2024ರ ಅತಿದೊಡ್ಡ ಫ್ಲಾಪ್ ಆಯ್ತು ಸಯ್ಯದ್ ಅಬ್ದುಲ್ ರಹೀಮ್ ಜೀವನಾಧರಿತ ಸಿನಿಮಾ; 250 ಕೋಟಿಯಲ್ಲಿ ಅರ್ಧದಷ್ಟು ಬರಲಿಲ್ಲ

By Mahmad Rafik  |  First Published Jan 2, 2025, 1:26 PM IST

2024ರಲ್ಲಿ ಬಿಡುಗಡೆಯಾದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲಿನ ಸುಳಿಗೆ ಸಿಲುಕಿತು. 250 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಕೇವಲ 68 ಕೋಟಿ ರೂ. ಗಳಿಸಿ 180 ಕೋಟಿ ರೂ. ನಷ್ಟ ಅನುಭವಿಸಿತು.


ಮುಂಬೈ: ಕೆಲವೊಂದು ಸಿನಿಮಾಗಳು ಚಿತ್ರೀಕರಣ ಆರಂಭದಿಂದ ರಿಲೀಸ್ ಆಗೋವರೆಗೂ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿರುತ್ತವೆ. ಆದರೆ ಬಿಡುಗಡೆಯಾದಾಗ ಪ್ರೇಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡುತ್ತವೆ. ಕೆಲವೊಮ್ಮೆ ಉತ್ತಮ ಕಥೆಯನ್ನು ಹೊಂದಿದ್ದರೂ ಸಿನಿಮಾಗಳು ಸೋತ ಉದಾಹರಣೆಗಳಿವೆ. ಚೆಕ್ ದೇ, ಮೇರಿ ಕೋಮ್, ಬಾಗ್ ಮಿಲ್ಕಾ ಬಾಗ್ ಅಂತಹ ಚಿತ್ರಗಳು ಗೆಲುವು ಕಂಡ ಬಳಿಕ ಬಾಲಿವುಡ್‌ನಲ್ಲಿ ಪ್ರತಿವರ್ಷವೂ ಕ್ರೀಡಾಧರಿತ ಸಿನಿಮಾಗಳು ಬಿಡುಗಡೆಯಾಗುತ್ತಿದೆ. 2024ರಲ್ಲಿ ಬಿಡುಗಡೆಯಾದ ಕಾರ್ತಿಕ್ ಆರ್ಯನ್ ನಟನೆಯ ಚಾಂಪಿಯನ್ ಚಂದು ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದ್ರೆ 2024ರಲ್ಲಿ ಬಿಡುಗಡೆಯಾದ ಮತ್ತೊಂದು ಕ್ರೀಡಾಧರಿತ ಸಿನಿಮಾ ಸೋಲಿನ ಪಟ್ಟಿಗೆ ಸೇರಿತು. 

ನಟ ಅಜಯ್ ದೇವಗನ್ ನಿರ್ದೇಶಕ ನಟ ಅಂತಾನೇ ಗುರುತಿಸಿಕೊಳ್ಳುತ್ತಾರೆ. ಆದ್ರೆ 2024ರಲ್ಲಿ ಅಜಯ್ ದೇವಗನ್ ನಟನೆಯ 'ಮೈದಾನ್' ಸಿನಿಮಾ ಸೋಲಿನ ಸುಳಿಗೆ ಸಿಲುಕಿದ್ದರಿಂದ ನಿರ್ಮಾಪಕರು ನಷ್ಟ  ಅನುಭವಿಸುವಂತಾಯ್ತು.  ಅಜಯ್  ದೇವಗನ್, ಶರಿಕ್ ಖಾನ್ ಜೂನಿಯರ್ ಮತ್ತು ಕನ್ನಡ ನಟಿ ಪ್ರಿಯಾಮಣಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 2024ರ ರಂಜಾನ್ ಹಬ್ಬದ ರಜಾದಿನದಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈದ್ ದಿನ ರಿಲೀಸ್ ಆಗುತ್ತಿರೋದರಿಂದ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ ಸದ್ದು ಮಾಡಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.  ಬಿಡುಗಡೆಯಾದ ಮೊದಲ ದಿನವೇ 'ಮೈದಾನ್' ಎಲ್ಲಾ ವಿಶ್ಲೇಷಣೆಗಳನ್ನು ಸುಳ್ಳು ಮಾಡಿತ್ತು.

