RRR ಸಿನಿಮಾದ ಗ್ಲೋಬಲ್ ಸಕ್ಸಸ್ ನಂತರ NTR ನಟನೆಯಲ್ಲಿ ಬರ್ತಿರೋ ಸಿನಿಮಾ ದೇವರ. ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಆಗಿರೋ ದೇವರ ಎರಡು ಭಾಗಗಳಲ್ಲಿ ಬರಲಿದ್ದು ಮೊದಲ ಪಾರ್ಟ್ ಗೇನೇ ಭರ್ತಿ 300 ಕೋಟಿ ಬಜೆಟ್ ಹೂಡಿಕೆ ಮಾಡಲಾಗಿದೆ. ಕೊರಟಾಲ ಶಿವ..
ಜೂನಿಯರ್ ಎನ್‌ಟಿಆರ್ (Junior NTR) ನಟನೆಯ ಪ್ಯಾನ್ ಇಂಡಿಯಾ ಮೂವಿ 'ದೇವರ' ಇದೇ ಸೆಪ್ಟೆಂಬರ್ ಕೊನೆವಾರ ರಿಲೀಸ್ ಗೆ ಸಜ್ಜಾಗಿದೆ. ಈಗಾಗ್ಲೇ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡ ಪ್ರಚಾರವನ್ನೂ ಶುರುಮಾಡಿದೆ. ಆದ್ರೆ Jr. NTR ಫ್ಯಾನ್ಸ್ ಗೆ ಮಾತ್ರ ಒಂದು ಭಯ ಕಾಡ್ತಾ ಇದೆ. ನಿಜಕ್ಕೂ ದೇವರ ಗೆಲ್ಲುತ್ತಾ ಅಂತ ಢವ ಢವ ಶುರುವಾಗಿದೆ. ಅಷ್ಟಕ್ಕೂ ಇಂಥಾ ಭಯಕ್ಕೆ ಕಾರಣವೇ ರಾಜಮೌಳಿ. ಅರೇ ರಾಜಮೌಳಿಗೂ ದೇವರಗೂ ಏನ್ ಸಂಬಂಧ ಅಂತೀರಾ..? ಇಲ್ಲಿದೆ ನೋಡಿ ಆ ಕುರಿತ ಇನ್ ಟ್ರೆಸ್ಟಿಂಗ್ ಸ್ಟೋರಿ.
ರಾಜಮೌಳಿ ಆಫ್ಟರ್ ಎಫೆಕ್ಟ್.. Jr. NTR ‘ದೇವರ’ಗೆ ಢವ ಢವ: ರಾಜಮೌಳಿ ಸಿನಿಮಾ ಹಿಟ್.. ಬಳಿಕ ಮಾಡಿದ್ದೆಲ್ಲಾ ಫ್ಲಾಫ್..!
ಯೆಸ್ ಟಾಲಿವುಡ್ ನಲ್ಲಿ ಒಂದು ವಿಚಿತ್ರ ನಂಬಿಕೆ ಇದೆ. ರಾಜಮೌಳಿ ಜೊತೆ ಯಾವುದೇ ಹೀರೋ ಸಿನಿಮಾ ಮಾಡಿದ್ರೂ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಆದ್ರೆ ಆ ಬಳಿಕ ಆ ನಟ ನಟಿಸೋ ಸಿನಿಮಾ ಮಾತ್ರ ಹೀನಾಯವಾಗಿ ಸೋಲುತ್ತೆ ಅಂತ. ಇದಕ್ಕೆ ರಾಜಮೌಳಿ ಆಫ್ಟರ್ ಎಫೆಕ್ಟ್ ಅಂತ ತಮಾಷೆಯಾಗಿ ಕರೀತಾರೆ ಟಾಲಿವುಡ್ ಪಂಡಿತರು. ಸೋ ಮೌಳಿ ಆಫ್ಟರ್ ಎಫೆಕ್ಟ್ ಭೀತಿ ಈಗ NTR ನಟನೆಯ ದೇವರ ಸಿನಿಮಾಗೆ ಶುರುವಾಗಿದೆ.
ಬಳ್ಳಾರಿ ಜೈಲು ಸಿಬ್ಬಂದಿ ಕಣ್ಣಿಗೆ ಬಿದ್ರೆ ಸಾಕು, ಕಟ ಕಟ ಅಂತಿದಾರಂತೆ ಕಾಟೇರ!
