ಧಮೇಂದ್ರ ಡಿಸ್​ಚಾರ್ಜ್​: ಭೇಟಿ ಕೊಟ್ಟು ಬಂದ ನಟ Govinda ಕುಸಿದು ಬಿದ್ದು ಸ್ಥಿತಿ ಗಂಭೀರ- ಆಸ್ಪತ್ರೆಗೆ ದಾಖಲು!

Published : Nov 12, 2025, 12:13 PM IST
Govinda and Dharmendra

ಸಾರಾಂಶ

ಹಿರಿಯ ನಟ ಧರ್ಮೇಂದ್ರ ಅವರನ್ನು ಭೇಟಿಯಾದ ಬಳಿಕ, ನಟ ಗೋವಿಂದ ಅವರು ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಮುಂಬೈನ ಕ್ರಿಟಿಕೇರ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.  

ಬಾಲಿವುಡ್​ ಹಿರಿಯ ನಟ ಧರ್ಮೇಂದ್ರ ಅವರನ್ನು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಮಾಡಲಾಗಿದ್ದು, ಅವರ ಚಿಕಿತ್ಸೆ ಮನೆಯಲ್ಲಿಯೇ ಮುಂದುವರೆಯಲಿದೆ. ಕಳೆದ ಎರಡು ದಿನಗಳಿಂದ ನಟ ನಿಧನರಾಗಿರುವ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿ ಕುಟುಂಬಸ್ಥರನ್ನು ದುಃಖಕ್ಕೆ ತಳ್ಳಿತ್ತು. ಖುದ್ದು ಪತ್ನಿ ಹೇಮಾಮಾಲಿನಿ, ಮಗಳು ಇಶಾ ಡಿಯೋಲ್​ ಸೇರಿದಂತೆ ಹಲವರು ಈ ರೀತಿ ಸುಳ್ಳು ವದಂತಿ ಹರಡದಂತೆ ಮನವಿ ಮಾಡಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಧರ್ಮೇಂದ್ರ ಅವರು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಹಲವು ನಟ-ನಟಿಯರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ಅವರಲ್ಲಿ ಒಬ್ಬರು ಇನ್ನೋರ್ವ ಹಿರಿಯ ನಟ ಗೋವಿಂದ.

ಮಧ್ಯರಾತ್ರಿ ಕುಸಿದು ಬಿದ್ದ ನಟ

ಆಸ್ಪತ್ರೆಗೆ ಭೇಟಿ ಕೊಟ್ಟು ಮನೆಗೆ ಬಂದ ಗೋವಿಂದ ಅವರು ತಮ್ಮ ನಿವಾಸದಲ್ಲಿಯೇ ನಿನ್ನೆ ಅಂದರೆ ನವೆಂಬರ್​ 11ರ ಮಧ್ಯರಾತ್ರಿ ಕುಸಿದು ಬಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. 61 ವರ್ಷದ ನಟನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಬೈನಲ್ಲಿ ಇರುವ ಜುಹು ನಿವಾಸದಲ್ಲಿ ನಟ ಕುಸಿದು ಬಿದ್ದಿದ್ದು, ಅವರನ್ನು ಮುಂಬೈನ ಕ್ರಿಟಿಕೇರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತ ಸ್ನೇಹಿತ ಮತ್ತು ಕಾನೂನು ಸಲಹೆಗಾರ ಲಲಿತ್‌ ಬಿಂದಾಲ್‌ ದೃಢಪಡಿಸಿದ್ದಾರೆ.

ಡಿವೋರ್ಸ್​ ವದಂತಿ

ಈಚೆಗಷ್ಟೇ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರ ಡಿವೋರ್ಸ್​ ಘಟನೆ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಬಳಿಕ ಇವರೇ ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದರು. ಇದರ ಬೆನ್ನಲ್ಲೇ ಈಗ ಇಂಥದ್ದೊಂದು ಘಟನೆ ನಡೆದಿದೆ. ಗೋವಿಂದ ಅವರ ಕುರಿತು ಮಾಹಿತಿ ನೀಡಿರುವ ಲಲಿತ್‌ ಬಿಂದಾಲ್‌ ಅವರು, ನಟನಿಗೆ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ. ನರಶಾಸ್ತ್ರಜ್ಞರ ಅಭಿಪ್ರಾಯವೂಬರಬೇಕಿದೆ. ಸದ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ಏನೂ ಹೇಳಲಾಗುವುದಿಲ್ಲ ಎಂದಿದ್ದಾರೆ.

ಆಗಿದ್ದೇನು?

“ರಾತ್ರಿ 8:30ಕ್ಕೆ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಮನೆಯಲ್ಲೇ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಲಾಯಿತು. ಆಗ ಅವರು ಸುಧಾರಿಸಿಕೊಂಡಂತೆ ಅನ್ನಿಸಿತು. ಆದರೆ ಮಧ್ಯರಾತ್ರಿ ಸುಮಾರು 12:30ರ ವೇಳೆಗೆ ಮತ್ತೆ ಅಸ್ವಸ್ಥರಾದರು. ಆದ್ದರಿಂದ 1 ಗಂಟೆಗೆ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದಾರೆ. ಕಳೆದ ವರ್ಷ ಗೋವಿಂದ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಕ್ಕೆ ಕಾರಣ ಅವರ ಮನೆಯಲ್ಲಿದ್ದ ಪರವಾನಗಿ ಪಡೆದ ರಿವಾಲ್ವರ್‌ನ ಗುಂಡು ಮೊಣಕಾಲಿಗೆ ತಾಗಿತ್ತು. ಕೋಲ್ಕತ್ತಾಗೆ ಪ್ರಯಾಣಿಸಲು ಸನ್ನದ್ಧರಾಗಿದ್ದ ವೇಳೆ ಈ ಘಟನೆ ನಡೆದಿತ್ತು. ಆಗ ಹಲವಾರು ಅನುಮಾನಗಳೂ ಕಾಡಿದ್ದವು. ಕೊನೆಗೆ ಅವರು ಚೇತರಿಸಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?