ಅನ್ನ‌ ಸಾರು, ಮಿಡಿ ಉಪ್ಪಿನಕಾಯಿ ನನ್ನ ಫೇವರೆಟ್ ಅಂತಾರೆ ದೀಪಿಕಾ ಪಡುಕೋಣೆ

By Suvarna News  |  First Published Jul 15, 2020, 6:41 PM IST

ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮೊದ ಮೊದಲ ದಿನಗಳಲ್ಲಿ ತನ್ನೂರಿನ ಬಗ್ಗೆ, ತನ್ನ ಭಾಷೆಯ ಬಗ್ಗೆ ಹೇಳಿಕೊಳ್ಳಲು ತುಸು ಹಿಂಜರಿದಂತೆ ಕಾಣುತ್ತಿದ್ದ ಈ ಸೌತ್ ಇಂಡಿಯನ್ ಚೆಲುವೆ ಈಗ ಮದುವೆ ಆದ್ಮೇಲೆ ಒಂಚೂರು ಬದಲಾಗಿದ್ದಾರಾ ಅನ್ನೋ ‌ಡೌಟ್ ಬರ್ತಿದೆ. ಕಾರಣ ಅವರ ಇತ್ತೀಚಿನ‌ ಸ್ಟೇಟ್ ಮೆಂಟ್.


ದೀಪಿಕಾ ಪಡುಕೋಣೆಗೆ ಯಾಕೋ ಸೌತ್ ಇಂಡಿಯಾ ಬಗ್ಗೆ ಲವ್ ಆದಂಗಿದೆ. ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಮೊದ ಮೊದಲ ದಿನಗಳಲ್ಲಿ ತನ್ನೂರಿನ ಬಗ್ಗೆ, ತನ್ನ ಭಾಷೆಯ ಬಗ್ಗೆ ಹೇಳಿಕೊಳ್ಳಲು ತುಸು ಹಿಂಜರಿದಂತೆ ಕಾಣುತ್ತಿದ್ದ ಈ ಸೌತ್ ಇಂಡಿಯನ್ ಚೆಲುವೆ ಈಗ ಮದುವೆ ಆದ್ಮೇಲೆ ಒಂಚೂರು ಬದಲಾಗಿದ್ದಾರಾ ಅನ್ನೋ ‌ಡೌಟ್ ಬರ್ತಿದೆ. ಕಾರಣ ಅವರ ಇತ್ತೀಚಿನ‌ ಸ್ಟೇಟ್ ಮೆಂಟ್. ಇನ್‌ ಸ್ಟಾ ಗ್ರಾಮ್ ನಲ್ಲಿ ಸಕ್ರಿಯವಾಗಿರೋ ಈ ನಟಿ ಕೊರೋನಾ ಟೈಮ್ ನಲ್ಲಂತೂ ಹೆಚ್ಚೆಚ್ಚು ಕಾಣಿಸಿಕೊಳ್ತಿದ್ರು. ಆಗಾಗ ತನ್ನ ಫೋಟೋ, ಪತಿ ರಣ್ ವೀರ್ ಸಿಂಗ್ ಫೋಟೋ ಹಂಚಿಕೊಳ್ಳೋ ಮೂಲಕ ಫ್ಯಾನ್ಸ್ ಗೆ ಮತ್ತಷ್ಟು ಹತ್ತಿರವಾಗೋ ಪ್ರಯತ್ನ ಮಾಡುತ್ತಿದ್ದಾರೆ. 



