ಭೀಕರ ರಸ್ತೆ ಅಪಘಾತ: 'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ದೇವರಾಜ್ ನಿಧನ

By Shruthi Krishna  |  First Published Jun 27, 2023, 10:45 AM IST

'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ದೇವರಾಜ್ ಪಟೇಲ್ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. 


'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ಮತ್ತು ಹಾಸ್ಯ ನಟ ದೇವರಾಜ್ ಪಟೇಲ್ ರಸ್ತೆ ಅಪಘಾತದಲ್ಲಿ ನಿಧರಾಗಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ಈ ದುರಂತ ಸಂಭವಿಸಿದೆ. ವಿಡಿಯೋ ಚಿತ್ರೀಕರಣಕ್ಕೆಂದು ರಾಯ್‌ಪುರಕ್ಕೆ ತೆರಳಿದ್ದ ದೇವರಾಜ್ ಸೋಮವಾರ (ಜೂನ್ 26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿನ್ನೆ (ಜೂನ್ 26) ಮಧ್ಯಾಹ್ನ 3:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ವಿಡಿಯೋ ಚಿತ್ರೀಕರಣ ಮುಗಿಸಿ ನವಾ ರಾಯ್‌ಪುರದಿಂದ ವಾಪಾಸ್ ಆಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೈಕ್‌ನಲ್ಲಿ ಬರುತ್ತಿದ್ದ ದೇವರಾಜ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಬಸಕ್ಕೆ ಟ್ರಕ್ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದರು, ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಗಾಯಗಳಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. 

ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಬೈಕ್ ಸವಾರ ರಾಕೇಶ್ ಮನ್ಹರ್ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ತಕ್ಷಣ ಪಟೇಲ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ಪಟೇಲ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಮಹಾಸಮುಂಡ್‌ನ ನಿವಾಸಿಯಾಗಿದ್ದ ಯುವ ಯೂಟ್ಯೂಬರ್ ತನ್ನ ವೀಡಿಯೊ 'ದಿಲ್ ಸೆ ಬುರಾ ಲಗ್ತಾ ಹೈ' ಮೂಲಕ ಸಿಕ್ಕಾಪಟ್ಟೆ ಪ್ರಸಿದ್ಧರಾಗಿದ್ದರು. 

Tap to resize

Latest Videos

ಡಾಕ್ಟರ್‌ ಬ್ರೋ ರೀತಿ ಬೆಂಗಳೂರಿಗೆ ಬಂದಿದ್ದ ನೆದರ್‌ಲ್ಯಾಂಡ್‌ ಯೂಟ್ಯೂಬರ್‌ ಮೇಲೆ ಹಲ್ಲೆ

ದೇವರಾಜ್ ಪಟೇಲ್ ನಿಧನಕ್ಕೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ದೇವರಾಜ್ ಅವರ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ದೇವರಾಜ್ ಪಟೇಲ್, 'ದಿಲ್ ಸೆ ಬುರಾ ಲಗ್ತಾ ಹೈ' ಮೂಲಕ ಕೋಟಿಗಟ್ಟಲೆ ಜನರ ನಡುವೆ ತಮ್ಮ ಸ್ಥಾನವನ್ನು ಗಳಿಸಿ ನಮ್ಮೆಲ್ಲರನ್ನು ನಗಿಸಿದರು. ಇಂದು ನಮ್ಮನ್ನು ಅಗಲಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲಿ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಈ ನಷ್ಟವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓಂ ಶಾಂತಿ' ಎಂದು ಟ್ವೀಟ್ ಮಾಡಿದ್ದಾರೆ.

“दिल से बुरा लगता है” से करोड़ों लोगों के बीच अपनी जगह बनाने वाले, हम सबको हंसाने वाले देवराज पटेल आज हमारे बीच से चले गए.

इस बाल उम्र में अद्भुत प्रतिभा की क्षति बहुत दुखदायी है.

ईश्वर उनके परिवार और चाहने वालों को यह दुःख सहने की शक्ति दे. ओम् शांति: pic.twitter.com/6kRMQ94o4v

— Bhupesh Baghel (@bhupeshbaghel)

ಕುಡಿದು ಬಾರ್‌ನಲ್ಲಿ ಕಿರಿಕ್ ಮಾಡಿದ ಯುಟ್ಯೂಬರ್; CCTV ದೃಶ್ಯ ವೈರಲ್, ಸ್ಪಷ್ಟನೆ ಕೊಟ್ಟ ಪುಂಡ!

ಮುಖ್ಯ ಮಂತ್ರಿ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳು, ಆಪ್ತರು ಸೇರಿದಂತೆ ಅನೇಕ ಗಣ್ಯರು ಯೂಟ್ಯೂಬರ್ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. 2021 ರಲ್ಲಿ ಭುವನ್ ಬಾಮ್ ಅವರ ವೆಬ್ ಸೀರೀಸ್ ದಿಂಡೋರಾದಲ್ಲಿ ದೇವರಾಜ್ ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದರು. 

click me!