'ಅಮಿತಾಭ್ ಬಚ್ಚನ್ ಅವರ ಕೈ ಕುಲುಕಿದ್ದೀಯಾ? 10 ದಿನ ಕೈ ತೊಳೆಯಬೇಡ'.. ದಿವ್ಯಾ ಭಾರತಿ ಅಮ್ಮ ಹೀಗ್ ಹೇಳಿದ್ಯಾಕೆ?

Published : Nov 29, 2025, 12:10 PM IST
Divya Bharathi Amitabh Bacchan

ಸಾರಾಂಶ

ದಿವ್ಯಾ ಭಾರತಿ 1991ರಲ್ಲಿ 'ವಿಶ್ವಾತ್ಮಾ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇಂದಿಗೂ ಪಾರ್ಟಿಗಳಲ್ಲಿ ಕೇಳಿಬರುವ "ಸಾತ್ ಸಮಂದರ್ ಪಾರ್" ಹಾಡು ದಿವ್ಯಾ ಅವರ ಕ್ರೇಜ್ ಅನ್ನು ನೆನಪಿಸುತ್ತದೆ. ಶಾರುಖ್ ಖಾನ್, ರಿಷಿ ಕಪೂರ್ ಮತ್ತು ಗೋವಿಂದ ಅವರಂತಹ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ ದಿವ್ಯಾ ಭಾರತಿ

ದಿವ್ಯಾ ಭಾರತಿ ಲೈಫ್ ಇನ್ಸಿಡೆಂಟ್

ಬಾಲಿವುಡ್ ಚಿತ್ರರಂಗದಲ್ಲಿ ಮಿಂಚಿನಂತೆ ಬಂದು, ಕೋಟ್ಯಂತರ ಅಭಿಮಾನಿಗಳ ಮನಗೆದ್ದು, ಅಷ್ಟೇ ವೇಗವಾಗಿ ಮರೆಯಾದ ಮಾಯಾಲೋಕದ ಸುಂದರಿ ಎಂದರೆ ಅದು 'ದಿವ್ಯಾ ಭಾರತಿ'. 90ರ ದಶಕದಲ್ಲಿ ತಮ್ಮ ಅದ್ಭುತ ಸೌಂದರ್ಯ ಮತ್ತು ನಟನೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದ ನಟಿ ದಿವ್ಯಾ ಭಾರತಿ (Divya Bharathi), ಇಂದಿಗೂ ಅಭಿಮಾನಿಗಳ ಪಾಲಿನ ಅಚ್ಚುಮೆಚ್ಚಿನ ತಾರೆ. 'ದೀವಾನಾ', 'ಶೋಲಾ ಔರ್ ಶಬ್ನಮ್' ಮತ್ತು 'ವಿಶ್ವಾತ್ಮಾ'ದಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದ್ದ ದಿವ್ಯಾ ಅವರ ಬಗ್ಗೆ ಒಂದು ಹಳೆಯ, ಆದರೆ ಅಷ್ಟೇ ಸ್ವಾರಸ್ಯಕರವಾದ ಕಥೆಯೊಂದು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅದು ಸಾಕ್ಷಾತ್ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರಿಗೆ ಸಂಬಂಧಿಸಿದ್ದು!

ಅಮಿತಾಭ್ ಕೈ ಕುಲುಕಿದ ಆ ಕ್ಷಣ ಮತ್ತು ಅಮ್ಮನ ಆರ್ಡರ್!

