ಗುಂಜನ್ ಸಕ್ಸೇನಾ ಸಿನಿಮಾಗೆ ಸ್ಟೇ: ಕೇಂದ್ರದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

Published : Sep 02, 2020, 03:24 PM ISTUpdated : Sep 02, 2020, 03:25 PM IST
ಗುಂಜನ್ ಸಕ್ಸೇನಾ ಸಿನಿಮಾಗೆ ಸ್ಟೇ: ಕೇಂದ್ರದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಸಾರಾಂಶ

ಜಾಹ್ನವಿ ಕಪೂರ್ ನಟಿಸಿದ ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್‌ ಸಿನಿಮಾಗೆ ಸ್ಟೇ ನೀಡುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ಸಿನಿಮಾ ಭಾರತೀಯ ವಾಯ ಸೇನೆಯನ್ನು ಕೆಟ್ಟ ರೀತಿಯಲ್ಲಿ ತೋರಿಸುತ್ತದೆ. ಹಾಗಾಗಿ ಸಿನಿಮಾಗೆ ಸ್ಟೇ ನೀಡಬೇಕೆಂದು ಕೇಂದ್ರ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಾಜೀವ್ ಶಖ್ದರ್, ಸಿನಿಮಾ ಒಟಿಟಿಯಲ್ಲಿ ರಿಲೀಸ್‌ ಆಗುವ ಮುನ್ನ ಯಾಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜಾಹ್ನವಿ ಕಪೂರ್ ನಟಿಸಿದ ಗುಂಜನ್ ಸಕ್ಸೇನಾ: ದ ಕಾರ್ಗಿಲ್ ಗರ್ಲ್‌ ಸಿನಿಮಾಗೆ ಸ್ಟೇ ನೀಡುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಗುಂಜನ್ ಸಕ್ಸೇನಾ ಸಿನಿಮಾ ಈಗಾಗಲೇ ಸ್ಟ್ರೀಮಿಂಗ್ ಆಗುತ್ತಿರುವುದರಿಂದ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ತನ್ನದೇ ಸಿನಿಮಾ ಗುಂಜನ್ ಸಕ್ಸೇನಾ ಬ್ಯಾನರ್‌ನಲ್ಲಿ ಕರಣ್ ಹೆಸರಿಲ್ಲ, ತಿರುಗಿಬಿತ್ತಾ ನೆಪೊಟಿಸಂ ಬಾಣ..?

ಐಎಎಫ್ ಲಿಂಗಬೇಧ ಮಾಡುತ್ತದೆ ಎಂದು ಸಿನಿಮಾದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಕೇಂದ್ರದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ತಿಳಿಸಿದ್ದಾರೆ.

ಧರ್ಮ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್‌ನಿಂದ ಈ ಸಂಬಂಧ ಕೋರ್ಟ್ ಸ್ಪಷ್ಟನೆ ಕೇಳಿದೆ. ಕೇಂದ್ರದ ಅರ್ಜಿಗೆ ಸ್ಪಷ್ಟನೆ ನೀಡುವಂತೆ ಹೈಕೋರ್ಟ್‌ ನೆಟ್‌ಫ್ಲಿಕ್ಸ್ ಹಾಗೂ ಸಿನಿಮಾ ನಿರ್ಮಿಸಿದ ಧರ್ಮ ಪ್ರೊಡಕ್ಷನ್‌ಗೆ ಹೇಳಿದೆ. ಮಾಜಿ ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರಿಗೂ ಅವರ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಗಳಿಗಾಗಿ ತಂದೆಯ ಹೋರಾಟ, ಅಯ್ಯಪ್ಪ ಭಕ್ತನ ರೌದ್ರಾವತಾರ: ರವಿತೇಜ 'ಇರುಮುಡಿ' ಟ್ರೇಲರ್‌ ಹೇಗಿದೆ?
Jr NTR health update: ಜ್ಯೂ.ಎನ್‌ಟಿಆರ್‌ಗೆ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ! ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್‌ ಅಪ್‌ಡೇಟ್ ರಿಲೀಸ್