ರೀಸೆಂಟಾಗಿ ಇನ್‌ಸ್ಟಾದಲ್ಲಿ 'ಆಸ್ಕ್ ಮಿ ಎನಿಥಿಂಗ್' ಸೆಶನ್‌ನಲ್ಲಿ ಕಾಣಿಸಿಕೊಂಡ ದೀಪಿಕಾಗೆ ಅಲ್ಲಿ ಒಂದಿಷ್ಟು ಪ್ರಶ್ನೆಗಳು ಬಂದಿವೆ. ಅದರಲ್ಲೊಂದು ಅವರಿಷ್ಟದ ಆಹಾರದ ಬಗ್ಗೆ ಕೇಳಿದ್ದಾರೆ. ಆಗ ದೀಪಿಕಾ ಮಾತಿನಲ್ಲಿ ಸೌತ್‌ ಇಂಡಿಯನ್ ಪ್ರೀತಿ ಇಣುಕಿದೆ. 'ಇನ್ನುಳಿದ ಜೀವನದಲ್ಲಿ ಒಂದೇ ಫುಡ್ ತಿಂದು ಬದುಕ್ಬೇಕು ಅಂತಾದ್ರೆ ನೀವು ಆಯ್ಕೆ ಮಾಡೋ ಆಹಾರ ಯಾವ್ದು ಅನ್ನೋ ಪ್ರಶ್ನೆಯನ್ನು ದೀಪಿಕಾ ಅಭಿಮಾನಿಯೊಬ್ಬರು ಕೇಳಿದ್ದರು. ಆಗ ದೀಪಿಕಾ 'ಬಿಳಿ ಅನ್ನ, ರಸಂ ಮತ್ತು ಮಾವಿನ ಕಾಯಿ ಉಪ್ಪಿನಕಾಯಿ' ಅಂದಿದ್ದಾರೆ. ಈ ಮಾತು ಕೇಳಿ ದೀಪಿಕಾರ ಸೌತ್ ಇಂಡಿಯನ್ ಅಭಿಮಾನಿ ಬಳಗ ಫುಲ್ ಖುಷ್ ಆಗಿದೆ. ತಿಳಿಸಾರು, ಬಿಳಿ ಅನ್ನ, ಮಾವಿನ ಮಿಡಿ ಉಪ್ಪಿನಕಾಯಿ ಮುಂದೆ ಯಾವ ಡಿಶಸ್ಸೂ ಬರಲ್ಲ ಅಂದಿದ್ದು ಕೇಳಿ ಒಂದಿಷ್ಟು ನಾರ್ತಿಗಳಂತೂ ಖಂಡಿತಾ ಹೊಟ್ಟೆ ಉರ್ಕೊಂಡಿರುತ್ತಾರೆ. ' ಒಂದು ಮಾತಂತೂ ನಿಜ, ನೀವು ಎಲ್ಲೇ ಹೋಗಿ ಯಾವ ಲೆವೆಲ್ ಗೆ ಬೆಳೆದರೂ ಕೊನೆಗೂ ಮನಸ್ಸಿಗೆ ಆಪ್ತ ಅನಿಸೋದು ಸಿಂಪಲ್ ಆದ ಊರಿನ ಆಹಾರವೇ.' ಅಂತ ದೀಪಿಕಾರ ಈ ಮಾತು ಕೇಳಿ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ. ನಿಮ್ಮಿಷ್ಟದ ಆಹಾರ ಯಾವುದು ಅನ್ನೋ ಪ್ರಶ್ನೆಯ ಬಳಿಕ ಕುಡಿಯೋದಕ್ಕೆ ಏನಿಷ್ಟ ಪಡ್ತೀರಿ ಅಂತಲೂ ಪ್ರಶ್ನೆ ಬಂದಿದೆ. ಆಗ ಬಿಸಿ ಬಿಸಿ ಫಿಲ್ಟರ್ ಕಾಫಿ ಹೀರುತ್ತಿದ್ದರೆ ಸ್ವರ್ಗ ಸುಖ ಅನ್ನೋ ಆನ್ಸರ್ ನೀಡಿದ್ದಾರೆ ಈ ಓಂ ಶಾಂತಿ ಓಂ ಹುಡುಗಿ. 

Tap to resize

Latest Videos

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ! 

