Notary Movie: ಪವನ್‌ ಒಡೆಯರ್‌ ನಿರ್ದೇಶನದ ಹಿಂದಿ ಚಿತ್ರ 'ನೋಟರಿ'

By Govindaraj SFirst Published Apr 15, 2022, 10:44 AM IST
Highlights

ನಿರ್ದೇಶಕ ಪವನ್‌ ಒಡೆಯರ್‌ ಬಾಲಿವುಡ್‌ಗೆ ಎಂಟ್ರಿ ಆಗಿದ್ದಾರೆ. ಮೊದಲ ಪ್ರಯತ್ನದಲ್ಲೇ ನಿರ್ದೇಶನದ ಜತೆಗೆ ನಿರ್ಮಾಪಕರಾಗಿ ಬಾಲಿವುಡ್‌ ಬಾಗಿಲು ತೆರೆದಿರುವ ಪವನ್‌ ಒಡೆಯರ್‌ ಅವರ ಮೊದಲ ಹಿಂದಿ ಚಿತ್ರದ ಹೆಸರು 'ನೋಟರಿ'.

ನಿರ್ದೇಶಕ ಪವನ್‌ ಒಡೆಯರ್‌ (Pavan Wadeyar) ಬಾಲಿವುಡ್‌ಗೆ (Bollywood) ಎಂಟ್ರಿ ಆಗಿದ್ದಾರೆ. ಮೊದಲ ಪ್ರಯತ್ನದಲ್ಲೇ ನಿರ್ದೇಶನದ ಜತೆಗೆ ನಿರ್ಮಾಪಕರಾಗಿ ಬಾಲಿವುಡ್‌ ಬಾಗಿಲು ತೆರೆದಿರುವ ಪವನ್‌ ಒಡೆಯರ್‌ ಅವರ ಮೊದಲ ಹಿಂದಿ ಚಿತ್ರದ ಹೆಸರು 'ನೋಟರಿ' (Notary). ಇದೊಂದು ಕಾಮಿಡಿ ಡ್ರಾಮಾ ಚಿತ್ರ ಆಗಿದ್ದು, ಬೆಂಗಾಳಿಯ ಖ್ಯಾತ ಕಲಾವಿದ, ನಿರ್ದೇಶಕ, ಬಿಟೌನ್ ಬ್ಯೂಟೀಸ್ ಗಳಾದ ವಿದ್ಯಾ ಬಾಲನ್, ಅನುಷ್ಕಾ ಶರ್ಮಾ ಹಾಗೂ ರವೀನಾ ಟಂಡನ್ ಜೊತೆ ನಟಿಸಿರುವ ಕಹಾನಿ, ಪರಿ ಹಾಗೂ ನೆಟ್ ಪ್ಲಿಕ್ಸ್ ನಲ್ಲಿ ರಿಲೀಸ್ ಆಗಿರುವ ಸೂಪರ್ ಹಿಟ್ ಶೋ ಅರಣ್ಯಕಾದಲ್ಲಿ ನಟಿಸಿರುವ ಪರಂಬ್ರತ ಚಟ್ಟೋಪಾಧ್ಯಾ (Parambrata Chattopadhyay) ನೋಟರಿ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 