RRR ಸಿನಿಮಾದ ಗ್ಲೋಬಲ್ ಸಕ್ಸಸ್ ನಂತರ NTR ನಟನೆಯಲ್ಲಿ ಬರ್ತಿರೋ ಸಿನಿಮಾ ದೇವರ. ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಆಗಿರೋ ದೇವರ ಎರಡು ಭಾಗಗಳಲ್ಲಿ ಬರಲಿದ್ದು ಮೊದಲ ಪಾರ್ಟ್ ಗೇನೇ ಭರ್ತಿ 300 ಕೋಟಿ ಬಜೆಟ್ ಹೂಡಿಕೆ ಮಾಡಲಾಗಿದೆ. ಕೊರಟಾಲ ಶಿವ ಈ ಸಿನಿಮಾಗೆ ಌಕ್ಷನ್ ಕಟ್ ಹೇಳಿದ್ದು ಇದೇ ಸೆಪ್ಟೆಂಬರ್ ಕೊನೆವಾರ ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ.
ರಿಲೀಸ್ ಹೊಸ್ತಿಲಲ್ಲಿ ಬಂದಿರೋ ದೇವರ ಟ್ರೈಲರ್ ಬಗ್ಗೆ ಮೀಶ್ರ ಪ್ರತಿಕ್ರಿಯೆ ಬಂದಿವೆ. ಟ್ರೈಲರ್ ನಲ್ಲಿರೋ ಕೆಲ ಸಿಜಿ ಶಾಟ್ಸ್ ಗಳನ್ನ ಗೇಲಿ ಮಾಡಲಾಗ್ತಾ ಇದೆ. ಅದ್ರಲ್ಲೂ ಟ್ರೈಲರ್ ಕೊನೆಯಲ್ಲಿ ಶಾರ್ಕ್ ಮೇಲೆ ನಾಯಕ ಕುಳಿತು ನೆಗೆಯೋ ದೃಶ್ಯವನ್ನಂತೂ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗ್ತಾ ಇದೆ.
ಈ ಟ್ರೈಲರ್ ನೋಡ್ತಿದ್ರೆ ಈ ಸಿನಿಮಾದ ಭವಿಷ್ಯ ಕಣ್ಣೆದುರಿಗೆ ಕಾಣ್ತಾ ಇದೆ. ಮತ್ತೊಮ್ಮೆ ರಾಜಮೌಳಿ ಶಾಪ NTRಗೆ ಅಂಟಿಕೊಂಡಿದೆ ಅಂತ ಅನೇಕರು ಕಾಮೆಂಟ್ ಮಾಡ್ತಾ ಇದ್ದಾರೆ. ಅಚ್ಚರಿ ಅಂದ್ರೆ ಟಾಲಿವುಡ್ ಪಂಡಿತರು ಹೇಳುವಂತೆ ರಾಜಮೌಳಿ ಜೊತೆ ಕೆಲಸ ಮಾಡಿದ ನಟರ ಮುಂದಿನ ಸಿನಿಮಾ ಮಿಸ್ಸಿಲ್ಲದೇ ಮಕಾಡೆ ಮಲಗಿವೆ.
ಸಾಧು ಕೋಕಿಲ ಬಗ್ಗೆ ಉಪೇಂದ್ರ ಹೇಳಿದ್ದೇನು? ರಕ್ತ ಕಣ್ಣೀರು ಟೈಮಲ್ಲಿ ಏನ್ ಮಾಡಿದ್ರಂತೆ..!?
ಬಾಹಬಲಿ1&2 ನಂತಹ ಮೆಗಾ ಸಿನಿಮಾ ಮಾಡಿದ ಮೇಲೆ ಪ್ರಭಾಸ್ ಸತತ 3 ಫ್ಲಾಪ್ ಕೊಟ್ರು. ಸಾಹೋ, ಆದಿಪುರುಷ್, ರಾಧೆ ಶ್ಯಾಮ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಡಿಸಾಸ್ಟರ್ ಆದ್ವು. ಕೊನೆಗೂ ಪ್ರಭಾಸ್ ನ ಗೆಲುವಿನ ಟ್ರ್ಯಾಕ್ ಗೆ ತಂದಿದ್ದು ನಮ್ಮ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್.
