ಅದಿತಿ ರಾವ್ ಹೈದರಿ ಮಾಜಿ ಪತಿಯ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ, ಡಿಸೈನರ್ ಮಸಾಬಾ ಗುಪ್ತಾ

By Shruthi Krishna  |  First Published Jan 27, 2023, 3:12 PM IST

ಬಾಲಿವುಡ್ ಖ್ಯಾತ ಹಿರಿಯ ನಟಿ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಟ ಸತ್ಯದೀಪ್ ಮಿಶ್ರಾ ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು


ಬಾಲಿವುಡ್ ಖ್ಯಾತ ಹಿರಿಯ ನಟಿ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಟ ಸತ್ಯದೀಪ್ ಮಿಶ್ರಾ ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಂದು ಶುಕ್ರವಾರ (ಜನವರಿ 27) ನಡೆದ ಮದುವೆ ಸಮಾರಂಭದಲ್ಲಿ ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ ಪತಿ-ಪತ್ನಿಯರಾದರು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಸತ್ಯದೀಪ್ ಅವರಿಗೆ ಇದು 2ನೇ ಮದುವೆ. ಈ ಮೊದಲು ಸತ್ಯದೀಪ್ ಖ್ಯಾತ ನಟಿ ಅದಿತಿ ರಾವ್ ಹೈದರಿಯನ್ನು ಮದುವೆಯಾಗಿದ್ದು. ಮದುವೆಯಾಗಿ ಕಲವೇ ತಿಂಗಳಲ್ಲಿ ಇಬ್ಬರೂ ಬೇರೆ ಬೇರೆ ಆದರು. 2013ರಲ್ಲಿ ಅದಿತಿ ಮತ್ತು ಸತ್ಯದೀಪ್ ವಿಚ್ಛೇದನ ಪಡೆದು ದೂರ ಆದರು. ಇದೀಗ ಮಸಾಬಾ ಜೊತೆ 2ನೇ ಮದುವೆಯಾಗಿದ್ದಾರೆ.

ಮಸಾಬಾ ಗುಪ್ತಾ ಅವರಿಗೂ ಇದು 2ನೇ ಮದುವೆ. ಈ ಮೊದಲು 2015ರಲ್ಲಿ ನಿರ್ಮಾಪಕ ಮಧು ಮಂಟೇನಾ ಅವರನ್ನು ಮದುವೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅಂದರೆ 2019ರಲ್ಲಿ ವಿಚ್ಛೇದನ ನೀಡುವ ಮೂಲಕ ದೂರ ದೂರ ಆದರು. 

Tap to resize

Latest Videos

ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಫೋಟೋಗಳನ್ನು ಶೇರ್ ಮಾಡಿ ಮದುವೆಯಾಗಿರುವ ಬಗ್ಗೆ ಬಹಿರಂಗ ಪಡಿಸಿದರು. 'ಇಂದು ಬೆಳಗ್ಗೆ ನಾನು ನನ್ನ ಶಾಂತ ಸಾಗರವನ್ನು ಮದುವೆಯಾದೆ. ಪ್ರೀತಿ, ಶಾಂತಿ ಮತ್ತು ಬಹು ಮುಖ್ಯವಾಗಿ ನಗುವಿನ ಹಲವು ಜೀವಿತಾವಧಿ ಇಲ್ಲಿದೆ' ಎಂದು ಹೇಳಿದ್ದಾರೆ. ಮಸಾಬಾ ಮತ್ತು ಸತ್ಯದೀಪ್ ಜೋಡಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ, ಅಯೂಶ್ಮಾನ್ ಖುರಾನ ಸೇರಿದಂತೆ ಅನೇಕರು ಶುಭಹಾರೈಸಿದ್ದಿದ್ದಾರೆ. 

ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಬಗ್ಗೆ ಮಸಾಬಾ ಆಂಗ್ಲ ಮಾಧ್ಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ಯಾರಿಗೂ ಹೇಳಿರಲಿಲ್ಲ. ಕುಟುಂಬದವರಿಗೆ ಮಾತ್ರ ಗೊತ್ತಿತ್ತು. ಇದನ್ನೂ ನಾವು ತುಂಬಾ ಖಾಸಗಿಯಾಗಿ ಇಟ್ಟಿದ್ದೆವು. ದೊಡ್ಡದಾಗಿ ಆಚರಣೆ ಮಾಡಲು ಇಷ್ಟವಿರಲಿಲ್ಲ. ಕೇವಲ 80-85 ಜನರಿಗೆ ಮಾತ್ರ ಆಹ್ವಾನ ಮಾಡಿದ್ದು. ಪಾರ್ಟಿಯಲ್ಲಿ ಭಾಗಿಯಾಗುತ್ತಾರೆ' ಎಂದು ಹೇಳಿದ್ದಾರೆ. 

Father's day 2022: ಮದುವೆಗೂ ಮುನ್ನ ತಾಯಿಯಾದ Neena Guptaಗೆ ಬೆಂಬಲವಾಗಿದ್ದರು ತಂದೆ

ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ 2020ರಲ್ಲಿ ಪರಿಚಿತರಾದರು. ಮಸಾಬಾ ಮಸಾಬಾ ಕಾರ್ಯಕ್ರಮದ ಮೂಲಕ ಇಬ್ಬರು ಒಬ್ಬರಿಗೊಬ್ಬರು ಪರಿಚಿತರಾದರು. ಮಸಾಬಾ ಆಗಷ್ಟೆ ವಿಚ್ಛೇದನ ಪಡೆದು ಸಿಂಗಲ್ ಆಗಿದ್ದರು. ಆಗ ಸತ್ಯದೀಪ್ ಜೊತೆ ಪ್ರೀತಿಯಲ್ಲಿ ಬಿದ್ದು ಇದೀಗ ದಾಂಪತ್ಯಕ್ಕೆ ಕಾಲಿಟ್ಟರು. 

ಮಸಾಬಾ ಗುಪ್ತಾ ಬಗ್ಗೆ 

ಮಸಾಬಾ ಗುಪ್ತಾ ಖ್ಯಾತ ನಟಿ ನೀನಾ ಗುಪ್ತಾ ಮತ್ತು ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಪುತ್ರಿ. ಮಸಾಬಾ ಸದ್ಯ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್‌ನ ಅನೇಕ ಸ್ಟಾರ್ ನಟಿಯರಿಗೆ ಮಸಾಬಾ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾರೆ. ಮಸಾಬಾ ಮಸಾಬಾದಲ್ಲಿ ತನ್ನ ತಾಯಿ ನೀನಾ ಗುಪ್ತಾ ಜೊತೆಯೂ ನಟಿಸಿದ್ದಾರೆ. ಸತ್ಯದೀಪ್ ಕೂಡ್ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Masaba (@masabagupta)

ಡಯಟ್,‌ ಫಿಟ್ನೆಸ್ ಮಂತ್ರ ರಿವೀಲ್‌ ಮಾಡಿದ ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ!

ಬಾಂಬೆ ವೆಲ್ವೆಟ್, ನೋ ಒನ್ ಕಿಲ್ಡ್ ಜೆಸ್ಸಿಕಾ ಮತ್ತು ವಿಕ್ರಮ್ ವೇದದ ಹಿಂದಿ ಆವೃತ್ತಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯ ಬಾರಿಗೆ ತನಾವ್ ವೆಬ್-ಸರಣಿ ಮೂಲಕ ಕಾಣಿಸಿಕೊಂಡಿದ್ದರು. 

click me!