ಇನ್ನೂ 'ಗುಪ್ತ್', 'ಮೋಹರಾ', 'ಶೆರ್‌ಷಾ' ಸೇರಿದಂತೆ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಖ್ಯಾತ ನಿರ್ಮಾಪಕ ಶಬೀರ್‌ ಬಾಕ್ಸ್‌ ವಾಲ್ ಅವರ ಕಾಶ್‌ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ 'ನೋಟರಿ' ಚಿತ್ರದ ನಿರ್ಮಾಣಕ್ಕೆ ಸಾಥ್‌ ನೀಡುತ್ತಿದೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಆಗಸ್ಟ್ ತಿಂಗಳಲ್ಲಿ ಮಧ್ಯಪ್ರದೇಶ ಅಥವಾ ಛತ್ತೀಸ್‌ಗಡಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಹಾಕಿಕೊಂಡಿದ್ದು, ಸದ್ಯದಲ್ಲಿಯೇ ಉಳಿದ ತಾರಾಗಣ ಮತ್ತಿತರ ಅಪ್ ಡೇಟ್ ಗಳನ್ನು ಪ್ರಚಂಚದ ಎದುರು ತೆರೆದಿಡಲಿದ್ದಾರೆ. 'ಬಾಲಿವುಡ್‌ನಲ್ಲಿ ಇದು ನನ್ನ ಮೊದಲ ಪ್ರಯತ್ನ. ಕನ್ನಡದಲ್ಲಿ ರೆಮೋ ಚಿತ್ರಕ್ಕೆ ಶೂಟಿಂಗ್‌ ಮುಗಿದಿದ್ದು, ಅದು ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಇದರ ಜತೆಗೆ ನನ್ನದೇ ಸಂಸ್ಥೆ ನಿರ್ಮಾಣದ 'ಡೊಳ್ಳು' ಚಿತ್ರವನ್ನೂ ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್‌ ಇದೆ' ಎನ್ನುತ್ತಾರೆ ಪವನ್‌ ಒಡೆಯರ್‌.

Raymo Teaser: ಇಶಾನ್-ಆಶಿಕಾ ರಂಗನಾಥ್‌ ಜೋಡಿಗೆ ಆಕ್ಷನ್ ಕಟ್ ಹೇಳಿದ ಪವನ್ ಒಡೆಯರ್

ಢಾಕಾ ಅಂತಾರಾಷ್ಟ್ರಿಯ ಚಲನಚಿತ್ರೋತ್ಸವಕ್ಕೆ ಡೊಳ್ಳು ಸಿನಿಮಾ ಆಯ್ಕೆ: ನಿರ್ದೇಶಕ ಪವನ್ ಒಡೆಯರ್ ನಿರ್ಮಾಣದ 'ಡೊಳ್ಳು' ಚಿತ್ರ ಪ್ರತಿಷ್ಠಿತ 20ನೇ ಅಂತಾರಾಷ್ಟ್ರೀಯ ಢಾಕಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರದ ನಂತರ ಈ ಚಿತ್ರೋತ್ಸವಕ್ಕೆ ಆಯ್ಕೆ ಆಗುತ್ತಿರುವ ಮತ್ತೊಂದು ಕನ್ನಡ ಸಿನಿಮಾ ಇದು. ಸಾಗರ್ ಪುರಾಣಿಕ್ ನಿರ್ದೇಶನದ 'ಡೊಳ್ಳು' ಚಿತ್ರ ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ. 'ಒಡೆಯರ್ ಮೂವೀಸ್ ಬ್ಯಾನರ್ ಮೂಲಕ ನಾನು ಮತ್ತು ನನ್ನ ಪತ್ನಿ ಅಪೇಕ್ಷಾ ಪುರೋಹಿತ್ ನಿರ್ಮಿಸಿರುವ ಚಿತ್ರವಿದು. ಮೊದಲ ನಿರ್ಮಾಣದ ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಿರುವುದು ನಮ್ಮ ಸಿನಿಮಾ ನಿರ್ಮಾಣದ ಕನಸಿಗೆ ಮತ್ತಷ್ಟು ಉತ್ಸಾಹ ತುಂಬಿದೆ’ ಎನ್ನುತ್ತಾರೆ ಪವನ್ ಒಡೆಯರ್.

