ಹೊಸ ಕಾರ್ ತಗೊಂಡು ಇದು ನನ್ನ ರಥ ಅಂದ್ರು ಬಿಗ್ ಬಾಸ್ ರಶ್ಮಿ..!

Published : Sep 02, 2020, 12:28 PM ISTUpdated : Sep 02, 2020, 12:40 PM IST
ಹೊಸ ಕಾರ್ ತಗೊಂಡು ಇದು ನನ್ನ ರಥ ಅಂದ್ರು ಬಿಗ್ ಬಾಸ್ ರಶ್ಮಿ..!

ಸಾರಾಂಶ

ಬಿಗ್‌ಬಾಸ್ ರಶ್ಮಿ ಹೊಸ ಕಾರ್ ತಗೊಂಡಿದ್ದಾರೆ. ಅಷ್ಟೇ ಅಲ್ಲ ಕಾರಲ್ಲಿ ಕೂತು ಚಹಾ ಹೀರುತ್ತಾ ಇದು ನನ್ನ ರಥ ಎಂದು ಹೇಳಿದ್ದಾರೆ.

ಹಿಂದಿ ಬಿಗ್ ಬಾಸ್ ಸೀಸನ್ 13ರ ಖ್ಯಾತಿಯ ಕಿರುತೆರೆ ನಟಿ ರಶ್ಮಿ ದೇಸಾಯಿ ಹೊಸ ಕಾರು ಖರೀಸಿದ್ದಾರೆ. ಅಷ್ಟೇ ಅಲ್ಲ ಕಾರನ್ನು ತಮ್ಮ ರಥ ಎಂದೂ ಕರೆದಿದ್ದಾರೆ. ಲಕ್ಷುರಿ ಕಾರ್ ತೆಗೆದುಕೊಂಡ ನಟಿ ಕಾರಿನೊಂದಿಗಿನ ತಮ್ಮ ಫೋಟೋ ಶೇರ್ ಮಾಡಿದ್ದಾರೆ. ರಶ್ಮಿ ಫ್ರೆಂಡ್ ಮೃನಾಲ್ ಜೈನ್ ಕೂಡಾ ರಶ್ನಿ ಮತ್ತು ಹೊಸ ಕಾರಿನ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಶೇರ್ ಮಾಡಿ ಶುಭಾಶಯಗಳು ಎಂದು ತಿಳಿಸಿದ್ದಾರೆ.

ರಶ್ಮಿ ದೇಸಾಯಿಯ ಮ್ಯಾನೇಜರ್ ಮತ್ತು ಫ್ರೆಂಡ್ ನಿಧಿ, ಯಾಯ್.. ಹೊಸ ಕಾರಿಗಾಗಿ ಕಂಗ್ರಾಚುಲೇಷನ್ಸ್ ರಶು. ಹ್ಯಾಪಿ ಫಾರ್ ಎಂದು ಬರೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾರಿನ ಫೋಟೋ ಶೇರ್ ಮಾಡುತ್ತಲೇ ಇದ್ದ ನಟಿ ಕಾರು ಖರೀದಿಸಿರುವುದು ಈಗ ತಿಳಿದುಬಂದಿದೆ. ಸದ್ಯ ರಶ್ಮಿ ಸುಂದರ ಕಾರಿನ ಒಡತಿ.

ರಶ್ಮಿ ಮೊದಲೇ ಕಾರು ಖರೀದಿಸುವ ಪ್ಲಾನ್‌ನಲ್ಲಿದ್ದರು. ಆದರೆ ಕೊರೋನಾದಿಂದಾಗಿ ಸಾಧ್ಯವಾಗಿರಲಿಲ್ಲ. ಕೊರೋನಾ ಸಂದರ್ಭ ಎಲ್ಲರಿಗೂ ಆರ್ಥಿಕ ಸಮಸ್ಯೆಯಾಗಿತ್ತು. ಹಾಗಾಗಿ ಸರಿಯಾಗಿ ಪ್ಲಾನ್ ಮಾಡದಿದ್ದರೆ ಆರ್ಥಿಕ ತೊಂದರೆ ಉಂಟಾಗುಬಹುದೆಂದು ಕಾರು ಖರೀದಿಸುವ ಪ್ಲಾನ್ ಕೂಬಿಟ್ಟೆ ಎಂದಿದ್ದಾರೆ.

59 ಚೀನಾ ಆ್ಯಪ್ ಬ್ಯಾನ್; ನಟಿ ರಶ್ಮಿ ದೇಸಾಯಿ ಅದ್ಭುತ ಮಾತು

 ಬಿಗ್‌ಬಾಸ್‌ 13ರಿಂದ ಹೊರ ಬಂದಾಗಲೇ ಕಾರು ತೆಗೆದುಕೊಳ್ಳಬೇಕೆಂದಿದ್ದೆ. ಆದರೆ ನಂತರ ಜನ ನನ್ನನ್ನು ಕೆಲಸದಿಂದ ತಿಳಿದುಕೊಳ್ಳಬೇಕು. ನನ್ನಲ್ಲಿ ಏನಿದೆ ಎಂಬುದನ್ನು ನೋಡಿ ಅಲ್ಲ ಎಂದು ನಿರ್ಧರಿಸಿದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Rashmika Deverakonda: ರಶ್ಮಿಕಾ ಮಂದಣ್ಣ ಇನ್ಮುಂದೆ ಅಧಿಕೃತವಾಗಿ 'ರಶ್ಮಿಕಾ ದೇವರಕೊಂಡ'..? ಇಲ್ನೋಡಿ.. 'ಅನ್ನಪೂರ್ಣೆ'ಯಾದ ಬಳಿಕ ಈ ಚೇಂಜ್!
ANNAPURNA: ಕನ್ನಡತಿ, ತೆಲುಗುನಾಡಿನ ಸೊಸೆ ರಶ್ಮಿಕಾ ಮಂದಣ್ಣ ಈಗ ನಾಲ್ಕುನೂರು ಮನೆಗಳಲ್ಲಿ 'ಅನ್ನಪೂರ್ಣ'