Tap to resize

Latest Videos

ಇದನ್ನೂ ಓದಿ:  ಇವರು ಬಾಲಿವುಡ್‌ನ ಫ್ಲಾಪ್ ನಟ, ಆದ್ರೆ ಸೌಥ್‌ನಲ್ಲಿ ಸೂಪರ್‌ಸ್ಟಾರ್; ಅಮಿತಾಬ್‌ಗೆ ಸ್ಪರ್ಧೆ ನೀಡಿದ್ದ ಹೀರೋ ₹1650 ಕೋಟಿ ಒಡೆಯ

ಚಿತ್ರ ಸೋತಿದ್ಯಾಕೆ?
ಇದೇ ದಿನದಂದು ಅಕ್ಷಯ್  ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ 'ಬಡೇ ಮಿಯಾ, ಚೋಟಾ ಮಿಯಾ' ಸಿನಿಮಾ ಸಹ ಬಿಡುಗಡೆಯಾಗಿತ್ತು. ಆದ್ರೆ ಈ ಎರಡೂ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ಎರಡೂ ಸಿನಿಮಾಗಳು ವಿಭಿನ್ನ ಕಥೆಯನ್ನು ಹೊಂದಿದ್ರೂ ಬಾಕ್ಸ್ ಆಫಿಸ್‌ ಕಲೆಕ್ಷನ್‌ ಮಾಡುವಲ್ಲಿ ವಿಫಲವಾದವು. ಮೈದಾನ್ ಸಿನಿಮಾ ಭಾರತದ ಫುಟ್ಬಾಲ್ ತಂಡದ ಕೋಚ್ ಸಯ್ಯದ್ ಅಬ್ದುಲ್ ರಹೀಮ್ ಅವರ ಜೀವನಾಧರಿತ ಕಥೆಯನ್ನು ಹೊಂದಿತ್ತು. ಚಿತ್ರದ ಕಥೆ ಬಗ್ಗೆ ಮೆಚ್ಚುಗೆ ವ್ಯಕ್ತವಾದ್ರೂ  ವೀಕ್ಷಕರನ್ನು ಚಿತ್ರಮಂದಿರಕ್ಕೆ ತರುವಲ್ಲಿ ಸೋತಿತು.

ವರದಿಗಳ ಪ್ರಕಾರ, ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನದ ಮೈದಾನ್ ಸಿನಿಮಾ ಬರೋಬ್ಬರಿ 250 ಕೋಟಿ ರೂ. ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿತ್ತು. ಚಿತ್ರ ಬಿಡುಗಡೆಯಾದ ಮೊದಲ ವಾರ 28.35 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ವಾರ 10.25 ಕೋಟಿ, ಮೂರನೇ ವಾರ 80 ಕಲೆಕ್ಷನ್ ಗಳಿಸಿತ್ತು. ಒಟ್ಟಾರೆಯಾಗಿ ಮೈದಾನ್ ಸಿನಿಮಾ ತನ್ನ ಬೊಕ್ಕಸಕ್ಕೆ 68 ಕೋಟಿ ರೂಪಾಯಿ ತುಂಬಿಸಿಕೊಂಡು 180 ಕೋಟಿ ರೂಪಾಯಿ ನಷ್ಟ ಅನುಭವಿಸಿತು.

ಇದನ್ನೂ ಓದಿ: ಬ್ಯಾಕ್‌ ಟು ಬ್ಯಾಕ್ ಫ್ಲಾಪ್ ಕೊಟ್ರೂ 900 ಕೋಟಿಯ ಸಿನಿಮಾ ತಿರಸ್ಕರಿಸಿದ ನಟಿ; ಆದ್ರೂ ಬೇಸರವಿಲ್ಲ ಅಂತೆ!

click me!