ಕುಣಿತದ ಸುತ್ತ ಸಾಗುವ ಸಿನಿಮಾ 'ಡೊಳ್ಳು': ಕಿರುತೆರೆ ನಟ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಚಿತ್ರದ ಜೋಡಿ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ ಸುರೇಶ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಅನಂತ್ ಕಾಮತ್ ಸಂಗೀತ, ಅಭಿಲಾಷ್ ಕಲಾಥಿ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ರಾಷ್ಟ್ರಪ್ರಶಸ್ತಿಗಳಲ್ಲಿ ಅವರ ಚೊಚ್ಚಲ ಕಿರುಚಿತ್ರವನ್ನು ಗುರುತಿಸಿದ ನಂತರ, ನಟ ಮತ್ತು ಚಲನಚಿತ್ರ ನಿರ್ಮಾಪಕ ಸಾಗರ್ ಪುರಾಣಿಕ್ ಅವರ ಚೊಚ್ಚಲ ಚಿತ್ರ ಡೊಳ್ಳು. ಢಾಕಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ಉತ್ಸುಕರಾಗಿದ್ದಾರೆ. 'ಚಿತ್ರವು ಆಸಕ್ತಿದಾಯಕ ರೀತಿಯಲ್ಲಿ ಒಟ್ಟಿಗೆ ಬಂದಿತು. 

ಬದಲಾದುವು ರೆಮೋ ಹಾಡುಗಳು;ಪವನ್‌ ಒಡೆಯರ್‌ ಕೊಟ್ಟ 5 ಕಾರಣಗಳು!

ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ನಾನು ಡೊಳ್ಳು ಪ್ರದರ್ಶನವನ್ನು ಗಮನಿಸಿದ್ದೇನೆ ಅದು ನನಗೆ ಗೂಸ್ ಬಂಪ್ಸ್ ನೀಡಿತು. ನಾನು ಸ್ಥಳೀಯ ಸಂಸ್ಕೃತಿಯಲ್ಲಿ ನನ್ನ ಬೇರುಗಳೊಂದಿಗೆ ಬೆಳೆದಿದ್ದೇನೆ, ಹಾಗಾಗಿ ಈ ಸ್ಥಳೀಯ ಕಲಾ ಪ್ರಕಾರ, ಅವರ ಮೇಲೆ ನಗರೀಕರಣದ ಪ್ರಭಾವ ಮತ್ತು ಅವರ ಜೀವನ ವಿಧಾನದ ಮೇಲೆ ನಾನು ಒಂದು ಚಲನಚಿತ್ರವನ್ನು ಮಾಡಬೇಕೆಂದು ನಾನು ಭಾವಿಸಿದೆ' ಎಂದು ಸಾಗರ್ ಹೇಳುತ್ತಾರೆ. ಈ ಚಿತ್ರವನ್ನು ಪವನ್ ಒಡೆಯರ್ ನಿರ್ಮಿಸಿದ್ದಾರೆ. ನಾವು ಚಿತ್ರಕ್ಕಾಗಿ ಚಿತ್ರೀಕರಣ ಮಾಡಿದ್ದೇವೆ. ಅತ್ಯುತ್ತಮ ಕಲಾವಿದರನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದೇವೆ ಎಂದು ಸಾಗರ್ ಹೇಳಿದ್ದಾರೆ. ಡೊಳ್ಳು ಕಲಾವಿದರ ನಟನೆ ಮತ್ತು ನಟರಿಗೆ ಒಂದು ತಿಂಗಳು ವಿಸ್ತರಿಸಿದ ಕಾರ್ಯಾಗಾರಗಳಲ್ಲಿ ಡೊಳ್ಳು ಕಲಾ ಪ್ರಕಾರದ ಬಗ್ಗೆ ಕಲಿಸಲು ಸ್ವಲ್ಪ ಸಮಯ ಹಿಡಿಯಿತು. ಬಿರು ಬಿಸಿಲಿನಲ್ಲಿ ಮೂರು ನಿಮಿಷದ ದೃಶ್ಯಗಳನ್ನು ಚಿತ್ರೀಕರಿಸಲು ನಮಗೆ ಎರಡು ದಿನಗಳು ಬೇಕಾಯಿತು ಎಂದಿದ್ದಾರೆ.

click me!