ಹನುಮ ಜಯಂತಿಯಲ್ಲಿ ಆ್ಯಕ್ಷನ್ ಪ್ರಿನ್ಸ್; ಮೈಸೂರು ಪಾಸಿಟಿವ್ ಆಗಿದೆ ಎಂದ ಧ್ರುವ

Published : Apr 23, 2022, 07:16 PM IST
ಹನುಮ ಜಯಂತಿಯಲ್ಲಿ ಆ್ಯಕ್ಷನ್ ಪ್ರಿನ್ಸ್; ಮೈಸೂರು ಪಾಸಿಟಿವ್ ಆಗಿದೆ ಎಂದ ಧ್ರುವ

ಸಾರಾಂಶ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಮ ಭಕ್ತ ಹನುಮನ ಜಯಂತಿ ಅದ್ದೂರಿಯಾಗಿ ನೆರವೇರಿತು. ಹನುಮ ಭಕ್ತ ಧ್ರುವ ಸರ್ಜಾ(Dhruva Sarja) ಮೆರವಣಿಗೆಯಲ್ಲಿ ಸಾಗಿ ಮೆರಗು ನೀಡಿದ್ರು. ಹನುಮ ಜಯಂತಿ ಕೊನೆಯಲ್ಲಿ ನಟ ಧ್ರುವ ಸರ್ಜಾ ಹನುಮ ಮೂರ್ತಿಗೆ ಪೂಜೆ ಸಲ್ಲಿಸಿ ಧನ್ಯರಾದ್ರು.

ರಾಜ್ಯದಲ್ಲಿ‌ ಧರ್ಮ ದಂಗಲ್ ನ ಬೆಂಕಿ ಜೋರಾಗಿರೋ ನಡುವೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಮ ಭಕ್ತ ಹನುಮನ ಜಯಂತಿ ಅದ್ದೂರಿಯಾಗಿ ನೆರವೇರಿತು. ಹನುಮ ಮೂರ್ತಿ ಮೆರವಣಿಗೆ ಸಾಗೋ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದ್ರೆ ಸ್ಟಾರ್ ನಟ, ಹನುಮ ಭಕ್ತ ಧ್ರುವ ಸರ್ಜಾ(Dhruva Sarja) ಮೆರವಣಿಗೆಯಲ್ಲಿ ಸಾಗಿ ಮೆರಗು ನೀಡಿದ್ರು.

ರಸ್ತೆಯುದ್ದಕ್ಕೂ ಕೇಸರಿ ಬಾವುಟಗಳ ಕಲರವ. ತೆರೆದ ವಾಹನಗಳಲ್ಲಿ ಐದು ಬಗೆಯ ಹನುಮ ಮೂರ್ತಿಗಳ ಮೆರವಣಿಗೆ. ಮತ್ತೊಂದು ಕಡೆ ಮೆರವಣಿಗೆಗೆ ಸ್ಟಾರ್ ಮೆರಗು ನೀಡಿದ್ರು ಧ್ರುವ ಸರ್ಜಾ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನುಮ ಜಯಂತಿ ಅದ್ದೂರಿಯಾಗಿ ನೆರವೇರಿದೆ. ಕರುನಾಡ ವಿಜಯ ಸೇನೆಯು ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ನೆರವಿನೊಂದಿಗೆ ಹನುಮ ಜಯಂತಿ ಆಚರಣೆ ಮಾಡಿತು. ಮೈಸೂರಿನ ಪ್ರಮುಖ ರಸ್ತೆಗಲ್ಲಿ ರಾಮ ಭಕ್ತ ಹನುಮನ ಮೂರ್ತಿಯನ್ನು ವಿಜೃಂಬಿಸಲಾಯಿತು. ಡೊಳ್ಳು ಕುಣಿತ, ಹುಲಿ ವೇಷ, ಸೇರಿದಂತೆ ವಿವಿಧ ಕಲಾ ತಂಡಗಳು ನೆರದಿದ್ದವ್ರನ್ನ ರಂಜಿಸಿದ್ರೆ ಟಮಟೆ ಶಬ್ದಕೆ ಯುವ ಸಮೂಹ ಭರ್ಜರಿ ಸ್ಟೆಪ್ ಹಾಕಿ ಹನುಮ ಭಕ್ತಿಯಲ್ಲಿ ತೇಲಿದ್ರು.

ಇದೇ ಹನುಮ ಜಯಂತಿ ಮೆರವಣಿಗೆಗೆ ಬಿಜೆಪಿ ಶಾಸಕರಾದ ಎಲ್.ನಾಗೇಂದ್ರ‌ ಹಾಗೂ ನಿರಂಜನ್ ಚಾಲನೆ ನೀಡಿದರು. ಕರುನಾಡ ವಿಜಯ ಸೇನೆ ರಾಜ್ಯದಾದ್ಯಂತ ಪ್ರತಿವರ್ಷ, ಪ್ರತಿ ಜಿಲ್ಲೆಯಲ್ಲಿ ಹನುಮ ಜಯಂತಿ ಆಚರಿಸುವ ಯೋಜನೆಯಲ್ಲಿದೆ. ಈಗಾಗಿ ಅದರ ಅರಂಭವನ್ನ ಮೈಸೂರಿನಿಂದಲೇ ಮಾಡಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಿಂದ ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ವರೆಗೆ 2.5 ಕಿಲೋಮೀಟರ್ ಹನುಮ ಮೆರವಣಿಗೆ ಸಾಗಿ ಬಂತು. 