ಇನ್ನೂ RRRನಲ್ಲಿ ನಟಿಸಿದ ಇನ್ನೊಬ್ಬ ಹೀರೋ ರಾಮ್ ಚರಣ್ ಗೆ ಈ ಎಫೆಕ್ಟ್ ಅಪ್ಪಳಿಸಿದೆ. ರಾಮ್ ಚರಣ್ ನಟಿಸಿದ ಹಿಂದಿನ ಆಚಾರ್ಯ ಅಟ್ಟರ್ ಫ್ಲಾಪ್ ಆಯ್ತು. ಅಚ್ಚರಿ ಅಂದ್ರೆ ಆಚಾರ್ಯ ನಿರ್ದೇಶಿಸಿದ್ದ ಕೊರಟಾಲ ಶಿವನೇ ದೇವರಗೂ ಌಕ್ಷನ್ ಕಟ್ ಹೇಳಿದ್ದಾರೆ.
ಈ ಹಿಂದೆ ರಾಜಮೌಳಿ ಜೊತೆ ಮಗಧೀರನಲ್ಲಿ ನಟಿಸಿದ ನಂತರವೂ ಚರಣ್ ಗೆ ಸಾಲು ಸಾಲು ಸೋಲು ಎದುರಾಗಿದ್ವು. ವಿಕ್ರಮಾರ್ಕುಡು ಬಳಿಕ ರವಿತೇಜ ನಟಿಸಿದ ಚಿತ್ರಗಳು ಕೂಡ ನೆಲಕಚ್ಚಿದ್ವು. ಅಷ್ಟೆಲ್ಲಾ ಯಾಕೆ ಈ ಹಿಂದೆ ಖುದ್ದು NTRಗೂ ಈ ಅನುಭವ ಆಗಿದೆ. ರಾಜಮೌಳಿ NTR ಜೋಡಿಯ ಸ್ಟುಡೆಂಟ್ ನಂ.1 ಸೂಪರ್ ಹಿಟ್ ಆಯ್ತು. ಆದ್ರೆ ಆ ನಂತರ NTR ನಟಿಸಿದ ಸುಬ್ಬು ಸಿನಿಮಾ ಮಕಾಡೆ ಮಲಗಿತ್ತು.
2007ರಲ್ಲಿ ಮತ್ತೆ ಜಕ್ಕಣ್ಣ-ತಾರಕ್ ಒಂದಾಗಿ ಮಾಡಿದ ಯಮದೊಂಗ ಸೂಪರ್ ಹಿಟ್ ಆಯ್ತು. ಆದ್ರೆ ಆ ಬಳಿಕ ನಟಿಸಿದ ಕಂತ್ರಿ ಸಿನಿಮಾ ಹೇಳಹೆಸರಿಲ್ಲದಂತೆ ಸೋತು ಹೋಗಿತ್ತು. ಸೋ ಈ ರಾಜಮೌಳಿ ಆಫ್ಟರ್ ಎಫೆಕ್ಟ್ ಹಲವು ಬಾರಿ ಸತ್ಯ ಅಂತ ಪ್ರೂವ್ ಆಗಿದೆ.
'ಸೂಪರ್ ಸ್ಟಾರ್'ಗೆ ನಾಗತಿಹಳ್ಳಿ ಬಂದಿದ್ದು ಯಾಕೆಂಬ ಸಂಗತಿಯನ್ನು ಬಿಚ್ಚಿಟ್ಟ ಉಪೇಂದ್ರ!
ಸದ್ಯ ದೇವರ ರಿಲೀಸ್ ಗೆ ಸಜ್ಜಾಗಿರೋವಾಗ NTR ಫ್ಯಾನ್ಸ್ ಗೆ ಇದೇ ಢವ ಢವ ಕಾಡ್ತಾ ಇದೆ. ಈ ಬಾರಿ ಆ ನಂಬಿಕೆ ಸುಳ್ಳಾಗಲಿ, ರಾಜಮೌಳಿಗೆ ಅಂಟಿದ ಶಾಪ ಕಳೆಯಲಿ.. ದೇವರ ಗೆಲ್ಲಲಿ ಅಂತ NTR ಫ್ಯಾನ್ಸ್ ದೇವರಲ್ಲಿ ಪ್ರಾರ್ಥನೆ ಮಾಡ್ತಾ ಇದ್ದಾರೆ.