ನನ್ನ ಈ ಸುಂದರ ಅಂಗವನ್ನು ದಾನ ಮಾಡುತ್ತಿದ್ದೇನೆ ಎಂದ Rakhi Sawant: ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

Published : Sep 08, 2025, 07:21 PM IST
rakhi sawant heartbroken

ಸಾರಾಂಶ

ಹಲವು ದಾನಿಗಳು ತಮ್ಮ ಒಂದೊಂದು ಅಂಗ ದಾನ ಮಾಡುತ್ತಿದ್ದಾರೆ. ಇದರಿಂದ ಪ್ರೇರೇಪಿತಗೊಂಡ ನಾನು ಒಂದು ಅಂಗ ದಾನ ಮಾಡುತ್ತಿದ್ದೇನೆ ಎನ್ನುವ ಮೂಲಕ ಆ ಬಗ್ಗೆ ಮಾತನಾಡಿ ಟ್ರೋಲ್​ಗೆ ಒಳಗಾಗಿದ್ದಾರೆ ನಟಿ ರಾಖಿ ಸಾವಂತ್​! 

ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರೋ ಡ್ರಾಮಾ ಕ್ವೀನ್​ ರಾಖಿ ಸಾವಂತ್​ (drama queen rakhi sawanth) ಮತ್ತೆ ಸದ್ದು ಮಾಡುತ್ತಿದ್ದಾರೆ. ಇವರು ಬಂಧನ ಭೀತಿ ಎದುರಿಸುತ್ತಿದ್ದರು.ಅದಕ್ಕಾಗಿ ದುಬೈನಲ್ಲಿ ನೆಲೆಸಿದ್ದರು. ಅವರ ಪತಿ ಆದಿಲ್​ ಖಾನ್​ ದುರ್ರಾನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಅರೆಸ್ಟ್​ ಆಗಬೇಕಿತ್ತು ನಟಿ. ಆದಿಲ್ ಅವರ ಖಾಸಗಿ ವಿಡಿಯೋವನ್ನು ರಾಖಿ ವೈರಲ್ ಮಾಡಿದ್ದರು. ಈ ಪ್ರಕರಣದಲ್ಲಿ ಮುಂಬೈ ಸೆಷನ್ಸ್ ಕೋರ್ಟ್ ರಾಖಿ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಯಾವ ಕ್ಷಣದಲ್ಲಾದರೂ ರಾಖಿ ಬಂಧನಕ್ಕೆ ಒಳಗಾಗುತ್ತಾರಾ ಎಂಬ ಕಾರಣಕ್ಕೆ ದುಬೈಗೆ ಓಡಿ ಹೋಗಿದ್ದರು ಎನ್ನಲಾಗಿತ್ತು. ಹೈಕೋರ್ಟ್​ ಆದೇಶದ ಪ್ರಕಾರ ಅವರು ಸರೆಂಡರ್​ ಆಗಬೇಕಿತ್ತು. ಆದರೆ ಆ ಪ್ರಕರಣ ಸದ್ಯ ತಣ್ಣಗಾಗಿದೆ. ಇದೀಗ ರಾಖಿ ಸಾವಂತ್​ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ಇದನ್ನೂ ಓದಿ: ನನ್ನದಲ್ಲದ ತಪ್ಪಿಗೆ ಭಿಕ್ಷುಕಿಯಾಗಿ ಜೀವನ ಮಾಡ್ತಿದ್ದೇನೆ: ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು!

