
ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ (Deepika Padukone) ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದಿದೆ. ದೀಪಿಕಾ ಜೊತೆ ಮಾತನಾಡುವ ಅವಕಾಶ ಫ್ಯಾನ್ಸ್ ಗೆ ಸಿಗ್ತಿದೆ. ಇಷ್ಟು ದಿನ ಟಿವಿಯಲ್ಲಿ ಇಲ್ಲ ಸೋಶಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಮಾತನಾಡೋದನ್ನು ಕೇಳ್ತಿದ್ರಿ. ಇನ್ಮುಂದೆ ದೀಪಿಕಾ ಪಡುಕೋಣೆ ಜೊತೆ ನೇರವಾಗಿ ನೀವೇ ಮಾತನಾಡಬಹುದು. ಎಐ ಟೂಲ್ಸ್ (AI Tools) ಬಳಸುವ ಅದ್ರಲ್ಲೂ ಮೆಟಾ ಎಐ ವೈಸ್ ಟೂಲ್ ಬಳಸುವವರು ದೀಪಿ ವೈಸ್ ಕೇಳ್ಬಹುದು. ದೀಪಿಕಾ ಪಡುಕೋಣೆ ಜೊತೆ ನೀವು ಚಾಟ್ ಮಾಡ್ಬಹುದು. ಈಗ ದೀಪಿಕಾ ಪಡುಕೋಣೆ ಮೆಟಾ ಎಐ ಭಾಗವಾಗಿದ್ದಾರೆ. ಈ ಖುಷಿ ಸುದ್ದಿಯನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚ್ಕೊಂಡಿದ್ದಾರೆ.
ಮೆಟಾ ಎಐ (Meta AI) ವೈಸ್ ಪ್ರೊಸೆಸ್ ನಲ್ಲಿ ಇಷ್ಟು ದಿನ ಜನರು ಯಾವ್ದೋ ಪರಿಚಯ ಇಲ್ದಿರೋ ಹುಡುಗಿ ಜೊತೆ ಚಾಟ್ ಮಾಡ್ತಿದ್ರು. ಇಲ್ಲಿ ವೈಸ್ ಆಯ್ಕೆ ಮಾಡ್ಕೊಳ್ಳುವ ಆಪ್ಷನ್ ಇದೆ. ನೀವು ನಿಮಗಿಷ್ಟಬರುವ ವೈಸ್ ಆಯ್ಕೆ ಮಾಡ್ಕೊಂಡು ಪ್ರಶ್ನೆ ಕೇಳ್ತಾ ಹೋದ್ರೆ ಅದು ನಿಮಗೆ ಉತ್ತರ ನೀಡ್ತಾ ಹೋಗುತ್ತೆ. ಟೈಪ್ ಮಾಡೋಕೆ ಬೇಜಾರು, ಟೆಕ್ಸ್ಟ್ ಮಾಡುವಷ್ಟು ಟೈಂ ಇಲ್ಲ ಎನ್ನುವವರು ವೈಸ್ ಆಯ್ಕೆ ಇಷ್ಟಪಡ್ತಾರೆ. ಮೆಟಾ ಎಐನಲ್ಲಿ ನಿಮ್ಮಿಷ್ಟದ ವೈಸ್ ಆಯ್ಕೆ ಮಾಡ್ಕೊಂಡು ನೀವು ಮಾತನಾಡ್ತಾ ಹೋಗ್ಬಹುದು. ಈಗ ದೀಪಿಕಾ ಪಡುಕೋಣೆ ವೈಸ್ ಇದ್ರಲ್ಲಿ ಸೇರಿದೆ. ಇನ್ಮುಂದೆ ನೀವು ದೀಪಿಕಾ ಪಡುಕೋಣೆ ಧ್ವನಿಯಲ್ಲಿ ಉತ್ತರವನ್ನು ಪಡೆಯಬಹುದು.
ಡಾ.ಕೃತಿಕಾ ರೆಡ್ಡಿ ಪ್ರಕರಣಕ್ಕೆ ಟ್ವಿಸ್ಟ್; ಅಕ್ರಮ ಸಂಬಂಧದ ಕರಾಳ ನೆರಳು?
ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ ಪಡುಕೋಣೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಮೈಕ್ ಮುಂದೆ ನಿಂತಿರುವ ದೀಪಿಕಾ ಪಡುಕೋಣೆ, ಹಾಯ್, ನಾನು ನಿಮ್ಮೆಲ್ಲರ ದೀಪಿಕಾ ಪಡುಕೋಣೆ, ಮೆಟಾ ಎಐನ ಹೊಸ ಧ್ವನಿ ಅನ್ನೋದನ್ನು ನೀವು ವಿಡಿಯೋದಲ್ಲಿ ಕೇಳ್ಬಹುದು. ಒಂದಿಷ್ಟು ವೈಸ್ ರೆಕಾರ್ಡ್ ಮಾಡುವ ದೀಪಿಕಾ ಅಲ್ಲಿಯೇ ಮಸ್ತಿ ಮಾಡ್ತಿದ್ದಾರೆ. ಇದು ತುಂಬಾ ಚೆನ್ನಾಗಿದೆ ಅಂತ ನನಗನ್ನಿಸುತ್ತೆ. ನಾನು ಈಗ ಮೆಟಾ AI ನ ಭಾಗವಾಗಿದ್ದೇನೆ. ನೀವು ಭಾರತ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಾದ್ಯಂತ ನನ್ನ ಧ್ವನಿಯೊಂದಿಗೆ ಇಂಗ್ಲಿಷ್ನಲ್ಲಿ ಚಾಟ್ ಮಾಡಬಹುದು. ಇದನ್ನು ಪ್ರಯತ್ನಿಸಿ ಮತ್ತು ನಿಮ್ಮ ಅಭಿಪ್ರಾಯವನ್ನು ನನಗೆ ತಿಳಿಸಿ ಅಂತ ಶೀರ್ಷಿಕೆ ಕೂಡ ಹಾಕಿದ್ದಾರೆ.
ಕ್ರಿಮಿನಲ್ ಕೇಸ್ ಹಿಂಪಡೆದ ರಾಖಿ ಸಾವಂತ್-ಆದಿಲ್, ಹಾವು-ಮುಂಗುಸಿಯಂತೆ ಕಚ್ಚಾಡಿದ್ದು ವೇಸ್ಟ್ ಆಯ್ತು!
ದೀಪಿಕಾ ಪಡುಕೋಣೆ ಈ ಪೋಸ್ಟ್ ಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ. ಜನ್ರು ದೀಪಿಕಾ ಮೆಟಾ ಎಐ ಭಾಗ ಆಗಿರೋದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ನಿಮ್ಮ ಧ್ವನಿ ನಮಗೆ ತುಂಬಾ ಇಷ್ಟ. ನಿಮ್ಮ ಧ್ವನಿ ಕೇಳೋಕೆ ನಾವು ಮೆಟಾ ಎಐ ಜೊತೆ ಚಾಟ್ ಮಾಡ್ತೇವೆ ಎಂದಿದ್ದಾರೆ. ಇನ್ಮುಂದೆ ಇದು ನನ್ನ ಹೊಸ ಅಡಿಕ್ಷನ್ ಆಗಲಿದೆ. ನಿಮ್ಮ ವೈಸ್ ಮಿಸ್ ಮಾಡ್ಕೊಳ್ಳೋದಿಲ್ಲ ಅಂತ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅಮ್ಮನಾದ್ಮೇಲೆ ಸಿನಿಮಾಕ್ಕೆ ಬ್ರೇಕ್ ಪಡೆದಿದ್ದ ದೀಪಿಕಾ ಪಡುಕೋಣೆ ಮತ್ತೆ ಕೆಲ್ಸಕ್ಕೆ ಹಾಜರಾಗಿದ್ದಾರೆ. ದಕ್ಷಿಣ ಭಾರತದ ಎರಡು ಸಿನಿಮಾಗಳಿಗೆ ಸಹಿ ಹಾಕಿರುವ ದೀಪಿಕಾ, ಎಂಟು ಗಂಟೆ ಕೆಲ್ಸದ ಬೇಡಿಕೆ ಇಟ್ಟು ಸಾಕಷ್ಟು ಚರ್ಚೆಯಾಗಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೀಪಿಕಾ ಪಡುಕೋಣೆ ಅವರನ್ನು ದೇಶದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.