ಹೊಸ ಯುದ್ಧಕ್ಕೆ ಸಿದ್ಧ ಧ್ರುವ ಸರ್ಜಾ! ಸಿನಿಮಾ ಇನ್ವಿಟೇಷನ್‌ನಲ್ಲಿ ತಲೆಗೆ ಹುಳ ಬಿಟ್ಟ ಪ್ರೇಮ್

ನಟ ಧ್ರುವ ಸರ್ಜಾ ತೆರೆದ ವಾಹನದಲ್ಲಿ ಕೇಸರಿ ಟವಲ್ ಹಾಕಿಕೊಂಡು ಮೆರವಣಿಗೆಗೆಯಲ್ಲಿ ಸಾಗಿದ್ರು. ಚಾಮರಾಜ ಜೋಡಿ ರಸ್ತೆ ಮಾರ್ಗವಾಗಿ ಹಾರ್ಡ್‌ ವೀಕ್ ವೃತ್ತ ತಿರುಗಿ ಕೋಟೆ ಆಂಜನೇಯ ದೇವಸ್ಥಾನವನ್ನ ಮೆರವಣಿಗೆ ತಲುಪಿತು. ಇನ್ನು ಇಡೀ ಕಾರ್ಯಕ್ರಮಕ್ಕೆ ಖಾಕಿ ಬಂದೊಬಸ್ತ್ ನೀಡಿತ್ತು.

ಹನುಮ ಜಯಂತಿ ಕೊನೆಯಲ್ಲಿ ಹನುಮ ಮೂರ್ತಿಗೆ ಪೂಜೆ ಸಲ್ಲಿಸಿದ ನಟ ಧ್ರುವ ಸರ್ಜಾ. ಹನುಮಾನ್ ಘೋಷಣೆ ಮೂಲಕ ಅಭಿಮಾನಿಗಳು ಹಾಗು ಹನುಮ ಭಕ್ತರಿಗೆ ಹುರಿದುಂಬಿಸಿದ್ರು. ಈ ವೇಳೆ ಅಭಿಮಾನಿಗಳು ಧ್ರುವ ಸರ್ಜ ಸೆಲ್ಪಿಗೆ ಮುಗಿಬಿದ್ದರು. ಅಭಿಮಾನಿಗಳು ಧ್ರುವ ಸರ್ಜಾಗೆ ಜೈ ಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಚಿತ್ರದ ಡೈಲಾಗ್ ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ರು.

ಬಳಿಕ ಮಾತನಾಡಿದ ಧ್ರುವ ಸರ್ಜಾ ಹನುಮ ಜಯಂತಿಯಲ್ಲಿ ಭಾಗವಹಿಸಿದ್ದು ತುಂಬಾ ಖುಷಿ ಆಗಿದೆ ಎಂದು ಹೇಳಿದರು. 'ನನ್ನ ಜಯಂತಿಗೆ ಕರೆತಂದವರಿಗೆ ಧನ್ಯವಾದಗಳು. ನಾನು ಮೈಸೂರಿಗೆ ಬಂದು ಸಾಕಷ್ಟು ಗ್ಯಾಪ್ ಆಗಿತ್ತು. ಸಾಮಾನ್ಯವಾಗಿ ನಾನು ಮೈಸೂರಿನಲ್ಲೆ ಇರುತ್ತಿದ್ದೆ. ಮೈಸೂರು ತುಂಬಾ ಪಾಸಿಟೀವ್ ಆಗಿದೆ. ಮೊದಲ ಬಾರಿಗೆ ಮೈಸೂರಿನಲ್ಲಿ ಹನುಮ ಜಯಂತಿಗೆ ಅಂತ ಬಂದಿದ್ದೇನೆ. ಸಾಕಷ್ಟು ಖುಷಿ ಆಗಿದೆ. ಅಭಿಮಾನಿಗಳು ನನ್ನನ್ನು ನೋಡಲು ಎಷ್ಟು ಕಾತರರಾಗಿದ್ದೇವೋ ನಾನು ಅಷ್ಟೇ ಕಾತರನಾಗಿದ್ದೇನೆ. ಇದನ್ನ ನೋಡಿ ತುಂಬಾ ಖುಷಿ ಆಗುತ್ತಿದೆ. ಹನುಮ ಜಯಂತಿ ಮಸೀದಿಗಳಲ್ಲಿನ ಮೈಕ್ ಸೆಟ್ ತೆರವಿಗೆ ಶ್ರೀರಾಮಸೇನೆ ಗಡುವು ನೀಡಿರುವ ವಿಚಾರ. ಈ ಕುರಿತು ಪ್ರತಿಕ್ರಿಯೆ ನೀಡಲು ನಟ ಧ್ರುವ ಸರ್ಜಾ ನಿರಾಕರಿಸಿದ್ದಾರೆ. ಅದನ್ನ ದೊಡ್ಡವರು ನೋಡಿಕೊಳ್ತಾರೆ. ನಾನು ಹೇಳುವುದು ಇಷ್ಟೆ ಜೈ ಆಂಜನೇಯ' ಎಂದರು.

Dhruva Sarja: ಸ್ಯಾಂಡಲ್‌ವುಡ್‌ನ ಟ್ರೆಂಡ್ ಮಾಸ್ಟರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೇ ಧ್ರುವ ಸರ್ಜಾ ಸದ್ಯ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಧ್ರುವ ಜೋಡಿ ಪ್ರೇಮ್ ಜೊತೆ ಸಿನಿಮಾ ಮಾಡಿಲಿದ್ದಾರೆ. ಯುದ್ಧಕ್ಕೆ ಮುನ್ನುಡಿ ಬರೆಯಲಾಗಿದೆ ಎನ್ನುವ ಪೋಸ್ಟರ್ ಅನ್ನು ಈಗಾಗಲೇ ಬಿಡುಗಡೆ ಮಾಡಿದ್ದು ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?