'ಆ ಭಾಗ' ದಾನಕ್ಕೆ ಮುಂದಾದ ನಟಿ

ಈಗ ಕಾಣಿಸಿಕೊಂಡಿರುವ ರಾಖಿ ತಾವು ಅಂಗಾಂಗ ದಾನ ಮಾಡುವ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಏನೇನೋ ಅಂಗಗಳನ್ನು ದಾನ (donation) ಮಾಡುತ್ತಾರೆ. ಕಣ್ಣು, ಕಿಡ್ನಿ, ಲಿವರ್​ ಹೀಗೆ ಎಲ್ಲವನ್ನೂ ದಾನ ಮಾಡುತ್ತಾರೆ. ಇದನ್ನು ನೋಡಿ ನನಗೂ ದಾನ ಮಾಡುವ ಆಸೆಯಾಗಿದೆ. ನನ್ನಲ್ಲಿ ಇರುವ ಸುಂದರವಾದ ಅಂಗವೆಂದರೆ bo*bs ಮಾತ್ರ (ಇದಕ್ಕೆ ಪ್ಲಾಸ್ಟಿಕ್​ ಸರ್ಜರಿ ಬಿದ್ದಿದೆ ಎನ್ನುವುದು ತೀರಾ ಹಳೆಯ ಸುದ್ದಿ). ಅದು ಅತ್ಯಂತ ಸುಂದರವಾಗಿದೆ. ಇದೇ ಕಾರಣಕ್ಕೆ ಅದನ್ನೇ ನಾನು ದಾನ ಮಾಡೋಣ ಎಂದುಕೊಂಡಿದ್ದೇನೆ ಎಂದಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ಅದಕ್ಕೆ ಪ್ಲಾಸ್ಟಿಕ್​ ಸರ್ಜರಿ ಆಗಿರೋ ಕಾರಣ ಅದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು, ಬದುಕಿರುವಾಗ ಅದು ಸಾಧ್ಯವಿಲ್ಲ, ಯಾವಾಗ ಈ ನ್ಯೂಸ್​ ಕೊಡ್ತೀರಾ ಎಂದು ನಟಿಯ ಕಾಲೆಳೆದಿದ್ದಾರೆ.

ಸಕತ್​ ಸದ್ದು ಮಾಡಿದ್ದ ನಟಿ

ಅಷ್ಟಕ್ಕೂ, ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿಯ ವಿಷಯ ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಒಂದಾದ ಮೇಲೊಂದರಂತೆ ನಾಟಕೀಯ ಬೆಳವಣಿಗೆಗಳು ಈ ಜೋಡಿಯ ನಡುವೆ ನಡೆಯುತ್ತಲೇ ಇದೆ. ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರುವ ನಟಿ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ದುರ್ರಾನಿ (Adil Khan Durrani) ಅವರ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ.

ಇದನ್ನೂ ಓದಿ: ಐಶ್ವರ್ಯಾ ಜೊತೆ ಅಂದು ಆಗಬಾರದ್ದು ಆಗೋಯ್ತು ಎನ್ನುತ್ತಲೇ ಘಟನೆ ನೆನೆದು ಕ್ಷಮೆ ಕೋರಿದ Shah rukh Khan

ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ದಿನಕ್ಕೊಂದು ವೇಷ:

ಇದಾದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ತಿದ್ದ ರಾಖಿ ಇದ್ದಕ್ಕಿದ್ದಂತೆಯೇ ಕಣ್ಮರೆಯಾದರು. ಮರಾಠಿ ಬಿಗ್​ಬಾಸ್​ ಮನೆಯಲ್ಲಿಯೂ ಕಾಣಿಸಿಕೊಂಡರು. ಈ ಹಿಂದೆ ಕೂಡ ದುಬೈನಿಂದಲೇ ಸಂದರ್ಶನ ನೀಡಿದ್ದ ನಟಿ, ನಾನು ಏನೂ ತಪ್ಪು ಮಾಡಲಿಲ್ಲ. ಮಾಡದ ತಪ್ಪಿಗೆ ಹೈಕೋರ್ಟ್​ ಸರೆಂಡರ್​ ಆಗುವಂತೆ ಹೇಳುತ್ತಿದೆ. ನಾನು ನಿರಪರಾಧಿ ಎಂದು ತಿಳಿಸುವ ಎಲ್ಲಾ ಸಾಕ್ಷ್ಯಾಧಾರಗಳೂ ನನ್ನ ಬಳಿ ಇವೆ. ಆದರೂ ಯಾಕೋ ನನ್ನನ್ನು ಸಿಲುಕಿಸುತ್ತಿದ್ದಾರೆ. ನಾನು ಮರಾಠಿ ಬಿಗ್​ಬಾಸ್​ಗೆ (Bigg Boss) ಕದ್ದುಮುಚ್ಚಿ ಹೋಗಿ ಶೂಟಿಂಗ್​ ಮಾಡಿ ಮತ್ತೆ ವಾಪಸ್​ ಬರ್ತೇನೆ. ನನ್ನನ್ನು ವಿನಾಕಾರಣ ನೋಯಿಸಲಾಗುತ್ತಿದೆ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