
ದೀಪಿಕಾ ಪಡುಕೋಣೆ ಮುದ್ದಾದ ಮಗುವನ್ನು ಕೈಯಲ್ಲಿ ಹಿಡಿದು ಆಸ್ಪತ್ರೆಯಲ್ಲಿ ಪೋಸ್ ಕೊಟ್ಟಿರೋ ಫೋಟೋಗಳು ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸಿವೆ. ಪತಿ ರಣಬೀರ್ ಸಿಂಗ್ ಜೊತೆ ಆಸ್ಪತ್ರೆಯಲ್ಲಿ ದೀಪಿಕಾ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ. ಅಷ್ಟಕ್ಕೂ ಬರುವ ಸೆಪ್ಟೆಂಬರ್ನಲ್ಲಿ ಅಂದರೆ ಮುಂದಿನ ತಿಂಗಳ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಅವರೇ ಖುದ್ದು ಹಿಂದೆ ತಿಳಿಸಿದ್ದರು. ಇವರಿಗೆ ಗಂಡು ಮಗು ಆಗಲಿದೆ ಎಂದು ಜ್ಯೋತಿಷಿಗಳು ಇದಾಗಲೇ ಹೇಳಿಯಾಗಿದೆ. ಆದ್ದರಿಂದ ಅವಧಿಗೂ ಮುನ್ನವೇ ಮಗು ಹುಟ್ಟಿರಬಹುದು ಎಂದು ಹಲವರು ಎಂದಿಕೊಂಡಿದ್ದರು, ಈಗಲೂ ಫೋಟೋ ನೋಡಿ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.
ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ನೆಟ್ಟಿಗರು, ದೀಪಿಕಾ ಪಡುಕೋಣೆ ದಕ್ಷಿಣ ಕನ್ನಡದ ಮೂಲದವರಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಆಸ್ಪತ್ರೆಯಲ್ಲಿಯೇ ಡೆಲವರಿ ಆಗಿದ್ದಾರೆ ಎಂದೂ ಕ್ಯಾಪ್ಷನ್ ಕೊಟ್ಟು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಂಬಿ ಇದಾಗಲೇ ಹಲವರು ನಟಿಗೆ ಶುಭಾಶಯಗಳನ್ನೂ ಹೇಳಿದ್ದಾರೆ. ಅಷ್ಟಕ್ಕೂ ಎಂಟನೆಯ ತಿಂಗಳಿಗೆ ಮಗು ಹುಟ್ಟುವುದು ಹೊಸ ವಿಷಯವೇನಲ್ಲ. ಅದೇ ರೀತಿ ದೀಪಿಕಾ ಅವರಿಗೂ ಮಗು ಹುಟ್ಟಿರುವುದಾಗಿ ಅವರ ಮತ್ತು ಪತಿ ರಣವೀರ್ ಜೊತೆಗೆ ಮಗುವಿರುವ ಫೋಟೋ ವೈರಲ್ ಆಗುತ್ತಿದೆ. ದೀಪಿಕಾ ಅವರು ಆಸ್ಪತ್ರೆಯಲ್ಲಿ ಇರುವುದನ್ನು ಈ ಫೋಟೋದಲ್ಲಿ ನೋಡಬಹುದು.
ದುಬೈ ಶೇಖ್ಗೆ ಮಾರಲು ಹೊಂಚುಹಾಕಿದ್ರಂತೆ ತಾಪ್ಸಿ ಪನ್ನು ಪತಿ! ಆ ದಿನಗಳ ಕುರಿತು ನಟಿ ಹೇಳಿದ್ದೇನು?
