕ್ಕರೆ ಸಾಕು, ಅವರು ಸಹಿ ಹಾಕಿದರೆ ಸಾಕು ಎಂದು ಅದೆಷ್ಟೋ ನಿರ್ಮಾಪಕರು, ನಿರ್ದೇಶಕರು ಕಾಯುತ್ತಿದ್ದರು ಎಂಬ ಸಂಗತಿ ಗುಟ್ಟಾಗಿಯೇನೂ ಇರಲಿಲ್ಲ. ಅಂಥ ನಟಿ ಹೇಮಾ ಮಾಲಿನಿಯವರ ಗಂಡ ಧಮೇಂದ್ರ ಕೂಡ ಬಾಲಿವುಡ್‌ನ ಖ್ಯಾತ ನಟರಾಗಿದ್ದರು ಎಂಬುದು ಬಹುತೇಕರಿಗೆ ಗೊತ್ತು. 

ನಟಿ ಹೇಮಾ ಮಾಲಿನಿ ಅವರನ್ನು ತಮ್ಮ 'ಡ್ರೀಮ್ ಗರ್ಲ್‌' ಎಂದೇ ಕನ್ನಡದ ಸ್ಟಾರ್ ನಟ ವಿಷ್ಣುವರ್ಧನ್ ಕರೆಯುತ್ತಿದ್ದರು. ಹೇಮಾ ಮಾಲಿನಿ ಅವರೊಂದಿಗೆ ನಟಿಸಬೇಕು ಎಂಬುದು ನಟ ವಿಷ್ಣುವರ್ಧನ್ ಕನಸಾಗಿತ್ತು ಎನ್ನಲಾಗಿದೆ. ಕನಸು ನನಸಾಗುವ ಹೊತ್ತಿಗೆ ಅದಾಗಲೇ ನಟಿ ಹೇಮಾ ಮಾಲಿನಿ ನಟ ಧರ್ಮೇಂದ್ರ ಅವರ ಧರ್ಮಪತ್ನಿಯಾಗಿದ್ದರು. 'ಏಕ್ ನಯಾ ಇತಿಹಾಸ್' ಹೆಸರಿನ ಹಿಂದಿ ಸಿನಿಮಾದಲ್ಲಿ ನಟ ವಿಷ್ಣುವರ್ಧನ್ ಹಾಗೂ ನಟಿ ಹೇಮಾ ಮಾಲಿನಿ ನಾಯಕ-ನಾಯಕಿಯರಾಗಿ ಅಭಿನಯಿಸಿದ್ದಾರೆ. ಆದರೆ, ಈ ಚಿತ್ರದಲ್ಲಿ ಹೇಮಾ ಮಾಲಿನಿ ಜತೆ ರೊಮಾನ್ಸ್ ದೃಶ್ಯಗಳಲ್ಲಿ ನಟಿಸಲು ವಿಷ್ಣುವರ್ಧನ್ ಮುಜುಗರಕ್ಕೆ ಒಳಗಾಗಿದ್ದರಂತೆ. 

Tap to resize

Latest Videos

ನಟ ವಿಷ್ಣುವರ್ಧನ್ ಅವರ ಅಚ್ಚುಮೆಚ್ಚಿನ ನಟಿ ಹೇಮಾ ಮಾಲಿನಿ ಆಗಿದ್ದರು. ಅವರ ಜತೆ ಸ್ಕ್ರೀನ್ ಶೇರ್ ಮಾಡಲು ವಿಷ್ಣುವರ್ಧನ್ ಭಾರೀ ಉತ್ಸುಕರಾಗಿದ್ದರು ಕೂಡ. ಆದರೆ, ಆ ಚಾನ್ಸ್ ಕೈಗೂಡುವಷ್ಟರಲ್ಲಿ ನಟಿ ಹೇಮಾ ಮಾಲಿನಿ ಬಾಲಿವುಡ್ ಸ್ಟಾರ್ ನಟ ಧಮೇಂದ್ರ ಅವರನ್ನು ಮದುವೆಯಾಗಿದ್ದರು. ಹೀಗಾಗಿ 'ಏಕ್ ನಯಾ ಇತಿಹಾಸ್ ಚಿತ್ರದಲ್ಲಿ ನಟಿಸುವಾಗ, ಅದರಲ್ಲೂ ಮುಖ್ಯವಾಗಿ ಲವ್ ಸೀನ್‌ನಲ್ಲಿ ನಟಿಸುವಾಗ ವಿಷ್ಣುವರ್ಧನ್ ಅವರು ಭಾರೀ ಮುಜುಗರಕ್ಕೆ ಒಳಗಾಗಿದ್ದರಂತೆ. ಶೂಟಿಂಗ್‌ ಸ್ಪಾಟ್‌ನಲ್ಲಿ ನಟ ಧಮೇಂದ್ರ ಇದ್ದರು ಎನ್ನಲಾಗಿದ್ದು, ನಟ ವಿಷ್ಣುವರ್ಧನ್ ಭಾರೀ ಪೇಚಾಟಕ್ಕೆ ಒಳಗಾಗಿದ್ದರಂತೆ. 

ಹೇಮಾ ಮಾಲಿನಿ ಜತೆ ನಟ ವಿಷ್ಣುವರ್ಧನ್ ನಟಿಸುತ್ತಿರುವಾಗ, ಅವರು ಪದೇ ಪದೇ ಧರ್ಮೇಂದ್ರರ ಕಡೆ ನೋಡುತ್ತಿರುವುದನ್ನು, ತುಂಬಾ ನರ್ವಸ್ ಆಗಿದ್ದನ್ನು ಅರ್ಥ ಮಾಡಿಕೊಂಡ ಧಮೇಂದ್ರ ಅವರು ಸ್ವತಃ ತಾವೇ ವಿಷ್ಣುವರ್ಧನ್ ಬಳಿ ಹೋಗಿ ಅವರಿಗೆ ಧೈರ್ಯ ತುಂಬಿದರಂತೆ. ಕ್ಯಾಮೆರಾ ಮುಂದೆ ಮಾಡುವುದು ನಟನೆ ಎಂಬುದು ನನಗೂ ಗೊತ್ತು, ನಿನಗೂ ಗೊತ್ತು. ಹೇಮಾಗಂತೂ ತುಂಬಾ ಚೆನ್ನಾಗಿ ಗೊತ್ತಿದೆ. ಮತ್ಯಾಕೆ ನಿನಗೆ ಭಯ, ಸಂಕೋಚ? ನೀನು ಅಂದುಕೊಂಡಂತೆ, ಅಗತ್ಯಕ್ಕೆ ತಕ್ಕಂತೆ ನಟಿಸು ಅಷ್ಟೇ. ನನ್ನ ಬಗ್ಗೆ, ನಮ್ಮಿಬ್ಬರ ಗಂಡ-ಹೆಂಡತಿ ಎಂಬ ಸಂಬಂಧದ ಬಗ್ಗೆ ನೀನೇನೂ ಶೂಟಿಂಗ್ ಸಮಯದಲ್ಲಿ ತಲೆ ಕೆಡಿಸಿಕೊಳ್ಳುವುದು ಬೇಡ' ಎಂದಿದ್ದರಂತೆ.

click me!