ವಿಷಯ ಏನೆಂದರೆ, 1992ರ 'ಗೀತ್' ಸಿನಿಮಾದ ಚಿತ್ರೀಕರಣದ ವೇಳೆ ಸೋನಿ ಟಿವಿಗೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ದಿವ್ಯಾ ಭಾರತಿ ತಮ್ಮ ಬಾಲ್ಯದ ಅಥವಾ ಚಿತ್ರರಂಗಕ್ಕೆ ಬರುವ ಮುನ್ನ ನಡೆದ ಒಂದು ಘಟನೆಯನ್ನು ಹಂಚಿಕೊಂಡಿದ್ದರು. ಆಗ ದಿವ್ಯಾ ಅವರಿಗೆ ಅಮಿತಾಭ್ ಬಚ್ಚನ್ ಎಂದರೆ ಎಲ್ಲಿಲ್ಲದ ಅಭಿಮಾನ. ಒಮ್ಮೆ ದಿವ್ಯಾ ಅವರು ರ‍್ಯಾಲಿಯೊಂದನ್ನು ನೋಡಲು ಹೋಗಿದ್ದರು. ಆ ಸಮಯದಲ್ಲಿ ದಿವ್ಯಾ ಅವರ ತಂದೆಗೆ ಅಮಿತಾಭ್ ಬಚ್ಚನ್ ಅವರ ಪರಿಚಯವಿತ್ತು. ಆ ಪರಿಚಯ ಎಷ್ಟರಮಟ್ಟಿಗೆ ಎಂದರೆ ಕೇವಲ "ಹಲೋ, ಹಾಯ್" ಹೇಳುವಷ್ಟು ಮಾತ್ರ.

ಆದರೆ ಆ ದಿನ ದಿವ್ಯಾ ಅವರ ತಂದೆ, ತಮ್ಮ ಮಗಳನ್ನು ಅಮಿತಾಭ್ ಬಚ್ಚನ್ ಅವರಿಗೆ ಪರಿಚಯ ಮಾಡಿಸಿಕೊಟ್ಟರು. ಆಗ ಅಮಿತಾಭ್ ಬಚ್ಚನ್ ಪ್ರೀತಿಯಿಂದ ದಿವ್ಯಾ ಅವರ ಕೈ ಕುಲುಕಿದರು (Handshake). ಬಿಗ್ ಬಿ ಜೊತೆ ಕೈ ಕುಲುಕಿದ ಖುಷಿಯಲ್ಲಿ ದಿವ್ಯಾ ಮನೆಗೆ ಓಡಿ ಬಂದರು. ಆದರೆ ಅಸಲಿ ಡ್ರಾಮಾ ನಡೆದಿದ್ದೇ ಮನೆಯಲ್ಲಿ! ದಿವ್ಯಾ ಮನೆಗೆ ಬಂದು ನಡೆದ ವಿಷಯವನ್ನು ಹೇಳಿದ ತಕ್ಷಣ, ಅವರ ತಾಯಿ, "ಅಯ್ಯೋ, ನೀನು ಅಮಿತಾಭ್ ಬಚ್ಚನ್ ಅವರ ಕೈ ಕುಲುಕಿದ್ದೀಯಾ? ಈಗ ನೀನು ಯಾವುದೇ ಕಾರಣಕ್ಕೂ 10 ದಿನಗಳ ಕಾಲ ನಿನ್ನ ಕೈ ತೊಳೆಯಲೇಬಾರದು!" ಎಂದು ತಾಕೀತು ಮಾಡಿದರಂತೆ. ಅಮಿತಾಭ್ ಬಚ್ಚನ್ ಮೇಲಿನ ಅಭಿಮಾನ ಎಷ್ಟಿತ್ತು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಆದರೆ ತಮಾಷೆಯೆಂದರೆ, ಕಾಕತಾಳೀಯವಾಗಿ ದಿವ್ಯಾ ಅವರಿಗೆ ಕೈ ತೊಳೆಯಲೇಬೇಕಾದ ಅನಿವಾರ್ಯತೆ ಬಂದು, ಅಮ್ಮನ ಮಾತು ಮೀರಿ ಕೈ ತೊಳೆದರಂತೆ!

ಅಭಿಮಾನಿಗಳ ಜೊತೆ ದಿವ್ಯಾ ಅವರ ತುಂಟಾಟ:

ಇದೇ ಸಂದರ್ಶನದಲ್ಲಿ ದಿವ್ಯಾ ಮತ್ತೊಂದು ತಮಾಷೆಯ ವಿಚಾರವನ್ನೂ ಹಂಚಿಕೊಂಡಿದ್ದರು. ತಾನು ಸ್ಟಾರ್ ಆದ ಬಳಿಕ, ತನ್ನ ಅಭಿಮಾನಿಗಳು ಕೈ ಕುಲುಕಲು ಬಂದಾಗ ತಾನು ಕೂಡ ಇದೇ ಡೈಲಾಗ್ ಹೊಡೆಯುತ್ತಿದ್ದೆ ಎಂದು ದಿವ್ಯಾ ಹೇಳಿದ್ದರು. ಅಭಿಮಾನಿಗಳು ಕೈ ಕುಲುಕಿದಾಗ, ದಿವ್ಯಾ ತಮಾಷೆಯಾಗಿ, "ನೋಡು, ನೀನು ನನ್ನ ಜೊತೆ ಕೈ ಕುಲುಕಿದ್ದೀಯಾ.. ಮನೆಗೆ ಹೋಗಿ ಕೈ ತೊಳೀಬೇಡ, ಹಾಗೆಯೇ ಅದಕ್ಕೆ ಮುತ್ತು ಕೊಡುತ್ತಿರು" ಎಂದು ರೇಗಿಸುತ್ತಿದ್ದರಂತೆ. ದಿವ್ಯಾ ಅವರ ಈ ತಮಾಷೆಯ ಸ್ವಭಾವವೇ ಅವರನ್ನು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿಸಿತ್ತು.

ದಕ್ಷಿಣದಿಂದ ಬಾಲಿವುಡ್‌ಗೆ ಲಗ್ಗೆ ಇಟ್ಟಿದ್ದ ಸುಂದರಿ:

ಕೇವಲ ಹಿಂದಿ ಮಾತ್ರವಲ್ಲದೆ, ದಕ್ಷಿಣ ಭಾರತದ ಸಿನಿಮಾಗಳ ಮೂಲಕವೇ ದಿವ್ಯಾ ಭಾರತಿ ತಮ್ಮ ಸಿನಿಪಯಣ ಆರಂಭಿಸಿದ್ದರು ಎಂಬುದು ವಿಶೇಷ. ತಮಿಳಿನ 'ನಿಲಾ ಪೆಣ್ಣೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ತೆಲುಗಿನಲ್ಲಿ ವೆಂಕಟೇಶ್ ಜೊತೆ 'ಬೊಬ್ಬಿಲಿ ರಾಜ' ಎಂಬ ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದರು. ಬಳಿಕ ಚಿರಂಜೀವಿ, ಮೋಹನ್ ಬಾಬು ಮತ್ತು ಬಾಲಕೃಷ್ಣ ಅವರಂತಹ ತೆಲುಗಿನ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು.

ಬಳಿಕ 1991ರಲ್ಲಿ 'ವಿಶ್ವಾತ್ಮಾ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇಂದಿಗೂ ಪಾರ್ಟಿಗಳಲ್ಲಿ ಕೇಳಿಬರುವ "ಸಾತ್ ಸಮಂದರ್ ಪಾರ್" ಹಾಡು ದಿವ್ಯಾ ಅವರ ಕ್ರೇಜ್ ಅನ್ನು ನೆನಪಿಸುತ್ತದೆ. ಶಾರುಖ್ ಖಾನ್, ರಿಷಿ ಕಪೂರ್ ಮತ್ತು ಗೋವಿಂದ ಅವರಂತಹ ಸ್ಟಾರ್‌ಗಳ ಜೊತೆ ನಟಿಸಿ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ, 1993ರ ಏಪ್ರಿಲ್‌ನಲ್ಲಿ ದಿವ್ಯಾ ವಿಧಿವಶರಾದರು. ಅವರು ಕೇವಲ 19ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿತ್ತು. ಅವರು ನಟಿಸಿದ ಕೊನೆಯ ಚಿತ್ರ 'ಕ್ಷತ್ರಿಯ' ಆಗಿದ್ದು, ಅವರ ನಿಧನದ ನಂತರ 'ರಂಗ್' ಮತ್ತು 'ಶತರಂಜ್' ಚಿತ್ರಗಳು ಬಿಡುಗಡೆಯಾಗಿದ್ದವು.

ಒಟ್ಟಿನಲ್ಲಿ, ದಿವ್ಯಾ ಭಾರತಿ ನಮ್ಮನ್ನು ಅಗಲಿ ದಶಕಗಳೇ ಕಳೆದಿದ್ದರೂ, ಇಂತಹ ಕ್ಯೂಟ್ ಮತ್ತು ತಮಾಷೆಯ ಘಟನೆಗಳ ಮೂಲಕ ಅವರು ಸದಾ ನಮ್ಮ ಮನದಲ್ಲಿ ಜೀವಂತವಾಗಿರುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?