ಆದರೆ ಶುಭಾಶಯ ಹೇಳಿದವರೇ ಈಗ ಸುಸ್ತಾಗಿದ್ದಾರೆ. ಇದಕ್ಕೆ ಕಾರಣ, ನಟಿ ಕಾರ್ಯಕ್ರಮವೊಂದರಲ್ಲಿ ನಿನ್ನೆ ಕಾಣಿಸಿಕೊಂಡಿದ್ದು, ಅದರಲ್ಲಿ ಆಕೆ ಗರ್ಭಿಣಿಯಾಗಿರುವುದನ್ನು ನೋಡಬಹುದು. ನಿಧಾನವಾಗಿ ಹೆಜ್ಜೆ ಇಡುತ್ತಾ ನಟಿ ಸಾಗುವುದನ್ನು ನೋಡಬಹುದು. ಹಾಗಾದರೆ ಮಗು ಹುಟ್ಟಿದ್ದು ದೀಪಿಕಾಗೆ ಅಲ್ವಾ? ಮಗು ಹುಟ್ಟಿದ್ದರೆ ಈಕೆ ಯಾಕೆ ಬರುತ್ತಿದ್ದರು ಎಂದು ಹಲವರು ತಲೆ ಕೆಡಿಸಿಕೊಂಡಿದ್ದರೆ, ಮತ್ತೆ ಕೆಲವರು ದೀಪಿಕಾರ ಹೊಟ್ಟೆ ನೋಡಿ, ದಿನಕ್ಕೊಂದು ರೀತಿಯಲ್ಲಿ ಹೊಟ್ಟೆ ಕಾಣಿಸುತ್ತಿದ್ದು, ಈಕೆ ಗರ್ಭಿಣಿ ಎನ್ನುವುದೇ ಸುಳ್ಳು ಎನ್ನುತ್ತಿದ್ದಾರೆ. ಆದರೆ ರಿಯಲ್ ವಿಷಯ ಏನಪ್ಪಾ ಎಂದರೆ, ದೀಪಿಕಾಗೆ ಇನ್ನೂ ಮಗುವೇ ಹುಟ್ಟಿಲ್ಲ. ದೀಪಿಕಾ ಮತ್ತು ರಣವೀರ್ ಕೈಯಲ್ಲಿ ಇರುವ ಪಾಪು ನೆಟ್ಟಿಗರು ಸೃಷ್ಟಿಸಿರೋದು. ಎಐ ತಂತ್ರಜ್ಞಾನ ಬಳಸಿ ಈ ಫೇಕ್ ಫೋಟೋ ವೈರಲ್ ಮಾಡಲಾಗಿದೆ. ಆದರೆ ಅಸಲಿಯತ್ತು ತಿಳಿಯದೇ ಶುಭಾಶಯಗಳ ಸುರಿಮಳೆಯಾಗುತ್ತಿದೆ.
ಇಷ್ಟೇ ಅಲ್ಲ, ಕಳೆದ ತಿಂಗಳು ಎಂಟನೆಯ ತಿಂಗಳಿನಲ್ಲಿ ಹೊಸ್ತಿಲಿನಲ್ಲಿರುವ ದೀಪಿಕಾ ಅವರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಮಾಡಲಾಗಿದೆ ಎನ್ನಲಾದ ಫೋಟೋಗಳು ವೈರಲ್ ಆಗಿದ್ದವು. ಹೀಗೆ ವೈರಲ್ ಆಗುತ್ತಿರುವ ಫೋಟೋಗಳು ಅಸಲಿಯದ್ದೋ ಅಥವಾ ನಕಲಿಯದ್ದೋ ಎನ್ನುವುದು ಇನ್ನೂ ತಿಳಿದಿಲ್ಲ. ಧಾರ್ಮಿಕ ಗ್ರಂಥಗಳ ಪ್ರಕಾರ, ಸೀಮಂತ ಶಾಸ್ತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಇದನ್ನು ಮಾಡುವುದರಿಂದ ಹುಟ್ಟುವ ಮಗು ಶಕ್ತಿ ಪಡೆಯುತ್ತದೆ. ಈ ಸಮಯದಲ್ಲಿ, ಗರ್ಭದಲ್ಲಿ ಬೆಳೆಯುತ್ತಿರುವ ಮಗುವನ್ನು ಅನೇಕ ಮಂತ್ರಗಳಿಂದ ಸಂಸ್ಕಾರ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಆ ಮಗುವು ಗ್ರಹ ಹೊಂದಾಣಿಕೆಯನ್ನು ಪಡೆಯುತ್ತದೆ ಮತ್ತು ಯಾವುದಾದರೂ ಅಶುಭ ಯೋಗವುಂಟಾದರೆ ಅದರ ಪರಿಣಾಮವೂ ದೂರಾಗುತ್ತದೆ ಎನ್ನಲಾಗುತ್ತದೆ. ಅದೇ ರೀತಿ ದೀಪಿಕಾಗೆ ಸೀಮಂತ ಮಾಡಲಾಗಿದೆ ಎನ್ನಲಾಗುತ್ತಿದ್ದರೂ ಈ ಫೋಟೋಗಳೂ ಫೇಕ್ ಎನ್ನಲಾಗುತ್ತಿದೆ. ಅಂದಹಾಗೆ, ರಣವೀರ್ ಸಿಂಗ್ ಮತ್ತು ದೀಪಿಕಾ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದದಾರೆ. ಮದುವೆಯಾಗಿ ಸುಮಾರು 5 ವರ್ಷಗಳ ಬಳಿಕ ಈಗ ಗರ್ಭ ಧರಿಸಿದ್ದಾರೆ. ಈಗ ದೀಪಿಕಾಗೆ ನಿಜಕ್ಕೂ ಡೆಲವರಿ ಆಗಿದ್ರೂ ಯಾರೂ ನಂಬದ ಸ್ಥಿತಿ ಉಂಟಾಗಿದೆ.
600 ವರ್ಷಕ್ಕೊಮ್ಮೆ ಸಂಭವಿಸೋ ಜಾತಕದಲ್ಲಿ ಹುಟ್ಟಿದ ಐಶ್ ದಾಂಪತ್ಯಕ್ಕೆ ಈ ಡಾಕ್ಟರೇ ಬಿರುಗಾಳಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.