ವಂಚನೆ ಪ್ರಕರಣ: ಬಾಲಿವುಡ್ ನಟ ಧರ್ಮೇಂದ್ರಗೆ ಕೋರ್ಟ್ ಸಮನ್ಸ್‌- ಏನಿದು ಕೇಸ್‌?

Published : Dec 10, 2024, 06:39 PM ISTUpdated : Dec 11, 2024, 08:05 AM IST
 ವಂಚನೆ ಪ್ರಕರಣ: ಬಾಲಿವುಡ್ ನಟ ಧರ್ಮೇಂದ್ರಗೆ ಕೋರ್ಟ್ ಸಮನ್ಸ್‌- ಏನಿದು ಕೇಸ್‌?

ಸಾರಾಂಶ

 ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಧರ್ಮೇಂದ್ರಗೆ ಕೋರ್ಟ್ ಸಮನ್ಸ್‌ ಜಾರಿ ಮಾಡಿದೆ.  ಡಾಬಾ ಫ್ರಾಂಚೈಸ್‌ ಹೂಡಿಕೆಗೆ ಸಂಬಂಧಿಸಿದಂತೆ ಉದ್ಯಮಿ ಸುಶೀಲ್ ಕುಮಾರ್ ದೂರಿನ ಮೇರೆಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.  

ವಂಚನೆ ಪ್ರಕರಣವೊಂದರಲ್ಲಿ ಸಿಲುಕಿರುವ ಬಾಲಿವುಡ್ ನಟ, ನಟಿ ಹೇಮಾ ಮಾಲಿನಿ ಪತಿ ಧರ್ಮೇಂದ್ರ ಅವರಿಗೆ ದೆಹಲಿಯ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ. ಗರಂ ಧರಮ್ ಡಾಬಾ ಫ್ರ್ಯಾಂಚೈಸ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ನಟ ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಉದ್ಯಮಿ ಸುಶೀಲ್ ಕುಮಾರ್ ಎನ್ನುವವರು ದೂರು ದಾಖಲು ಮಾಡಿದ್ದಾರೆ. ವಿಚಾರಣೆ ನಡೆಸಿದ  ಮ್ಯಾಜಿಸ್ಟ್ರೇಟ್  ಕೋರ್ಟ್ ನ್ಯಾಯಾಧೀಶ ಯಶ್ ದೀಪ್ ಚಹಲ್ ಅವರು, ಸಮನ್ಸ್‌ ಜಾರಿಗೆ ಆದೇಶಿಸಿದ್ದಾರೆ.  

ಅಷ್ಟಕ್ಕೂ, ನಟನ ಮೇಲಿರುವ ಆರೋಪ ಏನೆಂದರೆ, ಉತ್ತರ ಪ್ರದೇಶದ ಹೆದ್ದಾರಿಗಳಲ್ಲಿ    ಗರಂ ಧರಮ್ ಡಾಬಾ ಪ್ರಾಂಚೈಸಿ ತೆರೆಯುವ ಪ್ರಸ್ತಾಪದೊಂದಿಗೆ  2018ರಲ್ಲಿ ಧರಂ ಸಿಂಗ್ ಡಿಯೋಲ್ ಅಂದರೆ ನಟ ಧರ್ಮೇಂದ್ರ ಅವರ ಪರವಾಗಿ ಕೆಲವರು ಉದ್ಯಮಿ ಸುಶೀಲ್ ಕುಮಾರ್ ಅವರನ್ನು  ಸಂಪರ್ಕಿಸಿದ್ದರು. ಇದು ನಡೆದದ್ದು ಏಪ್ರಿಲ್‌ ತಿಂಗಳಿನಲ್ಲಿ. ಅದೇ ಸಾಲಿನ ಸೆಪ್ಟೆಂಬರ್‍‌ನಲ್ಲಿ  17.70 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿರುವುದಾಗಿ ಅವರು ಹೇಳಿದ್ದರು. ಆದರೆ, ನಂತರ ಆರೋಪಿಗಳು ಅವರೊಂದಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎನ್ನುವುದಾಗಿದೆ.  ಇದಕ್ಕೆ ಸಂಬಂಧಿಸಿದಂತೆ ಧರ್ಮೇಂದ್ರ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ. 

ವಾಹನ ಸವಾರರೇ ಎಚ್ಚರ! ರಸ್ತೆ ಮೇಲೆ ಮೊಳೆ ಹಾಕುವುದೇ ಇವರ ಕಾಯಕ... ವಿಡಿಯೋ ವೈರಲ್‌

ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳು ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಂಚನೆಯ ಅಪರಾಧದ ಅಂಶಗಳನ್ನು ಸರಿಯಾಗಿ ಬಹಿರಂಗಪಡಿಸಲಾಗಿದೆ ಎಂದಿರುವ ಅವರು,  ಇದು ವಂಚನೆ, ಕ್ರಿಮಿನಲ್ ಸಂಚಿನ ಪ್ರಕರಣವಾಗಿದೆ ಎಂದು ಹೇಳುವ ಮೂಲಕ ಸಮನ್ಸ್‌ ಜಾರಿಗೆ ಆದೇಶಿಸಿದ್ದಾರೆ ಜೊತೆಗೆ, ಬರುವ ಫೆಬ್ರವರಿ 20 ರಂದು ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶಿಸಿದ್ದಾರೆ. ಈ ಕುರಿತು   ವಕೀಲ ಡಿ.ಡಿ. ಪಾಂಡ್ಯ ಅವರು ಮಾಹಿತಿ ನೀಡಿದ್ದಾರೆ.

ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಲಾಗಿದ್ದು, ಅಂದು ಆರೋಪಿಗಳ ಹಾಜರಿಗೆ ಆದೇಶಿಸಲಾಗಿದೆ.  ಈ ವಿಷಯದ ಕುರಿತು  ಪ್ರಾಥಮಿಕವಾಗಿ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಾಲಯವು,  ಕಕ್ಷಿದಾರರ ನಡುವಿನ ವಹಿವಾಟು ಗರಂ ಧರಮ್ ಧಾಬಾಗೆ ಸಂಬಂಧಿಸಿದೆ ಮತ್ತು ಅದನ್ನು ಮುಂದುವರಿಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ಕೋರಿ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಆದಾಗ್ಯೂ, ನ್ಯಾಯಾಲಯವು ದೂರನ್ನು ಪರಿಗಣನೆಗೆ ತೆಗೆದುಕೊಂಡಿದ್ದು, ಸಾಕ್ಷ್ಯಾಧಾರಗಳನ್ನು  ಹಾಜರುಪಡಿಸುವಂತೆ ದೂರುದಾರರಿಗೆ ಸೂಚಿಸಿದೆ. 

ಕ್ರಿಸ್‌ಮಸ್‌ ಡ್ರಿಂಕ್ಸ್‌ ಮತ್ತಿನಲ್ಲಿ ಫ್ರೆಂಡ್‌ಗೆ ಮುತ್ತು ಕೊಟ್ಟ ನಿವೇದಿತಾ: ಫೋಟೋ ನೋಡಿ ಟ್ರೋಲಿಗರು ಕೇಳ್ಬೇಕಾ?
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?