ದೀಪಿಕಾ ಪಡುಕೋಣೆ ಡಯೆಟ್ ಲಿಸ್ಟ್ ಅವರ ಅಭಿಮಾನಿಗಳಿಗೆ ತಿಳಿಯದ್ದೇನಲ್ಲ. ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಬಿಸಿನೀರು ಕುಡಿಯೋ ಈ ಚೆಲುವೆ ಆಮೇಲೆ ಕುಡಿಯೋದೇ ಫಿಲ್ಟರ್ ಕಾಫಿ. ಅವರೆಲ್ಲಿ ಹೊರಟರೂ ನೆಸ್ಕೆಫೆ ಸ್ಯಾಚೆಡ್ ಅವರ ಬ್ಯಾಗ್‌ನಲ್ಲಿ ಇದ್ದೇ ಇರುತ್ತೆ. ಕಾಫಿ ಕುಡಿದು ವರ್ಕೌಟ್ ಮಾಡಿ ಬಳಲಿ ಬೆಂಡಾಗುವ ಬೆಡಗಿಗೆ ಚೈತನ್ಯ ನೀಡೋದು ಸೌತ್ ಇಂಡಿಯನ್ ತಿಂಡಿಗಳು. ಮದುವೆ ಆದ ಮೇಲೆ ರಣಬೀರ್ ಈ ರೆಸಿಪಿ ಸವಿಯೋ ಹಾಗಾಗಿದೆ. ಸದಾ ಪತ್ನಿಯ ಮೊಗದ ನಗುವಿಗೆ ಹಾತೊರೆಯುವ ಅವರು, ಆಕೆಯ ಇಷ್ಟದ ರೆಸಿಪಿಗೆ ಅಡ್ಡಿ ಮಾಡಿದವರಲ್ಲ. ಒಂದು ವೇಳೆ ಟ್ರಾವೆಲ್ ಮಾಡುತ್ತಿದ್ದರೆ ಎಗ್ ವೈಟ್ ಅನ್ನು ಸಾಸೇಜ್ ಜೊತೆಗೆ ತಿಂತಾರೆ ದೀಪಿಕಾ.

ಸ್ಪೂನ್‌ ದಿಟ್ಟಿಸಿ ನೋಡಿದ ದೀಪಿಕಾ ಪಡುಕೋಣೆ;'ನನ್ನ ನೋಡಿಲ್ವಾ'ಎಂದ ನಟ!  

ಮಧ್ಯಾಹ್ನದ ಊಟಕ್ಕೆ ಮಹಾರಾಷ್ಟ್ರದ ಅಡುಗೆ ಇಷ್ಟ ಪಡೋ ದೀಪಿಕಾಗೆ ಅನ್ನ ಸಾರು ಅಂದರೂ ಪಂಚಪ್ರಾಣ. ಇದು ಬಿಟ್ಟರೆ ಪುಳಿಯೋಗರೆ ಸಖತ್ ಇಷ್ಟ ಅಂತಾರೆ. ಆದರೆ ಈ ಪಕ್ಕಾ ದಕ್ಷಿಣ ಭಾರತೀಯ ಆಹಾರ ಬಾಲಿವುಡ್ ಮಂದಿಗೆ ಅರ್ಥವಾದ ಹಾಗಿಲ್ಲ. ಅವರಿದನ್ನು ಪುಳಿಯೋದರೆ ಎಂದೆಲ್ಲ ಕರೆದು ನಮ್ಮೂರಿನ ಪುಳಿಯೋಗರೆಗೆ ಅವಮಾನ ಮಾಡ್ತಿದ್ದಾರೆ ಅನ್ನೋ ಕಂಪ್ಲೇಂಟ್ ದೀಪಿಕಾರ ಸೌತ್‌ ಇಂಡಿಯನ್ ಅಭಿಮಾನಿಗಳದ್ದು. 

ಹೆಸರು ಬದಲಾಯಿಸಿಕೊಂಡ ದೀಪಿಕಾ ಪಡುಕೋಣೆ; 'ವೆರೊನಿಕಾ' ಆಯ್ಕೆ ಮಾಡಲು ಕಾರಣವೇನು? 

ಅಂದಹಾಗೆ ಹೆಚ್ಚಿನವರಿಗೆ ಗೊತ್ತಿಲ್ಲದ ಒಂದು ವಿಷಯ ಅಂದರೆ ದೀಪಿಕಾ ಅದ್ಭುತವಾಗಿ ಪಕ್ಕಾ ಕರ್ನಾಟಕದ ಚಹಾ ಮಾಡುತ್ತಾರಂತೆ. ಇದನ್ನು ಅವರೇ ಹೇಳ್ಕೊಂಡಿದ್ದಾರೆ. ಜೊತೆಗೆ ಸೊಗಸಾದ ಫಿಶ್ ರೆಸಿಪಿಯನ್ನೂ ಮಾಡ್ತಾರೆ. 

click me!